11 ನೇ ವಯಸ್ಸಿಗೆ ಎಮ್ಮೆಯ ಹಾಲು ಕರೆಯಲು ಶುರು ಮಾಡಿದ ಶ್ರದ್ಧಾ ಇಂದು ತಿಂಗಳಿಗೆ 6 ಲಕ್ಷ ರೂಪಾಯಿ ಗಳಿಸುತ್ತಾಳೆ!
ಯಶಸ್ಸಿಗೆ ವಯಸ್ಸಿನ ಕಡಿವಾಣವಿಲ್ಲ. ಅದಕ್ಕೆ ಬೇಕು ಸತತವಾದ ಪ್ರಯತ್ನ. ಮನುಷ್ಯ ಮಾಡುವ ಸತತ ಪ್ರಯತ್ನದಿಂದಲೇ ಏನಾದರೂ ಹೊಸ ಮಾರ್ಗ ಕಂಡು ಕೊಳ್ಳುತ್ತಾನೆ. ಇಂಥದ್ದೇ ಒಂದು ಪ್ರಯತ್ನ ನೆರೆಯ ಮಹಾರಾಷ್ಟ್ರದಲ್ಲಿರುವ ಅಹಮದನಗರ ಜಿಲ್ಲೆಯಿಂದ 60 ಕಿಲೋಮೀಟರ್ ದೂರದಲ್ಲಿರುವ ನಿಘೋಜ್ ಗ್ರಾಮದ ನಿವಾಸಿ 21 ವರ್ಷ ವಯಸ್ಸಿನ ಶ್ರದ್ಧಾ ಧವನ್ ಮಾಡಿದ್ದಾಳೆ. ಈಕೆ ತನ್ನ ವಯಸ್ಸಿನ 11 ವರ್ಷದಿಂದಲೇ ದುಗ್ಧ ವ್ಯವಸಾಯದಲ್ಲಿ ತೊಡಗಿದ್ದಾಳೆ. ಆಗಿನಿಂದಲೇ ಈ ವ್ಯವಸಾಯದ ಜವಾಬ್ದಾರಿಯನ್ನು ಎತ್ತಿದ್ದಾಳೆ. ಇಂದು ವಯಸ್ಸಿನ 21 ರ ಹರೆಯದಲ್ಲಿ ತನ್ನ ಪ್ರಯತ್ನದ ಬಲದಿಂದ ತನ್ನ ತಂದೆಯ ದುಗ್ಧ ಶಾಲೆಯ ನಕಾಶೆಯನ್ನೇ ಬದಲಾಯಿಸಿದ್ದಾಳೆ. ಈಕೆ ಹಾಲು ಕರೆಯುವುದರಿಂದ ಹಿಡಿದು ಅದನ್ನು ವಿತರಣೆ ಮಾಡುವವರೆಗೂ ಎಲ್ಲ ಕೆಲಸಗಳನ್ನು ಲೀಲಾಜಾಲವಾಗಿ ಮಾಡುವ ಕೌಶಲ್ಯ ಬಹುಬೇಗನೆ ಕಲಿತು ತಂದೆಗೆ ಸಹಾಯ ಮಾಡುತ್ತಿದ್ದಾಳೆ. ತನ್ನ ಅಭ್ಯಾಸದಿಂದ ಹೇಗಾದರೂ ಸಮಯ ತೆಗೆದು ವಿಕಲಚೇತನನಾದ ತಂದೆಗೆ ಆಸರೆಯಾಗಿ ನಿಂತಳು. ಇಂದು ಎರಡು ಅಂತಸ್ತಿನ ಶೆಡ್ ನಲ್ಲಿ ಒಟ್ಟು 80 ಎಮ್ಮೆಗಳಿವೆ. ಶ್ರದ್ಧಾಳ ಈ ಡೇರಿ ಫಾರ್ಮ ಆ ಜಿಲ್ಲೆಯಲ್ಲಿಯೇ ಎಲ್ಲಕ್ಕೂ ದೊಡ್ಡ ತೋಟವಾಗಿದೆ. ಇದೇ ಫಾರ್ಮ್ ನಿಂದ ತಿಂಗಳಾಂತ್ಯಕ್ಕೆ ಸುಮಾರು 6 ಲಕ್ಷ ರೂಪಾಯಿಗಳವರೆಗೆ ಆದಾಯ ಬರುತ್ತದೆ. ಬೇಸಾಯದ ಜವಾಬ್ದಾರಿಯಿಂದ ಕೆಲಸ ಹೆಚ್ಚಾದ ನಂತರ ಎಮ್ಮೆಗಳ ಸಂಖ್ಯೆಯನ್ನು ಹೆಚ್ಚು ಮಾಡಿದಳು.
