ಜಿಮ್ ನಲ್ಲಿ ವರ್ಕೌಟ್ ಮಾಡುತ್ತಲೇ ಡಾನ್ಸ್ ಸ್ಟೆಪ್ ಹಾಕಿದ ಮಲೈಕಾ ಅರೋರಾ: ಡಾನ್ಸ್ ನೋಡಿ ‘ಸೂಪರ್’ ಎಂದ ಫ್ಯಾನ್ಸ್

ಬಾಲಿವುಡ್ ಸ್ಟಾರ್ ಗಳಲ್ಲಿ ಬಹುತೇಕ ಎಲ್ಲರೂ ಕೂಡಾ ಫಿಟ್ನೆಸ್ ಗೆ ಸಾಕಷ್ಟು ಒತ್ತನ್ನು ನೀಡುವರು. ಆದರೆ ಫಿಟ್ನೆಸ್ ವಿಚಾರದಲ್ಲಿ ಬೇರೆಲ್ಲರಿಗಿಂತ ಹೆಚ್ಚಿನ ಒತ್ತನ್ನು ನೀಡುವ ನಟಿ ಮಲೈಕಾ ಅರೋರ. ನಟಿ ಮಲೈಕ ಅರೋರ 45 ರ ಹರೆಯವನ್ನು ದಾಟಿದರೂ ಕೂಡಾ ಇನ್ನು ಯುವತಿಯರನ್ನು ನಾಚಿಸುವಂತಹ ಮೈಮಾಟವನ್ನು ಹೊಂದಿದ್ದಾರೆ. ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಐಟಂ ಸಾಂಗ್ ಗಳಿಗೆ ಭರ್ಜರಿ ನೃತ್ಯ ಮಾಡಿರುವ ಮಲೈಕಾ ಅರೋರ ತಮ್ಮ ಫಿಟ್ನೆಸ್ ಮತ್ತು ಬಳುಕುವ ದೇಹದಿಂದಾಗಿ ಹಾಗೂ ತನ್ನ ಡಾನ್ಸ್ ಗಳಿಂದಾಗಿ ಸಾಕಷ್ಟು ಸುದ್ದಿಯನ್ನು ಮಾಡುತ್ತಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಮಲೈಕ ಅರೋರಾ ಅವರ ಹಾಟ್ ಹಾಟ್ ಫೋಟೋಗಳು ಹಾಗೂ ವಿಡಿಯೋಗಳು ಭರ್ಜರಿ ವೈರಲ್ ಆಗುತ್ತಲೇ ಇರುತ್ತದೆ. ಬಾಲಿವುಡ್ ನಲ್ಲಿ ಫಿಟ್ ನೆಸ್ ಎಂದರೆ ಅದು ಮಲೈಕಾ ಎನ್ನುವಷ್ಟರ ಮಟ್ಟಿಗೆ ತನ್ನ ಛಾಪನ್ನು ಮೂಡಿಸಿದ್ದಾರೆ ಮಲೈಕಾ ಅರೋರ.

ಸೋಶಿಯಲ್ ಮೀಡಿಯಾ ಗಳಲ್ಲಿ ಮಲೈಕಾ ಅರೋರ ಅವರ ಫಿಟ್ನೆಸ್ ವಿಡಿಯೋಗಳು ಭರ್ಜರಿಯಾಗಿ ವೈರಲ್ ಆಗುವುದು ಸಾಮಾನ್ಯವಾದ ವಿಷಯವಾಗಿದೆ. ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಮಲೈಕಾರ ಹೊಸ ವಿಡಿಯೋವೊಂದು ದೊಡ್ಡ ಸದ್ದನ್ನು ಮಾಡುತ್ತಿದೆ. ಈ ವಿಡಿಯೋದಲ್ಲಿ ಮಲೈಕಾ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವುದನ್ನು ಗಮನಿಸಬಹುದು. ವರ್ಕೌಟ್ ಮಾಡುತ್ತಲೇ ಮಲೈಕ ಡಾನ್ಸ್ ಕೂಡಾ ಮಾಡಲು ತೊಡಗುತ್ತಾರೆ. ವರ್ಕೌಟ್ ಜೊತೆಗೆ ಡ್ಯಾನ್ಸ್ ಮಾಡುವ ಮಲೈಕ ಅರೋರ ಸ್ಟೈಲ್ ಅವರ ಅಭಿಮಾನಿಗಳಿಗಾಗಿ ಮೆಚ್ಚುಗೆಯ ಕಾರಣವಾಗಿದೆ. ಅಭಿಮಾನಿಗಳು ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಗಮನಿಸಿದಾಗ ಮಲೈಕಾ ಅರೋರ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಈ ವೇಳೆ ಕೇಳುತ್ತಿದ್ದ ಇಂಗ್ಲಿಷ್ ಹಾಡುಗಳಿಗೆ ಹೆಜ್ಜೆ ಹಾಕದೆ ಇರಲು ಅವರಿಂದ ಸಾಧ್ಯವಾಗಿಲ್ಲ. ಇಂಗ್ಲಿಷ್ ಹಾಡಿಗೆ ತಕ್ಕಂತೆ ವರ್ಕೌಟ್ ಮಾಡುತ್ತಲೇ ಡ್ಯಾನ್ಸ್ ಸ್ಟೆಪ್ ಗಳನ್ನು ಹಾಕಿದ ನಟಿ ತನ್ನ ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು, ಅದರ ಕ್ಯಾಪ್ಶನ್ ನಲ್ಲಿ, ನನ್ನ ವೀಕೆಂಡನ್ನು ಈ ರೀತಿಯಾಗಿ ಆರಂಭಿಸಿದ್ದೇನೆ. ವಿಗಲ್ ವಿಗಲ್. ನಿಮಗೆ ಏನು ಸಿಗುತ್ತದೆ ನೋಡೋಣ. ನೀವು ನಿಮ್ಮ ವಿಡಿಯೋ ಶೇರ್ ಮಾಡಿ ಎಂದು ಹೇಳಿದ್ದಾರೆ. ಮಲೈಕಾ ಶೇರ್ ಮಾಡಿದ ವೀಡಿಯೋ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ.‌

