ಮಿಂಚಿನ ವೇಗ ಅಂದ್ರೆ ಇದೇನಾ? ಕಣ್ಮುಚ್ಚಿ ಕಣ್ಣು ಬಿಡೋವಷ್ಟರಲ್ಲಿ ನಾಯಿಯನ್ನು ಎತ್ತಿಕೊಂಡು ಹೋದ ಬ್ಲಾಕ್ ಪ್ಯಾಂಥರ್! Viral Video

ವನ್ಯ ಜೀವಿಗಳಲ್ಲಿ ಬೇಟೆಯಾಡಿ ತಮ್ಮ ಜೀವನವನ್ನು ನಡೆಸುವ ಮಾಂಸಾಹಾರಿ ಪ್ರಾಣಿಗಳಿಗೆ ಬೇಟೆಯ ಕಲೆಯನ್ನು ಯಾರೂ ಕೂಡಾ ಕಲಿಸಿಕೊಡಬೇಕಾಗಿಲ್ಲ. ಅವು ತಾವೇ ಬೇಟೆಯ ಕಲೆಯನ್ನು ಕರಗತ ಮಾಡಿಕೊಂಡಿರುತ್ತವೆ‌. ಸೋಶಿಯಲ್ ಮೀಡಿಯಾಗಳ ಅನುಕೂಲ ಎನ್ನುವಂತೆ ಇಂದು ನಾವು ಕೂಡಾ ಈ ಪ್ರಾಣಿಗಳು ಪರಿಸರದ ಒಂದು ಭಾಗವಾಗಿ ನಡೆಸುವ ಜೀವನದ ರೋಚಕ ಎನಿಸುವ ಸನ್ನಿವೇಶಗಳನ್ನು ವೀಡಿಯೋ ಗಳ ಸಹಾಯದಿಂದ ನೋಡಬಹುದಾಗಿದೆ. ವನ್ಯ ಜೀವಿಗಳು ತಮ್ಮ ಬೇಟೆಯನ್ನು ಹಿಡಿಯುವ ಕೌಶಲವನ್ನು ನೋಡಿದಾಗ ನಮಗೆ ರೋಮಾಂಚನ ಎನಿಸುತ್ತದೆ. ಎಂತಹ ಅತ್ಯದ್ಭುತ ದೃಶ್ಯ ಎನಿಸುತ್ತದೆ. ಯಾವುದೇ ಸಿನಿಮಾ ಕಥೆ ಕೂಡಾ ಇಷ್ಟು ರೋಚಕತೆಯನ್ನು ಕೆರಳಿಸುವುದು ಸಾಧ್ಯವಿಲ್ಲ ಎಂದು ಅನಿಸುವುದು ಕೂಡಾ ವಾಸ್ತವ. ವಿಶೇಷ ಎಂದರೆ ಇಂತಹ ವೀಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ಬೇಗ ವೈರಲ್ ಆಗಿ ಲಕ್ಷಾಂತರ ಜನರ ಮುಂದೆ ಬರುತ್ತದೆ ಕೂಡಾ.

ಅಂತಹ ಒಂದು ಅದ್ಭುತ ವೀಡಿಯೋದ ಬಗ್ಗೆ ನಾವೀಗ ನಿಮಗೆ ಹೇಳಲು ಹೊರಟಿದ್ದೇವೆ. ಇತ್ತೀಚಿನ ದಿನಗಳಲ್ಲಿ ಮಾನವನ ಅರಣ್ಯದ ಮೇಲಿನ ಅ ತಿ ಕ್ರ ಮಣವು ಹೆಚ್ಚಾದಂತೆ ವನ್ಯ ಮೃಗಗಳು ತಮ್ಮ ಬೇಟೆಯನ್ನು ಅರಸಿ ನಗರ, ಪಟ್ಟಣಗಳ ಕಡೆ ಬರುವಂತಾಗಿದೆ ಎಂಬುದು ಆಗಾಗ ಸುದ್ದಿ ಮಾದ್ಯಮಗಳಲ್ಲಿ ಗಮನಿಸುತ್ತಲೇ ಇರುತ್ತೇವೆ. ಗ್ರಾಮಕ್ಕೆ ನುಗ್ಗಿದ ಹುಲಿ, ನಗರದಲ್ಲಿ ಕಂಡ ಚಿರತೆ ಹೀಗೆ ಆಗಾಗ ಸುದ್ದಿಗಳಾಗುತ್ತಲೇ ಇರುತ್ತದೆ‌. ಹೀಗೆ ಕಾಡಿನಿಂದ ನಾಡಿಗೆ ಬಂದ ಈ ಜಂತುಗಳು ತಮ್ಮ ಆಹಾರಕ್ಕಾಗಿ ನಾಯಿ, ಬೆಕ್ಕು, ಎಮ್ಮೆ, ಹಸು, ಕುರಿ, ಮೇಕೆಗಳಂತಹ ಜೀವಿಗಳನ್ನು ತಮ್ಮ ಗುರಿಯಾಗಿಸಿಕೊಳ್ಳುತ್ತವೆ.

