ಇಂತಹ ಬೇಜವಾಬ್ದಾರ ವಾಹನ ಚಾಲಕರೇ ಅಪಘಾತಗಳಿಗೆ ಕಾರಣ; Viral Video ಹೇಳಿದ ಸತ್ಯ!
ರಸ್ತೆ ಸಂಚಾರ ಎನ್ನುವುದು ದಿನ ಕಳೆದಂತೆ ಸುರಕ್ಷತೆಯ ಬದಲಾಗಿ ಹೆಚ್ಚು ಅಪಾಯಗಳನ್ನು ತಂದೊಡ್ಡುವಂತೆ ಕಾಣುತ್ತಿದೆ. ಇದಕ್ಕೆ ಪ್ರಮುಖ ಕಾರಣ ಏನೆಂದು ತಿಳಿಯಲು ಹೋದರೆ, ಅನೇಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡದಿರುವುದು, ಹಾಗೂ ಇನ್ನೂ ಕೆಲವರು ರಸ್ತೆ ಸುರಕ್ಷತಾ ನಿಯಮಗಳ ಅರಿವು ಕೂಡಾ ಇಲ್ಲದೆ ರಸ್ತೆಗೆ ಇಳಿಯುತ್ತಿರುವುದು. ಇದೇ ಕಾರಣದಿಂದ ಮನೆಯಿಂದ ವಾಹನಗಳಲ್ಲಿ ಹೊರಗೆ ಹೋದವರು ಮತ್ತೆ ಮನೆಗೆ ಬರುವವರೆಗೂ ಕೂಡಾ ಒಂದು ರೀತಿಯ ಆತಂಕದ ಪರಿಸ್ಥಿತಿ ಇದ್ದೇ ಇರುತ್ತದೆ. ಹೇಳದೇ ಹೋದರೂ ಮನಸ್ಸಿನ ತಳಮಳದ ಅನುಭವ ನಮಗಾಗಿರುತ್ತದೆ. ಈ ಭ ಯ ವು ನಗರ ಪ್ರದೇಶಗಳಲ್ಲಿ ಇರುವವರಿಗೆ ತುಸು ಹೆಚ್ಚಾಗಿಯೇ ಇರುತ್ತದೆ ಎಂದು ಹೇಳಬಹುದು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವುದು ಕೂಡಾ ಹೆಚ್ಚಾಗುತ್ತಿದೆ.
ಆಗಾಗ ಚಾಲಕರ ತಪ್ಪಿನಿಂದ ಸಂಭವಿಸುವ ಅ ಪ ಘಾತಗಳ ವಿಡಿಯೋಗಳು ಸಿಸಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆದ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದಾಗ ಅದನ್ನು ನೋಡಿ ಜನರಿಗೆ ಶಾ ಕ್ ಆಗುತ್ತದೆ. ಇಂತಹ ಸನ್ನಿವೇಶಗಳನ್ನು ನೋಡಿದಾಗ ರಸ್ತೆ ಸಂಚಾರದ ಬಗ್ಗೆ ಒಂದು ಕ್ಷಣ ಭಯ ಹುಟ್ಟಿಕೊಳ್ಳುತ್ತದೆ. ಏಕೆಂದರೆ ನಾವು ಎಷ್ಟೇ ಜಾಗರೂಕತೆಯಿಂದ ಸುರಕ್ಷತಾ ನಿಯಮಗಳನ್ನು ಪಾಲಿಸಿಕೊಂಡು ವಾಹನವನ್ನು ಚಲಾಯಿಸಿದರೂ, ಅದೇ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನಗಳ ಚಾಲಕರು ಆ ನಿಯಮಗಳನ್ನು ಪಾಲಿಸದೇ ಹೋದಲ್ಲಿ ಖಂಡಿತವಾಗಿಯೂ ಅದು ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆಯೇ.
ಸೋಶಿಯಲ್ ಮೀಡಿಯಾದಲ್ಲಿ ಇಂತಹುದೇ ಒಂದು ಅ ಪ ಘಾತವನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯು ಯು-ಟರ್ನ್ ತೆಗೆದುಕೊಳ್ಳಲು ಹೋದಾಗ ಸಂಭವಿಸಿದ ಅಪಘಾತವು ನೋಡುಗರ ಮನಸ್ಸಿನಲ್ಲಿ ಭ ಯ ವನ್ನು ಹುಟ್ಟುಹಾಕುತ್ತದೆ. ವಿಡಿಯೋದಲ್ಲಿ ನಾವು ಗಮನಿಸಿದಾಗ ರಸ್ತೆಯ ಒಂದು ಪಕ್ಕದಲ್ಲಿ ಕಾರೊಂದು ನಿಂತಿರುತ್ತದೆ. ಕಾರಿನ ಚಾಲಕ ಯೂ ಟರ್ನ್ ತೆಗೆದುಕೊಂಡು ಅಲ್ಲಿಂದ ಹೊರಡಲು ಸಜ್ಜಾಗುವುದನ್ನು ನಾವು ಗಮನಿಸಬಹುದು. ಆ ಕಾರಿನ ಚಾಲಕ ರಸ್ತೆಯಲ್ಲಿ ಯಾವುದೇ ವಾಹನ ಬಾರದಿರುವುದನ್ನು ನೋಡಿ ರಸ್ತೆಯಲ್ಲಿ ಯೂ ಟರ್ನ್ ತೆಗೆದುಕೊಳ್ಳುತ್ತಾನೆ.
