LIC ಯ ಭರ್ಜರಿ ಯೋಜನೆ: ಒಂದೇ ಸಲ ಹಣ ಹೂಡಿಕೆ ಮಾಡಿ ಜೀವನವಿಡೀ ತಿಂಗಳಿಗೆ 4 ಸಾವಿರ ರೂ ಪಡೆಯಿರಿ!
ಇನ್ಶೂರೆನ್ಸ್ ಕಂಪನಿಗಳಲ್ಲಿ ಮೊದಲಿನಿಂದಲೂ ಜನರ ವಿಶ್ವಾಸಕ್ಕೆ ಪಾತ್ರವಾದ ಹಾಗೂ ಭಾರತ ಸರಕಾರ ಅಧೀನದಲ್ಲಿರುವ ಕಂಪನಿ ಎಂದರೆ LIC. ಇದರ ಒಂದು ಹೊಸ ಯೋಜನೆಯ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಪಡೆಯೋಣ. ಈ ಯೋಜನೆಯಲ್ಲಿ ಬರೀ ಒಂದೇ ಒಂದು ಸಲ ಹಣವನ್ನು ಹೂಡಿಕೆ ಮಾಡಿ ಆಯ್ತು, ಮುಂದೆ ಜೀವನವಿಡೀ ತಿಂಗಳಿಗೆ ನಾಲ್ಕು ಸಾವಿರ ರೂಪಾಯಿಗಳನ್ನು ಪಡೆಯಿರಿ. ಏನಿದು ಮಾಹಿತಿ ಅಂತೀರಾ? ಹಾಗಾದರೆ ಮುಂದೆ ಓದಿ….
ಮನುಷ್ಯನ ಹೆಚ್ಚಿಸುವ ವಯಸ್ಸಿನೊಂದಿಗೆ ಕೆಲಸ ಮಾಡುವ ಕ್ಷಮತೆಯು ಕಡಿಮೆಯಾಗುತ್ತದೆ. ಆದ್ದರಿಂದ ವಯಸ್ಸಿನ ಕೊನೆಯ ಹಂತದಲ್ಲಿ ಇನ್ನೊಬ್ಬರ ಮೇಲೆ ಅವಲಂಬಿಸಿ ಕೂಡಬೇಕಾಗುತ್ತದೆ. ಒಂದು ವೇಳೆ ನೀವು ಸರಕಾರಿ ಹುದ್ದೆಯಲ್ಲಿದ್ದು ನಿವೃತ್ತಿಯಾಗಿದ್ದರೆ ನಿಮಗೆ ಪಿಂಚಣಿ ಸಿಗುತ್ತದೆ. ಆದರೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದರೆ ಪಿಂಚಣಿ ದೊರೆಯುವುದಿಲ್ಲ. ಈ ಸಂದರ್ಭದಲ್ಲಿ LIC ಯ ಈ ಯೋಜನೆ ತುಂಬಾ ಲಾಭಕಾರಿಯಾಗಿದೆ. ಹೇಗೆ ನೋಡಿ.
LIC ಯ ಜೀವನ ಅಕ್ಷಯ್ ಪ್ಲಾನ್ ನಿಮಗೆ ಜೀವನವಿಡೀ ಪೆನ್ಷನ್ ನೀಡುತ್ತದೆ. ಈ ಯೋಜನೆಯಲ್ಲಿ ನಿಮಗೆ ಒನ್ ಟೈಮ್ ಇನ್ವೆಸ್ಟಮೆಂಟ್ ಮಾಡಬೇಕಾಗುವುದು. ಆಮೇಲೆ ನೀವು ಇರುವವರೆಗೆ ಪಿಂಚಣಿ ಲಾಭ ಪಡೆಯಬಹುದಾಗಿದೆ.
