ಕೆಲಸ ಸಿಗುತ್ತಿಲ್ಲವೆಂದು ಸ್ವೀಟ್ ಕಾರ್ನ್ ಉದ್ಯೋಗ ಶುರು ಮಾಡಿದಳು, ಇಂದು 7 ಕೋಟಿಯ ಒಡತಿ!
ಇಂದಿನ ಯುಗದಲ್ಲಿ ಮಹಿಳೆಯರು ಯಾವುದಕ್ಕೂ ಕಮ್ಮಿ ಇಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರಿಗೆ ಪ್ರಬಲವಾದ ಸ್ಪರ್ಧೆ ನೀಡುತ್ತಿದ್ದಾರೆ. ಕ್ಷೇತ್ರ ಯಾವುದೇ ಇರಲಿ ಅಲ್ಲಿ ಪುರುಷರಿಗೆ ಸರಿಸಮಾನವಾಗಿದ್ದಾರೆ. ಕೆಲವೊಂದು ಸಲ ಅವರಿಗಿಂತಲೂ ಹೆಚ್ಚಿಗೆ ಕೆಲಸ ಮಾಡುವ ಪ್ರಾಬಲ್ಯ ಹೊಂದಿದ್ದಾರೆ. ವ್ಯಕ್ತಿಗೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕಾದರೆ ಅದಕ್ಕೆ ಬೇಕಾಗಿರುವುದು ಜಿದ್ದು ಮತ್ತು ಛಲ. ನೀವು ಒಂದು ವೇಳೆ ಉದ್ಯೋಗ ಮಾಡಲು ಬಯಸಿದರೆ ಆ ಉದ್ಯೋಗದ ಬಗ್ಗೆ ನಿಮಗೆ ಸಂಪೂರ್ಣ ಜ್ಞಾನವಿರುವದು ಅಗತ್ಯ. ಈ ಲೇಖನದಲ್ಲಿ ಒಂದು ಮಹಿಳೆಯ ಯಶಸ್ಸಿನ ಮಾಹಿತಿಯನ್ನು ಹೇಳಲಿದ್ದೇವೆ. 3×3 ಕೌಂಟರ್ ನಿಂದ ಶುರುಮಾಡಿದ ಉದ್ಯೋಗ ಇಂದು 3000 ಸ್ಕ್ವೇರ್ ಫೀಟ್ ನಲ್ಲಿ ರಾರಾಜಿಸುತ್ತಿದೆ.
ಈ ಮಹಿಳೆಯ ಹೆಸರು ಶುಭಾಂಗಿನಿ ಸಾಂಗಳೆ. ಮಹಾರಾಷ್ಟ್ರದ ಅಹ್ಮದ್ನಗರ ನಲ್ಲಿ ಹುಟ್ಟಿದ ಇವರು ಐಟಿ ಕ್ಷೇತ್ರದಲ್ಲಿ ಶಿಕ್ಷಣವನ್ನು ಪಡೆದು ಇಂಜಿನಿಯರ್ ಆಗುವ ಕನಸನ್ನು ಹೊತ್ತು ಕೊಂಡು ಪುಣೆಯ ಕಾಲೇಜಿನಲ್ಲಿ ಪ್ರವೇಶ ಪಡೆದರು. ಇಂಜಿನಿಯರಿಂಗ್ ನ ಮೂರನೆಯ ವರ್ಷದಲ್ಲಿರುವಾಗ ಇವರ ಮದುವೆಯಾಯಿತು. ಮದುವೆಯ ನಂತರ ಏನಾದರೂ ಮಾಡಲೇಬೇಕು ಎಂದು ಹಾತೊರೆಯಲು ಶುರು ಮಾಡಿದರು. ಬರೀ ಗಂಡ, ಮಕ್ಕಳು, ಸಂಸಾರ ಎನ್ನುತ್ತಾ ಕೂಡುವ ಮನಸ್ಸು ಇವರಿಗಿರಲಿಲ್ಲ.
ಹೀಗಾಗಿ ನೌಕರಿಗಾಗಿ ಅನೇಕ ಕಂಪನಿಗಳಲ್ಲಿ ಅರ್ಜಿಹಾಕಿ ಪ್ರಯತ್ನ ಶುರು ಮಾಡಿದರು. ಆದರೆ ಎಲ್ಲಿಯೂ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ನೌಕರಿ ಸಿಗದ ಕಾರಣಕ್ಕಾಗಿ ನಿರಾಶರಾಗದೆ ಸ್ವಂತದ ಯಾವುದಾದರೂ ಉದ್ಯೋಗವನ್ನು ಮಾಡುವ ಉದ್ದೇಶ ಹೊಂದಿದರು. ಐಟಿ ಕ್ಷೇತ್ರದಲ್ಲಿ ನೌಕರಿ ಸಿಗದಿದ್ದರೆ ಏನಾಯ್ತು? ಈ ಐಟಿ ಕ್ಷೇತ್ರದಲ್ಲಿಯೇ ಫುಡ್ ಲೈನ್ ಪ್ರಾರಂಭಿಸಬೇಕೆಂದು ವಿಚಾರ ಮಾಡಿ ತನ್ನ ಗಂಡನ ಜೊತೆಗೆ ಚರ್ಚೆ ಮಾಡಿ ಒಂದು ನಿರ್ಣಯವನ್ನು ತೆಗೆದುಕೊಂಡರು.

