ಅಂಡರ್ ವರ್ಲ್ಡ್ ಡಾನ್ 10 ಕೋಟಿ ಕೇಳಿದಾಗ ಆ ಹಣವನ್ನು ದೇಗುಲಕ್ಕೆ ನೀಡುತ್ತೇನೆ ಎಂದಿದ್ದರು T-Series ನ ಮಾಲಿಕ ಗುಲ್ಶನ್ ಕುಮಾರ್!
ಟಿ ಸೀರೀಸ್ ಎನ್ನುವುದು ಕೇವಲ ಭಾರತ ಮಾತ್ರವೇ ಅಲ್ಲದೇ ಇದು ಒಂದು ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿರುವ ಬ್ರಾಂಡ್ ಆಗಿದೆ. ಟಿ ಸಿರೀಸ್ ಕಂಪನಿಯು ಇಂದು ಈ ಮಟ್ಟದ ಯಶಸ್ಸನ್ನು ಸಾಧಿಸಿದೆ ಎಂದರೆ ಇದರ ಹಿಂದೆ ಅದರ ಸಂಸ್ಥಾಪಕರಾದ ಗುಲ್ಶನ್ ಕುಮಾರ್ ಅವರ ಕೊಡುಗೆ ಅಪಾರವಾಗಿದೆ. ಮೇ 5, 1977 ರಲ್ಲಿ ಜನಿಸಿದ ಗುಲ್ಶನ್ ಕುಮಾರ್ ಅವರು ಒಬ್ಬ ಉದ್ಯಮಿ ಹಾಗೂ ಬಾಲಿವುಡ್ ಸಿನಿಮಾ ನಿರ್ಮಾಪಕರು ಕೂಡಾ ಆಗಿದ್ದರು. ಸಾಮಾನ್ಯ ಕುಟುಂಬದಿಂದ ಬಂದ ಅವರು ಒಂದು ಕಾಲದಲ್ಲಿ ರಸ್ತೆ ಬದಿಯಲ್ಲಿ ಜೂಸ್ ಮಾರಿ ಜೀವನವನ್ನು ನಡೆಸುತ್ತಿದ್ದರು. ಆದರೆ ತನ್ನ ಪರಿಶ್ರಮದಿಂದಾಗಿ ಅವರು ಟಿ ಸೀರೀಸ್ ಅನ್ನು ಹುಟ್ಟು ಹಾಕಿದರು ಹಾಗೂ ಕೋಟ್ಯಾಧಿಪತಿಯಾದರು. ಆದರೆ ಅವರ ಈ ಹಣ ಹಾಗೂ ಸಂಪತ್ತೆ ಅವರ ಸಾ ವಿ ಗೂ ಕೂಡಾ ಕಾರಣವಾಯಿತು ಎನ್ನುವುದು ಕೂಡಾ ಸತ್ಯ.
ಗುಲ್ಶನ್ ಕುಮಾರ್ ಅವರ ಸಾವಿನ ಕುರಿತಾದ ಚರ್ಚೆಗಳು ಇಂದಿಗೂ ಕೂಡಾ ಪ್ರಚಲಿತವಾಗಿದೆ. ನಾವಿಂದು ಅವರ ಸಾ ವಿ ಗೆ ಸಂಬಂಧಿಸಿದಂತೆ ಕೆಲವು ಆಸಕ್ತಿಕರ ವಿಚಾರಗಳನ್ನು ತಿಳಿಸಲು ಹೊರಟಿದ್ದೇವೆ. ವಾಸ್ತವವಾಗಿ ಗುಲ್ಶನ್ ಕುಮಾರ್ ಅವರ ಸಾವಿನ ಕುರಿತಾದ ಅನೇಕ ವಿಷಯಗಳನ್ನು ಮೈ ನೇಮ್ ಈಸ್ ಅಬು ಸಲೇಮ್ ಎನ್ನುವ ಪುಸ್ತಕದಲ್ಲಿ ಪ್ರಸ್ತಾಪನೆ ಮಾಡಲಾಗಿದೆ. ಈ ಪುಸ್ತಕವನ್ನು ತನಿಖಾ ಪತ್ರಕರ್ತ ಎನಿಸಿರುವ ಹುಸೇನ್ ಜೈದಿ ಎನ್ನುವವರು ಬರೆದಿದ್ದಾರೆ. ಅಂದಿನ ಕುಖ್ಯಾತ ಭೂಗತ ದೊರೆ ಅಬು ಸಲೇಂ ಆಗಾಗ ಗುಲ್ಶನ್ ಕುಮಾರ್ ಅವರಿಗೆ ಕರೆ ಮಾಡಿ 10 ಕೋಟಿ ರೂಪಾಯಿಗಳನ್ನು ಕೇಳುತ್ತಿದ್ದ. ಆದರೆ ಗುಲ್ಶನ್ ಕುಮಾರ್ ಅವರು ಅಬು ಸಲೇಂ ನಿಗೆ ಹೆದರುತ್ತಿರಲಿಲ್ಲ ಹಾಗೂ ಅವರು ಆತನಿಗೆ ಹಣವನ್ನು ನೀಡಲೂ ಇಲ್ಲ.

