ಮದುವೆಯ ವೇಳೆ ಗಂಡನ ತಲೆ ತುಂಬ ಇದ್ದ ಕೂದಲ ರಹಸ್ಯ ವರ್ಷದ ನಂತರ ಬಯಲಾಯ್ತು: ವಿಚ್ಛೇದನ ಬೇಕೆಂದು ಹಠ ಹಿಡಿದು ಕುಳಿತ ಪತ್ನಿ!

ಗಂಡ ಹೆಂಡತಿ, ಸಂಸಾರ ಎಂದ ಮೇಲೆ ಅವರಲ್ಲಿ ಸಮಸ್ಯೆಗಳು ಉಂಟಾಗುವುದು ಕೂಡಾ ಸಹಜ. ಈ ಜಗಳಗಳು, ಗಲಾಟೆಗಳು ಕೆಲವೊಮ್ಮೆ ಮಾತಿನ ಮೂಲಕವೇ ಮುಗಿದರೆ, ಇನ್ನೂ ಅನೇಕ ಸಂದರ್ಭಗಳಲ್ಲಿ ಇದು ತಾರಕಕ್ಕೆ ಏರಿ ಪತಿ ಪತ್ನಿ ಇಬ್ಬರೂ ಕಾನೂನಿನ ಮೂಲಕ ವಿಚ್ಛೇದನವನ್ನು ಪಡೆದುಕೊಂಡು ಶಾಶ್ವತವಾಗಿ ಒಬ್ಬರಿಂದ ಒಬ್ಬರು ದೂರವಾಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ವಿಚ್ಛೇದನ ಹೊಂದುವವರ ಸಂಖ್ಯೆ ಕೂಡಾ ಹೆಚ್ಚಾಗುತ್ತಲೇ ಇದೆ. ದಿನಗಳು ಉರುಳಿದಂತೆ ಆಧುನಿಕತೆಯ ಜೀವನ ಶೈಲಿಗೆ ಒಗ್ಗಿ ಕೊಂಡಿರುವ ಇಂದಿನ ಪೀಳಿಗೆಯ ಅನೇಕರು ಸಮಸ್ಯೆಯೊಂದು ಎದುರಾದ ಕೂಡಲೇ ಅದನ್ನು ಪರಿಹರಿಸಿಕೊಳ್ಳುವ ಪ್ರಯತ್ನ ಮಾಡುವುದಕ್ಕಿಂತ ಬಹಳ ಸುಲಭವಾದ ಮಾರ್ಗ ವಿಚ್ಛೇದನ ಎನ್ನುವಂತೆ ಭಾವಿಸತೊಡಗಿದ್ದಾರೆ. ಅದೆಷ್ಟೋ ಮದುವೆ ಸಂಬಂಧಗಳು ವಿಚ್ಛೇದನದ ಕಾರಣದಿಂದ ಮುರಿದು ಬಿದ್ದಿರುವ ಉದಾಹರಣೆಗಳು ಕೂಡಾ ಇವೆ.

ವಿಚಿತ್ರವೆಂದರೆ ಇತ್ತೀಚಿನ ದಿನಗಳಲ್ಲಿ ವಿಚ್ಛೇದನಕ್ಕೆ ನೀಡುವ ಕಾರಣಗಳು ಕೂಡಾ ವಿಲಕ್ಷಣವಾಗತೊಡಗಿದೆ. ಎಲ್ಲೋ ಒಂದು ಕಡೆ ಗಂಡ ಗೊರಕೆ ಹೊಡೆಯುತ್ತಾನೆ ಎಂದು ಪತ್ನಿ ವಿಚ್ಛೇದನ ಬೇಕೆಂದರೆ, ಇನ್ನೊಂದು ಕಡೆ ನಮಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕುವುದು ಅಸಹನೀಯ ಎನಿಸತೊಡಗಿದೆ ಎಂದು ತಾವು ಬೇರೆ ಬೇರೆಯಾಗಲು ಬಯಸಿರುವುದಾಗಿಯೂ ಕಾರಣವನ್ನು ನೀಡುತ್ತಾರೆ. ಇಂತಹ ಕಾರಣಗಳನ್ನು ನೋಡಿದಾಗ ಅನೇಕರು ಇಂತಹ ಕ್ಷು ಲ್ಲಕವಾದ ಕಾರಣ ಗಳಿಗೂ ದೂರವಾಗಲು ಬಯಸುವ ಇಂತಹ ದಂಪತಿಗಳು ಹೇಗೆ ತಾನೇ ಮುಂದಿನ ಜೀವನ ನಡೆಸಲು ಸಾಧ್ಯ, ಇವರಿಗೆ ವಿವಾಹ ಬಂಧನದ ಮಹತ್ವ ಕೂಡಾ ತಿಳಿದಿಲ್ಲ ಎಂದೆಲ್ಲಾ ಅನೇಕರು ಟೀಕೆ ಮಾಡುವುದನ್ನು ಕೂಡಾ ನಾವು ಗಮನಿಸಿ ಇರುತ್ತೇವೆ.

ಇತ್ತೀಚಿಗೆ ಉತ್ತರ ಪ್ರದೇಶದ ಮೀರತ್ ನಲ್ಲಿ ಒಂದು ಘಟನೆ ವರದಿಯಾಗಿದೆ. ಈ ಘಟನೆ ಕೂಡಾ ಪತಿ ಪತ್ನಿಯ ವಿಚ್ಛೇದನಕ್ಕೆ ಸಂಬಂಧಿಸಿದ್ದೇ ಆಗಿದ್ದು, ಇಲ್ಲಿ ಮಹಿಳೆಯೊಬ್ಬರು ತನಗೆ ವಿಚ್ಛೇದನ ಬೇಕೆಂದು ಕೋರ್ಟ್ ನ ಮೊರೆ ಹೋಗಿದ್ದಾರೆ. ಕೌಟುಂಬಿಕ ಸಮಾಲೋಚನಾ ಕೇಂದ್ರದಲ್ಲಿ ಕೌನ್ಸಿಲಿಂಗ್ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಹಿಳೆ ತಾನು ವಿಚ್ಚೇದನ ಬಯಸುತ್ತಿರುವುದು ಏಕೆ ಎನ್ನುವ ಕಾರಣವನ್ನು ನೀಡಿದಾಗ ಅದನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಗಿದ್ದು ಮಾತ್ರವೇ ಅಲ್ಲದೇ ಈ ವಿಷಯ ಒಬ್ಬರಿಂದ ಒಬ್ಬರಿಗೆ ತಿಳಿದು ಇದೊಂದು ದೊಡ್ಡ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆದಿದೆ.

ವರದಿಗಳ ಪ್ರಕಾರ ಕಳೆದ ಬುಧವಾರ ಪೋಲಿಸ್ ಲೈನ್ ನಲ್ಲಿ ಕೌಟುಂಬಿಕ ಸಮಾಲೋಚನಾ ಕೇಂದ್ರವು ಕೌನ್ಸಿಲಿಂಗ್ ಆಯೋಜನೆ ಮಾಡಿದಾಗ ಸುಮಾರು ನೂರು ಜನ ಇದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಮಹಿಳೆ ತನಗೆ ವಿಚ್ಚೇದನ ಬೇಕೆಂದು 2020 ರ ಜನವರಿಯಲ್ಲಿ ತನಗೆ ವಿವಾಹವಾಗಿದ್ದು, ತನಗೆ ಮೋಸವಾಗಿದೆ, ಮದುವೆಯ ವಿಷಯದಲ್ಲಿ ತನ್ನನ್ನು ಮೋಸ ಮಾಡಿದ್ದಾರೆ ಎಂದು ಆಕೆ ಆರೋಪ ಮಾಡಿದ್ದಾಳೆ. ಮಹಿಳೆಯು ತನಗೊಂದು ವಿಷಯವನ್ನು ತಿಳಿಸದೇ ಮದುವೆಯನ್ನು ಮಾಡಿರುವುದಾಗಿ ಆ ರೋ ಪ ಮಾಡಿದ್ದಾಳೆ. ಅದಕ್ಕೆ ಈಗ ಪತಿಯಿಂದ ವಿಚ್ಛೇದನವನ್ನು ಆಕೆ ಕೋರಿದ್ದಾಳೆ.

ಮಹಿಳೆಯ ಪ್ರಕಾರ ಮದುವೆಯ ಸಮಯದಲ್ಲಿ ಆಕೆಯ ಪತಿಯ ತಲೆಯಲ್ಲಿ ದಟ್ಟವಾಗ ಕೂದಲು ಇತ್ತು. ಆದರೆ ಮದುವೆಯಾದ ಒಂದು ವರ್ಷದ ನಂತರ ತನಗೆ ಆತನದು ಬೋಳು ತಲೆ ಎನ್ನುವ ಸತ್ಯ ಹೊರಗೆ ಬಂದಿದೆ ಎಂದು ತಿಳಿಸಿದ್ದಾರೆ ಮಹಿಳೆ. ಮದುವೆಯ ವೇಳೆ ವಿಗ್ ಧರಿಸಿ ನನಗೆ ಮೋಸ ಮಾಡಿದ್ದಾರೆ. ಅವರ ಕಡೆಯವರಿಗೆ ಈ ವಿಷಯ ತಿಳಿದಿದ್ದರೂ ಕೂಡಾ ಯಾರೂ ತನಗೆ ಸತ್ಯ ಹೇಳಿಲ್ಲ. ಈಗ ಗಂಡನ ಬೋಳು ತಲೆಯಿಂದಾಗಿ ತಾನು ಮುಜುಗರವನ್ನು ಪಡುವಂತಾಗಿದೆ. ಅದಕ್ಕೆ ತನಗೆ ಆತನಿಂದ ವಿಚ್ಛೇದನ ಬೇಕೆಂದು ಮಹಿಳೆ ಕೋರಿದ್ದಾರೆ.
ಕೌನ್ಸಿಲಿಂಗ್ ವೇಳೆ ಆಕೆಯ ಮನಸ್ಸನ್ನು ಒಲಿಸುವ ಪ್ರಯತ್ನವನ್ನು ಮಾಡಿಲಾಗಿಯೂ ಆಕೆ ವಿಚ್ಛೇದನ ಬೇಕೇಬೇಕೆಂದು ಹಠ ಹಿಡಿದ ಕಾರಣ ಮತ್ತೊಂದು ಕೌನ್ಸಿಲಿಂಗ್ ದಿನಾಂಕ ನೀಡಿ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.