ಹುರಿದ ಬೆಳ್ಳುಳ್ಳಿಯ ಸೇವನೆಯಿಂದ ಮಧುಮೇಹದಂತಹ ಅನೇಕ ರೋಗಗಳನ್ನು ಬೇರು ಸಹಿತ ನಷ್ಟ ಮಾಡುವುದಲ್ಲದೆ ಅನೇಕ ಗುಪ್ತ ರೋಗಗಳನ್ನು ದೂರಮಾಡುವದು.
ರುಚಿಕಟ್ಟಾದ ಆಹಾರ ಪದಾರ್ಥಗಳ ಹೊರತಾಗಿ ಎಲ್ಲ ಪದಾರ್ಥಗಳಲ್ಲಿ ಬೆಳ್ಳುಳ್ಳಿಯ ಉಪಯೋಗವನ್ನು ನಾವು ಭಾರತೀಯರು ಮಾಡೇ ಮಾಡುತ್ತೇವೆ. ಭಾರತ ಆಯುರ್ವೇದ ಶಾಸ್ತ್ರಕ್ಕೆ ಅಡಿಪಾಯವಾಗಿದೆ. ಬೆಳ್ಳುಳ್ಳಿಯು ಅನೇಕ ಔಷಧೀಯ ಗುಣಗಳು ಹೊಂದಿದೆ. ಅದರ ಜೊತೆಗೆ ಬೆಳ್ಳುಳ್ಳಿ ಅಡುಗೆ ಮನೆಯ ಕಾಯಂ ಸದಸ್ಯವಾಗಿದೆ.

ಇದರ ಉಪಯೋಗವನ್ನು ಗಾಯ ಗುಣಪಡಿಸಲು ಹಾಗೂ ಅನೇಕ ರೋಗಗಳ ಮೇಲೆ ಔಷಧಿಯ ರೀತಿಯಲ್ಲಿ ಮಾಡುತ್ತೇವೆ. ಇದರಲ್ಲಿ ಸಾಕಷ್ಟು ಪೋಷಕ ಘಟಕಗಳು ಸಮಾವೇಶವಾಗಿವೆ. ಇದರ ಹೊರತು ಅಡುಗೆ ಅಸಾಧ್ಯ. ಇದರ ಉಪಯೋಗದಿಂದ ಊಟಕ್ಕೆ ಸ್ವಾದವು ಬರುತ್ತದೆ.
ಕೆಲವು ಜನ ಹೀಗೂ ಇದ್ದಾರೆ, ಅವರಿಗೆ ಬೆಳ್ಳುಳ್ಳಿ ಎಂದರೆ ಆಗಿ ಬರುವದಿಲ್ಲ. ಆಹಾರದಲ್ಲಿ ಇದರ ಉಪಯೋಗದಿಂದ ಮುಂಜಾನೆಯ ಕ್ರಿಯೆ ಸುಗಮಗೊಳ್ಳಲು ಸಹಾಯವಾಗುತ್ತದೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎರಡು ಬೆಳ್ಳುಳ್ಳಿ ಎಸಳುಗಳನ್ನು ತಿಂದು ಉಗುರು ಬೆಚ್ಚಗಿನ ನೀರನ್ನು ಕುಡಿಯುವ ರೂಢಿ ಇಡಿ. ಇದು ನಮ್ಮ ಯಕೃತ್ತನ್ನು ಸ್ವಚ್ಚವಾಗಿಡುವ ಕೆಲಸ ಮಾಡುತ್ತದೆ. ಯಾರಿಗೆ ಇದರ ರುಚಿ ಹಿಡಿಸುವದಿಲ್ಲವೋ ಅಂಥವರು ಸ್ವಲ್ಪ ಹುರಿದು ತಿನ್ನಿ. ಇಲ್ಲವಾದರೆ ಉಪ್ಪಿನಕಾಯಿ ಅಥವಾ ಚಟ್ನಿಯಲ್ಲಿ ಬೇರೆಸಿಯೂ ತಿನ್ನಬಹುದು.

ಆದರೆ ಕಚ್ಚಾ ಅಥವಾ ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ನಮ್ಮ ದೇಹಕ್ಕೆ ತುಂಬಾ ಲಾಭಗಳಿವೆ. ಅವು ಯಾವುವು ಇಲ್ಲಿ ನೋಡಿ…
- ಕಫ್ ಮತ್ತು ನೆಗಡಿಯ ಕಾರಣದಿಂದಾಗಿ ಗಂಟಲು ಕೆರೆತ ಉಂಟಾಗಿದ್ದರೆ ಹುರಿದ ಬೆಳ್ಳುಳ್ಳಿ ಅದರ ಮೇಲೆ ತುಂಬಾ ಒಳ್ಳೆಯ ರಾಮಬಾಣ ಔಷಧಿಯಾಗಿದೆ. ಗಂಟಲು ಕೆರೆತದಿಂದಾಗಿ ಬಾವು ಬಂದಿದ್ದರೂ ಇದು ಕಡಿಮೆ ಮಾಡುವದು.
- ನಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ ಹುರಿದ ಬೆಳ್ಳುಳ್ಳಿಯ ಸೇವನೆ ಲಾಭಕಾರಿಯಾಗಿದೆ. ಇದು ಅನೇಕ ರೋಗಗಳ ಜೊತೆಗೆ ಹೋರಾಡುವ ಶಕ್ತಿ ಹೊಂದಿದೆ.
- ಹುರಿದ ಬೆಳ್ಳುಳ್ಳಿಯು ದೇಹದಲ್ಲಿಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಸಮನಾಗಿ ನಿಯಂತ್ರಣದಲ್ಲಿ ಇಡುತ್ತದೆ. ಜೊತೆಗೆ ಹೃದಯದ ರಕ್ತವಾಹಿನಿಗಳಲ್ಲಿ ಹೆಪ್ಪುಗಟ್ಟಿದ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ಮಹತ್ವದ ಪಾತ್ರ ವಹಿಸುತ್ತದೆ.
- ಇಷ್ಟಲ್ಲದೆ ಯಾರಿಗೆ ರಕ್ತದೊತ್ತಡದ ಸಮಸ್ಯೆ ಇದೆ, ಅವರಿಗಾಗಿ ಹುರಿದ ಬೆಳ್ಳುಳ್ಳಿ ತುಂಬಾ ಗುಣಕಾರಿಯಾಗಿದೆ. ಬಿಪಿ ಹೈ ಇದ್ದವರು ಇದರ ಸೇವನೆ ಮಾಡಬಹುದು. ಇದರಿಂದ ರಕ್ತದೊತ್ತಡವು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ.