ವಿಶ್ವದ ಟಾಪ್ 7 ಕ್ರಿಕೆಟ್ ತಂಡಗಳ ನಾಯಕರ ಸಂಬಳ ಎಷ್ಟು? ವಿರಾಟ್ ಕೊಹ್ಲಿಗಿಂತ ಹೆಚ್ಚಿನ ವೇತನ ಪಡೆಯುವ ಕ್ಯಾಪ್ಟನ್ ಇವರು!
ಕ್ರಿಕೆಟ್ ಆಟ ಆರಂಭವಾದಾಗ ಬಹುಶಃ ಮುಂದೊಂದು ದಿನ ಈ ಆಟವು ಕೋಟಿ ಕೋಟಿ ಗಳಿಸಲು ದಾರಿಯಾಗುತ್ತದೆ ಎಂದು ಯಾರೂ ಕೂಡಾ ಊಹೆ ಮಾಡಿರಲಿಲ್ಲ. ಅಲ್ಲದೇ ಬಹಳ ವರ್ಷಗಳ ಕಾಲ ಕ್ರಿಕೆಟ್ ಆಟದಿಂದ ಆಟಗಾರರು ಕೂಡಾ ಕಡಿಮೆ ಹಣವನ್ನು ಪಡೆಯುತ್ತಿದ್ದರು. ಆದರೆ 90 ರ ದಶಕದ ನಂತರ ಈ ಸ್ಥಿತಿ ಬದಲಾಗಿ ಹೋಯಿತು. ಕ್ರಿಕೆಟ್ ನಿಂದ ಸಾಕಷ್ಟು ಹಣ ಬರಲಾರಂಭಿಸಿತು. ಇಂದು ಕ್ರಿಕೆಟ್ ನ ಉನ್ನತ ಆಟಗಾರರಾಗಿ ಲಕ್ಷಗಳ ಮೊತ್ತದಲ್ಲಿ ಸಂಬಳ ದೊರೆಯುತ್ತದೆ. ಇನ್ನು ಟೀಂ ಕ್ಯಾಪ್ಟನ್ ಗಳ ಸಂಬಳ ಆರಂಭವಾಗುವುದೇ ಲಕ್ಷಗಳಲ್ಲಿ ಎನ್ನುವುದು ಕೂಡಾ ನಿಜ.
ಕೆಲವು ತಂಡಗಳ ನಾಯಕರಿಗೆ ಹೆಚ್ಚು ಮೊತ್ತದ ವೇತನ ದಕ್ಕಿದರೆ,ಕೆಲವು ತಂಡದ ನಾಯಕರಿಗೆ ಬೇರೆ ತಂಡಕ್ಕೆ ಹೋಲಿಸಿದಾಗ ಸ್ವಲ್ಪ ಕಡಿಮೆ ಸಂಬಳ ಇದೆ. ನಾವಿಂದು ನಿಮಗೆ ವಿಶ್ವದ ಅಗ್ರಮಾನ್ಯ ಎನಿಸಿರುವ ಏಳು ಕ್ರಿಕೆಟ್ ತಂಡಗಳ ನಾಯಕರ ವೇತನ ಎಷ್ಟು ಎನ್ನುವ ವಿಚಾರವನ್ನು ತಿಳಿಸಲಿದ್ದೇವೆ. ಈಗ ತಿಳಿಸುವ ವಿಚಾರ ಮುಂದಿನ ದಿನಗಳಲ್ಲಿ ಬದಲಾಗುವ ಸಾಧ್ಯತೆ ಇದೆ. ಮುಂದೆ ಅವರ ವೇತನ ಇನ್ನೂ ಹೆಚ್ಚುವ ಅವಕಾಶವಿದೆ ಎಂಬುದನ್ನು ನಾವು ತಳ್ಳಿ ಹಾಕಲಾಗುವುದಿಲ್ಲ.

7) ಪಾಕಿಸ್ತಾನದ ಕ್ರಿಕೆಟ್ ತಂಡ : ಬಾಬರ್ ಅಜಂ 66 ಲಕ್ಷ ರೂಪಾಯಿಗಳು, ಅಜರ್ ಅಲಿ 44.28 ಲಕ್ಷ ರೂಪಾಯಿಗಳು. ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಿಶ್ವಕಪ್ ವರೆಗೂ ಎಲ್ಲಾ ಮೂರು ಫಾರ್ಮಾಟ್ ಗಳ ಕ್ರಿಕೆಟ್ ಆಟಕ್ಕೆ ಸರ್ಫರಾಜ್ ಅಹ್ಮದ್ ಅವರನ್ನೇ ನಾಯಕನನ್ನಾಗಿ ಮಾಡಲಾಗಿತ್ತು. ಆದರೆ ಅನಂತರ ಸೀಮಿತ ಓವರ್ ಗಳ ಫಾರ್ಮಾಟ್ ಗೆ ಬಾಬರ್ ಅಜಂ ಅವರನ್ನು ಹಾಗೂ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಗಳ ನಾಯಕತ್ವವನ್ನು ಅಜಹರ್ ಅಲಿ ಅವರಿಗೆ ನೀಡಲಾಗಿದೆ. ಇನ್ನು ಈ ಇಬ್ಬರೂ ನಾಯಕರಿಗೂ ಏಕ ರೂಪದ ವೇತನ ನೀಡಲಾಗಿಲ್ಲ. ಟಿ-20 ನಾಯಕತ್ವ ವಹಿಸಿದ್ದ ಬಾಬರ್ ಅಜಂ ಅವರ ವೇತನ ವರ್ಷವೊಂದಕ್ಕೆ 66 ಲಕ್ಷ ಇದ್ದರೆ, ಅಜಹರ್ ಅಲಿ ಅವರ ವೇತನ 44.28 ಲಕ್ಷಗಳಾಗಿವೆ.

6) ಶ್ರೀಲಂಕಾ : ದಿಮುತ್ ಕರುಣರತ್ನೆ- 71.32 ಲಕ್ಷ ರೂ.
ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕತ್ವವು ಪ್ರಸ್ತುತ ದಿಮುತ್ ಕರುಣಾರತ್ನೆ ಅವರ ಕೈಯಲ್ಲಿದ್ದು ಅವರು ಎರಡು ಫಾರ್ಮಾಟ್ ಅಂದರೆ ಒನ್ ಡೇ ಹಾಗೂ ಟೆಸ್ಟ್ ಕ್ರಿಕೆಟ್ ಎರಡನ್ನೂ ನಿಭಾಯಿಸುತ್ತಿದ್ದಾರೆ. ಇದೇ ವೇಳೆ ಟಿ 20 ಪಂದ್ಯಾವಳಿ ಗಳಿಗೆ ಶ್ರೀಲಂಕಾ ತಂಡವನ್ನು ಮಾಲಿಂಗ ಬಿಟ್ಟಿರುವ ಕಾರಣ ಯಾರೂ ನಾಯಕನಿಲ್ಲ ಎನ್ನಲಾಗಿದೆ. ಇನ್ನು ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕನ ಸಂಬಳದ ವಿಚಾರಕ್ಕೆ ಬಂದರೆ ಅವರು ವರ್ಷವೊಂದಕ್ಕೆ 72 ಲಕ್ಷ ರೂಪಾಯಿಗಳ ವೇತನ ಪಡೆಯುವರು. ಟಿ 20 ವಿಚಾರದಲ್ಲಿ ವೇತನದ ಬಗ್ಗೆ ಇನ್ನೂ ನಿರ್ಧಾರ ಮಾಡಲಾಗಿಲ್ಲ ಎನ್ನಲಾಗಿದೆ.

5) ದಕ್ಷಿಣ ಆಫ್ರಿಕಾ : ಕ್ವಿಂಟನ್ ಡಿ ಕಾಕ್ , 2.50 ಕೋಟಿ ರೂ. : ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿವೆ. ಫಾಫ್ ಡೂ ಫ್ಲೆಸಿಸ್ ನಾಯಕತ್ವದಲ್ಲಿ ಉತ್ತಮ ಫಲಿತಾಂಶ ಸಿಗದ ಕಾರಣ ಕಳೆದ ವರ್ಷ ಕ್ವಿಂಟನ್ ಡಿ ಕಾಕ್ ಅವರನ್ನು ನಾಯಕನನ್ನಾಗಿ ಮಾಡಲಾಗಿದ್ದು, ಟಿ 20 ನಾಯಕತ್ವ ಕೂಡಾ ಅವರಿಗೆ ನೀಡಲಾಗಿದೆ. ಪ್ರಸ್ತುತ ಈ ತಂಡಕ್ಕೆ ಟೆಸ್ಟ್ ಪಂದ್ಯಗಳ ನಾಯಕ ಬೇಕಾಗಿದ್ದಾನೆ. ಆಫ್ರಿಕಾದ ತಂಡನ ನಾಯಕನಿಗೆ ವರ್ಷವೊಂದಕ್ಕೆ ಸುಮಾರು 2.50 ಕೋಟಿ ವೇತನ ನೀಡುತ್ತಿದ್ದು ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡಲಾಗುತ್ತಿದೆ.

4) ನ್ಯೂಜಿಲೆಂಡ್ : ಕೆನ್ ವಿಲಿಯಮ್ಸ್ , 3.17 ಕೋಟಿ:
ನ್ಯೂಜಿಲೆಂಡ್ ಟೀಂ ನ ನಾಯಕತ್ವ ಕೂಡಾ ಒಬ್ಬರ ಕೈಯಲ್ಲೇ ಇದ್ದು, ಕಿವಿ ಟೀಂ ನ ನಾಯಕತ್ವವನ್ನು ಕಳೆದ ಕೆಲವು ವರ್ಷಗಳಿಂದಲೂ ಕೂಡಾ ಕೆನ್ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಇವರ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡವು ವಿಶ್ವಕಪ್ ನ ಫೈನಲ್ ತಲುಪಿ ಉತ್ತಮ ಪ್ರದರ್ಶನ ನೀಡಿತ್ತು. ಕೆನ್ ವಿಲಿಯಮ್ ಅವರಿಗೆ ಅಲ್ಲಿನ ಕ್ರಿಕೆಟ್ ಬೋರ್ಡ್ ವರ್ಷವೊಂದಕ್ಕೆ 3.17 ಕೋಟಿ ರೂಪಾಯಿಗಳ ವೇತನವನ್ನು ನೀಡುತ್ತಿದೆ. ತಂಡದ ಉತ್ತಮ ಪ್ರದರ್ಶನದ ಕಾರಣ ಅವರ ವೇತನ ಹೆಚ್ಚಾಗುವ ಸಾಧ್ಯತೆ ಕೂಡಾ ಇದೆ.

3) ಆಸ್ಟ್ರೇಲಿಯಾ : ಟಿಮ್ ಪೆನ್ ಮತ್ತು ಆರೋನ್ ಫಿಂಚ್, 4.87 ಕೋಟಿ: ವಿಶ್ವ ಕ್ರಿಕೆಟ್ ತಂಡಗಳಲ್ಲಿ ಬಲಿಷ್ಠವಾದ ತಂಡ ಎಂದೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪರಿಗಣಿಸಲ್ಪಟ್ಟಿದೆ. 2018 ರ ಆರಂಭದಲ್ಲಿ ಮೂರು ಫಾರ್ಮಾಟ್ ಗಳ ಆಟದ ನಾಯಕತ್ವ ಸ್ವೀವನ್ ಸ್ಮಿತ್ ಅವರ ಕೈಯಲ್ಲೇ ಇತ್ತು. ಆದರೆ ಬಾಲ್ ಟ್ಯಾಪರಿಂಗ್ ಪ್ರ ರಕಣದಲ್ಲಿ ಅವರ ಹೆಸರು ಕೇಳಿ ಬಂದ ನಂತರ ಟಿಮ್ ಪಿನ್ ಅವರನ್ನು ಟೆಸ್ಟ್ ಮತ್ತು ಆರೋನ್ ಫಿಂಚ್ ಅವರನ್ನು ಒನ್ ಡೇ ಪಂದ್ಯಗಳ ನಾಯಕರನ್ನಾಗಿ ಮಾಡಲಾಗಿದೆ. ಇಬ್ಬರೂ ನಾಯಕರ ವೇತನ ಕೂಡಾ ಸಮಾನವಾಗಿದ್ದು ವರ್ಷವೊಂದಕ್ಕೆ ಅವರು 4.87 ಕೋಟಿ ವೇತನ ಪಡೆಯುತ್ತಾರೆ.

