ಗಾಯಕ, ನಟ ಕಿಶೋರ್ ಕುಮಾರ್ ಅವರ ಪತ್ನಿ ಮೇಲೆ ನಟ ಮಿಥುನ್ ಚಕ್ರವರ್ತಿ ಗಾಯ್ತು ಪ್ರೇಮ: ನಾಲ್ಕು ಮಕ್ಕಳ ತಂದೆ ಕೂಡಾ ಆಗಿ ಬಿಟ್ಟರು ನಟ!
ಮಗೆ ತಿಳಿದಿರುವ, ನಿಮ್ಮ ಪರಿಚಿತ ವ್ಯಕ್ತಿಯೊಬ್ಬರು ನಿಮ್ಮ ಹೆಂಡತಿಯನ್ನು ಮದುವೆಯಾಗುತ್ತಾರೆ ಎಂದರೆ ಸಹಜವಾಗಿಯೇ ಕೋಪ ಬಂದೇ ಬರುತ್ತದೆ. ಬಾಲಿವುಡ್ ನ ಜನಪ್ರಿಯ ಗಾಯಕರಾಗಿದ್ದ ಹಾಗೂ ನಟನೂ ಆಗಿದ್ದ ಕಿಶೋರ್ ಕುಮಾರ್ ಅವರ ವಿಚಾರದಲ್ಲಿ ಇಂತಹುದೇ ಒಂದು ಘಟನೆಯು ನಡೆದಿತ್ತು ಎನ್ನುವುದು ಸತ್ಯ. ಕಿಶೋರ್ ಕುಮಾರ್ ಅವರು ತಮ್ಮ ಜೀವನದಲ್ಲಿ ನಾಲ್ಕು ಮದುವೆಗಳನ್ನು ಮಾಡಿಕೊಂಡಿದ್ದರು. ಅವರ ಮೂರನೇ ಪತ್ನಿಯೇ ಯೋಗಿತಾ ಬಾಲಿ. ಕಿಶೋರ್ ಕುಮಾರ್ ಅವರು ತಮ್ಮ ಮೂರನೇ ಪತ್ನಿ ಯೋಗಿತಾ ಬಾಲಿಗೆ ವಿಚ್ಚೇದನ ನೀಡಿದ ನಂತರ ಆಕೆ ಬಾಲಿವುಡ್ ನ ಡಿಸ್ಕೋ ಡಾನ್ಸರ್ ಖ್ಯಾತಿಯ ನಟ ಮಿಥುನ್ ಚಕ್ರವರ್ತಿ ಅವರನ್ನು ವಿವಾಹವಾಗಿ ಹೊಸ ಜೀವನವನ್ನು ಕಟ್ಟಿಕೊಂಡರು.
ಆದರೆ ಯೋಗಿತಾ ಅವರ ಮರು ಮದುವೆಯಿಂದ ಹೆಚ್ಚು ಬೇಸರಗೊಂಡಿದ್ದು ಯಾರೆಂದರೆ ಅವರಿಗೆ ವಿಚ್ಚೇದನ ನೀಡಿದ ಕಿಶೋರ್ ಕುಮಾರ್ ಅವರಿಗೆ.

ಕಿಶೋರ್ ಕುಮಾರ್ ಅವರು ಯೋಗಿತಾ ಬಾಲಿ ಮಿಥುನ್ ಚಕ್ರವರ್ತಿ ಮದುವೆಯಾದಾಗ ಕೋಪಗೊಂಡರು, ಅವರಿಗೆ ಬಹಳ ಅ ಸಮಾಧಾನ ಉಂಟಾಯಿತು. ಆ ಕೋಪ ಯಾವ ಮಟ್ಟದಲ್ಲಿ ಇತ್ತು ಎಂದರೆ ಕಿಶೋರ್ ಕುಮಾರ್ ಅವರು ತಾನು ಮಿಥುನ್ ಚಕ್ರವರ್ತಿ ಅವರ ಸಿನಿಮಾದಲ್ಲಿ ಹಾಡುವುದನ್ನೇ ನಿಲ್ಲಿಸಿಬಿಟ್ಟರು. ಕಿಶೋರ್ ಕುಮಾರ್ ಅವರು ಮಿಥುನ್ ಚಕ್ರವರ್ತಿ ಅವರಿಂದ ಸಾಧ್ಯವಾದಷ್ಟು ಅಂತರವನ್ನು ಕಾಯ್ದುಕೊಳ್ಳುವುದಕ್ಕೆ ಆರಂಭಿಸಿದರು. 1979 ರಲ್ಲಿ ಮಿಥುನ್ ಚಕ್ರವರ್ತಿ ಅವರ ಸುರಕ್ಷಾ ಸಿನಿಮಾ ಬಂದಾಗ ಅದರಲ್ಲಿ ಕಿಶೋರ್ ಕುಮಾರ್ ಅವರು ಮಿಥುನ್ ಅವರಿಗೆ ಹಾಡಿನಲ್ಲಿ ಧ್ವನಿಯಾದರು.
ಇದಾದ ನಂತರ ಕಿಶೋರ್ ಕುಮಾರ್ ಅವರು ಮಿಥುನ್ ಚಕ್ರವರ್ತಿ ಅವರ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿನ ಸೂಪರ್ ಹಿಟ್ ಹಾಡುಗಳಿಗೆ ಕಿಶೋರ್ ಕುಮಾರ್ ಅವರೇ ಧ್ವನಿಯಾಗಿದ್ದರು. ಆದರೆ ಯಾವಾಗ ಮಿಥುನ್ ಚಕ್ರವರ್ತಿ ಅವರು ಕಿಶೋರ್ ಕುಮಾರ್ ಅವರ ವಿಚ್ಚೇದಿತ ಮೂರನೇ ಪತ್ನಿಯನ್ನು ಮದುವೆಯಾದರೋ ಅದು ಕಿಶೋರ್ ಕುಮಾರ್ ಅವರಿಂದ ಸಹಿಸಲು ಆಗಲಿಲ್ಲ. ಅದೇ ಕಾರಣದಿಂದ ಅವರು ಮಿಥುನ್ ಚಕ್ರವರ್ತಿ ಅವರ ಸಿನಿಮಾಗಳಲ್ಲಿ ಹಾಡುವುದನ್ನೇ ನಿಲ್ಲಿಸಿ ಬಿಟ್ಟರು. ಹೀಗೆ ಒಂದಷ್ಟು ವರ್ಷ ಕಳೆದ ಮೇಲೆ, ಕಾಲದ ಜೊತೆಗೆ ಕಿಶೋರ್ ಕುಮಾರ್ ಹಾಗೂ ಮಿಥುನ್ ಚಕ್ರವರ್ತಿ ಅವರ ನಡುವೆ ಇದ್ದ ಮನಸ್ತಾಪಗಳು ದೂರಾದವು.

