ಕೇವಲ 7 ರೂಪಾಯಿಯಲ್ಲಿ 100km ಚಲಿಸುವ ಹಾಗೂ ಬಜೆಟ್ ನಲ್ಲಿ ಸಿಗುವ ಎಲೆಕ್ಟ್ರಿಕ್ ಬೈಕ್; ಇದಕ್ಕೆ ಯಾವುದೇ ರೇಜಿಸ್ಟ್ರೇಷನ್ ಅಥವಾ ಲೈಸನ್ಸ್ ಅವಶ್ಯಕತೆ ಇಲ್ಲ!
ಕಾಲ ಬದಲಾದಂತೆ ವಾಹನಗಳಲ್ಲಿ ಸಹಿತ ಅನೇಕ ಬದಲಾವಣೆಗಳು ಕಂಡುಬಂದಿವೆ. ಇತ್ತೀಚೆಗಂತೂ ಎಲೆಕ್ಟ್ರಿಕ್ ವಾಹನಗಳಲ್ಲಿ ಹೊಸ ಹೊಸ ಶೋಧಗಳು ನಡೆಯುತ್ತಿವೆ. ಜೊತೆಗೆ ಅದರಲ್ಲಿ ತುಂಬಾ ಯಶಸ್ಸು ಸಹಿತ ಕಂಡುಬಂದಿದೆ. ವಾಹನ ಕಂಪನಿಗಳು ಹಾಗೂ ಸರಕಾರ ಸಹಿತ ಗ್ರಾಹಕರಿಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಸಲುವಾಗಿ ಹೊಸ ಹೊಸ ಯೋಜನೆಗಳ ಜೊತೆಗೆ ಜಾಗ್ರತೆಯನ್ನು ಸಹ ಮೂಡಿಸುತ್ತಿದೆ.
ಎಲೆಕ್ಟ್ರಿಕ್ ವಾಹನಗಳ ಉಪಯೋಗದಿಂದ ಇಂಧನ ಉಳಿತಾಯದ ಜೊತೆಗೆ ಹೆಚ್ಚುತ್ತಿರುವ ಪ್ರದೂಷಣೆ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಹತೋಟಿ ಪಡೆಯುವದು ಸಾಧ್ಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ. ಹೆಚ್ಚುತ್ತಿರುವ ಇಂಧನಗಳ ಬೆಲೆಗೆ ಗ್ರಾಹಕರು ಬೇಸತ್ತಿದ್ದಾರೆ. ಇದನ್ನೇ ವಿಚಾರಮಾಡಿ ಆಟೋಮೊಬೈಲ್ಸ್ ಗಳ ದೊಡ್ಡ ದೊಡ್ಡ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಕಡೆಗೆ ತಮ್ಮ ಗಮನ ಹರಿಸುತ್ತಿದ್ದಾರೆ. ಕಡಿಮೆ ಬಜೆಟ್ ನಲ್ಲಿ ಗ್ರಾಹಕರಿಗೆ ಹೆಚ್ಚು ಫೀಚರ್ಸ್ ಗಳನ್ನು ಕೊಡುವ ಕಡೆಗೆ ವಿಚಾರ ಮಾಡುತ್ತಿದ್ದಾರೆ.
ಈಗ ಹೈದರಾಬಾದ್ ನ ಸ್ಟಾರ್ಟಪ್ ಕಂಪನಿ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ಒಂದು ಸುಂದರವಾದ ಮತ್ತು ಅಷ್ಟೇ ಉಳಿತಾಯದ ಎಲೆಕ್ಟ್ರಿಕ್ ಬೈಕ್ ಲಾಂಚ್ ಮಾಡಿದೆ. ಈ ಕಂಪನಿಯು ಕಳೆದ ವರ್ಷ Atum 1.0 (Atum 1.0) ಎಲೆಕ್ಟ್ರಿಕ್ ಮೋಟಾರ್ ಬೈಕ್ ಮಾರ್ಕೆಟಿಗೆ ತಂದಿದೆ. ಈ ಬೈಕಿನ ಬೆಲೆ ಸುಮಾರು ಐವತ್ತು ಸಾವಿರ ರೂಪಾಯಿಗಳಷ್ಟಿದೆ. ಈ ಬೈಕ್ ಲಾಂಚ್ ಮಾಡಿದ ನಂತರ ಇಲ್ಲಿಯವರೆಗೆ ನಾಲ್ಕುನೂರರ ಮೇಲೆ ಬುಕಿಂಗ್ ಆಗಿವೆ. ಜೊತೆಗೆ ಈ ಬೈಕುಗಳ ಡೀಲೆವರಿ ಪ್ರಾರಂಭವಾಗಿದೆ. ಪ್ರಾರಂಭದಲ್ಲಿ ಕೆಫೆ ರೇಸರ್ ಶೈಲಿಯ ಎಲೆಕ್ಟ್ರಿಕ್ ಬೈಕ್ Atum 1.0 ಬರೀ 10 ಗ್ರಾಹಕರಿಗೆ ನೀಡಲಾಗಿದೆ. ಈ ಬೈಕ್ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಅಟೋಮೋಟಿವ್ ಟೆಕ್ನಾಲಜಿ (ICAT) ಇವರಿಂದ ಪ್ರಮಾಣೀಕರಿಸಲಾಗಿದೆ.

