ಅಮೆರಿಕಾದ ಉದ್ಯೋಗ ತ್ಯಜಿಸಿ, ಗ್ರಾಮ ಪಂಚಾಯತಿ ಸರಪಂಚ್ ಆದ ಮಹಿಳೆ, ಕೆಲವೇ ವರ್ಷಗಳಲ್ಲಿ ಬದಲಿಸಿದಳು ಊರಿನ ಸಂಪೂರ್ಣ ಚಿತ್ರಣ
ಈಗಿನ ಮಹಿಳೆಯರು ಪುರುಷರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುತ್ತಿರುವುದರಲ್ಲಿ ಸುಳ್ಳಿಲ್ಲ. ಪುರುಷರು ಮಾಡುವ ಯಾವುದೇ ಕೆಲಸ ಅವರಿಗಿಂತಲೂ ಚೆನ್ನಾಗಿ ಮತ್ತು ಅಚ್ಚುಕಟ್ಟಾಗಿ ಮಾಡಿ ತೋರಿಸುತ್ತಾರೆ ಎನ್ನುವ ಎಷ್ಟೋ ಉದಾಹರಣೆಗಳನ್ನು ನೋಡಿದ್ದೇವೆ.
ಈ ಲೇಖನದಲ್ಲಿ ಅಂಥದ್ದೇ ಒಬ್ಬಳು ಮಹಿಳೆಯ ಯಶೋಗಾಥೆಯನ್ನು ಓದುವವರಿದ್ದೇವೆ. ತಮ್ಮ ಕೆಲಸದಿಂದ ಭಕ್ತಿ ಶರ್ಮಾ ಹೆಸರಿನ ಮಹಿಳೆ ಭಾರತದ ತುಂಬಾ ಪ್ರಭಾವಶಾಲಿ ಮಹಿಳೆಯರಲ್ಲಿ ಗಣನೆಯಾಗುತ್ತಿದ್ದಾರೆ. ಇವರು ಮಧ್ಯಪ್ರದೇಶದ ಭೋಪಾಲ್ ನಗರದ ನೂತನ ಕಾಲೇಜ್ ನಿಂದ ಪಾಲಿಟಿಕಲ್ ಸಾಯನ್ಸ್ ಮುಗಿಸಿದ್ದಾರೆ. ಭಕ್ತಿಯವರು ಈಗ ಕಾನೂನಿನ ಶಿಕ್ಷಣವನ್ನು ಸಹ ಪಡೆಯುತ್ತಿದ್ದಾರೆ.

ಇವರು ತಮ್ಮ ಹುಟ್ಟೂರಿನ ಸೇವೆ ಮಾಡಲು ಅಮೇರಿಕೆಯಲ್ಲಿಯ ಒಳ್ಳೆಯ ನೌಕರಿಯನ್ನು ತ್ಯಾಗ ಮಾಡಿ ಭೋಪಾಲ್ ನಿಂದ 20 ಕಿಮೀ ಅಂತರದಲ್ಲಿ ಮೇಲಿರುವ ಬರಖೇಡಿ ಅಬ್ದುಲ್ಲಾ ಊರಿನ ಸರಪಂಚ್ ಆಗಿದ್ದಾರೆ. ಒಂದು ಸಮಯದಲ್ಲಿ ಈ ಊರಿನಲ್ಲಿ ಬೀಳು ಮನೆಗಳು, ಇಲೆಕ್ಟ್ರಿಕ್ ಸಪ್ಲಾಯ್ ಹಾಗೂ ಕುಡಿಯಲು ಸರಿಯಾದ ನೀರಿನ ಸರಬರಾಜು ಸಹ ಇರಲಿಲ್ಲ. ಆದರೀಗ ಈ ಊರಲ್ಲಿ 80 ಪ್ರತಿಶತ ಮನೆಗಳು ಚೆನ್ನಾಗಿ ಇವೆ. ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ಮತ್ತು ಕರೆಂಟ್ ಎಲ್ಲವೂ ಸುಸಜ್ಜಿತವಾಗಿದೆ. ಈ ಎಲ್ಲ ಬದಲಾವಣೆಗಳನ್ನು ಹೇಗೆ ಮತ್ತು ಯಾವ ರೀತಿ ಮಾಡಿದರು ಎಂಬುದನ್ನು ತಿಳಿಯಿರಿ.