1998 ರಲ್ಲಿ ಯಾವುದೋ ಸಮಸ್ಯೆಯಿಂದಾಗಿ ಇವರ ಕುಟುಂಬದ ಕಡೆಗೆ ಬರೀ ಒಂದು ಎಮ್ಮೆ ಉಳಿದಿತ್ತು. ತಂದೆ ವಿಕಲ ಚೇತನಾಗಿದ್ದರಿಂದ ಸುತ್ತಾಡಿ ಅಥವಾ ವಾಹನದ ಮೇಲೆ ತಿರುಗಾಡಿ ಹಾಲು ಮಾರುವದು ಕಷ್ಟವಾಗಿತ್ತು.

ಆನಂತರ 2011 ರಲ್ಲಿ ಶ್ರದ್ಧಾ ಬರೀ 11 ವರ್ಷದವಳಿದ್ದಾಗ ಎಮ್ಮೆಯ ಹಾಲನ್ನು ಕರೆಯಲು ಶುರು ಮಾಡಿದಳು. ಜೊತೆಗೆ ಬೈಕ್ ಮೇಲೆ ಹಾಲನ್ನು ಮಾರಾಟ ಮಾಡಲು ಸಹ ಪ್ರಾರಂಭಿಸಿದಳು. ತಂದೆ ಶಾರೀರಿಕವಾಗಿ ದುರ್ಬಲ ಮತ್ತು ತಮ್ಮ ಚಿಕ್ಕವನಾಗಿದ್ದರಿಂದ ಮನೆಯ ಜವಾಬ್ದಾರಿ ನಾನೇ ಹೊತ್ತುಕೊಂಡು ಮುನ್ನಡೆದೆ, ಇದು ನನಗೆ ತುಂಬಾ ವಿಶೇಷವೆನ್ನಿಸಿತು ಕಾರಣ ನನ್ನೂರಲ್ಲಿ ಯಾವುದೇ ಹುಡುಗಿ ಈ ರೀತಿಯ ಕೆಲಸ ಮಾಡಿರಲಿಲ್ಲ ಎನ್ನುತ್ತಾಳೆ ಶ್ರದ್ಧಾ.
2015 ರಲ್ಲಿ SSLC ಬೋರ್ಡ್ ಪರೀಕ್ಷೆ ನೀಡುವಾಗ ದಿನಂಪ್ರತಿ 150 ಲೀಟರ್ ಹಾಲನ್ನು ಮಾರಾಟ ಮಾಡುತ್ತಿದ್ದಳು. 2016 ರ ಹೊತ್ತಿಗೆ ನಮ್ಮ ಹತ್ತಿರ ಒಟ್ಟು 45 ಎಮ್ಮೆಗಳಿದ್ದವು. ಮತ್ತು ತಿಂಗಳಿಗೆ 3 ಲಕ್ಷ ರೂಪಾಯಿಗಳು ಬರುತ್ತಿದ್ದವು ಎಂದು ಶ್ರದ್ಧಾ ವಿವರಿಸುತ್ತಾಳೆ.
