ಮಾಡದೇ ಇದ್ದ ಅಪರಾಧಕ್ಕಾಗಿ 20 ವರ್ಷಗಳ ಕಾಲ ಜೈಲುವಾಸ ಮಾಡಿ ಕೊನೆಗೂ ಹೊರಗೆ ಬಂದ, ಆದರೆ…

ಭಾರತದ ನ್ಯಾಯವ್ಯವಸ್ಥೆಯಲ್ಲಿಯ ದೋಷಗಳನ್ನು ತೆರೆದಿಡುವ ಘಟನೆಯೊಂದು ಹೊರಬಿದ್ದಿದೆ. ಉತ್ತರಪ್ರದೇಶದ ಲಲಿತಪೂರದ ನಿವಾಸಿ ವಿಷ್ಣು ತಿವಾರಿಯ ಜೊತೆಗೆ ಇಂಥ ದುರದೃಷ್ಟಕರ ಘಟನೆ ನಡೆದಿದೆ.

ಲಲಿತಪೂರದಲ್ಲಿಯ ಮಹಿಳೆಯೊಬ್ಬಳು ವಿಷ್ಣುವಿನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಳು. ಆ ಆರೋಪದ ಅಡಿಯಲ್ಲಿ 3 ವರ್ಷ ಲಲಿತಪೂರ ಜೈಲಿನಲ್ಲಿ ಮತ್ತು 17 ವರ್ಷ ಕೇಂದ್ರ ಕಾರಾಗೃಹದಲ್ಲಿ ಕಳೆದ ವಿಷ್ಣುವಿಗೆ ಈಗ ನ್ಯಾಯಾಲಯ ಸಾರಿದೆ. ಬಲಾತ್ಕಾರದ ಆರೋಪದಲ್ಲಿ ಅಳಾಹಾಬಾದ್ ಹೈಕೋರ್ಟ್ ಈಗ ವಿಷ್ಣು 2 ದಶಕಗಳ ನಂತರ ನಿರ್ದೋಷನನ್ನಾಗಿಸಿದೆ.

ವಿಷ್ಣು ತಿವಾರಿ 23 ವರ್ಷದವನಿದ್ದಾಗ ಟ್ರಯಲ್ ಕೋರ್ಟ್ ಈತನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತ್ತು. ಈಗ ಉಚ್ಚ ನ್ಯಾಯಾಲಯ ವಿಷ್ಣುವಿಗೆ ನಿರಪರಾಧಿ ಎಂದು ಸಾರಿತು. ಏತನ್ಮಧ್ಯೆ ವಿಷ್ಣು ತನ್ನ ತಾಯಿ ತಂದೆ ಇಬ್ಬರು ಅಣ್ಣಂದಿರರನ್ನು ಕಳೆದು ಕೊಂಡಿದ್ದಾನೆ.

ವಿಷ್ಣು ಲಲಿತಪೂರ ನಿವಾಸಿಯಾಗಿದ್ದು 2000 ದಲ್ಲಿ ಬೇರೆ ಊರಿನ ಮಹಿಳೆಯೊಬ್ಬಳು ಈತನ ಮೇಲೆ ಬಲಾತ್ಕಾರದ ಆರೋಪವನ್ನು ಮಾಡಿದ್ದಳು. ಆಗ ವಿಷ್ಣು ತನ್ನ ತಂದೆ ತಾಯಿ ಮತ್ತು ಅಣ್ಣಂದಿರರ ಜೊತೆಗೆ ವಾಸಿಸುತ್ತಿದ್ದನು. ಕುಟುಂಬಕ್ಕಾಗಿ ನೌಕರಿ ಚಾಕರಿ ಮಾಡಿಕೊಂಡಿದ್ದ.

ಪೋಷಕರ ಮಾತು ಸೋದರರ ಅಂತ್ಯಕ್ರಿಯೆಗೆ ಉಪಸ್ಥಿತನಾಗಲಿಲ್ಲ. 2003 ರಲ್ಲಿ ಆತನನ್ನು ಆಗ್ರಾದ ಸೆರೆಮನೆಯಲ್ಲಿ ರವಾನಿಸಲಾಯಿತು. ಏತನ್ಮಧ್ಯೆ ಆರು ವರ್ಷಗಳ ಹಿಂದೆ ತಂದೆ ತೀರಿಕೊಂಡಾಗ ಪೆರೋಲ್ ಸಿಗದ ಕಾರಣ ಅಂತ್ಯಕ್ರಿಯೆಗೂ ಹಾಜರಾಗಲಿಲ್ಲ. ಇಬ್ಬರೂ ಅಣ್ಣಂದಿರರು ತೀರಿ ಕೊಂಡಾಗಲೂ ಅಷ್ಟೇ.

ಈಗ 20 ವರ್ಷಗಳ ನಂತರ ನಿರಪರಾಧಿ ಯಾಗಿ ಕೋರ್ಟ್ ಹೇಳಿತು. ಈತನ ಮಹತ್ವದ ಯೌವನದ ಮತ್ತು ಬದುಕಿನಲ್ಲಿ ಏನಾದರೂ ಸಾಧಿಸುವ ಸಮಯದಲ್ಲೇ ಜೀವನ ಜೈಲಿನಲ್ಲಿ ಕಳೆದು ಹೋಯಿತು. ಈಗ ಈ ತಪ್ಪಿಗೆ ಯಾರು ಜವಾಬ್ದಾರರು? ಯಾರು ಹೊಣೆ? ನೀವೇ ಹೇಳಿ.