ತನ್ನ ಮಾಲೀಕನ ಒಡವೆ ಅಂಗಡಿಯನ್ನು ಕಳ್ಳ ಲೂಟಿ ಮಾಡುತ್ತಿದ್ದರೂ, ಬೊಗಳುವ ತಂಟೆಗೆ ಹೋಗದೇ ಆರಾಮಾಗಿ ಮಲಗಿತ್ತು ಸಾಕು ನಾಯಿ! ನೋಡಿ ಈ ವೈರಲ್ Video
ಪ್ರಾಮಾಣಿಕತೆಗೆ ಒಪ್ಪುವ ಯೋಗ್ಯ ಉದಾಹರಣೆ ಎಂದರೆ ನಮಗೆ ನೆನಪಿಗೆ ಬರುವುದು ನಾಯಿ. ಎಷ್ಟೋ ಘಟನೆಗಳಲ್ಲಿ ನಾಯಿಯು ತನ್ನನ್ನು ಸಾಕಿ ಸಲುಹಿದ ಮನೆಯ ಮಾಲೀಕನ ಋಣವನ್ನು ತೀರಿಸಲು ಜೀವ ಸಹಿತ ಬಲಿದಾನ ಮಾಡಿದ ಉದಾಹರಣೆಗಳನ್ನು ಓದಿದ್ದೇವೆ, ನೋಡಿದ್ದೇವೆ. ಹೊಲ, ತೋಟದಲ್ಲಿಯಂತೂ ರೈತನಿಗೆ ತನ್ನ ರಕ್ಷಣೆಯನ್ನು ಮಾಡಿಕೊಳ್ಳಲು ನಾಯಿಯು ಬೇಕೇ ಬೇಕು. ಇದು ತನ್ನ ಜೀವದ ಪರಿವೆಯೇ ಇಲ್ಲದೆ ಮಾಲೀಕನ ರಕ್ಷಣೆಗೆ ಬೆಂಗಾವಲಾಗಿ ನಿಲ್ಲುತ್ತದೆ. ತನ್ನ ಮಾಲೀಕನ ರಕ್ಷಣೆಯನ್ನು ಮಾಡುವದರ ಜೊತೆಗೆ ತೋಟದಲ್ಲಿಯ ಬೆಳೆ ಮತ್ತು ಕಾಡು ಪ್ರಾಣಿಗಳಿಂದ ಅಂದರೆ ಉದಾಹರಣೆಗಾಗಿ ತೋಳ, ಚಿರತೆ ಗಳಂತಹ ಪ್ರಾಣಿಗಳಿಂದ ಬೊಗಳುವ ಮೂಲಕ ಮಾಲೀಕನನ್ನು ಅಲರ್ಟ್ ಮಾಡಿ ಸಾಕು ಪ್ರಾಣಿಗಳಿಗೆ ರಕ್ಷಿಸುತ್ತದೆ. ಎಷ್ಟೋ ಸಲ ಕಳ್ಳರನ್ನು ಅಟ್ಟಿ ಕಳ್ಳತನದಿಂದಲೂ ಮನೆಯನ್ನು, ತೋಟವನ್ನು ರಕ್ಷಿಸುತ್ತದೆ. ಆದ್ದರಿಂದಲೇ ಇದು ಮನುಷ್ಯನ ವಿಶ್ವಾಸಕ್ಕೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ.