ಹಾಗೇ ಯೂ ಟರ್ನ್ ತೆಗೆದುಕೊಳ್ಳುವ ವೇಳೆಯಲ್ಲೇ ಎದುರಾಗುತ್ತದೆ ಅನಿರೀಕ್ಷಿತ ಅವಘಡ. ಏಕೆಂದರೆ ಕಾರು ಯೂ ಟರ್ನ್ ತೆಗೆದುಕೊಂಡ ಅದೇ ಕ್ಷಣದಲ್ಲಿ ಹಿಂದಿನಿಂದ ಒಂದು ಬಸ್ ಬಂದು ಕಾರಿಗೆ ಟಚ್ ಆಗುತ್ತದೆ. ದೊಡ್ಡ ಪ್ರಮಾಣದ ಅಪಘಾತ ವನ್ನು ತಪ್ಪಿಸಲು ಬಸ್ ಚಾಲಕ ಬಸನ್ನು ರಸ್ತೆಯ ಒಂದು ಬದಿಗೆ ತಿರುಗಿಸಿ ಬಸ್ ಒಂದಷ್ಟು ದೂರ ಹೋಗಿ ನಿಲ್ಲುತ್ತದೆ. ಇನ್ನು ಬಸ್ ನ ಆ ಅವಸ್ಥೆಗೆ ಕಾರಣವಾದ ಕಾರ್ ಚಾಲಕ ಮಾತ್ರ ಆ ಸ್ಥಳದಲ್ಲಿ ತನ್ನ ಕಾರನ್ನು ನಿಲ್ಲಿಸದೇ ಅಲ್ಲಿಂದ ವೇಗವಾಗಿ ಚಲಾಯಿಸಿಕೊಂಡು ಹೋಗುವುದು ಕೂಡಾ ಕಾಣುತ್ತದೆ. ಅದೃಷ್ಟವಶಾತ್ ದೊಡ್ಡ ಅವಘಡ ಸಂಭವಿಸಿಲ್ಲ. ಆದರೆ ಬಸ್ ನಿಂತ ಕೂಡಲೇ ಅದರಲ್ಲಿದ್ದ ಜನರು ಆತುರವಾಗಿ ಇಳಿದು ಕೆಳಗೆ ಬರುವುದು ನೋಡಬಹುದು.
ವಿಡಿಯೋ ನೋಡಿ
ಈ ವೀಡಿಯೋದಲ್ಲಿನ ಘಟನೆ ಕೇರಳದಲ್ಲಿ ನಡೆದಿದ್ದು ಎನ್ನಲಾಗಿದ್ದು, ಇದನ್ನು ಈಗಾಗಲೇ ಹತ್ತು ಲಕ್ಷಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಇನ್ನು ವೀಡಿಯೋ ನೋಡಿದವರಲ್ಲಿ ಅನೇಕರು ಕಾರಿನ ಚಾಲಕನನ್ನು ನಿಂದಿಸಿದ್ದಾರೆ. ಇನ್ನೂ ಕೆಲವರು ಇದರಲ್ಲಿ ಬಸ್ ಚಾಲಕನ ತಪ್ಪು ಕೂಡಾ ಇದೆ, ಕಾರು ಯೂಟರ್ನ್ ಮಾಡುವುದು ನೋಡಿ ಆತ ಬಸ್ಸನ್ನು ನಿಧಾನ ಮಾಡಬಹುದಿತ್ತು ಎಂದಿದ್ದಾರೆ. ಒಂದಿಬ್ಬರು ಬಸ್ ಚಾಲಕ ಆ ಕಾರಿನ ಮೇಲೆ ಬಸ್ಸನ್ನು ಚಲಾಯಿಸಬೇಕಿತ್ತು ಎಂದು ಕೂಡಾ ಕಾಮೆಂಟ್ ಮಾಡಿ ತಮ್ಮ ಅ ಸಮಾಧಾನವನ್ನು ಹೊರಹಾಕಿದ್ದಾರೆ.