ಈ ಭೂಮಿಯ ಮೇಲೆಯೇ ಅದಕ್ಕಿಂದ ಹಳೆಯ ವಸ್ತುವೊಂದಿದೆ ಎಂದರೆ ನಂಬುವಿರಾ? ಆಫ್ರಿಕಾದ ಸಹರಾದಲ್ಲಿದೆ ಆ ವಿಶೇಷ ವಸ್ತು!

ಉಲ್ಕೆಗಳು ಅಥವಾ ಉಲ್ಕಾ ಶಿಲೆಗಳ ಬಗ್ಗೆ ಹೇಳುವುದಾದರೆ ಸೌರ ಮಂಡಲದಲ್ಲಿ ಭೂಮಿಯಂತಹ ಗ್ರಹಗಳು ಇನ್ನೂ ಸೃಷ್ಟಿಯಾಗುತ್ತಿದ್ದ ಕಾಲದ್ದು ಎನ್ನಲಾಗಿದೆ. ಆದರೆ ಸಂಶೋಧಕರು ಉಲ್ಕೆಯ ಬಂಡೆಯ ಒಂದು ತುಂಡನ್ನು ಕಂಡು ಕೊಂಡಿದ್ದು ಇದು ಭೂಮಿಗಿಂತಲೂ ಹಳೆಯದು ಎನ್ನಲಾಗಿದೆ. ಈ ಕಲ್ಲು ಭೂಮಿಗಿಂತ ಮೊದಲೇ ರಚನೆಯಾಗುತ್ತಿದ್ದ ಒಂದು ಗ್ರಹದ ಭಾಗವೆಂದು ಹೇಳಿರುವ ಸಂಶೋಧಕರು, ಆಗಿನ್ನೂ ಭೂ ಗ್ರಹದ ಸೃಷ್ಟಿ ಕೂಡಾ ಆರಂಭವಾಗಿರಲಿಲ್ಲ ಎನ್ನಲಾಗಿದೆ. ಈ ಉಲ್ಕಾ ಶಿಲೆಗೆ ಎರ್ಗ್ ಚೆಚ್ 002 ಅಥವಾ ಇಸಿ 002 ಎನ್ನುವ ಹೆಸರನ್ನು ಇಡಲಾಗಿದೆ. ಸಂಶೋಧಕರ ಪ್ರಕಾರ ಇದು ಪುರಾತನವಾದ ಪ್ರೊಟೋಪ್ಲಾನೆಟ್ ನ ಮೂಲ ಮಾದರಿಯಲ್ಲಿ ರಚನೆಯಾಗಿದೆ ಎನ್ನಲಾಗಿದೆ.
ಪ್ರೊಟೋಪ್ಲೆನೆಟ್ ಗಳು ಗ್ರಹಗಳ ಮೂಲ ರಚನಾ ಖಂಡಗಳಾಗಿವೆ ಎನ್ನಲಾಗಿದೆ.

ಸಂಶೋಧಕರು ಇದು ಭೂಮಿಯ ಮೇಲೆ ಬಿದ್ದಂತಹ ಬಹಳ ಪುರಾತನವಾದ ಲಾವಾ ಎನ್ನಲಾಗಿದೆ. ಇದರ ಬಗ್ಗೆ ಅಧ್ಯಯನ ನಡೆಸುವುದರಿಂದ ನಮ್ಮ ಸೌರವ್ಯೂಹದ ಆರಂಭಿಕ ಕಾಲದಲ್ಲಿ ಗ್ರಹಗಳ ರಚನೆಯ ಬಗ್ಗೆ ಮಾಹಿತಿ ಸಿಗುತ್ತದೆ ಎಂದಿದ್ದಾರೆ. ಈ ಉಲ್ಕಾ ಶಿಲೆಯು ಆಫ್ರಿಕಾದ ಆಲ್ಜೀರಿಯಾದ ಅರ್ಗ್ ಚೆಚ್ ಡ್ಯೂನ್ ಸಾಗರದಲ್ಲಿ ಕಂಡು ಬಂದಿದ್ದು, ವಾಸ್ತವದಲ್ಲಿ ಇದು ಅನೇಕ ಉಲ್ಕಾ ಶಿಲೆಗಳಿಂದ ಸೃಷ್ಟಿಯಾಗಿದೆ ಎನ್ನಲಾಗಿದೆ. ಇದರ ತೂಕವು 70 ಪೌಂಡ್ ಗಳಷ್ಟು ಅಂದರೆ 32 ಕಿಲೋ ಗ್ರಾಂ ತೂಕವಿದೆ. ಸಂಶೋಧಕರ ಪ್ರಕಾರ ಈ ಕಲ್ಲು ಮೊದಲು ಲಾವಾದಂತೆ ದ್ರವ ರೂಪದಲ್ಲಿ ಇತ್ತು ಎನ್ನಲಾಗಿದ್ದು, ಅನಂತರ ಅದು ಕ್ರಿಸ್ಟಲೀಕರಣದಿಂದ ಘನ ರೂಪಕ್ಕೆ ತಿರುಗಿದೆ ಎಂದು ವಿವರಿಸಿದ್ದಾರೆ.

