‘ದಿನಂಪ್ರತಿ ತಪ್ಪದೆ ಶಿವಲಿಂಗಕ್ಕೆ ನೀರಿನ ಅರ್ಘ್ಯವನ್ನು ಕೊಟ್ಟೇ ಶೂಟಿಂಗ್ ಗೆ ತೆರಳುತ್ತಿದ್ದರು ಇರ್ಫಾನ್’ ಡ್ರೈವರ್ ಹೇಳಿದ ದಿಗ್ಭ್ರಮೆಗೊಳಿಸುವ ಸತ್ಯ!!
ಡ್ರೈವರ್ ನರಪತ್ ಸಿಂಹನ ಪ್ರಕಾರ ಇರ್ಫಾನ್ ಶೂಟಿಂಗ್ ಸಲುವಾಗಿ ಹೋಗಬೇಕಾದರೆ ಯಾವತ್ತೂ ನೇರವಾಗಿ ಶೂಟಿಂಗ್ ಗೆ ಹೋಗುತ್ತಿರಲಿಲ್ಲವಂತೆ….
ಮೊದಲು ಶಿವಮಂದಿರಕ್ಕೆ ಹೋಗಿ ಅಲ್ಲಿ ಶಿವಲಿಂಗಕ್ಕೆ ನೀರಿನ ಅರ್ಘ್ಯವನ್ನು ತೋರಿಸಿಯೇ ಮುಂದೆ ತಮ್ಮ ಕೆಲಸಕ್ಕೆ ತೆರಳುತ್ತಿದ್ದರು ಎಂದು ಇರ್ಫಾನ್ ಅವರ ಡ್ರೈವರ್ ಹೇಳಿದ್ದಾನೆ.

ಬಾಲಿವುಡ್ ಸ್ಟಾರ್ ಇರ್ಫಾನ್ ಖಾನ್ ಕಳೆದ ತಿಂಗಳ 29 ನೇ ತಾರೀಖಿಗೆ ಮುಂಬಯಿಯಲ್ಲಿ ನಿಧನವಾದರು. ಅವರು ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿದ್ದರು.
ಇವರ ನಿಧನದ ನಂತರ ಈಗ ಮಿಡಿಯಾಗಳಲ್ಲಿ ಅವರ ಜೀವನದ ಬಗ್ಗೆ ಅನೇಕ ಸ್ವಾರಸ್ಯಕರವಾದ ಸಂಗತಿಗಳು ಹೊರಬೀಳುತ್ತಿವೆ.

‘ಇಂಗ್ಲಿಷ್ ಮೀಡಿಯಂ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿಯ ರಾಜಸ್ಥಾನದ ಉದಯಪುರದಲ್ಲಿ ಇರ್ಫಾನ್ ರ ಡ್ರೈವರ್ ನಾಗಿ ಕೆಲಸ ಮಾಡಿದ ನರಪತ್ ಸಿಂಗ್ ಈ ವಿಷಯ ಹೊರಗೆ ಹಾಕಿದ್ದಾನೆ.
ಫಿಲ್ಮ್ ದ ಶೂಟಿಂಗ್ ಸಲುವಾಗಿ ಇರ್ಫಾನ್ ರನ್ನು ಕರೆದೊಯ್ಯಲು ಮತ್ತು ಹೊಟೇಲಿಗೆ ವಾಪಸ್ ತರುವ ಜವಾಬ್ದಾರಿ ನರಪತ್ ಡ್ರೈವರ್ ಗೆ ಒಪ್ಪಿಸಲಾಗಿತ್ತು. ಅವರು ತೀರಿಕೊಂಡ ಸುದ್ದಿಯನ್ನು ಕೇಳಿ ದುಃಖ ತಡೆದುಕೊಳ್ಳಲಾರದೆ ಈ ವಿಷಯವನ್ನು ಪ್ರಸ್ತಾಪಿಸಿದನು. ಶಿವಮಂದಿರದಲ್ಲಿ ನಮಿಸಿ ನಂತರ ಆಕಳಿಗೆ ಮೇವು ಸಹ ತಿನ್ನಿಸುತ್ತಿದ್ದರು ಎಂದು ನೆನಪಿಸಿಕೊಂಡು ಕಣ್ಣೀರು ಹಾಕಿದನು.