ವಿಕೆಟ್ ಹಿಂದುಗಡೆ ಅಷ್ಟೊಂದು ‘ವಟವಟ’ ಯಾಕೆ ಮಾಡೋದು? ಎಂದು ಕೇಳಿದ ಪ್ರಶ್ನೆಗೆ ಹೆಮ್ಮೆಯ ಉತ್ತರ ಕೊಟ್ಟ ರುಷಬ್ ಪಂತ!

ಅಹಮದಾಬಾದ್:- ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಕೊನೆಯ ಹಂತಕ್ಕೆ ಬಂದಿದೆ. ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ವಿಜಯದ ನಂತರ ಟೀಮ್ ಇಂಡಿಯಾದ ಕಡೆಗೆ ಜಗತ್ತಿನ ದೃಷ್ಟಿ ಇದೆ. ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಇವರು ತಮ್ಮ ಫನ್ನಿ ಸ್ವಭಾವದಿಂದಾಗಿ ಯಾವತ್ತೂ ಚರ್ಚೆಯಲ್ಲಿ ಇರುತ್ತಾರೆ. ಮೈದಾನದಲ್ಲಿ ಅವರ ಸಂಭಾಷಣೆ ಮತ್ತು ವಿರೋಧಿ ತಂಡದ ಆಟಗಾರರ ಜೊತೆಗಿನ ಸ್ಲೇಜಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಆಗುತ್ತಿರುತ್ತವೆ.

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ರಿಷಬ್ ಪಂತ್ ಅವರು ಭರ್ಜರಿ ಶತಕ ಬಾರಿಸಿದರು. ಅವರು 118 ಬಾಲ್ ಗಳಲ್ಲಿ 101 ರನ್ ಗಳನ್ನು ತೆಗೆದರು. ಶತಕದ ಈ ಆಟದಲ್ಲಿ ಓಟ್ಟು 13 ಫೋರ್ ಹಾಗೂ 2 ಸಿಕ್ಸ್ ಗಳನ್ನು ಬಾರಿಸಿದರು. ಅವರ ಅದ್ಭುತ ಆಟದ ಚರ್ಚೆ ಮೀಡಿಯಾದಲ್ಲಿ ಆಗುತ್ತಿದೆ. ಅವರ ಆಟದ ಪ್ರಶಂಸೆಯನ್ನು ಬರೀ ಭಾರತದ ಆಟಗಾರರ ಅಷ್ಟೇ ಅಲ್ಲ ಇಂಗ್ಲೆಂಡ್ ಆಟಗಾರರು ಸಹ ಮಾಡಿದ್ದಾರೆ.

ನಿನ್ನೆ ಎರಡನೇ ದಿವಸದ ಆಟವಾಡಿದ ನಂತರ ರೋಹಿತ್ ಶರ್ಮಾ ಅವರು ರಿಷಬ್ ಪಂತ್ ರಿಗೆ ಅವರ ಶತಕದ ಆಟದ ಬಗ್ಗೆ ಕೇಳಿದರು. ಅದರ ಜೊತೆಗೆ ವಿಕೆಟಿನ ಹಿಂದೆ ಸತತವಾಗಿ ಏನಾದರೂ ವಟವಟ ಮಾಡುತ್ತಿರುತ್ತಿರುವ ಬಗ್ಗೆ ಕೇಳಿದಾಗ ಅದಕ್ಕೆ ರಿಷಭ ಅವರು ಕೊಟ್ಟ ಉತ್ತರ ತುಂಬಾ ಮಾರ್ಮಿಕವಾಗಿತ್ತು.

ವಿಡಿಯೋ ನೋಡಿ

ನಾನು ಕ್ರಿಕೆಟಿನ ಮಜಾ ತೆಗೆದುಕೊಳ್ಳುತ್ತಾ ಇರುತ್ತೇನೆ. ಮತ್ತು ಇದರಿಂದ ತಂಡದ ಆತ್ಮವಿಶ್ವಾಸ ಹೆಚ್ಚುತ್ತದೆ. ನನ್ನ ಪ್ರಯತ್ನ ಯಾವಾಗಲೂ ತಂಡಕ್ಕೆ ಏನಾದರೂ ಸಹಾಯ ಮಾಡುವದಾಗಿರುತ್ತದೆ. ಆದ್ದರಿಂದ ತಲೆಯಲ್ಲಿ ನಾನು ಯಾವಾಗಲೂ ತಂಡದ ಬಗ್ಗೆ ವಿಚಾರ ಮಾಡುತ್ತಿರುತ್ತೇನೆ ಎಂದು ಉತ್ತರಿಸಿದ್ದರು.