VIDEO: ಅಕ್ರಮ ಮದ್ಯ ಸಾಗಾಣಿಕೆ ಮಾಡಲು ಮಿನಿ ಟ್ರಕ್ಕಿನಲ್ಲಿ ಮಾಡಿದ ಈ ‘ಅದ್ಭುತ ವ್ಯವಸ್ಥೆ’ ನೋಡಿ ಆನಂದ ಮಹಿಂದ್ರ ಕೂಡಾ ಶಾಕ್!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ತುಂಬಾ ಭರದಲ್ಲಿ ಸಂಚಲನ ಮೂಡಿಸುತ್ತಿದೆ. ಈ ವಿಡಿಯೋವನ್ನು ನೋಡಿದ ಪ್ರಸಿದ್ಧ ಉದ್ಯಮಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿರುವ ಹಾಗೂ ವಿಶೇಷವಾದ ವಿಡಿಯೋ, ಫೋಟೋಗಳನ್ನು ಶೇರ್ ಮಾಡುವ ಆನಂದ್ ಮಹಿಂದ್ರ ಅವರು ಸಹ ಬೆರಗಾಗಿದ್ದಾರೆ. ಅವರ ಜೊತೆಗೆ ವಿಡಿಯೋ ನೋಡಿದ ಎಲ್ಲರಿಗೂ ಶಾಕ್ ಆಗುತ್ತದೆ.
ಕಾರಣ ವಿಡಿಯೋದಲ್ಲಿನ ದೃಶ್ಯವೇ ಹಾಗಿದೆ. ಈ ಮಿನಿ ಟ್ರಕ್ ನಲ್ಲಿ ಅಕ್ರಮ ಮಧ್ಯ ಸಾಗಾಣಿಕೆಗಾಗಿ ಟ್ರಕ್ಕಿನ ಮಾಲೀಕ ತನ್ನ ಟ್ರಕ್ ನಲ್ಲಿ ವಿಶೇಷ ವ್ಯವಸ್ಥೆಯೊಂದನ್ನು ಮಾಡಿಕೊಂಡಿದ್ದಾನೆ. ಇದರಲ್ಲಿ ಬರೀ ಸಾರಾಯಿ ಅಷ್ಟೇ ಅಲ್ಲ, ಯಾವುದೇ ರೀತಿಯ ಅಕ್ರಮ ವಸ್ತುಗಳನ್ನು ಸಾಕಾಣಿಕೆ ಮಾಡವ ಸಲುವಾಗಿ ಆರೋಪಿಯು ತನ್ನ ಬುದ್ಧಿಯನ್ನು ತುಂಬಾನೇ ಖರ್ಚು ಮಾಡಿದ್ದಾನೆ. ಆದರೆ ತಪ್ಪು ಯಾವತ್ತೂ ತಪ್ಪೆ. ಆರೋಪಿಯು ಎಷ್ಟೇ ಕಿಲಾಡಿ ಯಾಗಿದ್ದರೂ ಆತ ಒಮ್ಮೆಯಾದರೂ ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳಲೇಬೇಕು. ಇದೇ ಕಥೆ ಆರೋಪಿಯ ಜೊತೆಗೆ ನಡೆದಿದೆ. ಈ ಒಂದೂವರೆ ಮಿನಿಟಿನ ವಿಡಿಯೋ ನೋಡಿದ ಎಲ್ಲರಿಗೂ ಶಾಕ್ ಆಗುತ್ತದೆ.
ವೀಡಿಯೊ ನೋಡಿ
Diabolically clever. Gives a whole new meaning to the word ‘Payload!’ But I assure you this kind of innovation was not part of the design brief for the pickup truck Product Development team at our research centre, nor will it EVER be! 😊 pic.twitter.com/JMqZN0VDAx
— anand mahindra (@anandmahindra) March 19, 2021
ಈ ವಿಡಿಯೋವನ್ನು ಆನಂದ್ ಮಹೀಂದ್ರಾ ಅವರು ಶುಕ್ರವಾರದಂದು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ವಿಡಿಯೋ ಶೇರ್ ಮಾಡುವುದರ ಜೊತೆಗೆ ‘ಡಯಾಬೋಲಿಕ್ (ಪೈಶಾಚಿಕ) ಬುದ್ಧಿವಂತ’ ಎಂದು ಉಪಮೆಯನ್ನು ಕೊಟ್ಟಿದ್ದಾರೆ. ನಮ್ಮ ಈ ಪಿಕಪ್ ನಲ್ಲಿ ಇಂಥ ಯಾವುದೇ ಪಾರ್ಟ್ಸ್ ಇರಲಿಲ್ಲ. ನಮ್ಮ ವಸ್ತುವಿನಲ್ಲಿ ಈ ರೀತಿಯ ಯಾವುದೇ ಡಿಸೈನ್ ಇರಲಿಲ್ಲ. ಮತ್ತು ಭವಿಷ್ಯದಲ್ಲಿ ಈ ರೀತಿಯಾಗಿ ನಾವು ತಯಾರಿಸುವುದಿಲ್ಲ. ಈ ರೀತಿಯ ವಿಚಾರವನ್ನು ಆನಂದ ಮಹಿಂದ್ರಾ ಅವರು ವ್ಯಕ್ತಪಡಿಸಿದ್ದಾರೆ.
ವೈರಲ್ ಆಗುತ್ತಿರುವ ಈ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ. ತಪ್ಪು ಮಾರ್ಗಕ್ಕಾಗಿ ಅಥವಾ ತಪ್ಪು ಕೆಲಸಕ್ಕಾಗಿ ಮನುಷ್ಯನ ಬುದ್ಧಿ ಎಷ್ಟೊಂದು ಓಡುತ್ತದೆ ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.