ಮಂಗಗಳು ಅಗೆದಿದ್ದ ಗುಂಡಿಯಲ್ಲಿ ಬರೀ ನಾಲ್ಕೇ ಅಡಿ ತೋಡಿದಾಗ ಒಡೆಯಿತು ನೀರಿನ ಸೆಲೆ!!

ನೇರ ತಾಲೂಕಿನಲ್ಲಿಯ ಸೋನಖಾಸ್ ಈ ವನವಿಭಾಗದಲ್ಲಿಯ ಬೀಟ್ ನಲ್ಲಿಯ ಮಂಗಗಳ ಬೌದ್ಧಿಕ ಚಾತುರ್ಯದ ಪರಿಚಯ ವನಪರೀಕ್ಷೆತ್ರ ಅಧಿಕಾರಿ ವಿನೋದ ಕೋಹಳೆ ಇವರು ಕೆಲವು ದಿನಗಳ ಹಿಂದೆ ಮಾಡಿದ್ದಾರೆ. ವನಖಂಡ 405 ರಲ್ಲಿಯ ನಿರೀಕ್ಷಣೆ ಮಾಡುವ ಸಮಯದಲ್ಲಿ ಎರಡು ಮಂಗಗಳು ಸಮಭೂಮಿಯ ಭಾಗದಲ್ಲಿ ಅಗೆಯುವದನ್ನು ಕಾಣಿತು. ಭೂಮಿಯಿಂದ ಬರುವ ತಂಪು ಮಣ್ಣಿನ ವಾಸನೆ ಬರುವದನ್ನು ಕಂಡು ಮಂಗಗಳು ನೀರಿಗಾಗಿ ಭೂಮಿ
ಅಗೆಯುತ್ತಿದ್ದವು. ವನಪರೀಕ್ಷೆತ್ರ ಅಧಿಕಾರಿ ವಿನೋದ ಕೋಹಳೆ ಈ ನಡೆದ ಘಟನೆಯ ಸೂಕ್ಷ್ಮವಾಗಿ  ನಿರೀಕ್ಷಣೆ ಮಾಡಿದರು. ಅವರು ತಮ್ಮ ಜೊತೆಗಿದ್ದ ಕ್ಷೇತ್ರ ಸಹಾಯಕ ಅಧಿಕಾರಿ ವಿಲಾಸ್ ಉಮಟೆ, ವನರಕ್ಷಕ ಜುವಾರ್ ಮತ್ತು ವ್ಯವಹಾರೆ ಇವರನ್ನು ಸಂಪರ್ಕ ಮಾಡಿ ಅವರ ಜೊತೆಗೆ ಚರ್ಚೆ ಮಾಡಿ ಆ ಜಾಗದಲ್ಲಿ ವನತಲಾವ ಅಗೆಯಲು ನಿರ್ಧಾರ ತಗೆದುಕೊಂಡರು. ಒಂದೇ ದಿವಸದಲ್ಲಿ ಹತ್ತು ಫೀಟ್ ಅಗಲ ಹಾಗೂ ನಾಲ್ಕು ಫೀಟ್ ಆಳ ಕೊಳವನ್ನು ಅಗೆದರು.


ಆಶ್ಚರ್ಯದ ಸಂಗತಿ ಏನೆಂದರೆ ಕಕೇವಲ ನಾಲ್ಕು ಫೀಟ್ ಆಳದಲ್ಲಿಯೇ ನೀರು ಹತ್ತಿದವು.

ಕಾರ್ಮಿಕರ ಈ  ಪ್ರಯತ್ನ ಯಶಸ್ವಿ ಆದುದರಿಂದ ಅವರಿಗೆ ಸಮಾಧಾನ ದೊರೆಯಿತು. ಈ ಕೊಳದಲ್ಲಿ ನೀರು ಬಂದಿದ್ದರಿಂದ ಅಲ್ಲಿಯ ಪ್ರಾಣಿ ಮತ್ತು ಪಕ್ಷಿಗಳ ನೀರಿಗಾಗಿ ಓಡಾಟ ಮಾಡುವುದು ತಪ್ಪಿತು. ಬೇಸಿಗೆ ಪ್ರಾರಂಭ ಇದೆ ಅಲ್ಲದೆ ಕಾಡಿನಲ್ಲಿಯ ಎಲ್ಲ ನೀರಿನ ಸ್ತೋತ್ರಗಳು ಒಣಗಿ ಹೋಗಿವೆ. ಆದುದರಿಂದ ವನವಿಭಾಗವು ಪ್ರಾಣಿಗಳಿಗೆ ನೀರಿನ ವ್ಯವಸ್ಥೆಮಾಡುವ ಸಲುವಾಗಿ ತುಂಬಾ ಪ್ರಯತ್ನ ಮಾಡುತ್ತಿದೆ. ಅಂತ ಸಂದರ್ಭದಲ್ಲಿ ಈ ಮಂಗಗಳು ಮಾಡಿದ ಕೃತ್ಯದಿಂದಾಗಿ ಕಾಡಿನಲ್ಲಿ ನೀರು ದೊರಕಿದ್ದು ದೊಡ್ಡ ಕಾರ್ಯ ವಾಗಿದೆ. ಈ ಅನುಭವವನ್ನು  ಕಂಡು  ವನ ಅಧಿಕಾರಿಗೆ ತುಂಬಾ ಸಂತೋಷವಾಯಿತು. ಯವತಮಾಳ ವನವಿಭಾಗದ ಉಪವನರಕ್ಷಕ ಭಾನುದಾಸ್ ಪಿಂಗಳೇ ಮತ್ತು ಸಹಾಯಕ ಉಪ ವಿಭಾಗೀಯ ವನ ಅಧಿಕಾರಿ ಈ ನಡೆದ ಘಟನೆಯನ್ನು ಕೇಳಿ ಅರಣ್ಯ ಅಧಿಕಾರಿಗಳನ ಈ ಕಾರ್ಯವನ್ನು ಹೊಗಳಿದರು.