ಇನ್ನಿತರ ಬೈಕ್ ಗಳಿಗೆ ಹೋಲಿಸಿದಾಗ ಈ ಎಲೆಕ್ಟ್ರಿಕ್ ಬೈಕುಗಳಲ್ಲಿ ನೀವು ಬರೀ ಏಳರಿಂದ ಎಂಟು ರೂಪಾಯಿಗಳ ಖರ್ಚಿನಲ್ಲಿ ನೂರು ಕಿಲೋಮೀಟರ್ ಗಳವರೆಗೆ ಪ್ರವಾಸ ಮಾಡಬಹುದಾಗಿದೆ. ಅದೇ ಒಂದು ವೇಳೆ ಪೆಟ್ರೋಲ್ ಬೈಕ್ ನ ವಿಚಾರ ಮಾಡಲಾಗಿ ನೂರು ಕಿಲೋಮೀಟರ್ ಪ್ರವಾಸಕ್ಕಾಗಿ ಸುಮಾರು 110 ರೂಪಾಯಿಗಳಿಂದ ಹಿಡಿದು 150 ರೂಪಾಯಿಗಳವರೆಗೆ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಬೈಕ್ ನ ತುಲನೆಯಲ್ಲಿ ಎಲೆಕ್ಟ್ರಿಕ್ ಬೈಕ್ ಯಾವಾಗಲೂ ಪ್ರಾಬಲ್ಯ ಮೆರೆಯುತ್ತದೆ.
ಎಲೆಕ್ಟ್ರಿಕ್ ಬೈಕ್ ಪೂರ್ಣವಾಗಿ ಚಾರ್ಜ್ ಆಗಲು ಮೂರರಿಂದ ನಾಲ್ಕು ಗಂಟೆಗಳು ಬೇಕಾಗುತ್ತದೆ. ಇದನ್ನು ನಾರ್ಮಲ್ ತ್ರೀ ಪಿನ್ ಸಾಕೆಟ್ ಮುಖಾಂತರ ಚಾರ್ಜ್ ಮಾಡಲು ಸಾಧ್ಯವಿದೆ. ಇದರಲ್ಲಿ 18V, 250W ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. Atum 1.0 ಬ್ಯಾಟರಿ ಒಂದು ವೇಳೆ ಫುಲ್ ಚಾರ್ಜ್ ಆದಮೇಲೆ ಈ ಬೈಕ್ ನೂರು ಕಿಲೋಮೀಟರ್ ವರೆಗೆ ಓಡುತ್ತದೆ ಎಂದು ಕಂಪನಿಯು ದಾವೆ ಮಾಡಿದೆ.
ವೈಶಿಷ್ಟಪೂರ್ಣ ಫೀಚರ್ಸ್ ಗಳು…
ಈ ಬೈಕಿನ ವೈಶಿಷ್ಟ್ಯಗಳ ಬಗ್ಗೆ ಹೇಳಬೇಕಾದರೆ, ಇದರಲ್ಲಿ LED ಟರ್ನ್ಸ್ ಇಂಡಿಕೇಟರ್, LED ಹೆಡ್ ಲೈಟ್ಸ್, ಸ್ಟೈಲಿಶ್ ಕೆಫೆ ರೇಸರ್ ಡಿಸೈನ್, ಎಲ್ಇಡಿ ಟೆಲ್ ಲೈಟ್ಸ್, ಆರಾಮದಾಯಕವಾದ ಸೀಟು, ಡಿಜಿಟಲ್ ಡಿಸ್ಪ್ಲೇ, ಗೋ ವೆಟ್ ಫ್ಯಾಟ್ ಟೈಯರ್ಸ್ ಮತ್ತು 280 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಸಿಗುತ್ತದೆ. ವಿಶೇಷವೆಂದರೆ, ಈ ಬೈಕ್ ಖರೀದಿಸಲು ನಿಮ್ಮ ಕಡೆಗೆ ಡ್ರೈವಿಂಗ್ ಲೈಸನ್ಸ್ ಇಲ್ಲದೆ ಇದ್ದರೂ ಸಹ ನಡೆಯುತ್ತದೆ. ಹಾಗೆಯೇ ಬೈಕಿನ ರಿಜಿಸ್ಟ್ರೇಷನ್ ಮಾಡುವುದು ಅಗತ್ಯವಿಲ್ಲ. ಯಾವುದೇ ವಯಸ್ಸಿನವರು ಸಹ ಈ ಬೈಕನ್ನು ಚಲಾಯಿಸಬಹುದು.