ಇನ್ನೊಬ್ಬರ ಮನೆಯಲ್ಲಿ ಕಸ ಮುಸುರಿ ಮಾಡಿ ಮಗನಿಗೆ ಓದಿಸಿದ ತಾಯಿ; ಕೊಳಗೇರಿಯಿಂದ ನೇರ ಇಂಗ್ಲೆಂಡ್ ಗೆ ತಲುಪಿದ ಮಗ! ಆದರೆ…

ಜಗತ್ತಿನಲ್ಲಿ ಮೇಲೆ ಬಂದವರಲ್ಲಿ ಅತಿ ಹೆಚ್ಚು ಜನರು ಬಡತನದಿಂದಲೇ ಮೇಲೆ ಬಂದಿದ್ದಾರೆ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಿದ್ದರೂ ಅದರ ಮೇಲೆ ವಿಜಯ ಸಾಧಿಸುವ ಕಲೆ ಮತ್ತು ಜಿದ್ದು ಮನುಷ್ಯನ ಹತ್ತಿರವಿರಬೇಕು. ಇದೇ ರೀತಿಯ ಒಂದು ಸಂಘರ್ಷದ ನೈಜ ಕಥೆ ಈ ಲೇಖನದಲ್ಲಿ ಓದಲಿದ್ದೇವೆ.

ಕಲ್ಪನಾ ಆಢಾವ್ ಹೆಸರಿನ ಮಹಿಳೆಯೊಬ್ಬರು ಕಳೆದ 14 ವರ್ಷಗಳಿಂದ ಪುಣೆ ಹತ್ತಿರದ ಪಿಂಪ್ರಿ ಚಿಂಚವಡ ಮಹಾನಗರಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಅವರ ಮಗು ಚಿಕ್ಕವನಿರುವಾಗಲೇ ಮಗನಿಗೆ ತುಂಬಾ ಶಾಲೆ ಕಲಿಸಬೇಕೆಂಬ ವಿಚಾರ ಹೊಂದಿದ್ದರು. ಅವರ ಮಗನ ಹೆಸರು ಅಮಿತ್.

ಮಗನಿಗೆ ಒಳ್ಳೆಯ ಶಿಕ್ಷಣ ನೀಡುವ ಸಲುವಾಗಿ ತಾಯಿ ಬೇರೊಬ್ಬರ ಮನೆಯಲ್ಲಿ ಬಟ್ಟೆಗಳನ್ನು ಒಗೆಯುವುದು, ಕಸ ಗುಡಿಸುವುದು, ಮತ್ತು ಪಾತ್ರೆಗಳನ್ನು ತೊಳೆಯುವ ಕೆಲಸ ಮಾಡಿದರು. ಇಷ್ಟೆಲ್ಲ ಮಾಡಿ ಮಗನಿಗೆ ಬ್ಯಾಚುಲರ್ಸ್ ಇನ್ ಫಿಜಿಯೋಥೆರಪಿ ಕರಿಯರ್ ಮಾಡಲು ಅಥವಾ ಶಿಕ್ಷಣ ಕೊಡುವಲ್ಲಿ ಯಶಸ್ವಿಯಾದರು. ಈಗ ಮುಂದಿನ ಶಿಕ್ಷಣವನ್ನು ಪಡೆಯುವುದಕ್ಕಾಗಿ ಅಮಿತ್ ಅವರಿಗೆ ನೇರ ಇಂಗ್ಲೆಂಡಿಗೆ ಹೋಗುವ ಅವಕಾಶ ದೊರಕಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಇಂಗ್ಲೆಂಡಿಗೆ ಹೋಗಲು ಸಮಸ್ಯೆ ಎದುರಾಗುತ್ತಿದೆ.

