ಬೈಕ್ ಗೆ ಪೆಟ್ರೋಲ್ ಇಂಜಿನ್ ಬದಲು ಬ್ಯಾಟರಿ ಕೂಡಿಸಲು ಪ್ರಾಧಾನ್ಯ, ಖರ್ಚು ಎಷ್ಟಾಗುವುದು?

ಭಾರತೀಯರು ಯಾವುದೇ ವಸ್ತುವಿಗೆ ಪರ್ಯಾಯವನ್ನು ಹುಡುಕಿಯೇ ಹುಡುಕುತ್ತಾರೆ. ನಾವು ಭಾರತೀಯರು ಅವಶ್ಯಕತೆಗೆ ಅನುಸಾರವಾಗಿ ಬೇರೆ ಬೇರೆ ಐಡಿಯಾಗಳನ್ನು ಹುಟ್ಟು ಹಾಕುತ್ತಲೇ ಇರುತ್ತೇವೆ. ಇನ್ನೊಂದು ಮಹತ್ವದ ವಿಷಯವೇನೆಂದರೆ ಇಂಧನದ ಹೆಚ್ಚುತ್ತಿರುವ ಬೆಲೆಯಿಂದಾಗಿ ಜನರು ಚಿಂತೆಯಲ್ಲಿದ್ದಾರೆ. ಡೀಸೆಲ್ ಮತ್ತು ಪೆಟ್ರೋಲ್ ಗಳ ಬೆಲೆ ಸತತವಾಗಿ ಏರುತ್ತಲೇ ಇದೆ. ಈ ರೀತಿಯ ಖರ್ಚಿನಿಂದ ಉಳಿಯಲು ಒಂದು ಬೇರೆಯೆ ಐಡಿಯಾ ಶೋಧಿಸಿದ್ದಾರೆ. ಪೆಟ್ರೋಲಿನ ಸಮಸ್ಯೆಯಿಂದ ಮುಕ್ತವಾಗಲು ಬೈಕ್ ನಲ್ಲಿ ಪೆಟ್ರೋಲ್ ಇಂಜಿನ್ ಬದಲಾಗಿ ಎಲೆಕ್ಟ್ರಿಕ್ ಇಂಜಿನ್ ಕೂಡಿಸಲಾಗುತ್ತಿದೆ. ಹೀಗಾಗಿ ಬೈಕ್ ಪೆಟ್ರೋಲ್ ಬದಲಾಗಿ ಬ್ಯಾಟರಿಯ ಎನರ್ಜಿಯಿಂದ ಚಲಿಸುತ್ತಿದೆ.

ಈಗ ಸಾಕಷ್ಟು ಜನರು ತಮ್ಮ ಬೈಕ್ನಲ್ಲಿಯ ಪೆಟ್ರೋಲ್ ಇಂಜಿನ್ ತೆಗೆದು ಅದರ ಸ್ಥಾನದಲ್ಲಿ ಎಲೆಕ್ಟ್ರಿಕ್ ಬ್ಯಾಟರಿ ಇನ್ಸ್ಟಾಲ್ ಮಾಡುತ್ತಿದ್ದಾರೆ. ಅಂದರೆ ಈಗ ವಾಹನದಲ್ಲಿ ಪೆಟ್ರೋಲ್ ಹಾಕುವ ಬದಲಾಗಿ ಬ್ಯಾಟರಿ ಚಾರ್ಜ್ ಮಾಡಬೇಕಾಗಿದೆ. ಇದರರ್ಥ ನಿಮ್ಮ ವಾಹನ ಎಲೆಕ್ಟ್ರಿಕ್ ಮೇಲೆ ನಡೆಯುವುದು. ಇದಕ್ಕಾಗಿ ಪೆಟ್ರೋಲ್ ಗಿಂತಲೂ ಕಡಿಮೆ ಹಣ ಖರ್ಚು ಮಾಡಬೇಕಾಗುತ್ತದೆ.

ಬೈಕ್ ನಲ್ಲಿ ಪೆಟ್ರೋಲ್ ಇಂಜಿನ್ ಕನ್ವರ್ಟ್ ಮಾಡಲು ಹೇಗೆ ಬರುತ್ತದೆ? ಇದರ ಬೆಲೆ ಏನು? ಈ ರೀತಿ ಮಾಡುವುದು ಸರಿಯೇ? ಹೀಗೆ ಅನೇಕ ಪ್ರಶ್ನೆಗಳು ಓದುಗರ ಮನಸ್ಸಿನಲ್ಲಿ ಉದ್ಭವ ವಾಗಿರಬಹುದು. ಈ ಲೇಖನದಲ್ಲಿ ಇದರ ಬಗ್ಗೆಯೇ ಮಾಹಿತಿ ನೀಡಲಾಗಿದೆ, ಮತ್ತು ಮೇಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.

