ದುಬೈನ ಬುರ್ಜ್ ಖಲೀಫಾದಲ್ಲೂ ಇದೆ ‘ಈ’ ಸೂಪರ್ ಸ್ಟಾರ್ ಫ್ಲ್ಯಾಟ್, ಇವರ ಒಟ್ಟು ಸಂಪತ್ತು ಕೇಳಿದರೆ ತಲೆ ತಿರುಗುತ್ತೆ!
ದಕ್ಷಿಣ ಭಾರತದ ಚಿತ್ರಗಳು ತುಂಬಾ ವೈಶಿಷ್ಟಪೂರ್ಣವಾಗಿರುತ್ತದೆ. ಯಾವಾಗಲೂ ಬಾಲಿವುಡ್ ಗೆ ಮೀರಿಸುವಂತಹ ಚಿತ್ರಗಳು ಇಲ್ಲಿ ನಿರ್ಮಾಣವಾಗುತ್ತವೆ. ಹಾಗೆ ಮೊದಲಿನಿಂದಲೂ ದಕ್ಷಿಣದ ನಟರಿಗೆ ವಿಶೇಷವಾದ ಡಿಮಾಂಡ್ ಇದೆ. ಬಾಲಿವುಡ್ ಮಹಾನಾಯಕ ಅಮಿತಾ ಬಚ್ಚನ್ ಅವರು ಸಹ ದಕ್ಷಿಣ ಭಾರತದ ಕೆಲವು ನಟರ ಫ್ಯಾನ್ ಪಟ್ಟಿಯಲ್ಲಿ ಬರುತ್ತಾರೆ. ಮೋಹನ್ ಲಾಲ್ ಇವರಿಗೆ ದಕ್ಷಿಣ ಭಾರತದ ಮೊದಲ ಸೂಪರ್ ಸ್ಟಾರ್ ಎಂತಲೂ ಕರೆಯುತ್ತಾರೆ.

ಮೋಹನ್ ಲಾಲ್ ಅವರು ತಮ್ಮ ಕರಿಯರ್ ನ ಪ್ರಾರಂಭದಲ್ಲಿ ಅನೇಕ ಕೌಟುಂಬಿಕ ಚಿತ್ರಗಳನ್ನು ಮಾಡಿದರು. ಈ ಚಿತ್ರಗಳು ರಸಿಕರಿಗೆ ತುಂಬಾ ಹಿಡಿಸಿದವು. 1982 ರಿಂದ 88 ರವರೆಗೆ ಮೋಹನ್ ಲಾಲ್ ಅವರ ಪ್ರಸಿದ್ಧಿಯು ಮುಗಿಲುಮುಟ್ಟಿತ್ತು. ಆ ಸಮಯದಲ್ಲಿ ಅಂದಾಜು ತಿಂಗಳಿಗೊಂದು ಇವರ ಚಿತ್ರ ತೆರೆ ಕಾಣುತ್ತಿತ್ತು. 86 ರಲ್ಲಿ ಅಂತೂ ಮೋಹನ್ ಲಾಲ್ ಅವರ 35 ಚಿತ್ರಗಳು ತೆರೆಕಂಡಿದ್ದವು. ಮೋಹನ್ ಲಾಲ್ ಅವರು ಇಲ್ಲಿಯವರೆಗೆ ಒಟ್ಟು 330 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಭಿನಯ ಕ್ಷೇತ್ರದಲ್ಲಿ ಕಾಲಿಡುವ ಮುನ್ನ ಮೋಹನ್ ಲಾಲ್ ಅವರು ಪ್ರೊಫೆಷನಲ್ ರೆಸ್ಲರ್ ಇದ್ದರು. ಅಭಿನಯದ ಜೊತೆಗೆ ಮೋಹನ್ ಲಾಲ್ ಅವರು ತಾಯಿಕ್ವಂಡೋ ದಲ್ಲಿಯೂ ಪರಿಣಿತರಿದ್ದಾರೆ. 2012 ರಲ್ಲಿ ವರ್ಲ್ಡ್ ತಾಯಿಕ್ವಂಡೋ ಹೆಡ್ ಕ್ವಾರ್ಟರ್ ನಿಂದ ಮೋಹನ್ ಲಾಲ್ ಅವರಿಗೆ ಬ್ಲ್ಯಾಕ್ ಬೆಲ್ಟ್ ನಿಂದ ಸನ್ಮಾನಿಸಲಾಗಿದೆ. ದಕ್ಷಿಣದ ನಟರಲ್ಲಿಯೇ ಈ ಸನ್ಮಾನ ದೊರೆತ ಮೊದಲ ನಟ ಇವರಾಗಿದ್ದಾರೆ. ತಾಯಿಕ್ವಂಡೋ ಮತ್ತು ಅಭಿನಯದ ಜೊತೆಗೆ ಮೋಹನ್ ಲಾಲ್ ಅವರಿಗೆ ಸಂಗೀತದಲ್ಲಿಯೂ ಅಭಿರುಚಿ ಇದೆ. ಆದ್ದರಿಂದಲೇ 2014 ರಲ್ಲಿ ಅವರು ‘Lalisom – The Lal Effect’ ಹೆಸರಿನ ಒಂದು ಬ್ರ್ಯಾಂಡ್ ತಯಾರಿಸಿದರು.
ಮೋಹನ್ ಲಾಲ್ ಇವರು ಸೂಪರ್ಸ್ಟಾರ್ ಜೊತೆಗೆ ಅಭಿನಯ ಕ್ಷೇತ್ರದಲ್ಲಿ ದೊಡ್ಡ ಅನುಭವ ಹೊಂದಿದ್ದಾರೆ. ಇವರು ಒಂದು ಚಿತ್ರಕ್ಕೆ ತೆಗೆದುಕೊಳ್ಳುವ ಸಂಬಳ 3 ಕೋಟಿ ರೂಪಾಯಿಗಳು. ಇವರ ವರ್ಷದ ಗಳಿಕೆ ಸುಮಾರು 220 ಕೋಟಿಗಳಷ್ಟಿದೆ. ಇದರ ಹೊರತಾಗಿ ಇವರ ಎಂಡೊರ್ಸ್ ಮೆಂಟ್ ಫೀ 50 ಲಕ್ಷ ರೂಪಾಯಿಗಳಷ್ಟಿದೆ. ವಿವಿಧ ಉದ್ಯೋಗಗಳಲ್ಲಿ ಅವರ 80 ಕೋಟಿ ರೂಪಾಯಿಗಳ ಹೂಡಿಕೆ ಇದೆ. ಇವರು 8 ಕೋಟಿ ರೂಪಾಯಿಗಳ 6 ಕಾರುಗಳನ್ನು ಹೊಂದಿದ್ದಾರೆ. ಅವರ ಹತ್ತಿರ ಮರ್ಸಿಡಿಜ್, BMW, ಜಾಗ್ವಾರ್ ಮತ್ತು ರೇಂಜ್ ರೋವರ್ ಕಂಪನಿಯ ಕಾರುಗಳಿವೆ.

ಇದರ ಜೊತೆಗೆ ಮೋಹನ್ ಲಾಲ್ ಅವರು ಜಗತ್ತಿನ ಅತಿ ಎತ್ತರದ ಕಟ್ಟಡ ದುಬೈಯ ಬುರ್ಜ್ ಖಲೀಫಾ ದಲ್ಲಿಯೂ ಫ್ಲ್ಯಾಟ್ ಹೊಂದಿದ್ದಾರೆ. ಈ ಕಟ್ಟಡದ 29ನೇ ಅಂತಸ್ತಿನಲ್ಲಿ ಇವರ ಮನೆ ಇದೆ. ದಕ್ಷಿಣದ ನಟರಲ್ಲಿ ಬರೀ ಮೋಹನ್ ಲಾಲ್ ಒಬ್ಬರದೇ ಫ್ಲ್ಯಾಟ್ ಈ ಕಟ್ಟಡದಲ್ಲಿದೆ. ಇವರ ಹೊರತಾಗಿ ಬಾಲಿವುಡ್ ನಲ್ಲಿಯ ಶಿಲ್ಪ ಶೆಟ್ಟಿ ಅವರ ಫ್ಲ್ಯಾಟ್ ಸಹ ಈ ಕಟ್ಟಡದಲ್ಲಿದೆ. ವಯಸ್ಸಿನ 59ನೇ ವರ್ಷದಲ್ಲಿಯೂ ಮೋಹನ್ ಲಾಲ್ ಅವರು ಚಲನಚಿತ್ರಗಳಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸುತ್ತಾರೆ. ಇವರ ಜನಪ್ರಿಯತೆಯ ಮುಂದೆ ಬಾಲಿವುಡ್ ನಟರ ಜನಪ್ರಿಯತೆ ತುಂಬಾ ಕಡಿಮೆ ಎನಿಸುತ್ತದೆ.