ಕಾರ್ಮಿಕ ದಂಪತಿಗಳಿಗೆ ಶಾಲೆಯ ಟಾಯ್ಲೆಟ್ ನಲ್ಲಿ ಕ್ವಾರಂಟೈನ್! ಊಟ ಸಹಿತ ಅಲ್ಲಿಯೇ ಕೊಟ್ಟರು!!
ನವ ದೆಹಲಿ:- ಕೋರೊನಾ ವೈರಸ್ ನಿಂದಾಗಿ ದೇಶದ ತುಂಬೆಲ್ಲಾ ಅನೇಕ ಉಪಕ್ರಮಗಳನ್ನು ಕೈಗೂಳ್ಳುತ್ತಿದೆ ಅದರ ಜೊತೆಗೆ ಸಂಕ್ರಮಣ ತಡೆಯಲು ಲಾಕ್ಡೌನ್ ನಂತಹ ಕ್ರಮಗಳನ್ನು ಜಾರಿಯಲ್ಲಿ ತಂದಿದೆ. ಒಂದು ಕಡೆ ಸ್ವಚ್ಛತೆಯ ಬಗ್ಗೆ ಅನೇಕ ಉಪಕ್ರಮ ಕೈಗೊಂಡು ಸ್ವಚ್ಛತೆಯ ಮಹತ್ವ ತಿಳಿಸುತ್ತಿದ್ದರೆ ಆದರೆ ಇನ್ನೊಂದು ಕಡೆ ಅದರ ವಿರುದ್ದ ಅಸ್ವಚ್ಛತೆಯನ್ನು ಹರಡಿಸಲು ಜನರು ಬೇರೆ ಉಪಕ್ರಮ ಮಾಡುತ್ತಿದ್ದಾರೆ. ಅದೇನೆಂದರೆ ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿಯ ದೇವಿಪೂರ್ ಎಂಬಲ್ಲಿಯ ಕ್ವಾರಂಟಾಯಿನ್ ಸೆಂಟರ್ ನಲ್ಲಿ ಬೇರೆ ಪ್ರಕಾರದ ಘಟನೆ ನಡೆದಿದೆ ಅದರಿಂದ ಸರಕಾರಕ್ಕೆ ಹೊಸ ಸಮಸ್ಯೆ ನಿರ್ಮಾಣವಾಗಿದೆ.
ನಡೆದದ್ದು ಏನೆಂದರೆ, ರಾಜಗಡ ಜಿಲ್ಲೆಯಿಂದಬಂದ ಆದಿವಾಸಿ ಕುಟುಂಬಕ್ಕೆ ಶಾಲೆಯ ಒಂದು ಶೌಚಾಲಯದಲ್ಲಿ ಕ್ವಾರಂಟಾಯಿನ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶೌಚಾಲಯದಲ್ಲಿಯೇ ಊಟ ನೀಡಿದ್ದಾರೆ. ಅದರ ನಂತರವೇ ಶೌಚಾಲಯದಲ್ಲಿ ಕುಳಿತುಕೊಂಡು ಕೈಯಲ್ಲಿ ಊಟದ ತಟ್ಟೆ ಹಿಡಿದ ಕುಟುಂಬದ ಮುಖ್ಯಸ್ಥ ಭೈಯಾ ಲಾಲ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

ಅದರ ನಂತರ ಆ ಫೋಟೋ ತುಂಬಾ ಸಮಸ್ಯೆ ಉಂಟು ಮಾಡಿತು ಆಗ ಅಲ್ಲಿದ್ದ ವ್ಯವಸ್ಥಾಪಕರು ಆ ದಂಪತಿಗಳನ್ನು ಶಾಲೆಯ ಕೋಣೆಯಲ್ಲಿ ವರ್ಗಾವಣೆ ಮಾಡಿದರು. ಈ ಘಟನೆಯ ಕುರಿತು ಮಾತನಾಡಿದ ಗುನಾ ಜಿಲ್ಲೆಯ ಕಲೆಕ್ಟರ್ ವಿಶ್ವನಾಥ್ ಅವರ ಹೇಳಿದ್ದೇನೆಂದರೆ, ಶೌಚಾಲಯದಲ್ಲಿ ಊಟ ಮಾಡುತ್ತಿರುವ ಫೋಟೋದಲ್ಲಿರುವ ವ್ಯಕ್ತಿ ಮದ್ದಿನ ಗುಂಗಿನಲ್ಲಿ ಶೌಚಾಲಯ ಕ್ಕೆ ಹೋಗಿ ಅಲ್ಲಿಯೇ ಕುಳುತ್ತಿದ್ದನು ತದನಂತರ ಆತನ ಪತ್ನಿ ಊಟದ ತಟ್ಟೆಯನ್ನು ತಗೆದುಕೊಂಡು ಆತನಿದ್ದ ಶೌಚಾಲಯದಲ್ಲಿ ಹೋಗಿ ಊಟ ನೀಡಿದಳು , ಊಟ ಸಿಕ್ಕನಂತರ ಪತಿ ಅಲ್ಲಿಯೇ ಊಟ ಮಾಡಲು ಪ್ರಾರಂಭ ಮಾಡಿದನು ಆ ಸಮಯದಲ್ಲಿ ಯಾರೋ ಆ ಘಟನೆಯ ಫೋಟೋ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಅಲ್ಲಿಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ಘಟನೆಯ ಕಂಡು ಕಾಂಗ್ರೆಸ , ಬಿಜೆಪಿಯ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ದೋಷಿಸಿದ್ದಾರೆ. ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ” ಇದೊಂದು ಅಪರಾಧದ ಫೋಟೋ ವಾಗಿದೆ, ಅಲ್ಲಿ ಒಂದು ಕುಟುಂಬಕ್ಕೆ ಶೌಚಾಲಯದಲ್ಲಿ ಕ್ವಾರಂಟಾಯಿನ್ ನಲ್ಲಿ ಇಡಲಾಗಿದೆ, ಇದು ಜನರು ನಿಮ್ಮ ಮೇಲಿಟ್ಟ ಭರವಸೆಯನ್ನು ಕಳೆದುಕೊಳ್ಳಲಿಕ್ಕೆ ಕಾರಣಾವಾಯಿತು’ ಎಂದು ಟ್ವೀಟ್ ಮಾಡಿದ್ದಾರೆ.