ಆದರೆ ಇದಕ್ಕೆ ಸಂಪೂರ್ಣವಾಗಿ ವಿರುದ್ಧವಾದ ಥೈಲ್ಯಾಂಡ್ ನಲ್ಲಿಯ ಸಾಯಬೇರಿಯನ್ ಹಸ್ಕಿ ಪ್ರಜಾತಿಗೆ ಸೇರಿದ ನಾಯಿಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಕೆಲವು ದರೋಡೆಕೋರರು ಒಂದು ಆಭರಣಗಳ ಅಂಗಡಿಯಲ್ಲಿ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ ಅಲ್ಲಿ ಉಪಸ್ಥಿತವಿದ್ದ ಈ ನಾಯಿಯು ಯಾವುದೇ ತಂಟೆ ತಕಾರಾರಿಗೆ ಹೋಗದೆ ಆರಾಮಾಗಿ ಮಲಗಿ ಇದನ್ನೆಲ್ಲ ನೋಡುತ್ತಿದೆ. ಈ ಘಟನೆಯಲ್ಲಿಯ ಟ್ವಿಸ್ಟ್ ಏನೆಂದರೆ ಈ ನಾಯಿಗೆ ಪ್ರಶಿಕ್ಷಣ ನೀಡುವ ಸಲುವಾಗಿ ದರೋಡೆ ಡಮ್ಮಿ ಸ್ವರೂಪದಲ್ಲಿ ನಡೆದಿತ್ತು. ನಡೆಯುತ್ತಿರುವ ಘಟನೆಯನ್ನು ನಾಯಿಯು ವಿರೋಧಿಸಬೇಕು ಎಂದು ಅಪೇಕ್ಷೆ ಮಾಡಲಾಗಿತ್ತು. ಆದರೆ ಪ್ರತ್ಯಕ್ಷದಲ್ಲಿ ನಾಯಿಯು ಯಾವುದೇ ಪ್ರಯತ್ನಕ್ಕೆ ಬೀಳದೆ ಆರಾಮಾಗಿ ಮಲಗಿತ್ತು. ಹೀಗಾಗಿ ಅದು ಈ ಟ್ರೇನಿಂಗ್ ನಲ್ಲಿ ಸಂಪೂರ್ಣವಾಗಿ ಫೇಲಾಗಿತ್ತು. ನಾಯಿಯ ಈ ವರ್ತನೆಯಿಂದ ಎಲ್ಲರಿಗೂ ಶಾಕ್ ಆಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಎಲ್ಲ ಕಡೆಗೂ ಇದರ ಬಗ್ಗೆ ತುಂಬಾ ಮಜವಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಚಿಯಾಂಗ್ ಪ್ರದೇಶದಲ್ಲಿಯ ಆಭರಣದ ಅಂಗಡಿಯ ಮಾಲೀಕ ವ್ಹೊರಾವುಟ್ ಲೋಮವಾವಾನಾಂಗ್ ವ್ಯಕ್ತಿ ತನ್ನ ಲಕಿ ಹೆಸರಿನ ನಾಯಿಗೆ ಪ್ರಶಿಕ್ಷಣ ನೀಡಿ ತನ್ನ ಅಂಗಡಿಯ ಸುರಕ್ಷೆಯ ಸಲುವಾಗಿ ನಿಲ್ಲಿಸುವ ಯೋಜನೆ ಇತ್ತು. ಅದಕ್ಕಾಗಿ ಈ ನಾಯಿಗೆ ಟ್ರೇನಿಂಗ್ ನೀಡುತ್ತಿದ್ದ. ಅಪರಚಿತರು ಅಂಗಡಿಯಲ್ಲಿ ಶಸ್ತ್ರಗಳೊಂದಿಗೆ ಬಂದು ಬೆದರಿಕೆ ಹಾಕುವಾಗ, ಹಲ್ಲೆ ಮಾಡುವಾಗ, ಕಳ್ಳತನ ಮಾಡುವಾಗ ನಾಯಿಯು