ಊರಿನವರೇ ಮಾಡಿದರು ಸರಪಂಚ್..
ಭಕ್ತಿ ಇವರು ತಮ್ಮ ಊರಿನಲ್ಲಿ ಮಹಿಳೆ ಮತ್ತು ಹುಡುಗಿಯರಿಗಾಗಿ ಹೊಸ ಅಭಿಯಾನವನ್ನೆ ಪ್ರಾರಂಭಿಸಿದ್ದಾರೆ. ಊರಲ್ಲಿ ಯಾರದೇ ಮನೆಯಲ್ಲಿ ಹೆಣ್ಣು ಮಗುವಿಗೆ ಜನ್ಮವಾದರೆ ಆ ಮಗುವಿನ ತಾಯಿಗೆ ತನ್ನ ಎರಡು ತಿಂಗಳ ಸಂಬಳವನ್ನು ಗಿಫ್ಟ್ ರೂಪದಲ್ಲಿ ಕೊಡುತ್ತಾರೆ. ಇಷ್ಟಾದ ಮೇಲೆ ಮುಗಿಯಿತು ಎಂದು ತಿಳಿಯಬೇಡಿ, ಆ ಹುಡುಗಿಯ ಜನಿಸಿದ ಆನಂದಕ್ಕೆ 10 ಗಿಡಗಳನ್ನು ನೆಡುತ್ತಾರೆ. ಈ ಅಭಿಯಾನದಡಿಯಲ್ಲಿ ಇಲ್ಲಿಯವರೆಗೆ ಒಟ್ಟು ಸುಮಾರು 6500 ಗಿಡಗಳನ್ನು ನೆಟ್ಟಿದ್ದಾರೆ. ಆ ಮರಗಳು ಇಲ್ಲಿಯವರೆಗೆ ಅರ್ಧದಷ್ಟು ಎತ್ತರವಾಗಿವೆ.

ಊರಲ್ಲಿ ರಸ್ತೆ, ನೀರು ಮತ್ತು ವಿದ್ಯುತ್ ವ್ಯವಸ್ಥೆ…
ಸರಪಂಚ್ ಪದವಿ ಸಿಕ್ಕ ತಕ್ಷಣವೇ ಅವರು ಊರಿನ ವಿಕಾಸಕ್ಕಾಗಿ ಪ್ರಯತ್ನ ಶುರು ಮಾಡಿದರು. ಊರನ್ನು ಮುಖ್ಯವಾಗಿ ಪಟ್ಟಣಕ್ಕೆ ಜೋಡಿಸಲು ರಸ್ತೆ ನಿರ್ಮಿಸಿದರು. ಊರಲ್ಲಿ 80 ಪ್ರತಿಶತ ಬೀಳು ಮನೆಗಳನ್ನು ಪಕ್ಕಾ ಮನೆಗಳಲ್ಲಿ ರೂಪಾಂತರ ಮಾಡಲು ಹೆಣಗಾಡಿದರು. ಊರಲ್ಲಿ ನೀರು ಮತ್ತು ವಿದ್ಯುತ್ತಿನ ಸಮಸ್ಯೆ ಕಾಡದಂತೆ ಮಾಡಿದರು. ಊರಿನ ಎಲ್ಲ ಜನರಿಗೂ ಸರಕಾರದ ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಲು ಪ್ರೋತ್ಸಾಹಿಸಿದರು. ಇದರಿಂದ ಯುವಕರು, ಜನರು, ಮಹಿಳೆಯರು ಆರ್ಥಿಕವಾಗಿ ಸಶಕ್ತ ಮತ್ತು ಬಲಾಢ್ಯವಾದರು.

ಗ್ರಾಮದ ನಿವಾಸಿಗಳಿಗೆ ಶಿಕ್ಷಣ.
ಈ ಊರಲ್ಲಿ ಒಂದು ಕಾಲದಲ್ಲಿ ನಿರಕ್ಷರತೆ ತುಂಬಾ ಇತ್ತು. ಆದರೆ ಭಕ್ತಿಯವರು ಊರಲ್ಲಿಯ ಜನರಿಗೆ ಶಿಕ್ಷಣದ ಮಹತ್ವವನ್ನು ಸಾರಿ ಹೇಳಿದರು. ಊರಿನ ಪ್ರತಿಯೊಂದು ರಸ್ತೆಯನ್ನು ಶಾಲೆಗೆ ತಂದು ಜೋಡಿಸಿದರು. ಮಕ್ಕಳಿಗೆ ಶಾಲೆಗೆ ಬರಲು ಸೈಕಲ್ ಗಳನ್ನು ನೀಡಲಾಯಿತು. ಊರಲ್ಲಿ ಮಕ್ಕಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಸಹ ಮಾಡಿದರು. ಈ ರೀತಿ ತನ್ನೂರಿಗಾಗಿ ಈ ಮಹಿಳೆ ತುಂಬಾ ಪರಿಶ್ರಮ ಪಟ್ಟಿದ್ದಾರೆ.