ಜನರು ಯಾವ ಕಂಪನಿಯಲ್ಲಿ ನೌಕರಿ ಆಸೆಗಾಗಿ ಹೋಗುತ್ತಾರೋ ಅದೇ ಕಂಪನಿಯಲ್ಲಿ ಇವರು ಕಾಂಟ್ರಾಕ್ಟ್ ಪಡೆಯಲು ಹೋದರು. ಅಲ್ಲಿ 3×3 ಸ್ವೀಟ್ ಕಾರ್ನ್ ಕೌಂಟರ್ ಪ್ರಾರಂಭಿಸಿಯೇ ಬಿಟ್ಟರು. ಮೊದಮೊದಲು ಅಲ್ಲಿ ತುಂಬಾ ಕಷ್ಟಗಳು ಎದುರಾದವು.
ಅಲ್ಲಿಯ ಎಲ್ಲಾ ಕೆಲಸಗಳನ್ನು ತಾವೇ ಮಾಡುತ್ತಾ ಹೆಚ್ಚಾದ ಕೌಂಟರ್ಗಳ ಕೆಲಸಗಳನ್ನು ಸಹಿತ ತಾವೇ ನಿಭಾಯಿಸಿದರು. ಈ ಕೆಲಸಕ್ಕಾಗಿ ತಂದೆಯವರಿಂದಲೇ ಸ್ವಲ್ಪ ಹಣವನ್ನು ಮತ್ತೆ ಮರಳಿ ವಾಪಸ್ ನೀಡುವ ಮಾತಿನಂತೆ ತೆಗೆದುಕೊಂಡರು. ಆ ಹಣದಿಂದ ಬೇರೆಬೇರೆ 10 ಕೌಂಟರುಗಳನ್ನು ಶುರುಮಾಡಿದರು. ಅಲ್ಲೇ ಮೊಟ್ಟೆಯಿಂದ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸತೊಡಗಿದರು. ಹೀಗೆ ತಮ್ಮ ಕೆಲಸದಲ್ಲಿ ವೃದ್ಧಿ ಮಾಡುತ್ತಾ ಬೇರೆ ಬೇರೆ ಪ್ರಕಾರದ ಆಹಾರ ಪದಾರ್ಥಗಳನ್ನು ಪ್ರಾರಂಭಿಸಿದ ನಂತರ ಅನೇಕ ಕಂಪನಿಗಳ ಆರ್ಡರ್ ಗಳು ಸಹಿತ ದೊರೆಯಲು ಶುರುವಾಯಿತು.
ಈ ಕೇಟರಿಂಗ್ ಕೆಲಸ ಉತ್ತುಂಗದಲ್ಲಿರುವಾಗಲೇ ಮಧ್ಯದಲ್ಲಿ ಕೋರೋನಾ ಎಂಟ್ರಿ ಆಯ್ತು. ಆದರೂ ಶುಭಾಂಗಿನಿ ಅವರು ಸೋಲೊಪ್ಪಿಕೊಳ್ಳಲಿಲ್ಲ, ಮತ್ತೆ ಬೇರೆ ಕೆಲಸವನ್ನು ಪ್ರಾರಂಭಿಸಿಯೇ ಬಿಟ್ಟರು. ಲಾಕ್ಡೌನ್ ಸ್ವಲ್ಪವೇ ಶಿಥಿಲವಾದ ನಂತರ ಶುಭಾಂಗಿನಿ ಅವರು ಮಣಿಕರ್ಣಿಕ ಹೆಸರಿನ ಬಟ್ಟೆಗಳ ಬ್ರ್ಯಾಂಡ್ ಮಾರಾಟ ಮಾಡಲು ಪ್ರಾರಂಭಿಸಿದರು. ಇಂದು ಶುಭಾಂಗಿನಿ 7 ಕೋಟಿ ರೂಪಾಯಿಗಳ ಮಾಲೀಕರಾಗಿದ್ದಾರೆ. ಒಂದು ಚಿಕ್ಕ ಉದ್ಯೋಗ ಇಂದು ಬೆಳೆದು ದೊಡ್ಡದಾಗಿ ನಿಂತಿದೆ.