ಆಲ್ ಟೈಮ್ ವರ್ಲ್ಡ್ ಕಪ್ T20 ತಂಡ ಜಾರಿ ಮಾಡಿದ ವಿಸ್ಡೆನ್; ಧೋನಿ ನಾಯಕರಾದರೆ… ಪೂರ್ತಿ ತಂಡ ಹೀಗಿದೆ ನೋಡಿ
ಮುಂಬರುವ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಭಾರತದಲ್ಲಿ ವರ್ಲ್ಡ್ t-20 ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಗೆ ಇನ್ನೂ ಸ್ವಲ್ಪ ಸಮಯ ಬಾಕಿ ಇದೆ. ಇದರ ಪಾರ್ಶ್ವ ಭೂಮಿಯಲ್ಲಿಯೇ ಕ್ರಿಕೆಟಿನ ಬೈಬಲ್ ಎಂದೇ ಗುರುತಿಸಿಕೊಂಡಿರುವ ವಿಸ್ಡೆನ್ ಆಲ್ ಟೈಮ್ t-20 ವರ್ಲ್ಡ್ ಕಪ್ ತಂಡವನ್ನು ಘೋಷಿಸಿದೆ. ಈ ತಂಡದ ನಾಯಕ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ತಂಡದ ಇನ್ನಿತರ ಸದಸ್ಯರು ಈ ಕೆಳಗಿನಂತೆ ಇದ್ದಾರೆ. ಓಪನಿಂಗ್ ಜವಾಬ್ದಾರಿಯನ್ನು ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ ಕ್ರಿಸ್ ಗೇಲ್ ಹಾಗೂ ಶ್ರೀಲಂಕಾದ ಬ್ಯಾಟ್ಸ್ಮನ್ ಮಹೇಲಾ ಜಯವರ್ಧನೆ ಇವರಿಗೆ ನೀಡಲಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡದ ಸದ್ಯದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡಿನ ಮಾಜಿ ಆಟಗಾರ ಕೆವಿನ್ ಪೀಟರ್ಸನ್, ವೆಸ್ಟ್ ಇಂಡೀಸ್ ಗೆ ಎರಡು ಬಾರಿ ವರ್ಲ್ಡ್ ಕಪ್ ಗೆಲ್ಲಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿರುವ ಮರ್ಲಾನ್ ಸ್ಯಾಮುಯಲ್ಸ್ , ಮಿಸ್ಟರ್ ಕ್ರಿಕೆಟ್ ಎಂದು ಹೆಸರು ಪಡೆದಿರುವ ಆಸ್ಟ್ರೇಲಿಯಾದ ಆಟಗಾರ ಮೈಕ್ ಹಸ್ಸಿ ಅವರನ್ನು ಸಮಾವೇಶ ಗೊಳಿಸಲಾಗಿದೆ. ಇನ್ನು ವಿಕೆಟ್ ಕೀಪರ್ ಮತ್ತು ನಾಯಕನ ಸ್ಥಾನಕ್ಕೆ ಧೋನಿ ಅವರನ್ನು ಆರಿಸಲಾಗಿದೆ.

ಬೌಲಿಂಗ್ ವಿಭಾಗದಲ್ಲಿ ಏಷ್ಯಾ ಖಂಡದ ವರ್ಚಸ್ಸು ಎದ್ದು ಕಾಣುತ್ತಿದೆ. ಪಾಕಿಸ್ತಾನದ ಮಾಜಿ ಆಟಗಾರರಾದ ಶಾಹಿದ್ ಆಫ್ರಿದಿ ಮತ್ತು ಸಯೀದ್ ಅಜ್ಮಲ್ ಅವರ ಮೇಲೆ ಸ್ಪಿನ್ ಜವಾಬ್ದಾರಿಯನ್ನು ಹೇರಲಾಗಿದೆ. ಫಾಸ್ಟ್ ಬಾಲರ್ ಗಾಗಿ ಶ್ರೀಲಂಕಾದ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗ ಮತ್ತು ಪಾಕಿಸ್ತಾನದ ಉಮರ್ ಗುಲ್ ಇವರನ್ನು ಆಯ್ಕೆ ಮಾಡಲಾಗಿದೆ.
ವಿಸ್ಡನ್ ಆಲ್ ಟೈಮ್ t-20 ವರ್ಲ್ಡ್ ಕಪ್ ಎಲೆವನ್ ತಂಡ ಈ ರೀತಿಯಾಗಿದೆ.
ಕ್ರಿಸ್ ಗೇಲ್, ಮಹೇಲಾ ಜಯವರ್ಧನೆ, ವಿರಾಟ್ ಕೊಹ್ಲಿ, ಕೆವಿನ್ ಪೀಟರ್ಸನ್, ಮರ್ಲಾನ್ ಸ್ಯಾಮುಯಲ್ಸ್, ಮೈಕ್ ಹಸ್ಸಿ, ಎಂಎಸ್ ಧೋನಿ, (ನಾಯಕ ಮತ್ತು ವಿಕೆಟ್ ಕೀಪರ್) ಶಾಹಿದ್ ಆಫ್ರಿದಿ, ಸಯೀದ್ ಅಜ್ಮಲ್, ಉಮರ್ ಗುಲ್ ಮತ್ತು ಲಸಿತ್ ಮಲಿಂಗ.