30 ವರ್ಷದ ನಂತರ ‘ಆ’ ಸೀನ್ ಬಗ್ಗೆ ಬಾಯಿ ಬಿಟ್ಟ ಪೂಜಾ ಭಟ್, ಅಂತಾರೆ ಅಂದು ನನ್ನ ತಂದೆ ನನ್ನೊಂದಿಗೆ ‘ಹಾಗೆ’ ಮಾಡಿರದಿದ್ದರೆ..

ಫಿಲಂ ಮೇಕರ್ ಮತ್ತು ನಟಿ ಪೂಜಾ ಭಟ್ ಮಾರ್ಚ್ 8 ರಂದು OTT ಮಾಧ್ಯಮದಿಂದ ‘ಬಾಂಬೆ ಬೇಗಮ್ಸ್’ ಚಿತ್ರವನ್ನು ರಿಲೀಸ್ ಮಾಡಿದರು. ಈ ಚಿತ್ರದ ಪ್ರಮೋಶನ್ ಸಂದರ್ಭದಲ್ಲಿ ತಮ್ಮ ಜೀವನದ ಕೆಲವು ಮಹತ್ವದ ಘಟನೆಗಳ ಜೊತೆಗೆ ಶೇರ್ ಮಾಡಿಕೊಂಡರು. ಪೂಜಾ ಭಟ್ ಅವರು ಚಿತ್ರರಂಗದಲ್ಲಿ 17ನೇ ವಯಸ್ಸಿಗೆ ಕಾಲಿಟ್ಟಿದ್ದರು. ಮೊದಲು ‘ಡ್ಯಾಡಿ’ ಹೆಸರಿನ ಚಿತ್ರವನ್ನು ಮಾಡಿದರು. ಆ ಚಿತ್ರವನ್ನು ಪೂಜಾ ಅವರ ತಂದೆ ಮಹೇಶ್ ಭಟ್ ಅವರು ಡೈರೆಕ್ಷನ್ ಮಾಡಿದ್ದರು. ಇದರ ನಂತರ ಅವರು ತಮ್ಮ ಕರಿಯರ್ ನಲ್ಲಿ ಮೂರನೆಯ ಚಿತ್ರವನ್ನು ಕೆಜಿಎಫ್ ಚಾಪ್ಟರ್ 2 ನಲ್ಲಿ ವಿಲನ್ ಆಗಿ ವಿಜೃಂಭಿಸಲಿರುವ ಸಂಜಯ್ ದತ್ ಅವರ ಜೊತೆಗೆ ಮಾಡಿದ್ದರು.

ಚಿತ್ರದಲ್ಲಿ ಅವರು ಮೊಟ್ಟಮೊದಲ ಬಾರಿಗೆ ಕಿಸ್ಸಿಂಗ್ ಸೀನ್ ನೀಡಿದ್ದರು. ಆ ಚಿತ್ರವು ಸಹ ಪೂಜಾ ಭಟ್ ತಂದೆ ಮಹೇಶ್ ಭಟ್ ಅವರ ಡೈರೆಕ್ಷನ್ ನಲ್ಲಿಯೇ ತಯಾರಾಗಿತ್ತು. ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕಿಸ್ಸಿಂಗ್ ಸೀನ್ ನೀಡುವುದಿತ್ತು. ಆಗ ಪೂಜಾ ಭಟ್ ಅವರ ವಯಸ್ಸು ಬರಿ 18. ಯಾವ ವ್ಯಕ್ತಿಗೆ ನಾನು ಕಿಸ್ ಕೊಡಬೇಕಾಗಿತ್ತೋ ಆ ವ್ಯಕ್ತಿಯ ಫೋಟೋಗಳನ್ನು ನಾನು ನನ್ನ ರೂಮಿನಲ್ಲಿ ಗೋಡೆಗೆ ಅಂಟಿಸಿದ್ದೆ. ಆದರೆ ನನ್ನ ತಂದೆ ಬದಿಗೆ ಕರೆದು ಕೆಲವೊಂದು ಮಾತುಗಳನ್ನು ಹೇಳಿದರು. ಆ ಮಾತುಗಳು ನನಗೆ ಜೀವನವಿಡಿ ಇನ್ನುವರೆಗೆ ನೆನಪಿನಲ್ಲಿವೆ.