ಬಾಲಿವುಡ್ ನಲ್ಲಿ ತನ್ನ ಭರ್ಜರಿ ಡ್ಯಾನ್ಸ್ ಗಳ ಮೂಲಕ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟವರು ಮಲೈಕ ಅರೋರ. ಇವರು ಹಿಂದಿ ಕಿರುತೆರೆಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗಳಿಗೆ ಜಡ್ಜ್ ಕೂಡ ಆಗಿದ್ದರು. ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿರುವ, ಚೈಯ್ಯಾ ಚೈಯ್ಯಾ, ಅನಾರ್ಕಲಿ, ಮುನ್ನಿ ಬದ್ನಾಮ್ ಹುಯಿ ಗಳಂತಹ ಸೂಪರ್ ಹಿಟ್ ಹಾಡುಗಳಿಗೆ ಡಾನ್ಸ್ ಪ್ರಿಯರು ಹುಚ್ಚೆದ್ದು ಕುಣಿಯುವಂತೆ ಸ್ಟೆಪ್ ಗಳನ್ನು ಹಾಕಿ ರಂಜಿಸಿದ್ದಾರೆ ಮಲೈಕ ಅರೋರ. ಡ್ಯಾನ್ಸ್ ಜೊತೆ ಜೊತೆಗೆ ತಮ್ಮ ಲುಕ್ಸ್ ಹಾಗೂ ಫ್ಯಾಶನ್ ನಿಂದ ಜನರ ಗಮನವನ್ನು ತನ್ನ ಕಡೆಗೆ ಸೆಳೆಯುತ್ತಾರೆ ಮಲೈಕಾ. ಕಡೆಯದಾಗಿ ಇವರು ಕಿರುತೆರೆಯಲ್ಲಿ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ ಡಾನ್ಸ್ ಶೋ ನ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.

ವಿಡಿಯೋ ನೋಡಿ

ಮಲೈಕಾ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿದ್ದರು. ಆದರೆ ಕೆಲವೇ ವರ್ಷಗಳ ಹಿಂದೆ ವೈಯಕ್ತಿಕ ಕಾರಣಗಳಿಂದ ಅರ್ಬಾಜ್ ಮತ್ತು ಮಲೈಕಾ ವಿಚ್ಚೇದನ ಪಡೆದು ದೂರಾಗಿದ್ದಾರೆ. ಆದರೆ ಅವರ ನಡುವೆ ಸ್ನೇಹ ಮಾತ್ರ ಹಾಗೇ ಇದೆ. ಇನ್ನು ಇದೀಗ ವಯಸ್ಸಿನಲ್ಲಿ ತನಗಿಂತ ಕಿರಿಯನಾಗಿರುವ ಅರ್ಜುನ್ ಕಪೂರ್ ಜೊತೆಗೆ ಮಲೈಕಾ ಪ್ರೀತಿಯಲ್ಲಿ ಇರುವ ವಿಚಾರ ರಹಸ್ಯವಾಗಿ ಅಂತೂ ಉಳಿದಿಲ್ಲ. ಇಬ್ಬರೂ ಆಗಾಗ ಪಾರ್ಟಿಗಳಲ್ಲಿ, ಸಮಾರಂಭಗಳಲ್ಲಿ ಜೊತೆ ಜೊತೆಯಾಗಿಯೇ ಓಡಾಡುವುದು ಕಂಡು ಬರುತ್ತಲೇ ಇರುತ್ತದೆ.