ಮಗನ ಸಿನಿಮಾ ಲಾಂಚ್ ಬಗ್ಗೆ ಕೇಳಿದ ಸಂದರ್ಶಕ; ಯಾರೂ ಊಹಿಸಲಾಗದ ಉತ್ತರ ಕೊಟ್ಟ ನಟ ದರ್ಶನ್!
ಸಿನಿಮಾ ನಟ ನಟಿಯರ ಮಕ್ಕಳು ಎಂದರೆ ಸಾಮಾನ್ಯವಾಗಿಯೇ ಅವರು ಕೂಡಾ ಭವಿಷ್ಯದಲ್ಲಿ ನಾಯಕ ಅಥವಾ ನಾಯಕಿಯಾಗಿ ಚಿತ್ರ ರಂಗಕ್ಕೆ ಎಂಟ್ರಿ ನೀಡವುದು ಸತ್ಯ ಎನ್ನುವುಕ್ಕೆ ಈಗಾಗಲೇ ನಮ್ಮ ಮುಂದೆ ಹಲವು ನಿದರ್ಶನಗಳು ಇವೆ. ಸ್ಟಾರ್ ಗಳ ಮಕ್ಕಳು ಕೂಡಾ ಬಾಲಿವುಡ್ ನಿಂದ ಹಿಡಿದು ಸ್ಯಾಂಡಲ್ ವುಡ್ ಗೆ ವರೆಗೂ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಇನ್ನು ಈಗ ಸ್ಟಾರ್ ಗಳಾಗಿರುವ ನಟರ ವಾರಸುದಾರರು ಕೂಡಾ ಮುಂದಿನ ದಿನಗಳಲ್ಲಿ ಸಿನಿಮಾಕ್ಕೆ ಬರುವರೆನ್ನುವುದು ವಾಸ್ತವ. ಇಂತಹುದೇ ಒಂದು ವಿಷಯವಾಗಿ ಇತ್ತೀಚಿಗೆ ಮಾದ್ಯಮವೊಂದರ ಸಂದರ್ಶನದಲ್ಲಿ ಸ್ಯಾಂಡಲ್ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದೆ ಕೂಡಾ ಒಂದು ಪ್ರಶ್ನೆಯನ್ನು ಇಡಲಾಯಿತು. ಈ ಪ್ರಶ್ನೆಗೆ ದರ್ಶನ್ ಅವರು ನೀಡಿದ ಉತ್ತರ ಮಾತ್ರ ಬಹಳ ಅರ್ಥಪೂರ್ಣ ಎನಿಸಿದ್ದು ಮಾತ್ರವೇ ಅಲ್ಲದೇ ನೆಟ್ಟಿಗರು ಹಾಗೂ ದರ್ಶನ್ ಅವರ ಅಭಿಮಾನಿಗಳಿಗೆ ಬಹಳಷ್ಟು ಖುಷಿಯನ್ನು ನೀಡಿದೆ.
ನಟ ದರ್ಶನ್ ಅವರು ಇತ್ತೀಚಿಗೆ ಮಾದ್ಯಮವೊಂದರ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರನ್ನು ನಿಮ್ಮ ಮಗನನ್ನು ಯಾವಾಗ, ಸಿನಿಮಾದಲ್ಲಿ ಗ್ರಾಂಡ್ ಆಗಿ ಲಾಂಚ್ ಮಾಡುವಿರಿ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು. ಈ ಪ್ರಶ್ನೆಗೆ ನಟ ದರ್ಶನ್ ಅವರು ನೀಡಿದ ಉತ್ತರ ಮಾತ್ರ ಅನೇಕರಿಗೆ ಅನಿರೀಕ್ಷಿತವಾಗಿತ್ತು. ಏಕೆಂದರೆ ನಟ ದರ್ಶನ್ ಅವರು ಮೊದಲು ಅವನು ಚೆನ್ನಾಗಿ ಓದಲಿ, ಅವನಿಗೆ ಯಾವುದೇ ಈಸಿ ಮೀಲ್ ( Easy Meal ) ಸಿಗುವಂತಾಗಬಾರದು. ಮೊದಲು ಅವನು ಕಸ ಗುಡಿಸುವುದನ್ನು ಕಲಿಯಲಿ ಎಂದಿದ್ದಾರೆ ನಟ ದರ್ಶನ್ ಅವರು. ಮೊದಲು ಅವನು ಸರಿಯಾಗಿ ಕಸ ಹೊಡೆಯಲಿ ಅನಂತರ ಗಲ್ಲಾದ ಮೇಲೆ ಕೂರಲಿ ಎನ್ನುವ ಮಾತು ಹೇಳುತ್ತಾ ಹೊಟೇಲ್ ನ ಉದಾಹರಣೆಯನ್ನು ಅವರು ನೀಡಿದ್ದಾರೆ.

