ಗುಲಾಬಿ ಬಣ್ಣದ ಪೇರಲ ಬೆಳೆಯಿಂದ ವರ್ಷಕ್ಕೆ 40 ಲಕ್ಷ ರೂಪಾಯಿಗಳನ್ನು ಗಳಿಸುವ ರೈತ!

ದೇಶದ ರೈತರು ಈಗ ಆಧುನಿಕ ಕೃಷಿಯ ಕಡೆಗೆ ವಾಲುತ್ತಿದ್ದಾರೆ. ಅನೇಕ ಸುಶಿಕ್ಷಿತ ಯುವಕರು ಉಚ್ಚ ಶಿಕ್ಷಣವನ್ನು ಪಡೆದರೂ ಬೇಸಾಯದ ಕಡೆಗೆ ಗಮನ ಹರಿಸಿ ಲಕ್ಷಾವಧಿ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಎಷ್ಟೋ ಯುವಕರು ತಾವು ಮಾಡುತ್ತಿರುವ ದೊಡ್ಡ ದೊಡ್ಡ ಕಂಪನಿಗಳಲ್ಲಿಯ ನೌಕರಿಯನ್ನು ತ್ಯಜಿಸಿ ಬೇಸಾಯದ ಕಡೆಗೆ ಮುಖ ಮಾಡುತ್ತಿದ್ದಾರೆ. ಪ್ರಯತ್ನ ಮತ್ತು ತಮ್ಮಲ್ಲಿರುವ ಕೌಶಲ್ಯಗಳ ಮುಖಾಂತರ ತೋಟದಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಜೊತೆಗೆ ಇಳುವರಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಈ ಲೇಖನದಲ್ಲಿ ಮಹಾರಾಷ್ಟ್ರದ ಅಹಮದನಗರ ಜಿಲ್ಲೆಯ ಪಾರನೇರ ತಾಲೂಕಿನ ರೈತನಾದ ಬಾಳಾಸಾಹೇಬ್ ಗುಂಜಾಲ ಅವರು ತಮ್ಮ ತೋಟದಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ತಿಳಿದುಕೊಳ್ಳುವ.

ಇವರು ತಮ್ಮ 10 ಎಕರೆ ಭೂಮಿಯಲ್ಲಿ ತೈವಾನ್ ಪಿಂಕ್ ಜಾತಿಯ ಪೇರಲವನ್ನು ಬೆಳೆದು ವರ್ಷಕ್ಕೆ 40 ಲಕ್ಷ ರೂಪಾಯಿಗಳ ಆದಾಯವನ್ನು ಪಡೆದಿದ್ದಾರೆ. ಈಗಲೂ ಮುಂಬರುವ ಒಂದೆರಡು ತಿಂಗಳುಗಳಲ್ಲಿ 15 ರಿಂದ 20 ಲಕ್ಷ ರೂಪಾಯಿಗಳವರೆಗೆ ಲಾಭ ಪಡೆಯಲಿದ್ದಾರೆ.

ಈ ಜಿಲ್ಲೆಯ ಪಾರನೇರ ತಾಲೂಕಿನಲ್ಲಿ ಮಳೆಯ ಪ್ರಮಾಣವು ಹಾಗೆ ಕಡಿಮೆಯೇ ಇದೆ. ಹೀಗಾಗಿ ಇಲ್ಲಿಯ ಭೂಮಿಯಲ್ಲಿ ಯಾವ ಬೆಳೆಯನ್ನು ತೆಗೆದುಕೊಳ್ಳಬೇಕು ಎಂಬುದು ಇಲ್ಲಿಯ ರೈತರಿಗೆ ದೊಡ್ಡ ಪ್ರಶ್ನೆಯಾಗಿದೆ. ಬಾಳಾಸಾಹೇಬರಿಗೆ ಒಟ್ಟು 35 ಎಕರೆ ಭೂಮಿ ಇದೆ. ಅದರಲ್ಲಿ ಹತ್ತು ಎಕರೆ ಭೂಮಿಯಲ್ಲಿ ತೈವಾನ್ ಪಿಂಕ್ ಜಾತಿಯ ಪೇರಲ ಬೆಳೆದಿದ್ದಾರೆ. ಈ 10 ಎಕರೆ ಭೂಮಿಯಲ್ಲಿ ಪೇರಲದ ಬೆಳೆಗಾಗಿ 9ರಿಂದ 10 ಲಕ್ಷ ರೂಪಾಯಿಗಳ ಖರ್ಚು ಬಂದಿತ್ತು.