ಹುಸೇನ್ ಜೈದಿ ಅವರು ಹೇಳುವಂತೆ ಒಮ್ಮೆ ಅಬು ಸಲೇಂ ಹತ್ತು ಕೋಟಿ ಬೇಡಿಕೆಯಿಟ್ಟಾಗ ಗುಲ್ಶನ್ ಕುಮಾರ್ ಅವರು ಆ ಹಣದಲ್ಲಿ ವೈಷ್ಣೋದೇವಿಯ ಪೂಜೆ ಮಾಡಿಸಿ, ಪ್ರಸಾದ ಹಂಚುವೆ ಎಂದಿದ್ದರಂತೆ. ಗುಲ್ಶನ್ ಕುಮಾರ್ ಅವರು ಮಹಾನ್ ದೈವ ಭಕ್ತ ಕೂಡಾ ಆಗಿದ್ದವರು. ಅವರ ಭಜನೆಗಳ ಆಡಿಯೋಗಳು ಇಂದಿಗೂ ಜನಪ್ರಿಯತೆ ಪಡೆದಿವೆ. ಇವರು ಮಹಾಶಿವನ ಪರಮ ಭಕ್ತನಾಗಿದ್ದವರು. ಯಾವಾಗ ಗುಲ್ಶನ್ ಕುಮಾರ್ ಅವರು ಹತ್ತು ಕೋಟಿಯನ್ನು ದೇವಾಲಯಕ್ಕೆ ದೇಣಿಗೆ ನೀಡುವೆ ಎಂದರೋ ಅವರ ಈ ಮಾತು ಅಬು ಸಲೇಂನ ಸಿ ಟ್ಟ ನ್ನು ಹೆಚ್ಚಿಸಿತು ಹಾಗೂ ಆತ ಗುಲ್ಶನ್ ಅವರ ಕೊ ಲೆ ಮಾಡಲು ಯೋಜನೆ ಸಿದ್ದಪಡಿಸಿದ.

ಈ ವಿಷಯವನ್ನು ಒಬ್ಬ ವ್ಯಕ್ತಿಯು ರಹಸ್ಯವಾಗಿ ಅಂದಿನ ಮುಂಬೈ ನಗರದ ಡಿಜಿ ರಾಕೇಶ್ ಮಾರಿಯಾ ಅವರಿಗೆ ತಿಳಿಸಿದ. ಐಎಎನ್ಎಸ್ ಗೆ ನೀಡಿದ ಒಂದು ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಹೇಳಿಕೊಂಡಿದ್ದರು. ಏಪ್ರಿಲ್ 12, 1997 ರಂದು ಒಬ್ಬ ರಹಸ್ಯ ಸುದ್ದಿ ಸಾಗಾಟ ಮಾಡುವ ವ್ಯಕ್ತಿಯು, ‘ಸರ್ ಗುಲ್ಶನ್ ಕುಮಾರ್ ಅವರ ವಿಕೆಟ್ ಕುಸಿಯಲಿದೆ’ ಎಂಬ ಮಾಹಿತಿಯನ್ನು ನೀಡಿದ್ದ ಎನ್ನಲಾಗಿದೆ. ಗುಲ್ಶನ್ ಕುಮಾರ್ ಅವರಿಗೆ ಪ್ರತಿದಿನ ಬೆಳಿಗ್ಗೆ ಒಂದು ಶಿವ ಮಂದಿರಕ್ಕೆ ಹೋಗುವ ಹವ್ಯಾಸ ಇತ್ತು. ಅಬು ಸಲೇಂ ಅವರನ್ನು ಅಲ್ಲಿಯೇ ಕೊಂ ದು ಹಾಕಲು ಮಾಡಲು ಒಬ್ಬ ಶೂಟರ್ ಜೊತೆ ಯೋಜನೆ ರೂಪಿಸಿಕೊಂಡಿದ್ದನು.

ಅಬು ಸಲೇಂ ನ ಪ್ಲಾನ್ ಬಗ್ಗೆ ತಿಳಿದ ಡಿಜಿ ಅವರು ಮಹೇಶ್ ಭಟ್ ಅವರನ್ನು ಗುಲ್ಶನ್ ಕುಮಾರ್ ಅವರಿಗೆ ಪ್ರತಿದಿನ ದೇವಾಲಯಕ್ಕೆ ಹೋಗುವ ಅಭ್ಯಾಸ ಇದೆಯೇ ಎಂದು ಕೇಳಿ ಖಾತರಿ ಪಡಿಸಿಕೊಂಡಿದ್ದರು. ವಿಷಯ ಪಕ್ಕಾ ಆದ ಕೂಡಲೇ ಡಿಜಿ ರಾಕೇಶ್ ಮಾರಿಯಾ ಅವರು ತಡ ಮಾಡದೇ ವಿಚಾರವನ್ನು ಕ್ರೈಮ್ ಡಿಪಾರ್ಟ್ಮೆಂಟ್ ಗೆ ನೀಡಿದ್ದರು ಮತ್ತು ಗುಲ್ಶನ್ ಕುಮಾರ್ ಅವರಿಗೆ ಭದ್ರತೆಯನ್ನು ಕೂಡಾ ಒದಗಿಸಲಾಯಿತು. ಪೋಲಿಸರು ಇನ್ನೂ ದೊಡ್ಡ ಹೆಜ್ಜೆಯನ್ನು ಇಡುವ ಮೊದಲೇ ಆಗಸ್ಟ್ 12, 1997 ರಂದು ಅಬು ಸೇಲಂ ಶೂಟರ್ ರಾಜ ಎನ್ನುವವನ ಜೊತೆ ಸೇರಿ ಮುಂಬೈನ ಜಿತೇಶ್ವರ ಮಹಾದೇವ್ ದೇವಸ್ಥಾನದ ಹೊರಗೆ ಗುಲ್ಶನ್ ಕುಮಾರ್ ಮೇಲೆ ಹತ್ತು ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿದರು. ಗುಲ್ಶನ್ ಕುಮಾರ್ ಅಂದು ಸ್ಥಳದಲ್ಲಿಯೇ ಮೃ ತ ರಾಗಿದ್ದರು.
