ಏಲಕ್ಕಿ ಕೃಷಿಯಿಂದಲೂ ವಾರ್ಷಿಕ ಲಕ್ಷಗಳ ಮೊತ್ತದಲ್ಲಿ ಆದಾಯ ಗಳಿಸಬಹುದು: ಹೇಗೆ ಎನ್ನುವುದಾದರೆ ಒಂದು ಸಲ ಓದಿ

ಭಾರತವು ತನ್ನ ಮಸಾಲೆ ಪದಾರ್ಥಗಳಿಗಾಗಿ ವಿಶ್ವ ಪ್ರಸಿದ್ಧಿಯನ್ನು ಪಡೆದಿದೆ. ಬ್ರಿಟಿಷರು ಕೂಡ ಭಾರತಕ್ಕೆ ಬಂದಾಗ ಮೊದಲು ಇಲ್ಲಿಂದ ತೆಗೆದುಕೊಂಡು ಹೋಗಿದ್ದು ಮಸಾಲೆ ಪದಾರ್ಥಗಳನ್ನು. ಅವರು ಅದನ್ನು ತಮ್ಮ ದೇಶದಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿದ್ದರು. ಇದರ ನಂತರ ಬ್ರಿಟಿಷರಿಗೆ ಭಾರತವು ಚಿನ್ನಕ್ಕಿಂತ ಹೆಚ್ಚು ಪ್ರೀತಿಯಾಗ ತೊಡಗಿತು. ಅವರು ಭಾರತದೊಡನೆ ವ್ಯಾಪಾರ ಮಾಡುತ್ತಲೇ, ತಮ್ಮ ಹೊಸ ಹೊಸ ಫ್ಯಾಕ್ಟರಿಗಳಲ್ಲಿ ಇಲ್ಲಿ ಸ್ಥಾಪಿಸುತ್ತಲೇ, ಭಾರತವನ್ನು ಗುಲಾಮಗಿರಿಯ ಜೊತೆಗೆ ಆರ್ಥಿಕ ನಷ್ಟದ ಕಡೆಗೆ ಕೂಡಾ ತಳ್ಳಿದ್ದರು. ಹೀಗೆ ವಿದೇಶಿಯರಿಗೂ ಇಷ್ಟವಾಗುವ ಭಾರತದ ಮಸಾಲೆ ಪದಾರ್ಥಗಳಲ್ಲಿ ಬಹುತೇಕ ಭಾರತೀಯರ ಪ್ರಿಯವೂ ಆಗಿರುವ ಮಸಾಲೆ ಪದಾರ್ಥ ಎಂದರೆ ಅದು ಏಲಕ್ಕಿ.

ನಾವು ಇಂದು ನಿಮಗೆ ಏಲಕ್ಕಿ ಕೃಷಿಯ ಕುರಿತಾದ ಕೆಲವು ಮಾಹಿತಿಗಳನ್ನು ನೀಡಲಿದ್ದೇವೆ. ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿಯೂ ವಿಭಿನ್ನವಾದ ರುಚಿಯನ್ನು ಹೊಂದುವ ಮೂಲಕವೇ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಅನೇಕರು ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ಇಂತಹ ಜನಪ್ರಿಯ ಏಲಕ್ಕಿಯನ್ನು ಕೃಷಿ ಮಾಡಲು ಮೂಲಕ ಹೇರಳವಾದ ಅವಕಾಶಗಳಿವೆ. ಬಹಳಷ್ಟು ಜನರಿಗೆ ಏಲಕ್ಕಿ ಕೃಷಿಯ ಬಗ್ಗೆ ತಿಳಿಯದೇ ಇರಬಹುದು. ನಾವಿಂದು ಏಲಕ್ಕಿಯ ಕೃಷಿಯ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಏಲಕ್ಕಿ ಕೃಷಿಯನ್ನು ಮಾಡುವ ಮೂಲಕ ಲಕ್ಷ ಲಕ್ಷ ರೂಪಾಯಿಗಳ ಆದಾಯವನ್ನು ಕೂಡ ಗಳಿಸಬಹುದಾಗಿದೆ.

ಸಿಹಿ ತಿನಿಸುಗಳಲ್ಲಿ ಏಲಕ್ಕಿಯನ್ನು ಬಳಸುವುದರಿಂದ ಆ ತಿನಿಸಿನ ಸುವಾಸನೆ ಹಾಗೂ ರುಚಿ ಎರಡೂ ಹೆಚ್ಚುತ್ತದೆ. ಅಲ್ಲದೇ ಏಲಕ್ಕಿಯ ಸೇವನೆಯಿಂದ ನಮ್ಮ ದೇಹದ ಆರೋಗ್ಯಕ್ಕೆ ಕೂಡ ಸಾಕಷ್ಟು ಲಾಭಗಳಿವೆ. ಇದರ ಸೇವನೆಯಿಂದ ಹಲವು ರೋಗಗಳ ನಿವಾರಣೆಯಾಗುತ್ತದೆ. ಏಲಕ್ಕಿಯ ಸೇವನೆಯು ವಿಶೇಷವಾಗಿ ಪುರುಷರಿಗೆ ಹೆಚ್ಚಿನ ಪ್ರಯೋಜನಕಾರಿ ಎನ್ನಲಾಗಿದೆ. ಮಸಾಲೆ ಪದಾರ್ಥಗಳ ಉತ್ಪಾದನೆಯಲ್ಲಿ ದಕ್ಷಿಣದ ರಾಜ್ಯಗಳು ಹೆಚ್ಚು ಜನಪ್ರಿಯವಾಗಿದೆ. ಏಲಕ್ಕಿ ಉತ್ಪಾದನೆಯ ವಿಚಾರಕ್ಕೆ ಬಂದರೆ ಇದನ್ನು ಪ್ರಮುಖವಾಗಿ ಕೇರಳ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಈ ರಾಜ್ಯಗಳಲ್ಲಿ ಇನ್ನಿತರೆ ಮಸಾಲೆ ಪದಾರ್ಥಗಳನ್ನೂ ಬೆಳೆಯಲಾಗುವುದು.