2) ಭಾರತ : ವಿರಾಟ್ ಕೊಹ್ಲಿ, 7 ಕೋಟಿ : ಭಾರತೀಯ ಕ್ರಿಕೆಟ್ ನಲ್ಲಿ ಮೂರು ಫಾರ್ಮಾಟ್ ಗಳಲ್ಲೂ ವಿರಾಟ್ ಕೊಹ್ಲಿ ಅವರೇ ನಾಯಕನಾಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಒಂದರ ನಂತರ ಮತ್ತೊಂದು ಯಶಸ್ಸನ್ನು ಪಡೆಯುತ್ತಲೇ ಇದೆ. ವೇತನದ ವಿಷಯಕ್ಕೆ ಬಂದರೆ ಭಾರತೀಯ ಕ್ರಿಕೆಟ್ ಬೋರ್ಡ್ ವಿರಾಟ್ ಅವರಿಗೆ ದೊಡ್ಡ ಮೊತ್ತದಲ್ಲಿ ವೇತನ ನೀಡಲು ಹಿಂದೇಟು ಹಾಕಿಲ್ಲ. ವಾರ್ಷಿಕ ಏಳು ಕೋಟಿಗಳ ವೇತನ ನೀಡುತ್ತಿದ್ದು, ಮುಂದೆ ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿದೆ.

1) ಇಂಗ್ಲೆಂಡ್ : ಜೋ ರೂಟ್ 8.15 ಕೋಟಿ, ಇಯೋನ್ ಮೋರ್ಗನ್ 2.56 ಕೋಟಿ:
ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ವಿಭಿನ್ನ ಫಾರ್ಮಾಟ್ ಗಳ ಆಟಕ್ಕೆ ನಾಯಕರೂ ಬೇರೆ ಬೇರೆ ಇದ್ದಾರೆ. ಜೋ ರೂಟ್ ಟೆಸ್ಟ್ ತಂಡದ ನಾಯಕರಾಗಿದ್ದರೆ, ಇಯೊನ್ ಮೋರ್ಗಾನ್ ಪ್ರಸ್ತುತ ಇಂಗ್ಲೆಂಡ್‌ನ ಏಕದಿನ ಮತ್ತು ಟಿ 20 ಸ್ವರೂಪದ ನಾಯಕತ್ವವನ್ನು ಹೊಂದಿದ್ದಾರೆ. ಕಳೆದ ವರ್ಷವಷ್ಟೇ, ಇಯೊನ್ ಮೋರ್ಗನ್ ತಮ್ಮ ನಾಯಕತ್ವದಲ್ಲಿ ಇಂಗ್ಲೆಂಡ್‌ಗೆ ವಿಶ್ವಕಪ್ ಪ್ರಶಸ್ತಿಯನ್ನು ನೀಡಿದರು. ಸಂಬಳದ ವಿಷಯದಲ್ಲಿ ಇಬ್ಬರ ನಡುವೆ ಅಜಗಜಾಂತರ ವ್ಯತ್ಯಾಸ ಇದೆ.
ಮೋರ್ಗನ್ ಇಂಗ್ಲೆಂಡ್ ತಂಡದ ಒಡಿಐ ಮತ್ತು ಟಿ 20 ಎಂಬ ಎರಡೂ ಫಾರ್ಮಾಟ್ ಗಳ ನಾಯಕತ್ವ ವಹಿಸಿದ್ದರೂ ಸಹಾ, ಜೋ ರೂಟ್ ಅವರ ಸಂಬಳಕ್ಕಿಂತ ಕಡಿಮೆ ಅಂದರೆ ವರ್ಷಕ್ಕೆ 2.56 ಕೋಟಿ ರೂ ಪಡೆದರೆ, ಮತ್ತೊಂದೆಡೆ ಜೋ ರೂಟ್ ಟೆಸ್ಟ್ ಕ್ರಿಕೆಟ್ ನಲ್ಲಿ ನಾಯಕ, ಆದರೆ ಎಲ್ಲಾ ಮೂರು ಫಾರ್ಮಾಟ್ ಗಳಲ್ಲಿ ಆಡುವ ಕಾರಣ, 8.15 ಕೋಟಿ ರೂ. ವೇತನ ಪಡೆಯುತ್ತಾರೆ.