ಚಿರತೆಯು ಬೇಟೆಯಾಡುವುದನ್ನು ನೀವು ಈಗಾಗಲೇ ನೋಡಿರಬಹುದು. ಇನ್ನು ಚಿರತೆಯ ವೇಗದ ಕುರಿತಾಗಿ ನಾವು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಂತೂ ಖಂಡಿತ ಇಲ್ಲ. ಆದರೆ ಬ್ಲಾಕ್ ಫ್ಯಾಂಥರ್ ವಿಭಿನ್ನವಾಗಿ ಬೇಟೆಯನ್ನಾಡುತ್ತದೆ. ಇದು ಆಡುವ ಬೇಟೆಯ ಕೌಶಲ್ಯ ಹೇಗಿರುವುದು ಎಂದರೆ ಅದಕ್ಕೆ ಭೇಟೆಯಾಗುವ ಪ್ರಾಣಿಗಳಿಗೂ ಕೂಡಾ ತಿಳಿಯುವ ಮೊದಲೇ ಅವುಗಳನ್ನು ತನ್ನ ಬ ಲಿ ಯನ್ನಾಗಿ ಮಾಡಿಕೊಳ್ಳುವುದು‌. ಚಿರತೆಗಳು ಹಾಗೂ ಬ್ಲಾಕ್ ಪ್ಯಾಂಥರ್ಸ್ ಎರಡೂ ಕೂಡಾ ದೊಡ್ಡ ಬೆಕ್ಕುಗಳ ಪ್ರಬೇಧಕ್ಕೆ ಸೇರಿದ ಪ್ರಾಣಿಗಳೇ ಆಗಿವೆ. ಈಗ ಬ್ಲಾಕ್ ಪ್ಯಾಂಥರ್ ನ ಒಂದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಕಿಶೋರ್ ಎನ್ನುವ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಈ ವೀಡಿಯೋ ಕಣ್ಣೂರಿನ ಒಂದು ದೃಶ್ಯವೆಂದು ಹೇಳಲಾಗುತ್ತಿದೆ. ಈ ವೀಡಿಯೋವನ್ನು ನೋಡಿದಾಗ ನಾವು ಅದರಲ್ಲಿ ಬ್ಲಾಕ್‌ ಪ್ಯಾಂಥರ್ ಹೇಗೆ ಬಹಳ ನಿಧಾನವಾಗಿ ಹೆಜ್ಜೆಗಳನ್ನು ಇಡುತ್ತಾ ಬರುತ್ತದೆ ಎಂಬುದನ್ನು ನಾವು ಗಮನಿಸಬಹುದಾಗಿದೆ. ಬ್ಲಾಕ್ ಪ್ಯಾಂಥರ್ ಹೆಜ್ಜೆಯಿಡುವುದು ಮುಂದೆ ಇರುವ ನಾಯಿಗೆ ತಿಳಿಯುವುದೇ ಇಲ್ಲ. ಸಾಮಾನ್ಯವಾಗಿ ನಾಯಿಗಳು ಸ್ವಲ್ಪ ಸದ್ದಾದರೂ ಗಮನಿಸುತ್ತವೆ‌. ಆದರೆ ಇಲ್ಲಿ ಬ್ಲಾಕ್ ಪ್ಯಾಂಥರ್ ಹಿಂದೆ ಬರುತ್ತಿದ್ದರೂ ಕೂಡಾ ನಾಯಿಗೆ ಅದು ತಿಳಿಯಲಿಲ್ಲ ಎಂದರೆ ಊಹಿಸಿ ಇನ್ನೆಷ್ಟು ಚಾಣಾಕ್ಷತನದಿಂದ ಅದು ಬಂದಿದೆ ಎಂದು.

ವಿಡಿಯೋ ನೋಡಿ

ಈ ವೀಡಿಯೋ ಸಿಸಿಟಿವಿ ಕ್ಯಾಮೆರಾ ದಲ್ಲಿ ಸೆರೆಯಾಗಿದ್ದು, ಬ್ಲಾಕ್ ಪ್ಯಾಂಥರ್ ನಾಯಿಯನ್ನು ಹಿಡಿದಾಗ ನಾಯಿ ಒಂದು ಶಬ್ದ ಮಾಡುವುದಷ್ಟೇ. ಆದರೆ ಬ್ಲಾಕ್ ಪ್ಯಾಂಥರ್ ಅದನ್ನು ಹಿಡಿದು ಎತ್ತಿಕೊಂಡು ಹೋಗಿ ಬಿಡುತ್ತದೆ. ಇದನ್ನು ನೋಡಿದ ಟ್ವಿಟರ್ ಬಳಕೆದಾರರೊಬ್ಬರು ಈ ಚಿರತೆಯನ್ನು ಹಿಡಿಯಬೇಕು ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ಅನ್ಯ ಬಳಕೆದಾರರು ಏಕೆ ಹಿಡಿಯಬೇಕು? ಅವುಗಳ ಕಾಡಲ್ಲಿ ನಾವು ಮನೆಗಳನ್ನು ನಿರ್ಮಾಣ ಮಾಡಿದ್ದೇವೆಯೇ ಹೊರತು ಅವು ನಾವಿರುವ ಕಡೆಗೆ ಬಂದಿಲ್ಲ. ಅಲ್ಲದೇ ಇದು ಕಾಡಿನ ನಿಯಮ. ಇಲ್ಲಿ ಒಂದು ಜೀವಿಯ ಜೀವನ ಇನ್ನೊಂದು ಜೀವಿಯ ಮೇಲೆ ಅವಲಂಬಿಸಿರುತ್ತದೆ ಎಂದು ಉತ್ತರಿಸಿದ್ದಾರೆ.