ಈ ಜಾತಿಯ ಪೇರಲ ಗಿಡದ ವಿಶೇಷತೆಯೇನೆಂದರೆ, ಇದನ್ನು ಕಸಿ ಮಾಡಿದ ನಂತರ ಬರೀ ಎಂಟೇ ತಿಂಗಳಲ್ಲಿ ಇಳುವರಿ ಪ್ರಾರಂಭವಾಗುತ್ತದೆ. ಕಳೆದ ಮೂರು ನಾಲ್ಕು ತಿಂಗಳುಗಳಿಂದ ಬಾಳಾಸಾಹೇಬ್ ಅವರು ತಮ್ಮ ತೋಟದಿಂದ 40 ಲಕ್ಷ ರೂಪಾಯಿಗಳ ಪೇರಲ ಮಾರಾಟ ಮಾಡಿದ್ದಾರೆ. ಮುಂಬರುವ ಒಂದೆರಡು ತಿಂಗಳುಗಳಲ್ಲಿ ಇನ್ನು ಸುಮಾರು 20 ಲಕ್ಷ ರೂಪಾಯಿಗಳ ಆದಾಯ ಪಡೆಯಬಹುದು ಎಂದು ವಿಶ್ವಾಸದಿಂದ ಹೇಳುತ್ತಾರೆ.

ಹಾಗೆ ನೋಡಲಾಗಿ ಅನೇಕ ಕಡೆ ಪೇರಲದ ಕಸಿಯನ್ನು ಮಾಡುತ್ತಾರೆ. ಆದರೆ ಈ ತೈವಾನ್ ಜಾತಿಯ ಪೇರಲಕ್ಕೆ ಮಾರ್ಕೆಟ್ಟಿನಲ್ಲಿ ತುಂಬಾ ಡಿಮಾಂಡ್ ಇದೆ. ಕಾರಣ ಈ ಪೇರಲ ಹಣ್ಣು ತಿನ್ನಲು ರುಚಿ ಇರುವುದರ ಜೊತೆಗೆ ತುಂಬಾ ಮೃದು ಆಗಿರುತ್ತದೆ. ಮತ್ತು ತೂಕದಲ್ಲಿ 400 ರಿಂದ 950 ಗ್ರಾಂ ದವರಿಗೆ ಇರುತ್ತದೆ.

ಪೇರುವಿನ ಕೃಷಿಯಲ್ಲಿ ಇನ್ನೊಂದು ಲಾಭವೆಂದರೆ ಈ ಗಿಡಗಳಿಗೆ ಬೇರೆ ಬೆಳೆಗಳ ಹಾಗೆ ಹೆಚ್ಚು ಕಷ್ಟ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಇದಕ್ಕೆ ಹನಿ ನೀರಾವರಿಯ ವ್ಯವಸ್ಥೆ ಮಾಡಲು ಬರುತ್ತದೆ. ಈ ಗಿಡಗಳಿಗೆ ಯಾವುದೇ ರೀತಿಯ ವಿಶೇಷವಾದ ಗೊಬ್ಬರದ ಅವಶ್ಯಕತೆ ಇಲ್ಲ. ಪೇರುವಿನ ಕಸಿ ಮಾಡುವಾಗಲೇ ಸೆಗಣಿಯ ಗೊಬ್ಬರವನ್ನು ಉಪಯೋಗಿಸಲಾಗುತ್ತದೆ. ಸರಿಯಾದ ನಿಯೋಜನೆಯ ಮುಖಾಂತರ ಪೇರುವಿನ ಬೇಸಾಯ ಮಾಡಿದರೆ ಇದರಲ್ಲಿ ಯಾವುದೇ ರೀತಿಯ ಹಾನಿಯಾಗುವುದಿಲ್ಲ.