ಅವರನ್ನು ತಡೆಯಬೇಕು ಎಂದು ಅಪೇಕ್ಷಿಸಲಾಗಿತ್ತು. ಅದಕ್ಕಾಗಿ ವ್ಹೊರಾವುಟ್ ಮಾರ್ಚ್ 16 ರಂದು ತನ್ನ ಅಂಗಡಿಯಲ್ಲಿ ನಕಲಿ ದರೋಡೆ ಮಾಡಿಸಿದ. ಇದರ ಸಲುವಾಗಿ ನಕಲಿ ಬಂದೂಕನ್ನು ಉಪಯೋಗಿಸಿ ಮಾಲೀಕನಿಗೆ ಟಾರ್ಗೆಟ್ ಮಾಡಲಾಯಿತು. ಬೆದರಿಕೆ ಹಾಕಲಾಯಿತು. ನಾಯಿ ಮಾತ್ರ ತನ್ನ ಮಾಲೀಕನ ಮೇಲೆ ಆಗುತ್ತಿರುವ ಹಲ್ಲೆಯನ್ನು ನೋಡಿ ತನ್ನ ಜಾಗವನ್ನೇ ಬಿಟ್ಟು ಕದಲಲಿಲ್ಲ. ಇಲ್ಲಿ ಮಾಲೀಕ ನಾಯಿಗೆ ಕಣ್ಸನ್ನೆಯಿಂದ ಬಗೆ ಬಗೆಯ ಸೂಚನೆಗಳನ್ನು ಮಾಡಿ ನಾಯಿ ಕಡೆಗೆ ನೋಡಿದರೂ ಅದು ಬೊಗಳುವದನ್ನು ಸಹ ಮಾಡಲಿಲ್ಲ. ಕೊನೆಗೆ ಕಳ್ಳ ಹಣದ ಚೀಲ ತೆಗೆದುಕೊಂಡು ಹೊರಗೆ ಓಡಿ ಹೋದರೂ ಸಹಿತ ನಾಯಿ ಬೆನ್ನಟ್ಟುವ ಅಥವಾ ಬೊಗಳುವ ಯಾವುದೇ ರೀತಿಯ ರಿಪ್ಲಾಯ್ ಮಾಡದೆ ತನ್ನ ಜಾಗದಲ್ಲಿ ಮಲಗಿತ್ತು. ಈ ಎಲ್ಲ ಘಟನೆಯೂ ಅಲ್ಲಿಯ CCTV ಯಲ್ಲಿ ಸೆರೆಯಾಗಿದೆ. ಆನಂತರ ಈ ವಿಡಿಯೋವನ್ನು ಯುಟ್ಯೂಬ್ ನಲ್ಲಿ ಶೇರ್ ಮಾಡಲಾಗಿದೆ.
ವಿಡಿಯೋ ನೋಡಿ
ಈ ಘಟನೆಯ ನಂತರ ನಾಯಿಯ ಮಾಲೀಕ ಸಿಟ್ಟಿನ ಭರದಲ್ಲಿ ನಾಯಿಗೆ ಯಾವುದೇ ರೀತಿಯ ಶಿಕ್ಷೆಯನ್ನು ನೀಡಿಲ್ಲ. ನಾಯಿಯ ಕಡೆಯಿಂದ ತನ್ನ ಅಪೇಕ್ಷೆ ಭಂಗವಾದರೂ ಸಹ ನಾಯಿಯ ಮೇಲೆ ಮೊದಲಿನ ಹಾಗೆಯೇ ಪ್ರೀತಿ ಇದೆ. ತನ್ನ ನಾಯಿಯು ಬಹುಶಃ ಬೇರೆ ವಿಷಯಗಳಲ್ಲಿ ಆಸಕ್ತಿ ಇಟ್ಟುಕೊಂಡಿರಬೇಕು ಎಂದು ಅದರ ಸಮರ್ಥನೆ ಮಾಡುತ್ತಾನೆ. ನಾನು ಅದರ ಹೆಸರು ಲಕಿ ಇಟ್ಟಿದ್ದೇನೆ, ಯಾಕೆಂದರೆ ಅದರ ಬರುವಿನಿಂದಲೇ ನನ್ನ ಭಾಗ್ಯ ತೆರೆದಿದೆ. ಬಹುಶಃ ಅಂಗಡಿಯ ರಕ್ಷಣೆಯನ್ನು ಮಾಡುವದು ಅದರ ಉದ್ದೇಶ ಇರಲಿಕ್ಕಿಲ್ಲ. ಸುತ್ತಮುತ್ತಲಿನ ಪ್ರತಿಯೊಬ್ಬರಿಗೂ ಆನಂದ ನೀಡುವ ಉದ್ದೇಶ ಅದು ಹೊಂದಿರಬೇಕು ಎನ್ನುತ್ತಾನೆ ಅದರ ಮಾಲೀಕ.