ಕೊನೆಯ ಪಂದ್ಯದಲ್ಲೂ ಶುಭಮನ್ ಗಿಲ್ ಫೇಲ್; ಫ್ಯಾನ್ಸ್ ಅಂತಿದ್ದಾರೆ “99 ಸರಾಸರಿ ಇರುವ ಮಯಾಂಕ್ ಅಗರ್ವಾಲ್ ಗೆ ಅವಕಾಶ ಕೊಡಿ!”
ನಾಲ್ಕನೇ ಟೆಸ್ಟ್ ನ ಮೊದಲ ಇನಿಂಗ್ಸನಲ್ಲಿ ಶುಭಮನ್ ಗಿಲ್ ಅವರು ಮತ್ತೆ ಶೂನ್ಯ ಸ್ಕೋರ್ ಮೇಲೆ ಔಟಾದರು. ಈ ಸೀರಿಜ್ ನಲ್ಲಿ ಎರಡು ಬಾರಿ ಜೀರೋ ಮೇಲೆ ಔಟ್ ಆಗಿದ್ದಾರೆ.
ಟೀಮ್ ಇಂಡಿಯಾದ ಓಪನರ್ ಬ್ಯಾಟ್ಸ್ ಮ್ಯಾನ್ ಶುಭಮನ್ ಗಿಲ್ ಅವರ ಕಳಪೆ ಪ್ರದರ್ಶನ ಜಾರಿಯಲ್ಲಿದೆ. ನಾಲ್ಕನೇ ಟೆಸ್ಟ್ ಮೊದಲ ಇನಿಂಗ್ ನಲ್ಲಿ ಬರೀ ಮೂರೆ ಮೂರು ಬಾಲ್ ಗಳನ್ನು ಆಡಿ ಒಂದೂ ರನ್ ತೆಗೆಯದೆ ವಿಕೆಟ್ ಒಪ್ಪಿಸಿದರು. ಎಂಡರಸನ್ ಅವರು ತಮ್ಮ ಸ್ವಿಂಗ್ ಮೋಡಿಯಲ್ಲಿ ಎಲ್ಬಿಡಬ್ಲ್ಯು ಬಲೆಗೆ ಸಿಲುಕಿಸಿದರು.
ಹಾಗೆ ನೋಡಲಾಗಿ ಶುಭಮನ್ ಗಿಲ್ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಳ್ಳೆಯ ಪ್ರದರ್ಶನ ತೋರಿದರು. ಭಾರತ ತಲುಪಿದಂತೆ ಅವರ ಪ್ರದರ್ಶನಕ್ಕೆ ದೃಷ್ಟಿ ತಾಗಿದಂತಾಗಿದೆ. ಇಂಗ್ಲೆಂಡ್ ಸರಣಿಯಲ್ಲಿ ಶುಭಮನ್ ಗಿಲ್ ಅವರು ಆಡಿದ ಒಟ್ಟು ಏಳು ಇನ್ನಿಂಗ್ಸ್ ಗಳಲ್ಲಿ 19.83 ರ ಸರಾಸರಿಯಲ್ಲಿ ಬರೀ 119 ರನ್ಗಳನ್ನು ಗಳಿಸಿದ್ದಾರೆ. ಎರಡು ಬಾರಿ ಶೂನ್ಯದ ಮೇಲೆ ಔಟಾಗಿದ್ದಾರೆ. ಗರಿಷ್ಠ ಮೊತ್ತ 50. ಈ ಕಳಪೆ ಪ್ರದರ್ಶನದ ಕಾರಣದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಯೂಸರ್ಸ್ ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಯಂಕ್ ಅಗರವಾಲ್ ಅವರಿಗೆ ಅವಕಾಶ ನೀಡುವ ಬಗ್ಗೆ ಡಿಮಾಂಡ್.
ಆಸ್ಟ್ರೇಲಿಯಾ ಸಿರೀಸ್ ನಲ್ಲಿ ಮಯಂಕ್ ಅಗರವಾಲ್ ವಿಶೇಷವೇನೂ ಮಾಡಿರಲಿಲ್ಲ. ಅದೇ ಕಾರಣಕ್ಕಾಗಿ ಮಯಂಕ್ ಅವರ ಸ್ಥಾನಕ್ಕೆ ಶುಭಮನ್ ಅವರನ್ನು ಆರಿಸಲಾಗಿತ್ತು. ಭಾರತದಲ್ಲಿ ಮಯಂಕ್ ಅವರ ರೆಕಾರ್ಡ್ ನೋಡಲಾಗಿ ಅದು ತುಂಬಾ ಚೆನ್ನಾಗಿದೆ. ಭಾರತದಲ್ಲಿ 99.50 ಸರಾಸರಿಯಲ್ಲಿ ಒಟ್ಟು 597 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳನ್ನು ಬಾರಿಸಿದ್ದಾರೆ. ಇಷ್ಟೊಂದು ಒಳ್ಳೆಯ ರೆಕಾರ್ಡ್ ಇದ್ದರೂ ಸಹ ಬೆಂಚ ಮೇಲೆ ಕುಳಿತಿರುವುದನ್ನು ನೋಡಿ ಮಯಂಕ್ ಅವರಿಗೆ ಅವಕಾಶ ಕೊಡುವ ಬಗ್ಗೆ ಡಿಮಾಂಡ್ ಮಾಡುತ್ತಿದ್ದಾರೆ.

ಶುಭಮನ್ ಗಿಲ್ ಅವರಲ್ಲಿರುವ ತಾಂತ್ರಿಕ ನ್ಯೂನತೆ ಏನು?
ಮಾಜಿ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ಅವರು ಹೇಳುವ ಪ್ರಕಾರ ಶುಭಮನ್ ಗಿಲ್ ಅವರ ಫುಟ್ವರ್ಕ್ ಅಷ್ಟೊಂದು ಸರಿಯಾಗಿ ಇಲ್ಲವೆನ್ನುತ್ತಾರೆ. ಅವರು ಅತಿ ಹೆಚ್ಚು ಆಫ್ ಸ್ಟಂಪ್ ಕಡೆಗೆ ಬರುತ್ತಿದ್ದಾರೆ. ಆ ಕಾರಣದಿಂದ ಒಳಗೆ ಬರುವ ಬಾಲ್ ಮೇಲೆ LBW ಆಗುತ್ತಿದ್ದಾರೆ.