ಏಲಕ್ಕಿ ಕೃಷಿಯನ್ನು ಎರಡು ರೀತಿಯಲ್ಲಿ ಮಾಡಲಾಗುತ್ತದೆ ಒಂದು ಬೀಜ ಬಿತ್ತುವ ಮೂಲಕ. ಎರಡನೆಯದು ಸಸಿಯನ್ನು ನೆಡುವ ಮೂಲಕ. ಬೀಜವನ್ನು ಬಿತ್ತುವ ಮೂಲಕ ಏಲಕ್ಕಿ ಕೃಷಿಯನ್ನು ಮಾಡುವುದಾದರೆ ಹಳೆಯ ಬೀಜಗಳನ್ನು ಖರೀದಿ ಮಾಡಬೇಡಿ. ಅದರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ. ಅಲ್ಲದೇ ಅಗ್ಗದ ಬೆಲೆಯಲ್ಲಿ ಸಿಗುತ್ತದೆಂದು ಅಗ್ಗದ ಗುಣಮಟ್ಟವನ್ನು ಹೊಂದಿರುವ ಬೀಜಗಳನ್ನು ಖರೀದಿ ಮಾಡಿದರೆ ಮುಂದೆ ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ. ಬೀಜಗಳನ್ನು ಖರೀದಿ ಮಾಡಿದ ನಂತರ ಹೊಲದಲ್ಲಿ ಹತ್ತು ಸೆಂಟಿಮೀಟರ್ ದೂರದಲ್ಲಿ ಬೀಜಗಳನ್ನು ಬಿತ್ತಬೇಕಾಗುತ್ತದೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ ಒಂದರಿಂದ ಒಂದೂವರೆ ಕೆಜಿ ಬೀಜಗಳನ್ನು ಮಾತ್ರ ಬಿತ್ತನೆ ಮಾಡಬೇಕು.

ಇದಲ್ಲದೆ ಸಸಿಗಳನ್ನು ನೆಡುವ ಮೂಲಕ ಏಲಕ್ಕಿಯನ್ನು ಬೆಳೆಸಲು ಬಳಸುವುದಾದರೆ ನರ್ಸರಿಗಳಿಂದ ಸಸಿಗಳನ್ನು ಖರೀದಿ ಮಾಡಿ, ಹೊಲದಲ್ಲಿ ನೇರವಾಗಿ ನೆಡುವ ಕೆಲಸವನ್ನು ಮಾಡಬಹುದು. ಬೀಜ ಬಿತ್ತುವುದಾದರೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಏಲಕ್ಕಿ ಬೀಜಗಳನ್ನು ಜುಲೈನಲ್ಲಿ ಬಿತ್ತಬೇಕು‌. ಏಕೆಂದರೆ ಈ ಋತುವಿನಲ್ಲಿ ಮಳೆ ಚೆನ್ನಾಗಿ ಬೀಳುತ್ತದೆ. ಏಲಕ್ಕಿಯನ್ನು ನೆರಳಿನ ಪ್ರದೇಶದಲ್ಲಿ ಬೆಳೆಯಬೇಕು, ಇಲ್ಲವಾದರೆ ಸೂರ್ಯನ ಕಿರಣಗಳು ನೇರವಾಗಿ ಇದರ ಮೇಲೆ ಬಿದ್ದರೆ ಸಸಿಗಳು ಒಣಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇದ್ದು ಕಾಲಕಾಲಕ್ಕೆ ನೀರಿನ ಪೂರೈಕೆ ಮಾಡಬೇಕು.

ಏಲಕ್ಕಿಯಲ್ಲಿ ಸಣ್ಣ ಏಲಕ್ಕಿ ಮತ್ತು ದೊಡ್ಡ ಏಲಕ್ಕಿ ಎನ್ನುವ ಎರಡು ಪ್ರಭೇದಗಳಿದ್ದು, ಎರಡು ಕೂಡಾ ಉತ್ತಮ ಪ್ರಭೇದದ ಏಲಕ್ಕಿ ಆಗಿದೆ. ಏಲಕ್ಕಿಯನ್ನು ನೆಟ್ಟ ನಂತರ ನೂರು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಮೂರು ವರ್ಷಗಳ ನಂತರ ಏಲಕ್ಕಿ ಬಿಡಲು ಆರಂಭಿಸುತ್ತದೆ. ಆಗ ಸಸಿಗಳನ್ನು ಮೊದಲಿಗಿಂತಲೂ ಚೆನ್ನಾಗಿ ನೋಡಿಕೊಳ್ಳಬೇಕು. ಒಂದು ಹೆಕ್ಟೇರ್ ಪ್ರದೇಶದಲ್ಲಿ 130 ರಿಂದ 150 ಕಿಲೋಗ್ರಾಂ ಏಲಕ್ಕಿಯನ್ನು ಬೆಳೆಯಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕಿಲೋ ಗ್ರಾಂ ಏಲಕ್ಕಿಯ ಬೆಲೆ ₹2000 ಇದೆ. ಇಂತಹ ಪರಿಸ್ಥಿತಿಯಲ್ಲಿ ವಾರ್ಷಿಕ ಮೂರು ಲಕ್ಷ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದಾಗಿದೆ.