ಶ್ರದ್ಧಾ ಕಪೂರ್ ತೊಟ್ಟಿರುವ ಈ ಫ್ರಾಕಿನ ಬೆಲೆಯಲ್ಲಿ ಒಂದು ಕಾರನ್ನೇ ಖರೀದಿಸಬಹುದು! ಡ್ರೆಸ್ ಬೆಲೆ ಕೇಳಿ ಶಾಕ್ ಆದ ಫ್ಯಾನ್ಸ್
ಸೆಲೆಬ್ರಿಟಿಗಳು ಮಾಡುವ ಖರ್ಚಿಗೆ ಮಿತಿಯೇ ಇರುವುದಿಲ್ಲ. ಅವರ ಗಳಿಕೆ ಹೇಗೆ ಇರುತ್ತದೆ ಹಾಗೆ ಅವರ ಖರ್ಚು ಸಹ ಇರುತ್ತದೆ.
ಶ್ರದ್ಧಾ ಕಪೂರ್ ಅವರು ಬಾಲಿವುಡ್ ನಲ್ಲಿ ಸದ್ಯದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿದ್ದಾರೆ. ಇವರು ಸದ್ಯಕ್ಕೆ ತುಂಬಾ ಜನಪ್ರಿಯ ಹಾಗೂ ಬೇಡಿಕೆಯ ನಟಿಯಾಗಿದ್ದಾರೆ. ಇವರು ಈಗ ದುಬಾರಿ ಫ್ರಾಕ್ ಬಗ್ಗೆ ಸುದ್ದಿಯಾಗುತ್ತಿದ್ದಾರೆ. ತಮ್ಮ ಪ್ರಿಯಕರನ ಹುಟ್ಟು ಹಬ್ಬದ ದಿನದಂದು ಲಕ್ಷಾವಧಿ ರೂಪಾಯಿ ಫ್ರಾಕ್ ತೊಟ್ಟುಕೊಂಡಿದ್ದಾರೆ.

ಇತ್ತೀಚೆಗೆ ಇವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಸಲುವಾಗಿ ಕುಟುಂಬದ ಜೊತೆಗೆ ಮಾಲ್ಡೀವ್ಸ್ ದ್ವೀಪಗಳಿಗೆ ಹೋಗಿದ್ದಾರೆ. ಅಲ್ಲಿ ತಮ್ಮ ಕುಟುಂಬದ ಜೊತೆಗೆ ರಜೆಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಏತನ್ಮಧ್ಯೆ ಅಲ್ಲಿ ನಡೆದ ಸೆಲೆಬ್ರಿಟಿ ಪಾರ್ಟಿಗಳಿಗೂ ಹಾಜರಾಗುತ್ತಿದ್ದಾರೆ. ಪಾರ್ಟಿಯಲ್ಲಿ ಅವರ ಪ್ರಿಯಕರ ಎನ್ನಲಾಗುತ್ತಿದ್ದ ರೋಹನ್ ಶ್ರೇಷ್ಠ ಜೊತೆಗೆ ಕಾಣಿಸಿಕೊಂಡಿದ್ದಾರೆ. ಪಾರ್ಟಿಯಲ್ಲಿ ಅವರ ಜೊತೆ ಶಾಮೀಲಾದ ವಿಡಿಯೋ ಒಂದು ಎಲ್ಲೆಲ್ಲೂ ಚರ್ಚೆಗೆ ಕಾರಣವಾಗಿದೆ.

ಈ ಪಾರ್ಟಿಯಲ್ಲಿ ಅವರು ತೊಟ್ಟ ಡ್ರೆಸ್ಸಿನ ಬೆಲೆ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಫ್ಯಾನ್ಸ್ ಗಳು ತಮ್ಮ ನೆಚ್ಚಿನ ನಟ ನಟಿಯರು ಉಪಯೋಗಿಸುವ ವಸ್ತುಗಳ ಬಗ್ಗೆ ಅವುಗಳ ಬೆಲೆಗಳ ಬಗ್ಗೆ ತುಂಬಾ ಕುತೂಹಲ ಹೊಂದಿರುತ್ತಾರೆ. ಅದಕ್ಕಾಗಿಯೇ ಅನೇಕ ಫ್ಯಾನ್ಸ್ ಗಳು ಶೃದ್ಧಾ ತೊಟ್ಟ ಡ್ರೆಸ್ಸಿನ ಬೆಲೆಯನ್ನು ತಿಳಿದುಕೊಳ್ಳಲು ಪ್ರಯತ್ನ ಪಟ್ಟರು. ಅದರ ಬೆಲೆ ಕೇಳಿ ಸಾಮಾನ್ಯ ಮನುಷ್ಯ ತಲೆ ಸುತ್ತಿ ಬೀಳದೆ ಇರನು. ಕಾರಣ ಈ ಡ್ರೆಸ್ ನ ಬೆಲೆ 5899 ಅಮೆರಿಕ ಡಾಲರ್ ಎಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 4 ಲಕ್ಷ 31 ಸಾವಿರ ರೂಪಾಯಿಗಳಷ್ಟು.

ಇಷ್ಟೊಂದು ಹಣದಲ್ಲಿ ಸಾಮಾನ್ಯ ಮನುಷ್ಯ ಇಡೀ ಅಂಗಡಿಯನ್ನೇ ಖರೀದಿಸಬಹುದು ಎಂಬಂತಹ ಮಿಮ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ.
ಕೆಲವರ ಪ್ರಕಾರ ಶ್ರದ್ಧಾಳಿಗೆ ಈ ದುಬಾರಿ ಡ್ರೆಸ್ ಆಕೆಯ ಪ್ರಿಯಕರನೆಂದು ಹೇಳಲಾಗುತ್ತಿದ್ದ ರೋಹನ್ ಕೊಟ್ಟಿದ್ದಾನೆ ಎನ್ನಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಶ್ರದ್ಧಾ ರೋಹನ್ ಗೆ ಡೇಟ್ ಮಾಡುತ್ತಿದ್ದಾಳೆ ಎಂಬ ಗಾಸಿಪ್ ಹರಡಿದೆ. ರೋಹನ್ ಬಾಲಿವುಡ್ ನಲ್ಲಿಯ ಪ್ರಸಿದ್ಧ ಫೋಟೋಗ್ರಾಫರ್ ಆಗಿದ್ದಾರೆ.