ಇಂದಿನಿಂದ ಬ್ಯಾಂಕ್ ನಲ್ಲಿಯ ಹಣ ತಗೆದುಕೊಳ್ಳುವ ನಿಯಮದಲ್ಲಿ ಬದಲಾವಣೆ, ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.

ಇಂದಿನಿಂದ ಅಂದರೆ 4 ಮೇ ದಿಂದ ಬ್ಯಾಂಕ್ ನಲ್ಲಿಯ ಹಣ ತಗೆಯುವ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಅಂದರೆ ಹಣ ತಗೆಯುವ ಸಲುವಾಗಿ ಹೊಸ ನಿಯಮಗಳನ್ನು ಜಾರಿಯಲ್ಲಿ ತರಲಾಗಿದೆ. ಅವು ಏನೆಂದು ತಿಳಿದುಕೊಳ್ಳಿ. ಹೊಸ ನಿಯಮದ ಪ್ರಕಾರ ನಿಮ್ಮ ಬ್ಯಾಂಕ್ ಖಾತೆಯ ಕೊನೆಯ ಅಂಕಿಯ ಅನುಸಾರ ನೀವು ಬ್ಯಾಂಕ್ ನಿಂದ ಹಣ ತಗೆಯ ಬಹುದು. ಇಂಡಿಯನ್ ಬ್ಯಾಂಕ್ ಅಶೋಷಿಯೇಷನ್ ಲಾಕ್ಡೌನ್ ಸಮಯದಲ್ಲಿ ಬ್ಯಾಂಕ್ ನಿಂದ ಹಣ ತಗೆಯುವ ನಿಯಮದಲ್ಲಿ ಬದಲಾವಣೆ ಮಾಡಿದೆ. ಈ ಅಶೋಷಿಯಶನ್ ಬ್ಯಾಂಕ್ ನಲ್ಲಿ ಹೆಚ್ಚು ಜನದಟ್ಟಣೆ ಆಗಬಾರದು ಎಂಬ ಉದ್ದೇಶದಿಂದ ಹೊಸ ನಿಯಮಗಳನ್ನು ಜಾರಿಯಲ್ಲಿ ತಂದಿದೆ.
ಜನಸಂದಣಿ ಆಗಬಾರದು ಹಾಗೆಯೇ ಸೋಶಿಯಲ್ ದಿಸ್ಟೆನ್ಸಿಂಗ್ ನಿಯಮ ಪಾಲನೆ ಮಾಡುತ್ತಾ ಬ್ಯಾಂಕ್ ನಿಂದ ಹಣ ತಗೆಯುವ ಸಲುವಾಗಿ ಕೆಲವು ದಿನಾಂಕಗಳನ್ನು ನಿಶ್ಚಯ ಮಾಡಿದ್ದಾರೆ. ಈ ವ್ಯವಸ್ಥೆ ಬ್ಯಾಂಕ್ ಖಾತೆಯ ಕೊನೆಯ ಸಂಖ್ಯೆಯ ಮೇಲೆ ನಿಶ್ಚಿತ ಮಾಡಲಾಗಿದೆ. ಈ ನಿಯಮಗಳು ಮೇ 11 ರ ವರಗೆ ಮಾತ್ರ ಕಾರ್ಯಾಚರಣೆಯಲ್ಲಿರುವವು. ಇದಕ್ಕೆ  Odd Even ಬ್ಯಾಂಕಿಂಗ್ ಸೀಸ್ಟಂ ಎಂದು ಕರೆಯುತ್ತಾರೆ.


ಯಾರ ಬ್ಯಾಂಕ್  ಖಾತೆಯ ಕೊನೆಯ ಸಂಖ್ಯೆ 0 ದಿಂದ 1 ಇರುತ್ತದೆಯೋ ಅವರು 4 ಮೇ ದಿನದಂದು ಹಣ ತಗೆಯಬಹುದು. ಅದೇ ಪ್ರಕಾರ ಖಾತೆಯ ಕೊನೆಯ ಸಂಖ್ಯೆ 2 ಮತ್ತು 3 ಇರುತ್ತದೆ ಅವರು 5 ಮೇ ದಿನದಂದು ಹಣ ತಗೆಯಬಹುದು, ಖಾತೆಯ ಕೊನೆಯ ಸಂಖ್ಯೆ 4 ಮತ್ತು 5 ಹೊಂದಿದ ಗ್ರಾಹಕರು 6 ಮೇ ದಿನದಂದು, ಖಾತೆಯ ಕೊನೆಯ ಸಂಖ್ಯೆ 6 ಮತ್ತು 7 ಹೊಂದಿದ ಗ್ರಾಹಕರು 8 ಮೇ ದಿನದಂದು, ಕೊನೆಯ ಸಂಖ್ಯೆ 8 ಮತ್ತು 9 ಹೊಂದಿದ ಗ್ರಾಹಕರು 11 ಮೇ ದಿನದಂದು ಹಣ ತಗೆಯಬಹುದು.