ಟಾಯ್ ಗನ್ ಬಳಸಿ ಮನೆ ಲೂಟಿ ಮಾಡಿದ: ಹೋಗುವ ಮುನ್ನ ಮನೆ ಒಡತಿ ಕಾಲಿಗೆ ಬಿದ್ದು ನೀವು ನಮ್ಮ ತಾಯಿ ಸಮಾನ ಎಂದ ದರೋಡೆಕೋರ!
ಮಕ್ಕಳು ಆಟಕ್ಕೆ ಬಳಸುವ ಆಟಿಕೆ ಪಿಸ್ತೂಲು ಅಥವಾ ಟಾಯ್ ಗನ್ ಒಂದರ ಸಹಾಯದಿಂದ ಒಬ್ಬ ವಂಚಕ ಉದ್ಯಮಿಯೊಬ್ಬರ ಪತ್ನಿ ಹಾಗೂ ಮನೆಯ ಕೆಲಸದಾಕೆಯನ್ನು ಕಟ್ಟಿ ಹಾಕಿ, ಅವರ ಮನೆಯಿಂದ ಸರಿ ಸುಮಾರು ನಾಲ್ಕು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ಘಟನೆಯೊಂದು ವರದಿಯಾಗಿದೆ. ನಿತ್ಯ ಅನೇಕ ಕಡೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತವೆ, ಪೇಪರ್ ಗಳಲ್ಲಿ, ಡಿಜಿಟಲ್ ಮೀಡಿಯಾಗಳಲ್ಲಿ, ಟಿವಿ ನ್ಯೂಸ್ ಗಳಲ್ಲಿ ಬರೀ ಇಂತದ್ದೇ ವಿಚಾರ ಅಂತ ಮೂಗು ಮುರಿಯುವ ಮುನ್ನ ಸ್ವಲ್ಪ ಇರಿ. ಏಕೆಂದರೆ ಇದು ಕೂಡಾ ಅಂತಹುದೇ ಒಂದು ಲೂಟಿಯಾಗಿದ್ದರೆ ಇಷ್ಟು ದೊಡ್ಡ ಸುದ್ದಿ ಖಂಡಿತವಾಗಿ ಆಗುತ್ತಿರಲಿಲ್ಲ. ಇಲ್ಲಿ ಲೂಟಿ ಮಾಡಲು ಮನೆಗೆ ನುಗ್ಗಿದ್ದ ವಂಚಕನು ಮನೆಯಿಂದ ತಾನು ಲೂಟಿ ಮಾಡಿದ್ದ ವಸ್ತುಗಳೊಡನೆ ಹೊರ ಹೋಗುವಾಗ ಮಾಡಿದ ಕೆಲಸವೀಗ ಎಲ್ಲರ ಗಮನವನ್ನು ಸೆಳೆಯಲು ಪ್ರಮುಖವಾದ ಕಾರಣವಾಗಿದೆ. ಹಾಗಾದರೆ ಆ ಕಳ್ಳ ಮಾಡಿದ್ದಾದ್ರೂ ಏನು ಅಂತ ತಿಳಿಯೋಣ ಬನ್ನಿ.
