ಮನುಷ್ಯನ ಮುಖದ ಮೀನು, ಇಂಡೋನೇಷ್ಯಾದಲ್ಲೊಂದು ವಿಸ್ಮಯ: ಮೀನು ನೋಡಿ ಕಂಗಾಲಾದ ಜನರು! ನೋಡಿ ಈ ಫೋಟೋಗಳು
ಮನುಷ್ಯನ ರೂಪದಲ್ಲಿರುವ ಪ್ರಾಣಿಗಳು ಎಂದೊಡನೆ ಅದು ನಮಗೆ ನೆನಪಾಗುವುದು ಸಿನಿಮಾಗಳಲ್ಲಿ ಮಾತ್ರವೇ. ನಾವು ನೋಡಿರುವ ಅದರಲ್ಲೂ ವಿಶೇಷವಾಗಿ ಹಾಲಿವುಡ್ ಸಿನಿಮಾಗಳಲ್ಲಿ ಮಾನವನ ರೂಪದಲ್ಲಿ ಇರುವಂತಹ ಪ್ರಾಣಿಗಳನ್ನು ನೋಡಬಹುದು. ಹಾಲಿವುಡ್ ಸಿನಿಮಾಗಳಲ್ಲಿ ಎಲ್ಲಾ ಪ್ರಾಣಿಗಳು ಕೂಡಾ ಮನುಷ್ಯರ ಹೋಲಿಕೆಗಳನ್ನು ಉಳ್ಳ ಬಹಳಷ್ಟು ಸಿನಿಮಾಗಳು ಈಗಾಗಲೇ ಮೂಡಿ ಬಂದಿವೆ. ದೇಹ ಪ್ರಾಣಿಯದೇ ಆದರೂ ತಲೆ ಮನಷ್ಯನದ್ದು, ಮನುಷ್ಯರಿಗೆ ಇರುವಂತೆ ಕಿವಿ ,ಮೂಗು, ಕಣ್ಣು ಇರುವುದು ಮಾತ್ರವೇ ಅಲ್ಲದೇ ಅವು ಮಾತನಾಡುವುದನ್ನು ಕೂಡಾ ನೋಡಿ ಅಬ್ಬಾ ಇಂತಹ ಜೀವಿಗಳು ನಿಜವಾಗಿಯೂ ಇದೆಯೇನೋ ಎನ್ನುವಂತೆ ನಮಗೆ ಒಂದು ಕ್ಷಣ ಅನಿಸುತ್ತದೆ. ಅಲ್ಲದೇ ಇದೆಲ್ಲವೂ ಕೂಡಾ ಸಿನಿಮಾಗಳಲ್ಲಿ ಮಾತ್ರವೇ ಸಾಧ್ಯ ಎಂದು ಕೊಳ್ಳುತ್ತೇವೆ. ಆದರೆ ಇಂತಹುದೊಂದು ಘಟನೆ ನಿಜ ಜೀವನದಲ್ಲಿ ಕೂಡಾ ಎದುರಾದರೆ ? ಊಹೆ ಮಾಡಿಕೊಳ್ಳುವುದು ಕಷ್ಟ.

ಇದೀಗ ಇಂತಹುದೋ ಒಂದು ವಿಸ್ಮಯಕಾರಿ ಜೀವಿಯೊಂದು ಪತ್ತೆಯಾಗಿದೆ. ಈ ಜೀವಿ ಕಾಣಿಸಿದ್ದೆಲ್ಲಿ? ಯಾವ ಜೀವಿ ಅದು? ಎನ್ನುವ ಪ್ರಶ್ನೆಗಳು ಈಗಾಗಲೇ ನಿಮ್ಮ ತಲೆಯಲ್ಲಿ ಸುತ್ತುತ್ತಿರುತ್ತವೆ. ಹಾಗಾದರೆ ಉತ್ತರಕ್ಕೆ ಹೆಚ್ಚು ಕಾಯುವ ಅವಶ್ಯಕತೆ ಇಲ್ಲ. ಇಲ್ಲಿದೆ ಅದರ ಉತ್ತರ.
ಇಂಡೋನೇಷ್ಯಾದ ಜಕಾರ್ತದಲ್ಲಿ ಮೀನುಗಾರನೊಬ್ಬರು ಒಂದು ವಿಶೇಷವಾದ ಶಾರ್ಕ್ ಅನ್ನು ಹಿಡಿದಿದ್ದಾರೆ. ಈ ಮೀನು ಸಾಮಾನ್ಯವಾದ ಮೀನಾಗಿದಿದ್ದರೆ ಬಹುಶಃ ಸುದ್ದಿಯಾಗುತ್ತಿರಲಿಲ್ಲ. ಈ ಶಾರ್ಕ್ ನ ವಿಶೇಷತೆ ಏನೆಂದರೆ ಇದರ ಮುಖ. ಈ ಶಾರ್ಕ್ ನ ಮುಖ ಮನುಷ್ಯನ ಮುಖವು ರೂಪಾಂತರ ಹೊಂದಿರುವಂತೆ ಕಂಡು ಬಂದಿದೆ.

