ಈ ಸಂಕಟದಿಂದ ಪಾರಾಗುವುದು ಹೇಗೆ? ಫೋಟೋ Zoom ಮಾಡಿ ನೋಡಿ ಉತ್ತರ ಸಿಗುವುದು!
ಮಿತ್ರರೇ ನಿಮಗಾಗಿ ಇನ್ನೊಂದು ಚಾಲೆಂಜನ್ನು ತಂದಿದ್ದೇವೆ, ಮೊದಲಿನ ಹಾಗೆ ತಯಾರಾಗಿ ಈ ಚಿತ್ರದ ಮರ್ಮವನ್ನು ಬಿಡಿಸಲು. ಒಂದು ವ್ಯಕ್ತಿಯ ಜೀವನ ಕಾಣಲು ಎಷ್ಟೊಂದು ಸುಂದರವಾಗಿದೆಯೋ ಅದು ಸಮೀಪದಿಂದ ನೋಡಿದಾಗ ಅಷ್ಟೇ ಕಠಿಣತೆಯಿಂದಲೂ ಕೂಡಿರುತ್ತದೆ. ಮನುಷ್ಯ ಯಾವಾಗ ದೊಡ್ಡ ಸಮಸ್ಯೆಯಿಂದ ಲೀಲಾಜಾಲವಾಗಿ ಪಾರಾಗಿ ಬರುತ್ತಾನೆ ಆಗ ಆತನಿಗೆ ಆಗುವ ಆನಂದ ಅಷ್ಟಿಷ್ಟಲ್ಲ. ಯಾವ ವ್ಯಕ್ತಿ ನಗುನಗುತ್ತ ಬಂದ ಸಮಸ್ಯೆಯನ್ನು ತನ್ನ ಕೌಶಲ್ಯದಿಂದ ದೂರ ಮಾಡುತ್ತಾನೆ ಆತನೇ ನಿಜವಾದ ಬುದ್ಧಿವಂತ ಎಂದು ಪರಿಗಣಿಸಲಾಗುತ್ತದೆ. ಹೆಚ್ಚುಕಡಿಮೆ ವ್ಯಕ್ತಿ ಸಮಸ್ಯೆಯಲ್ಲಿದಾಗ ಆತನ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅಂಥ ಸಂದರ್ಭದಲ್ಲಿ ಸಂಯಮದಿಂದ ಮಾರ್ಗ ಹುಡುಕಿ ಜಯಗಳಿಸುವ ವ್ಯಕ್ತಿಯೇ ನಿಜವಾದ ಬುದ್ಧಿವಂತ ಎನ್ನಬಹುದು.

ಈ ಚಿತ್ರದಲ್ಲಿ ವ್ಯಕ್ತಿಯು ಇಂಥದ್ದೇ ಒಂದು ರೀತಿಯ ಸಮಸ್ಯೆಯಲ್ಲಿ ಸಿಲುಕಿದ್ದಾನೆ. ಇಲ್ಲಿ ವ್ಯಕ್ತಿ ನದಿಯ ದಡದಲ್ಲಿ ಕುಳಿತಿರುವಾಗ ಆತನ ಸಮೀಪ ಒಂದು ಸಿಂಹ ಬರುತ್ತದೆ. ಅದನ್ನು ನೋಡಿ ವ್ಯಕ್ತಿಯು ಒಮ್ಮೆಲೆ ಹೆದರಿ ತನ್ನ ಜೀವ ಉಳಿಸಿಕೊಳ್ಳುವ ಸಲುವಾಗಿ ನದಿಯಲ್ಲಿ ಜಿಗಿಯ ಬೇಕೆನ್ನುವಷ್ಟರಲ್ಲಿ ನದಿಯಲ್ಲಿ ಮೊದಲೇ ಎರಡು ಮೊಸಳೆಗಳು ಇದ್ದದ್ದು ಕಾಣಿಸುತ್ತದೆ. ಇನ್ನು ಏನು ಮಾಡಬೇಕು ಹಾಗೂ ತನ್ನ ಜೀವ ಹೇಗೆ ಉಳಿಸಿಕೊಳ್ಳಬೇಕು ಎಂದು ತಕ್ಷಣ ಬದಿಯಲ್ಲಿರುವ ಮರದಲ್ಲಿ ಏರುತ್ತಾನೆ. ಮರದ ಮುಂದಿನ ರೆಂಬೆಯ ಮೇಲೆ ವಿಷಾರಿ ಕರಿನಾಗ ಕುಳಿತಿರುತ್ತದೆ. ವ್ಯಕ್ತಿ ಮಾತ್ರ ತುಂಬಾ ದುರದೃಷ್ಟವಶಾತ್ ಎಲ್ಲ ಕಡೆಯಿಂದಲೂ ಸಮಸ್ಯೆಯಲ್ಲಿ ಸಿಕ್ಕಿ ಬೀಳುತ್ತಾನೆ. ಆತನ ಗನ್ ಮಾತ್ರ ಮರದ ಕೆಳಗಡೆ ಇರುತ್ತದೆ. ಅದು ಒಂದು ವೇಳೆ ಕೈಯಲ್ಲಿ ಇದ್ದರೆ ಹಾವನ್ನು ಅದರಿಂದ ಹೊಡೆಯಬಹುದಾಗಿತ್ತು. ಆದರೆ ಆತನಿಗೆ ಕೆಳಗಿನಿಂದ ಗನ್ ನೀಡಲು ಯಾರು ಬರುವವರಿಲ್ಲ.
ಅಂದಾಗ ಸಮಸ್ಯೆಯಲ್ಲಿ ಸಿಲುಕಿದ ಈ ವ್ಯಕ್ತಿಗೆ ಆ ಕಷ್ಟದಿಂದ ಪಾರಾಗಲು ನೀವು ಯಾವ ಐಡಿಯಾ ಅಥವಾ ಸಲಹೆಯನ್ನು ಆತನಿಗೆ ನೀಡುವಿರಿ? ಹೇಳಿ ನೋಡುವಾ.