ಇದಕ್ಕಾಗಿ ನಿಮಗೆ 1 ಲಕ್ಷ ರೂಪಾಯಿಗಳ ಸಿಂಗಲ್ ಪ್ರೀಮಿಯಂ ತುಂಬಬೇಕಾಗುತ್ತದೆ. ಈ ಪ್ಲಾನ್ ನಲ್ಲಿ ನಿಮಗೆ ಬೇರೆ ಬೇರೆ ಪ್ರಕಾರದ 10 ಆಯ್ಕೆಗಳು ಇವೆ. ಇದರಲ್ಲಿ ನೀವು ಎಂಜುಟಿ ಪೇಬಲ್ ಫಾರ್ ಲೈಫ್ ಅಟ್ ಯೂನಿಫಾರ್ಮ್ ರೇಟ್ ಆಯ್ಕೆ ಮಾಡಿದರೆ ನಿಮಗೆ ಜೀವನವಿಡೀ ನಾಲ್ಕು ಸಾವಿರ ರೂಪಾಯಿಗಳು ಪ್ರತಿ ತಿಂಗಳಿಗೆ ದೊರೆಯುತ್ತದೆ.

ಈ ಪ್ಲಾನ್ ನಲ್ಲಿ ನೀವು ವಾರ್ಷಿಕ ಪೆನ್ಷನ್ ಸಹ ಪಡೆಯಬಹುದು. ಇದರಲ್ಲಿ ಪ್ರತಿ ವರ್ಷ ನಿಮಗೆ 57,640 ರೂಪಾಯಿಗಳು ಸಿಗುತ್ತವೆ. ಒಂದು ವೇಳೆ ಆರ್ಧ ವಾರ್ಷಿಕ ಪ್ಲಾನ್ ಆಯ್ಕೆ ಮಾಡಿದರೆ 28,260 ರೂಪಾಯಿಗಳನ್ನು ಪಡೆಯಬಹುದು. ಒಂದು ವೇಳೆ ತ್ರೈಮಾಸಿಕ ಲಾಭ ಪಡೆಯುವ ಇಚ್ಛೆ ಇದ್ದರೆ 13,980 ರೂಪಾಯಿ ದೊರೆಯುತ್ತವೆ. ಈ ಪ್ಲಾನ್ ನಲ್ಲಿ ಪ್ರತಿ ತಿಂಗಳ ಆಯ್ಕೆ ಮಾಡಿದರೆ 4630 ರೂಪಾಯಿಗಳು ದೊರೆಯುವವು.
ಈ ಪ್ಲಾನ್ ನಲ್ಲಿ ಹಣ ಹೂಡಿಕೆ ಮಾಡಬೇಕಾದರೆ ನಿಮ್ಮ ವಯಸ್ಸು 30 ರಿಂದ 85 ವರ್ಷಗಳ ಮಧ್ಯದಲ್ಲಿ ಇರುವದು ಅಗತ್ಯವಾಗಿದೆ. ಈ ಯೋಜನೆಯ ಅಡಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಪಿಂಚಣಿ ಲಾಭ ತೆಗೆದುಕೊಳ್ಳುವುದರ ಜೊತೆಗೆ ಇನ್ನು ಅನೇಕ ಲಾಭಗಳು ಇವೆ. ಒಂದು ಮಹತ್ವದ ಲಾಭವೆನೆಂದರೆ ಈ ಪಾಲಿಸಿ ತೆಗೆದುಕೊಂಡ ನಂತರ 3 ತಿಂಗಳಲ್ಲಿ ಲೋನ್ ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಯೋಜನೆ ಆನ್ ಲೈನ್ ಮತ್ತು ಆಫ್ ಲೈನ್ ಎರಡು ರೀತಿಯಲ್ಲಿ ಲಭ್ಯವಿದೆ. ಈ ಪಾಲಿಸಿಯು ಗ್ರಾಹಕನಿಗೆ ಕೊನೆಯ ವರೆಗೂ ಪೆನ್ಷನ್ ನೀಡುತ್ತದೆ. ಒಂದು ವೇಳೆ ಪಾಲಿಸಿ ಹೋಲ್ಡರ್ ನ ನಿಧನವಾದರೆ ಪೆನ್ಷನ್ ಅಥವಾ ಪಿಂಚಣಿ ಸಿಗುವದು ನಿಂತು ಬಿಡುತ್ತದೆ. ಅಂದರೆ ಪಾಲಿಸಿ ಹೋಲ್ಡರ್ ಎಲ್ಲಿಯವರೆಗೆ ಜೀವಂತ ಇರುತ್ತಾನೋ ಅಲ್ಲಿಯವರೆಗೆ ಮಾತ್ರ ಪಿಂಚಣಿ ಸಿಗುತ್ತದೆ.