ಈ ಮೀನನ್ನು ನೋಡಿದ ಜನರು ಕೂಡಾ ಒಂದು ಸಲ ಭ ಯ ಭೀ ತರು ಹಾಗೂ ದಿಗ್ಭ್ರಾಂತರಾಗಿದ್ದಾರೆ. ಮನುಷ್ಯರಂತಹ ಮುಖವನ್ನು ಹೊಂದಿರುವ ಈ ಶಾರ್ಕ್ ದೊರೆತಿದ್ದು ಎಲ್ಲಿ ಎಂದರೆ ಒಂದು ದೊಡ್ಡ ಶಾರ್ಕ್ ನ ಹೊಟ್ಟೆಯೊಳಗೆ ಎನ್ನಲಾಗಿದೆ. ಇನ್ನು ಮೀನುಗಾರನು ಈ ಮೀನನ್ನು ಮಾರಾಟ ಮಾಡಲು ಒಪ್ಪಿಕೊಂಡಿಲ್ಲ. ಬದಲಾಗಿ ಆತ ಅದನ್ನು ತಾನೇ ಸಾಕಿ ಬೆಳೆಸುವ ನಿರ್ಧಾರವನ್ನು ಮಾಡಿದ್ದಾನೆ. ಇನ್ನು ಆತನ ಬಳಿ ಒಂದು ವಿಚಿತ್ರವಾದ, ವಿಸ್ಮಯವನ್ನು ಹುಟ್ಟಿಸುವ ಮೀನು ಇರುವ ವಿಷಯವು ಎಲ್ಲೆಡೆ ಸುದ್ದಿಯಾದ ನಂತರ ಅದನ್ನು ನೋಡಲು ಆತನ ಮನೆಗೆ ಕೂಡಾ ಜನರು ಬರಲು ಆರಂಭಿಸಿದ್ದಾರೆ ಎನ್ನಲಾಗಿದೆ. ಸುತ್ತ ಮುತ್ತಲ ಜನರಿಗೆ ಈ ಮೀನನ್ನು ನೋಡಲು ಕುತೂಹಲ ಹೆಚ್ಚಿದೆ.
ಈ ರೂಪಾಂತರ ಹೊಂದಿರುವ ಬೇಬಿ ಶಾರ್ಕ್ ಮೀನನ್ನು 48 ವರ್ಷ ವಯಸ್ಸಿನ ಮೀನುಗಾರ ಅಬ್ದುಲ್ಲಾ ನೂರನ್ ಎನ್ನುವವರು ಪೂರ್ವ ನುಸಾ ತೆಂಗಾರಾ ಪ್ರಾಂತ್ಯದ ರೊಟೋ ನಾದೇ ಎನ್ನುವ ಪ್ರದೇಶದಲ್ಲಿ ಹಿಡಿದಿದ್ದಾರೆ ಎನ್ನಲಾಗಿದೆ. ಈ ಮೀನುಗಾರನು ಆಕಸ್ಮಿಕವಾಗಿ ತನಗೆ ಅರಿವಿಲ್ಲದಂತೆಯೇ ಒಂದು ಗರ್ಭ ಧರಿಸಿದ್ದ ಶಾರ್ಕ್ ಅನ್ನು ಹಿಡಿದಿದ್ದಾರೆ. ಅನಂತರ ಆ ಶಾರ್ಕ್ ಅನ್ನು ಕತ್ತರಿಸಿದಾಗ ಅದರ ಹೊಟ್ಟೆಯೊಳಗೆ ಮೂರು ಸಣ್ಣ ಸಣ್ಣ ಶಾರ್ಕ್ ನ ಮರಿಗಳು ಸಿಕ್ಕಿವೆ. ಈ ಮೂರು ಮರಿ ಶಾರ್ಕ್ ಗಳಲ್ಲಿ ಒಂದರ ಮುಖವು ಮನುಷ್ಯರ ಮುಖವನ್ನು ಹೋಲುವುದನ್ನು ನೋಡಿ ಅಬ್ದುಲ್ಲಾ ಅವರಿಗೆ ಕೂಡಾ ಶಾ ಕ್ ಆಗಿದೆ.

ಅಬ್ದುಲ್ಲಾ ನೂರಾನ್ ಅವರು ಈ ವಿಷಯದ ಬಗ್ಗೆ ಮಾತನಾಡುತ್ತಾ ತಮ್ಮ ಟ್ರಾಲರ್ ನಲ್ಲಿ ದೊಡ್ಡ ಶಾರ್ಕ್ ಸಿಕ್ಕಿ ಹಾಕಿಕೊಂಡಿರುವುದನ್ನು ನೋಡಿ, ಅದನ್ನು ಕತ್ತರಿಸಿದಾಗ ಅದರ ಹೊಟ್ಟೆಯೊಳಗೆ ಮೂರು ಮರಿಗಳು ಕಂಡವು. ಅದರಲ್ಲಿ ಎರಡು ತಮ್ಮ ತಾಯಿಯ ಹಾಗೆ ಇದ್ದರೆ ಒಂದು ಮಾತ್ರ ಮನುಷ್ಯನ ಮುಖವನ್ನು ಹೋಲುವ ಮುಖ ಹೊಂದಿತ್ತು. ಅದಕ್ಕೆ ಅದನ್ನು ಅಲ್ಲಿಂದ ಎತ್ತಿಕೊಂಡು ಮನೆಗೆ ತಂದಿದ್ದಾಗಿ ಹೇಳಿದ್ದು, ಅದನ್ನು ಸಾಕುತ್ತಿದ್ದೇನೆ ಎಂದಿದ್ದಾರೆ. ಇದೇ ವೇಳೆ ಅವರು ಈ ಮೀನನ್ನು ಖರೀದಿ ಮಾಡಲು ನೆರೆ ಹೊರೆಯವರು ಹಾಗೂ ಅನೇಕ ಜನರು ಬರುತ್ತಿದ್ದಾರೆ. ಆದರೆ ನಾನು ಅದನ್ನು ಮಾರದೇ ಸಂರಕ್ಷಿಸಿ ಸಾಕುತ್ತಿದ್ದೇನೆ. ಈ ಮೀನು ನನ್ನ ಅದೃಷ್ಟವನ್ನು ಬದಲಿಸಲಿದೆ ಎನ್ನುವುದು ನನ್ನ ನಂಬಿಕೆ ಎಂದು ಅವರು ಹೇಳಿದ್ದಾರೆ.