ಇಬ್ಬರ ನಡುವೆ ಮೂಡಿದ್ದ ಒಂದು ಅ ಸಮಾಧಾನದ ಭಾವವು ದೂರಾದ ಮೇಲೆ ಕಿಶೋರ್ ಕುಮಾರ್ ಅವರು ಮತ್ತೆ ಮಿಥುನ್ ಚಕ್ರವರ್ತಿ ಅವರ ಸಿನಿಮಾಗಳಲ್ಲಿ ಹಾಡುವುದನ್ನು ಆರಂಭಿಸಿದರು ಮತ್ತೊಮ್ಮೆ ಮಿಥುನ್ ಅವರಿಗೆ ಧ್ವನಿಯಾದರು.
ಮಿಥುನ್ ಚಕ್ರವರ್ತಿ ತಮ್ಮ ಬಾಲಿವುಡ್ ನ ಸಿನಿ ಪಯಣದಲ್ಲಿ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಸ್ಟಾರ್ ಆಗಿದ್ದಂತಹ ಸಮಯದಲ್ಲಿ, ಅವರ ಹೆಸರು ಅಂದಿನ ಅನೇಕ ಬಾಲಿವುಡ್ ಸುಂದರಿಯರೊಂದಿಗೆ ತಳಕು ಹಾಕಿಕೊಂಡಿತ್ತು. ಅಂತಹವರಲ್ಲಿ ನಟಿ ಯೋಗಿತಾ ಬಾಲಿ ಮತ್ತು ಅವರ ರಂಜಿತಾ, ಸಾರಿಕಾ ಮತ್ತು ಶ್ರೀದೇವಿ ಅವರ ಹೆಸರುಗಳು ಕೂಡಾ ಸೇರಿದ್ದವು.

ಶ್ರೀದೇವಿ ಮತ್ತು ಮಿಥುನ್ 1984 ರಲ್ಲಿ ಜಾಗ್ ಉಠಾ ಇನ್ಸಾನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ನಂತರ ಅವರಿಬ್ಬರ ನಡುವೆ ಪ್ರೇಮ ಇದೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ಸಂದರ್ಶನವೊಂದರಲ್ಲಿ ಮಿಥುನ್ ಸ್ವತಃ ಶ್ರೀದೇವಿಯನ್ನು ರಹಸ್ಯವಾಗಿ ಮದುವೆಯಾಗಿದ್ದಾಗಿ ಒಪ್ಪಿಕೊಂಡಿದ್ದರು ಕೂಡಾ. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಏಕೆಂದರೆ ಮಿಥುನ್ ಅವರ ಪತ್ನಿ ಯೋಗಿತಾ ತಾನು ಆ ತ್ಮ ಹ ತ್ಯೆ ಮಾಡಿಕೊಳ್ಳುವ ಬೆ ದರಿಕೆ ಹಾಕಿದಾಗ ಮಿಥುನ್ ಶ್ರೀದೇವಿಯಿಂದ ದೂರ ಸರಿದಿದ್ದರು. ಯೋಗಿತಾ ಹಾಗೂ ಮಿಥುನ್ ಅವರಿಗೆ ಮೂರು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ಮಿಥುನ್ ಅವರು ಯೋಗಿತಾ ಅವರೊಂದಿಗೆ ಸುಖವಾದ ಕುಟುಂಬ ಜೀವನ ನಡೆಸುತ್ತಿದ್ದಾರೆ.