ಪೆಟ್ರೋಲ್ ಎಂಜಿನ್ ಗೆ ಎಲೆಕ್ಟ್ರಿಕ್ ಎಂಜಿನ್ ಕೊಡಿಸಲು ತಗಲುವ ಖರ್ಚು

ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಈ ರೀತಿಯ ಆಡ್ ಗಳನ್ನು ಕೊಡುತ್ತಿದ್ದಾರೆ. ಪೆಟ್ರೋಲ್ ಎಂಜಿನ್ ತೆಗೆದು ಎಲೆಕ್ಟ್ರಿಕ್ ಎಂಜಿನ್ ಕೊಡಿಸಲು ಬರೀ 10 ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಕೆಲವೊಬ್ಬರ ಪ್ರಕಾರ ನೀವು ಕೂಡಿಸುವ ಬ್ಯಾಟರಿ ಯಾವುದು ಅದರ ಮೇಲೆ ಖರ್ಚು ಸಹಿತ ಬದಲಾಗುತ್ತದೆ. ಆದರೆ ವೇಗದ ಬಗ್ಗೆ ಹೇಳುವುದಾದರೆ ಮೆಕ್ಯಾನಿಕ್ ಒಬ್ಬನ ಪ್ರಕಾರ, ಎಂಜಿನ್ ಕನ್ವರ್ಟ್ ಮಾಡಿದ ಬೈಕ್ ಬರೀ 60 ರಿಂದ 70 ರ ವೇಗದಲ್ಲಿ ಚಲಿಸುತ್ತದೆ ಎಂದು ಹೇಳುತ್ತಾನೆ.

ಎಂಜಿನ್ ಹೇಗೆ ಕನ್ವರ್ಟ್ ಮಾಡಲಾಗುತ್ತದೆ?

ಪೆಟ್ರೋಲ್ ಎಂಜಿನ್ ನ್ನು ಎಲೆಕ್ಟ್ರಿಕ್ ಇಂಜಿನ್ ನಲ್ಲಿ ರೂಪಾಂತರ ಮಾಡುವಾಗ ಗೇರ್ ಬಾಕ್ಸ್ ತೆಗೆದುಹಾಕಲಾಗುತ್ತದೆ. ಆನಂತರ ಬೈಕ್ ಬರೀ ಎಕ್ಸಲೇಟರ್ ಮುಖಾಂತರ ನಿಯಂತ್ರಿಸಲಾಗುತ್ತದೆ. ಸ್ಪಷ್ಟವಾಗಿ ಹೇಳುವುದಾದರೆ ಸ್ಕೂಟರ್ ಹೇಗೆ ಚಲಿಸುತ್ತದೆಯೋ ಹಾಗೆ. ಆದರೆ ಇದೇ ರೀತಿಯಲ್ಲಿ ಸ್ಕೂಟರ್ ಎಂಜಿನ್ ಬದಲಿಸಲು ಸಾಧ್ಯವಿಲ್ಲ. ಕಾರಣ ಅದಕ್ಕೆ ತುಂಬಾ ಹಣ ಖರ್ಚಾಗುತ್ತದೆ.

ಲಾಭ ಎಷ್ಟಾಗುವುದು?

ನೀವು ಬ್ಯಾಟರಿ 2 ಗಂಟೆ ಚಾರ್ಜ್ ಮಾಡಿದರೆ 40 ಕಿಲೋಮೀಟರ್ ಮೈಲೇಜ್ ನೀಡುವುದು. ಒಂದು ವೇಳೆ ಬ್ಯಾಟರಿ ನೀವು ಪೂರ್ಣವಾಗಿ ಚಾರ್ಜ್ ಮಾಡಿದರೆ 300 ಕಿಲೋಮೀಟರ್ ವರೆಗೆ ಮೈಲೇಜ್ ನೀಡುವುದು. ಆದರೆ ಇದೆಲ್ಲ ನೀವು ಯಾವ ಬ್ಯಾಟರಿ ಇನ್ಸ್ಟಾಲ್ ಮಾಡುತ್ತೀರಿ ಅದರ ಮೇಲೆ ಅವಲಂಬಿತವಾಗಿದೆ.

ಇದು ಕಾನೂನುಬಾಹಿರವಾದ ಕ್ರಮ:-

ನೀವು ಈ ರೀತಿಯಾಗಿ ನಿಮ್ಮ ಬೈಕ್ ನಲ್ಲಿಯ ಎಂಜಿನ್ ಬದಲಾಯಿಸಿದರೆ ಅದು ಕಾನೂನಿನ ಪ್ರಕಾರ ತಪ್ಪು. ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 52 ಪ್ರಕಾರ ವಾಹನದಲ್ಲಿ ಯಾವುದೇ ರೀತಿಯ ಬದಲಾವಣೆ ಮತ್ತು ಎಂಜಿನ್ ಬದಲಿಕೆ ಇದು ಕಾನೂನುಬದ್ಧ ಅಪರಾಧವಾಗಿದೆ. ಈ ನಿಯಮದ ಅಡಿಯಲ್ಲಿ ಯಾವುದೇ ವ್ಯಕ್ತಿ ಕಂಪನಿ ತಯಾರಿಸಿದ ಕಾರು ಮತ್ತು ಬೈಕ್ ನಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅದು ಕಾನೂನು ಪ್ರಕಾರ ಅಪರಾಧವೆಂದು ಸಾಬೀತಾಗುತ್ತದೆ. ಹಾಗಾಗಿ ನಿಮಗೆ ಇದಕ್ಕಾಗಿ ದಂಡವನ್ನು ತೆತ್ತಬೇಕಾಗುವುದು. ಜೊತೆಗೆ ಎಂಜಿನ್ ಬದಲಾಯಿಸುವುದರಿಂದ ನಿಮ್ಮ ವಿಮೆ ಸಹಿತ ಕೊನೆಯಾಗುವುದು.