ಗ್ವಾಲಿಯರ್ ನ ಸಮಾಧಿಯಾ ಕಾಲೋನಿಯ ಕೃಷ್ಣ ಎನ್ಕ್ಲೇವ್ ನಲ್ಲಿ ವಾಸವಾಗಿರುವ ವ್ಯಾಪಾರಿಯೊಬ್ಬರ ಮನೆಯಲ್ಲಿ ಇಂತಹ ಘಟನೆ ನಡೆದಿದೆ. ವಂಚಕನು ಡಿಲೆವರಿ ಬಾಯ್ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ಇವರ ಮನೆಯನ್ನು ಪ್ರವೇಶ ಮಾಡಿದ್ದಾನೆ. ಅನಂತರ ಮನೆಯ ಒಡತಿಯನ್ನು ಹಗ್ಗದಿಂದ ಕೈ ಕಾಲು ಕಟ್ಟಿ ಆಕೆಯ ಬಾಯಿಗೆ ಪ್ಲಾಸ್ಟರ್ ಹಾಕಿದ್ದಾನೆ. ಅನಂತರ ಮನೆಯಲ್ಲೇ ಇದ್ದ ಆ ಮನೆಯ ಕೆಲಸದಾಕೆಗೆ ಕೂಡಾ ಚಾಕು ತೋರಿಸಿ ಭಯ ಹಿಡಿಸಿ ಆಕೆ ಕೂಡಾ ಅರಚಿ ಕೂಗಾಡದಂತೆ ಎಚ್ಚರಿಕೆಯನ್ನು ವಹಿಸಿದ್ದಾನೆ. ಮನೆಯಲ್ಲಿ ತಾನು ಲೂಟಿ ಮಾಡಿದ ನಂತರ ಮನೆಯಿಂದ ಹೊರಡುವ ಮೊದಲು ಮನೆಯ ಒಡತಿಯ ಕಾಲಿಗೆ ಬಿದ್ದು ತಂಗಿಯ ಮದುವೆ ಮಾಡಬೇಕು, ದಯವಿಟ್ಟು ಕ್ಷಮಿಸಿ, ನೀವು ನನಗೆ ತಾಯಿ ಸಮಾನ ಎಂದು ಹೇಳಿ ಹೋಗಿದ್ದಾನೆ.

ದು ಷ್ಕ ರ್ಮಿಯು ಮನೆಯಿಂದ ಕದ್ದ ವಸ್ತುಗಳೊಂದಿಗೆ ಹೊರಟು ಹೋದ ಮೇಲೆ ಮಹಿಳೆಯರಿಬ್ಬರೂ ಹೇಗೋ ಪ್ರಯತ್ನ ಪಟ್ಟು ತಮ್ಮ ಕಟ್ಟುಗಳನ್ನು ಬಿಚ್ಚಿಕೊಂಡಿದ್ದಾರೆ. ವ್ಯಾಪಾರಿಯ ಪತ್ನಿಯು ಕೂಡಲೇ ತನ್ನ ಪತಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ಪೋಲಿಸರು ಕೂಡಾ ಸ್ಥಳಕ್ಕೆ ಧಾವಿಸಿ ಬಂದು ಸ್ಥಳದ ಪರಿಶೀಲನೆ ನಡೆಸಿ, ದೂರನ್ನು ದಾಖಲಿಸಿಕೊಂಡು, ದರೋಡೆಯ ಈ ಪ್ರಕರಣದ ತನಿಖೆಯನ್ನು ಆರಂಭ ಮಾಡಿದ್ದಾರೆ. ಈ ಘಟನೆ ನಡೆದಿರುವ ಜನಕ್ ಗಂಜ್ ನ ನಿವಾಸಿ ಆಗಿರುವ ದಿಲೀಪ್ ಕುಕ್ರೇಜಾ ಅವರ ನಿವಾಸದಲ್ಲಿ.
ದಿಲೀಪ್ ಕುಕ್ರೇಜಾ ಅವರು ಒಳ ಉಡುಪುಗಳ ಮಾರಾಟದ ವ್ಯವಹಾರವನ್ನು ನಡೆಸುತ್ತಾರೆ. ಮಹಾರಾಜಾ ಬಾಡಾ ಎಂಬಲ್ಲಿ ಇವರ ಒಂದು ದೊಡ್ಡ ಶೋ ರೂಂ ಕೂಡಾ ಇದೆ ಎನ್ನಲಾಗಿದೆ.