ಹಾಗಾದರೆ ಈ ಚಾಲೆಂಜ್ ಸ್ವೀಕರಿಸಿ ನಮ್ಮ ಪ್ರಶ್ನೆಗೆ ನೀವು ಸರಿಯಾದ ಉತ್ತರ ಹೇಳಿ ನೋಡುವಾ. ನಿಮಗಾಗಿ ಇಲ್ಲಿ ಎರಡು ಉತ್ತರವನ್ನು ಸಹಿತ ನಾವು ನೀಡಿದ್ದೇವೆ. ತಾಳೆ ಹಾಕಿ ನೋಡಿ ನಿಮ್ಮ ಉತ್ತರ ಇದರ ಜೊತೆಗೆ ಹೊಂದಾಣಿಕೆ ಆಗುತ್ತದೆಯೋ ಅಥವಾ ಇಲ್ಲ.
ಉತ್ತರ-1: ವ್ಯಕ್ತಿಯು ಸ್ವಲ್ಪ ಧೈರ್ಯದಿಂದ ಹಾವನ್ನು ಹಿಡಿದು ಸಿಂಹದ ಮೇಲೆ ಎಸೆದರೆ ಸಿಂಹವು ತನ್ನ ಮೇಲಾದ ಆಕಸ್ಮಿಕ ಅಟ್ಯಾಕ್ ನಿಂದ ಬೆಚ್ಚಿ ಬಿದ್ದು ಅಲ್ಲಿಂದ ಪಲಾಯನ ಮಾಡುವ ಸಾಧ್ಯತೆ ತುಂಬಾ ಇದೆ. ಆನಂತರ ವ್ಯಕ್ತಿ ತನ್ನ ಸುರಕ್ಷೆಗಾಗಿ ಮಾಸದ ಕೆಳಗಿನ ಗನ್ ತೆಗೆದುಕೊಂಡರೆ ಸಾಕು. ಮುಂದೇನು ಸಿಂಹ ಬರಲಿ ಅಥವಾ ಅದರ ಅಪ್ಪ ಬರಲಿ ಭೀತಿ ಇರುವದಿಲ್ಲ.

ಉತ್ತರ-2- ಎರಡನೆಯ ಉತ್ತರದ ಪ್ರಕಾರ ಮರದಲ್ಲಿಯ ಬೇರೆ ರೆಂಬೆಯನ್ನು ಮುರಿದು ಹಾವನ್ನು ಸ್ವರಕ್ಷಣೆಗಾಗಿ ಹೊಡೆಯಬಹುದು. ಇದರಿಂದ ಸಿಂಹದ ಗಮನ ವಿಚಲಿತವಾಗುವದು. ಅದೇ ಸಮಯದಲ್ಲಿ ಸಮಯ ಸಾಧಿಸಿ ಬೇಗನೆ ಕೆಳಗಿನ ಗನ್ ತೆಗೆದುಕೊಂಡು ಸಿಂಹವನ್ನು ಓಡಿಸಬಹುದು. ಇಲ್ಲವಾದರೆ ಹಾವಿನ ಮೃತ್ಯುವಿನ ನಂತರ ಸಿಂಹ ಮಲಗುವ ದಾರಿ ಕಾಯಬೇಕು. ಕಾರಣ ಸಿಂಹ ತುಂಬಾ ಸೋಮಾರಿಯಾದ ಪ್ರಾಣಿ. ಅದು ಮಲಗಿದಾಗ ತಕ್ಷಣ ಬಂದೂಕನ್ನು ತೆಗೆದುಕೊಂಡು ಸಿಂಹವನ್ನು ಅಲ್ಲಿಂದ ಓಡಿಸಲು ಬರುತ್ತದೆ.