ಜನರಿಗೆ ನೀಡುವ ಹಾಲು ಮತ್ತು ಅದರ ಕ್ವಾಲಿಟಿಯ ಮೇಲೆ ಜನರು ವಿಶ್ವಾಸ ಇಟ್ಟಿದ್ದರಿಂದ ಇಂದು ಉದ್ಯೋಗದ ಮುಖಾಂತರ ತಿಂಗಳ ಗಳಿಕೆ 6 ಲಕ್ಷಕ್ಕೆ ಮುಟ್ಟಿದೆ. ಇವರು ಪ್ರಾಣಿಗಳಿಗೆ ಸಾವಯವ ಮೇವನ್ನೆ ನೀಡುತ್ತಾರೆ. ಎಮ್ಮೆಯ ಈ ಶೆಡ್ (ಕೊಟ್ಟಿಗೆ) ದಿನಕ್ಕೆರಡು ಬಾರಿ ತೊಳೆದು ಸ್ವಚ್ಛ ಮಾಡುತ್ತಾರೆ. ಹಾಗೂ ಎಲ್ಲ ಪ್ರಾಣಿಗಳ ನಿಯಮಿತ ಆರೋಗ್ಯ ತಪಾಸಣೆಯನ್ನು ಮಾಡುತ್ತಾರೆ. ಈ ಕುಟುಂಬವು ಈಗ ದಿನಕ್ಕೆ ಸುಮಾರು 450 ಲೀಟರ್ ಹಾಲು ಕರೆದು ಮಾರಾಟ ಮಾಡುತ್ತಾರೆ.

ಶ್ರದ್ಧಾಳ ವೈಯಕ್ತಿಕ ಜೀವನದ ಬಗ್ಗೆ ಹೇಳಬೇಕಾದರೆ ಈಕೆ ತಾನೇ ಒಬ್ಬಳೇ ಈ ಉದ್ಯೋಗವನ್ನು ತನ್ನ ಪ್ರಬಲ ಜಿದ್ದಿನ ಬಲದಿಂದ ಎದ್ದು ನಿಲ್ಲಿಸಿದ್ದಾಳೆ. ಇದೇ ಕಾರಣದಿಂದ ಆಕೆಯ ಶೈಕ್ಷಣಿಕ ಜೀವನದ ಮೇಲೆ ತುಂಬಾ ಪರಿಣಾಮವಾಯಿತು. ಮುಂದೆ ತನ್ನ ಊರಿನಲ್ಲಿಯೇ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆರ್ಯುವ ನಿರ್ಣಯ ತೆಗೆದುಕೊಂಡಳು. ಯಶಸ್ಸು ಬರೀ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಲಭಿಸುತ್ತದೆ ಎಂದು ತಿಳಿಯಬೇಡಿ, ಪ್ರಯತ್ನ ಒಂದಿದ್ದರೆ ನಿಮಗೆ ಎಲ್ಲಿಯೂ ಯಶಸ್ಸು ಸಿಗುವದು. ನಾನು ಚಿಕ್ಕ ಊರಲ್ಲಿ ಉದ್ಯೋಗವನ್ನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಆಕೆಗೆ ಏಳ್ಳಷ್ಟೂ ಪಶ್ಚಾತ್ತಾಪವಿಲ್ಲ. ನನಗೆ ಈ ಕೆಲಸದಲ್ಲಿ ಕಡಿಮೆತನದ ಭಾವನೆ ಸ್ವಲ್ಪವೂ ಬರುವದಿಲ್ಲ. ನನ್ನ ಹತ್ತಿರ ವಿರುವ ಕೌಶಲ್ಯವು ನನಗೆ ಸತತ ಏನಾದರೂ ಮಾಡುವ ಪ್ರೇರಣೆ ನೀಡುತ್ತದೆ ಎನ್ನುತ್ತಾಳೆ . ನಾನು ಯಶಸ್ವಿ ಆಗುತ್ತಲೇ ಹೋಗುತ್ತೇನೆ ಎನ್ನುತ್ತಾಳೆ ಶ್ರದ್ಧಾ ತುಂಬಾ ಶ್ರದ್ಧೆ ಮತ್ತು ಆತ್ಮವಿಶ್ವಾಸದಿಂದ.