ಸಾಮಾನ್ಯವಾಗಿ ಹೊಟೇಲ್ ಗಳಲ್ಲಿ ಒಂದು ಮಾತಿದೆ ಮೊದಲು ಕಸ ಹೊಡಿಯೋದು ಕಲಿಯಬೇಕು ಆಮೇಲೆ ಗಲ್ಲಾ ದ ಮೇಲೆ ಕುಳಿತುಕೊಳ್ಳಬೇಕು ಅನ್ನೋದು. ಒಂದೇ ಸಲ ನೇರವಾಗಿ ಗಲ್ಲಾದ ಮೇಲೆ ಕೂರಿಸಿದ್ರೆ ಅವರಿಗೆ ಹೊಟೇಲ್ ನ ಮಹತ್ವ ಏನು ಅನ್ನೋದು ಗೊತ್ತಾಗಲ್ಲ. ಆದ್ದರಿಂದ ಮೊದಲು ತಮ್ಮ ಮಗ ವಿನೀಶ್ ಸಿನಿಮಾದಲ್ಲಿ ಲೈಟ್ ಎಂದರೇನು? ನಾಲ್ಕು ಜನರ ಮುಂದೆ ನಿಂತಾಗ ಹೇಗಿರುತ್ತೆ ಅನ್ನೋದನ್ನು ನೋಡಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ದರ್ಶನ್ ಅವರು ತಮ್ಮ ಅಕ್ಕನ ಮಗನ ವಿಷಯವನ್ನು ಕೂಡಾ ಪ್ರಸ್ತಾಪಿಸಿದ್ದಾರೆ. ಅವನು ಸಿನಿಮಾಕ್ಕೆ ಬರೋದಿಕ್ಕೆ ರೆಡಿ ಆಗ್ತಾ ಇದ್ದಾನೆ. ಅವನನ್ನು ಏನಾದ್ರೂ ಮಾಡಬೇಕು ಅನ್ನೋ ವಿಚಾರ ತಲೆಯಲ್ಲಿದೆ ಎಂದಿದ್ದಾರೆ.
ಆದ್ರೆ ಈ ವೇಳೆ ದರ್ಶನ್ ಅವರು ಮತ್ತೊಂದು ಆಶ್ಚರ್ಯಕರ ವಿಷಯವನ್ನು ಕೂಡಾ ಹೇಳಿದ್ದಾರೆ. ಅವನಿಗೂ ಕೂಡಾ ಎಲ್ಲಾ ಸುಲಭವಾಗಿ ಸಿಗೋ ಹಾಗೆ ಇರಬಾರದು. ಮುಂದಿನ ಶೂಟಿಂಗ್ ಆರಂಭ ಆದಾಗ ಟೆಕ್ನಿಕಲ್ ಟೀಂ ನಲ್ಲಿ ಹಾಕ್ತೀನಿ ಬಾ ಅಂತ ಹೇಳಿದ್ದೀನಿ. ಅಲ್ಲದೇ ನನ್ನ ಜೊತೆ ಬರೋ ಹಾಗಿಲ್ಲ, ನನ್ನ ಕ್ಯಾರಾವ್ಯಾನ್ ಗೆ ಹತ್ತೋ ಹಾಗಿಲ್ಲ, ನನ್ನ ಜೊತೆ ಊಟಕ್ಕೆ ಕೂರೋ ಹಾಗಿಲ್ಲ, ಏನೂ ಇಲ್ಲ ಅಂತ ಹೇಳಿದ್ದೀನಿ. ಸಂಜೆ ಬಾಟಾ ಕೊಟ್ಟಾಗ ತಗೊಂಡು ಸೀದಾ ಮನೆಗೆ ಬರ್ಬೇಕು ಅಂತ ಹೇಳಿದ್ದೀನಿ ಎನ್ನುತ್ತಾ ಒಂದಷ್ಟು ದಿನ ಇಲ್ಲಿ ಮಣ್ಣು ಹೊರಲಿ ಎಂದು ಅವರು ಹೇಳುವ ಮೂಲಕ ಅಕ್ಕನ ಮಗ ಕೂಡಾ ಕಷ್ಟ ಪಟ್ಟು ಮೇಲೆ ಬರಲಿ ಎಂದಿದ್ದಾರೆ.
ಅವರು ಮಾತನಾಡುತ್ತಾ ಸೆಟ್ ನಲ್ಲಿ ಓಡಾಡ್ತಾ ಇದ್ದರೆ ಭಯ ಕಡಿಮೆಯಾಗೋದು ಮಾತ್ರವೇ ಅಲ್ಲದೇ ಕೆಲಸವನ್ನು ಕೂಡಾ ಕಲಿಯಬಹುದು. ಕೆಲಸ ಕಲಿತಾಗ ಅವರಿಗೆ ಆ ಕೆಲಸ ಸುಲಭ ಎನಿಸುತ್ತೆ. ಅಲ್ಲದೇ ಶೂಟಿಂಗ್ ನಲ್ಲಿ ಅದೆಷ್ಟೋ ದೊಡ್ಡ ಕಲಾವಿದರು ಇರ್ತಾರೆ. ಕ್ಯಾಮೆರಾ ಹಿಂದೆ ನಿಂತು ಅವರು ಏನು ಮಾಡ್ತಿದ್ದಾರೆ, ಹೇಗೆ ಆ್ಯಕ್ಟ್ ಮಾಡ್ತಾರೆ ಅನ್ನೋದೆಲ್ಲಾ ನೋಡಿ ಕಲಿಯಬಹುದು ಎಂದಿದ್ದಾರೆ ದರ್ಶನ್ ಅವರು. ಅಲ್ಲದೇ ತಾನು ಕೂಡಾ ಇದೆಲ್ಲವನ್ನು ಕಲಿತೇ ಬಂದಿರುವುದಾಗಿ ಹೇಳಿದ್ದಾರೆ. ಲೈಟಿಂಗ್ ಕೆಲಸ ಮಾಡಿದ್ದೆ, ಅದಾದ ಮೇಲೆ ಎಡಿ ಹತ್ರ ನಿಂತು ಸೀನ್ ಬಗ್ಗೆ ಮಾತಾಡ್ತಿದ್ವಿ, ಆಕ್ಟಿಂಗ್ ನೋಡ್ತಿದ್ದೆ ಎಂದು ಹೇಳಿದ್ದಾರೆ.