ಭಾರತದ ಎಲ್ಲಕ್ಕೂ ‘ಫಾಸ್ಟ್’ ಎಲೆಕ್ಟ್ರಿಕ್ ಬೈಕ್ ಲಾಂಚ್, ಕೇವಲ 50 ನಿಮಿಷದಲ್ಲಿ ಆಗುವುದು ಚಾರ್ಜ್; ಬೆಲೆ ಮತ್ತು ಫೀಚರ್ಸ್ ಹೀಗಿದೆ ನೋಡಿ

ಭಾರತದ ಕಬೀರಾ ಮೊಬಿಲಿಟಿ ಈ ಕಂಪನಿಯು ಎರಡು ಹೊಸದಾದ ಹೈಸ್ಪೀಡ್ ಬೈಕುಗಳನ್ನು ಲಾಂಚ್ ಮಾಡಿದೆ. ನಮ್ಮ ದೇಶದಲ್ಲಿಯೇ ಇಲ್ಲಿಯವರೆಗೆ ಎಲ್ಲಕ್ಕೂ ಸ್ಪೀಡ್ ಓಡುವ ಬೈಕ್ ಗಳಾಗಿವೆ ಎಂದು ಹೇಳಲಾಗುತ್ತಿದೆ.

KM 3000 ಮತ್ತು KM 4000 ಎಂದು ಈ ಬೈಕ್ ಗಳ ಎರಡು ಹೆಸರುಗಳಾಗಿವೆ. ಬಲಿಷ್ಠ ಮತ್ತು ಆಕರ್ಷಕ ಲುಕ್ ನಲ್ಲಿ ಕಾಣುವ ಈ ಬೈಕುಗಳ ಬೆಲೆ ಸರ್ವಸಾಮಾನ್ಯರ ಜೇಬಿಗೆ ಅನುಕೂಲವಾಗುವಂತಹದ್ದಾಗಿವೆ. KM 3000 ಬೈಕಿನ ಬೆಲೆ 1 ಲಕ್ಷ 27 ಸಾವಿರ ಮತ್ತು KM 4000 ಬೈಕಿನ ಬೆಲೆ 1 ಲಕ್ಷ 37 ಸಾವಿರ ರೂಪಾಯಿ.

KM 3000 ಈ ಬೈಕಿನ ವಿಶೇಷತೆಯ ಬಗ್ಗೆ ಹೇಳಬೇಕಾದರೆ ಇದರಲ್ಲಿ 4kWh ಬ್ಯಾಟರಿಯನ್ನು ಉಪಯೋಗಿಸಲಾಗಿದೆ. ಈ ಬೈಕ್ ಎಕಾನಮಿ ಮೋಡ್ ನಲ್ಲಿ 120 ಮತ್ತು ಸ್ಪೋರ್ಟ್ಸ್ ಮೋಡ್ ನಲ್ಲಿ 60 ಕಿಲೋಮೀಟರ್ ನ ರೇಂಜ್ ಆಫರ್ ನೀಡುತ್ತದೆ.

ಇನ್ನು KM 4000 ಬೈಕ್ ಬಗ್ಗೆ ಹೇಳುವುದಾದರೆ, ಇದರಲ್ಲಿ 4.4kWh ಬ್ಯಾಟರಿ ನೀಡಲಾಗಿದೆ. ಈ ವಾಹನ ಎಕಾನಮಿ ಮೋಡ್ ನಲ್ಲಿ 150 ಕಿಲೋಮೀಟರ್ ಮತ್ತು ಸ್ಪೋರ್ಟ್ಸ್ ಮೋಡ್ ನಲ್ಲಿ 90 ಕಿಲೋಮೀಟರ್ ಅಂತರ ಚಲಿಸಲಿದೆ.

ಈ ವಾಹನಗಳ ಬ್ಯಾಟರಿ ವಿಶೇಷತೆಯ ಬಗ್ಗೆ ಹೇಳುವುದಾದರೆ, ಬ್ಯಾಟರಿ 2 ಗಂಟೆ 50 ನಿಮಿಷದಲ್ಲಿ 80% ಚಾರ್ಜ್ ಆಗುತ್ತದೆ. ಅದೇ ಒಂದು ವೇಳೆ ಬೂಸ್ಟ್ ಚಾರ್ಜ್ ಪರ್ಯಾಯವನ್ನು ಉಪಯೋಗಿಸಿಕೊಂಡರೆ ಬರೀ 50 ನಿಮಿಷದಲ್ಲಿ ಫುಲ್ ಚಾರ್ಜ್ ಆಗುತ್ತದೆ. ಒಂದು ವೇಳೆ ನೀವು ಇಕೋ ಮೋಡ್ ನಲ್ಲಿ ಚಾರ್ಜ್ ಮಾಡಿದರೆ 6 ಗಂಟೆ 30 ನಿಮಿಷಗಳ ಸಮಯ ಬೇಕಾಗುತ್ತದೆ.