ಪೂಜಾ ಒಂದು ವೇಳೆ ಇದಕ್ಕೆ ನೀನು ಕೊಳಕು ಎಂದು ಭಾವಿಸಿದರೆ ಕೊನೆಯವರೆಗೂ ನಿನಗೆ ಹಾಗೆಯೇ ಅನಿಸುತ್ತದೆ. ಆದ್ದರಿಂದ ಅದನ್ನೆಲ್ಲ ಮರೆತು ಚಿತ್ರದಲ್ಲಿಯ ಕಿಸ್ಸಿಂಗ್ ಸೀನ್, ಪ್ರೀತಿಯ ಸೀನ್ ಗಳನ್ನು ಪರದೆ ಮೇಲೆ ಚೆನ್ನಾಗಿ ತೋರಿಸಬೇಕಾದರೆ ಅದರಲ್ಲಿ ನಿನ್ನ ಗ್ರೇಸ್ ಕಾಣಿಸಲೇಬೇಕು. ಕಾರಣ ಈ ಸೀನ್ ಗಳು ಎಲ್ಲಿಯವರೆಗೆ ಚೆನ್ನಾಗಿ ಶೂಟ್ ಆಗುವುದಿಲ್ಲವೋ ಅಲ್ಲಿಯವರೆಗೆ ರಸಿಕರ ಮನ ಮುಟ್ಟುವುದಿಲ್ಲ, ಎಂದು ಹೇಳಿದರು.

ಪೂಜಾ ಭಟ್ ಹೇಳುವ ಪ್ರಕಾರ, ನಾನು ಸಂಜಯ್ ದತ್ ಅವರ ದೊಡ್ಡ ಫ್ಯಾನ್ ಇದ್ದೆ. ನನಗೆ ಅವರ ಜೊತೆಗೆ ಕೆಲಸ ಮಾಡಲು ಸಿಕ್ಕಿದ್ದು ನಿಜಕ್ಕೂ ಅದೃಷ್ಟವೇ ಸರಿ ಎಂದರು.

ಇದೇ ಸಮಯದಲ್ಲಿ OTT ಪ್ಲಾಟ್ಫಾರ್ಮ್ ಮೇಲಿನ ಕೆಲವು ನಿಯಮಗಳ ಬಗ್ಗೆ ಮಾತನಾಡಿದರು. ಭಾರತದಲ್ಲಿ ಈ ರೀತಿಯ ನಿಯಮಗಳು ಮತ್ತು ಕಾನೂನುಗಳು ತುಂಬಾ ಇವೆ, ಇದರಲ್ಲಿ ಹೊಸದೇನಲ್ಲ. ಫಿಲ್ಮ್ ಮೇಕರ್ ಒಂದು ಚಿತ್ರ ತಯಾರಿಸಬೇಕಾದರೆ ಸಂಪೂರ್ಣ ಶಕ್ತಿಯನ್ನು ಹಚ್ಚಿರುತ್ತಾರೆ. ಇದರ ಮುಖಾಂತರ ಸಮಾಜಕ್ಕೆ ಯಾವ ಸಂದೇಶವನ್ನು ನೀಡಬೇಕಾಗಿದೆಯೋ ಆ ಸಂದೇಶವನ್ನು ನೀಡಿಯೇ ನೀಡುತ್ತಾರೆ. ನಮ್ಮೆಲ್ಲರಲ್ಲಿಯೂ ಒಂದು ಸೆನ್ಸಾರ್ ಬೋರ್ಡ್ ಇರುತ್ತೆ. ಅದು ಸತತವಾಗಿ ಏನನ್ನು ತೋರಿಸಬೇಕು ಏನನ್ನು ತೋರಿಸಬಾರದು ಎಂಬುವುದನ್ನು ಹೇಳುತ್ತಲೇ ಇರುತ್ತದೆ ಎನ್ನುತ್ತಾರೆ ಪೂಜಾ ಭಟ್.

ಮಾರ್ಚ್ 8 ರಂದು ರಿಲೀಸ್ ಆದ ಈ ಸೀರೀಸ್ ನಲ್ಲಿ ಬೇರೆ ಬೇರೆ ಪ್ರಕಾರದ 5 ಮಹಿಳೆಯರನ್ನು ತೋರಿಸಲಾಗಿದೆ. ಅವರಲ್ಲಿ ಸುಹಾನ ಗೋಸ್ವಾಮಿ, ಅಮೃತ ಸುಭಾಷ್, ಪ್ಲಬಿತಾ ಬೋರ್-ಠಾಕೂರ್, ಆಧ್ಯಾ ಆನಂದ್ ಮತ್ತು ಪೂಜಾ ಭಟ್ ಇವರ ಮುಖ್ಯ ರೋಲ್ ಗಳಿವೆ. ಈ ಚಿತ್ರದ ನಿರ್ದೇಶನ ಅಲಂಕೃತಾ ಶ್ರೀವಾಸ್ತವ್ ಇವರು ಮಾಡಿದ್ದಾರೆ. ಇವರು ಮೊದಲು ‘ಲಿಪ್ ಸ್ಟಿಕ್ ಅಂಡರ್ ಮಾಯ್ ಬುರ್ಖಾ’ ಮತ್ತು ‘ಡೋಲಿ ಕಿಟ್ಟಿ’ ಹಾಗೂ ‘ಚಮಕ್ತೆ ಸಿತಾರೆ’ ಚಿತ್ರಗಳ ನಿರ್ದೇಶನವನ್ನು ಸಹ ಮಾಡಿದ್ದಾರೆ.