ಈ ಕಲ್ಲಿನ ಮೆಗ್ನೀಷಿಯಂ ಮತ್ತು ಅಲ್ಯುಮಿನಿಯಂ ಐಸೋಟೋಪ್ ಗಳ ಅಧ್ಯಯನದಿಂದ ಇದು 4,566 ಶತಕೋಟಿ ವರ್ಷಗಳಷ್ಟು ಹಳೆಯದು ಎಂದು ತಿಳಿದು ಬಂದಿದೆ. ಇದು ಇದುವರೆಗೂ ಕಂಡು ಬಂದಿರುವ ಅತ್ಯಂತ ಹಳೆಯ ಅಗ್ನಿ ಶಿಲೆ ಎನ್ನಲಾಗಿದೆ. ಇದಕ್ಕಿಂತ ಮೊದಲಿನ ಉಲ್ಕಾ ಶಿಲೆಯು NWA11119 ಎನ್ನುವ ಹೆಸರಿನದಾಗಿದ್ದು ಇದು EC002 ಗಿಂತ 12.4 ಲಕ್ಷ ವರ್ಷಗಳಷ್ಟು ಚಿಕ್ಕದು ಎನ್ನಲಾಗಿದೆ. ಭೂಮಿಯು ಈ ಕಲ್ಲುಗಳ ಸೃಷ್ಟಿಯ ಹಲವಾರು ಲಕ್ಷ ವರ್ಷಗಳ ನಂತರ ಸೃಷ್ಟಿಯಾಯಿತು ಎನ್ನುತ್ತಾರೆ ಸಂಶೋಧಕರು. ಈ ಉಲ್ಕಾ ಶಿಲೆಯ 58% ಸಿಲಿಕಾನ್ ಡೈ ಆಕ್ಸೈಡ್ ಅನ್ನು ಹೊಂದಿದೆ. ಇದು ಹಳೆಯ ಇಂಗೋಟ್‌ ನ ಎಂಡೋಡೈಟ್ ಶಿಲಾ ರಚನೆಗಳಿಂದ ಕೂಡಿದೆ ಎನ್ನಲಾಗಿದೆ.

ಇದು ಭೂಮಿಯ ಜ್ವಾಲಾಮುಖಿ ಪ್ರದೇಶಗಳಲ್ಲಿ ಕಂಡು ಬರುವ ಬೆಸಾಲ್ಟ್ ಬಂಡೆಯಿಂದ ಸಾಕಷ್ಟು ಭಿನ್ನವಾಗಿದೆ ಎನ್ನಲಾಗಿದೆ. ನಮ್ಮ ಸೌರವ್ಯೂಹದ ಆರಂಭಿಕ ಕಾಲದಲ್ಲಿ ಇಂತಹ ಶಿಲೆಯು ಇಂತಹ ಕ್ಷು ದ್ರ ಗ್ರಹಗಳು ಮತ್ತು ಪ್ರೊಟೊಪ್ಲಾನೆಟ್‌ಗಳಲ್ಲಿ ಕಂಡುಬಂದಿದೆ. ಆದರೆ ಪ್ರಸ್ತುತ ಇದು ಬಹಳ ವಿರಳವಾಗಿದೆ ಎನ್ನುವುದು ಕೂಡಾ ಸತ್ಯ ಎನ್ನುತ್ತಾರೆ ಸಂಶೋಧಕರು. ಬ್ಯಾರೆಟ್ ಹೇಳುವ ಪ್ರಕಾರ ಇಂತಹ ಶಿಲೆಯು ಉಲ್ಕಾಶಿಲೆ ಕೆರಿಕಾರ್ಡ್ ನಲ್ಲಿ ಬಹಳ ವಿರಳವಾಗಿ ಕಂಡುಬಂದಿರುವುದು ಮಾತ್ರವೇ ಅಲ್ಲ ಇಂದಿನ ಉಲ್ಕಾಶಿಲೆಗಳ ಪಟ್ಟಿಯಲ್ಲಿ ಕೂಡಾ ಬಹಳ ವಿರಳ ಎನ್ನಲಾಗಿದೆ. ಇದರಿಂದ ಸೌರಮಂಡಲದ ಆರಂಭಿಕ ಹಂತದಲ್ಲಿನ ಪ್ರೊಟೋಪ್ಲಾನೆಟ್ ಹಾಗೂ ಅವುಗಳ ತುಣುಕುಗಳು ನಿಶ್ಚಿತವಾಗಿ ವಿರಳವಾಗಿ ಹೋಗಿದೆ ಎನ್ನುವ ವಿಚಾರ ತಿಳಿದು ಬಂದಿದೆ.

ಬಹುಶಃ ಇದೇ ಕಾರಣದಿಂದಲೇ ಪ್ರಾಚೀನ ಕಾಲದ ಈ ಉಲ್ಕಾ ಶಿಲೆಗಳನ್ನು ಒಂದು ಅಪವಾದ ಎನ್ನುವ ರೀತಿಯಲ್ಲಿ ನೋಡಲಾಗುತ್ತದೆ ಎಂದಿದ್ದಾರೆ ಸಂಶೋಧಕರು. ಈಗ ಲಭ್ಯವಿರುವ ಈ ಇಸಿ 002 ಅದರ ಮೂಲ ಪ್ರೊಟೊಪ್ಲಾನೇಟ್ ಪದರವು ತಣ್ಣಗಾದ ಮತ್ತು ಸ್ಫಟಿಕೀಕರಣಗೊಂಡ ದಶಕಗಳ ನಂತರ ಹೊರಬಂದಿದೆ ಎಂದು ನಂಬಲಾಗಿದ್ದು, ನಮ್ಮ ಭೂಮಿಯು ಅಸ್ತಿತ್ವದಲ್ಲಿರದ ಸಮಯದಲ್ಲಿನ ಗ್ರಹಗಳ ಮೂಲದ ಬಗ್ಗೆ ಹಾಗೂ ಅವುಗಳ ವಿಕಾಸದ ಬಗ್ಗೆ ಒಂದು ಅದ್ಭುತವಾದ ಮಾಹಿತಿಯನ್ನು ಇದು ನೀಡುತ್ತದೆ ಎನ್ನುವುದು ಕೂಡಾ ವಾಸ್ತವ‌ದ ಸಂಗತಿಯಾಗಿದೆ.