ಮನೆಯಲ್ಲಿ ಇವರು, ಇವರ ಪತ್ನಿ 48 ವರ್ಷದ ವಂದನಾ ಹಾಗೂ ಮಗ ಉಮೇಶ್ ವಾಸವಿದ್ದು, ಮನೆ ಕೆಲಸಕ್ಕೆ ಸುನೀತ ಎನ್ನುವ ಹೆಸರಿನ ಒಬ್ಬಾಕೆಯನ್ನು ನೇಮಿಸಿಕೊಂಡಿದ್ದಾರೆ. ಪ್ರತಿದಿನ ದಿಲೀಪ್ ಹಾಗೂ ಅವರ ಮಗ ಉಮೇಶ್ ಬೆಳಿಗ್ಗೆ ಅಂಗಡಿಗೆ ಹೋಗುವುದು ಸಾಮಾನ್ಯ. ಅನಂತರ ಮನೆಯಲ್ಲಿ ವಂದನಾ ಹಾಗೂ ಅವರ ಮನೆ ಕೆಲಸದಾಕೆ ಮಾತ್ರವೇ ಇರುತ್ತಾರೆ ಎನ್ನಲಾಗಿದೆ. ವಂದನಾ ಹಾಗೂ ಸುನೀತ ಇಬ್ಬರೇ ಇದ್ದ ವೇಳೆಯಲ್ಲಿ ಸುಮಾರು ನಾಲ್ಕು ಗಂಟೆ ಸಮಯದಲ್ಲಿ ಕಳ್ಳತನ ಮಾಡಲು ಬಂದ ವ್ಯಕ್ತಿ ಡಿಲೆವರಿ ಬಾಯ್ ತರ ಬಂದಿದ್ದಾನೆ. ವಂದನಾ ಅವರು ಬಾಗಿಲು ತೆರೆದ ಕೂಡಲೇ ಟಾಯ್ ಗನ್ ತೋರಿಸಿ ಹೆದರಿಸಿದ್ದಾನೆ. ಆದರೆ ಟಾಯ್ ಗನ್ ಮುರಿದು ಹೋಗಿದೆ.

ಕೂಡಲೇ ಆತ ಚಾಕುವನ್ನು ತೋರಿಸಿ, ಅದರ ಸಹಾಯದಿಂದ ಇಬ್ಬರು ಮಹಿಳೆಯರನ್ನು ಹೆದರಿಸಿ ಅವರನ್ನು ಕಟ್ಟಿ ಹಾಕಿ ಮನೆಯನ್ನು ದೋಚಿದ್ದಾನೆ. ಹೆಚ್ಚುವರಿ ಎಸ್ಪಿ ಸತ್ಯೇಂದ್ರ ಸಿಂಹ್ ತೋಮರ್ ಅವರು ಕಳ್ಳ ಮನೆಗೆ ನುಗ್ಗಿ ಲೂಟಿ ಮಾಡಿ ಹೋಗುವ ಮುನ್ನ ವಂದನಾ ಅವರ ಕಾಲಿಗೆ ನಮಸ್ಕಾರ ಹಾಕಿ, ತಂಗಿ ಮದುವೆಗೆ ಕಳ್ಳತನ ಮಾಡಿರುವುದಾಗಿ, ಆಕೆಯನ್ನು ತನ್ನ ತಾಯಿ ಸಮಾನ ಎಂದು ಹೇಳಿದ್ದನ್ನು ತಿಳಿಸಿದ್ದಾರೆ. ಮನೆಯ ಸುತ್ತ ಮುತ್ತ ಇರುವ ಸಿಸಿ ಟಿವಿ ಫುಟೇಜ್ ಗಳ ಸಹಾಯದಿಂದ ಆತ ಎಲ್ಲಿಂದ ಬಂದ, ಯಾವ ಕಡೆ ಹೋದ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆಯೆಂದು ಅವರು ತಿಳಿಸಿದ್ದಾರೆ. ಮನೆಯಲ್ಲಿ ಸುಮಾರು 20 ನಿಮಿಷಗಳ ಕಾಲ ಇದ್ದ ಕಳ್ಳ ಕದ್ದ ಹಣದಲ್ಲಿ ಸುಮಾರು ಎರಡೂವರೆ ಲಕ್ಷ ರೂಪಾಯಿ ಯಾವುದೋ ಟ್ರಸ್ಟ್ ನ ಹಣ ಎಂದು ತಿಳಿದು ಬಂದಿದೆ ಎಂದಿದ್ದಾರೆ.