ಒಂದು ನ್ಯೂಸ್ ಚಾನೆಲ್ ಕಲ್ಪನಾ ಅವರು ಸಂದರ್ಶನ ನೀಡುವಾಗ ತಮ್ಮ ಈ ವ್ಯಥೆಯನ್ನು ಹೊರಹಾಕಿದ್ದಾರೆ. ಸದ್ಯ ಅಮಿತ್ ಮತ್ತು ಅವರ ತಾಯಿ ಕಲ್ಪನಾ ಅವರು ಪಿಂಪ್ರಿಯಲ್ಲಿಯೇ 10×10 ಚಿಕ್ಕ ಗುಡಿಸಲಲ್ಲಿ ಇರುತ್ತಾರೆ. ಅಮಿತ್ ಬರೀ ಒಂದು ತಿಂಗಳಿನವನಿರುವಾಗಲೇ ಆತನ ತಂದೆ ಮರಣಿಸಿದರು. ನಂತರ ತಾಯಿಯೇ ಆತನನ್ನು ಒಳ್ಳೆಯ ಸಂಸ್ಕಾರ ಮತ್ತು ಶಿಕ್ಷಣದ ಜೊತೆಗೆ ಬೆಳೆಸಿ ದೊಡ್ಡವನನ್ನಾಗಿ ಮಾಡಿದಳು. ಮನೆ ನಡೆಸುವ ಸಲುವಾಗಿ ಕಲ್ಪನಾ ಅವರು ಅನೇಕ ರೀತಿಯ ಕೆಲಸಗಳನ್ನು ಮಾಡಿದರು. ಮಗನ ಶಿಕ್ಷಣಕ್ಕಾಗಿ ಎಲ್ಲಿಯೂ ಕಡಿಮೆ ಬೀಳದಂತೆ ನೋಡಿಕೊಂಡರು. ಆರ್ಥಿಕ ಸಮಸ್ಯೆಗಳು ಎಷ್ಟೇ ಬಂದರು ಹೆದರದೆ ಮಹಾಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುರಕ್ಷಾ ರಕ್ಷಕರಾಗಿ ಕೆಲಸ ಮಾಡಿದರು. ಬರೀ 3 ಸಾವಿರ ರೂಪಾಯಿಗಳಿಂದ ಪ್ರಾರಂಭ ಮಾಡಿದ ಪ್ರವಾಸ ಇಂದು ತಿಂಗಳಿಗೆ ಹದಿನಾಲ್ಕು ಸಾವಿರ ರೂಪಾಯಿಗಳಷ್ಟು ಸಂಬಳ ತೆಗೆದುಕೊಳ್ಳುತ್ತಿದ್ದಾರೆ.

ತಮ್ಮ ಮಗನಿಗೆ ಉಚ್ಚ ಶಿಕ್ಷಣವನ್ನು ನೀಡಲು ತುಂಬಾ ಪರಿಶ್ರಮವನ್ನು ತೆಗೆದುಕೊಂಡರು. ಸದ್ಯ ಅಮಿತ್ ಅವರು ಒಂದು ಖಾಜಗಿ ಹಾಸ್ಪಿಟಲ್ನಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದಾರೆ. ಮುಂದಿನ ಸ್ಪೋರ್ಟ್ಸ್ ಎಕ್ಸರ್ಸೈಜ್ ಮೆಡಿಸಿನ್ ಶಿಕ್ಷಣಕ್ಕಾಗಿ ಅವರಿಗೆ ಇಂಗ್ಲೆಂಡಿಗೆ ಹೋಗುವುದು ತುಂಬಾ ಅತ್ಯವಶ್ಯಕವಾಗಿದೆ.

ಆದರೆ ಅವರ ಆರ್ಥಿಕ ಪರಿಸ್ಥಿತಿ ತುಂಬಾ ಬಿಕ್ಕಟ್ಟಾಗಿರುವುದರಿಂದ ಇಂಗ್ಲೆಂಡಿಗೆ ಹೋಗುವ ಖರ್ಚು ಅವರಿಂದ ಸಾಧ್ಯವಾಗುತ್ತಿಲ್ಲ. ಆದರೆ ತಾಯಿ ಮಾತ್ರ ಸೋಲುವ ಮನಸ್ಥಿತಿ ಉಳ್ಳವರಲ್ಲ. ಏನೇ ಆಗಲಿ ತನ್ನ ಮಗನನ್ನು ಇಂಗ್ಲೆಂಡ್ ಗೆ ಕಳಿಸುವ ಬಗ್ಗೆ ಪ್ರಯತ್ನಿಸುತ್ತಿದ್ದಾರೆ. ಒಂದು ಮಾತ್ರ ಸತ್ಯ. ಸದ್ಯ ಅವರಿಗೆ ಆರ್ಥಿಕ ಸಹಾಯದ ಅವಶ್ಯಕತೆ ಇದೆ.