ಹೂಸು ಎಂದು ಮೂಗು ಮುಚ್ಚಿಕೊಳ್ಳುವುದು ಸಾಮಾನ್ಯ, ಆದರೆ ಈ ಮಹಿಳೆ ಹೂಸುವ ಮೂಲಕವೇ ತಿಂಗಳಿಗೆ 3 ಲಕ್ಷ ಸಂಪಾದನೆ ಮಾಡುತ್ತಿದ್ದಾಳೆ!

ಈ ಜಗತ್ತಿನಲ್ಲಿ ಚಿತ್ರ ವಿಚಿತ್ರವಾದ ಹಾಗೂ ವಿಲಕ್ಷಣ ವ್ಯಕ್ತಿತ್ವವನ್ನು ಉಳ್ಳಂತಹ ಜನರು ಕೂಡಾ ನಮ್ಮ ಸುತ್ತ ನಲ್ಲಿ ವಾಸಿಸುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಜನರು ವೈವಿಧ್ಯಮಯವಾದಂತಹ ಉದ್ಯೋಗಗಳನ್ನು ಅವಲಂಬಿಸಿದ್ದಾರೆ, ಈ ಮೂಲಕ ಹಣವನ್ನು ಸಂಪಾದಿಸುತ್ತಿದ್ದಾರೆ. ಆದರೆ ಕೆಲವರು ಮಾಡುತ್ತಿರುವ ಕೆಲಸಗಳನ್ನು ನೋಡಿದಾಗ ಅದು ಬಹಳ ವಿಚಿತ್ರ ಎನಿಸುತ್ತದೆ. ಆದರೆ ವಿಶೇಷವೆಂದರೆ ಇಂತಹ ವಿಚಿತ್ರವಾದ ಕೆಲಸಗಳನ್ನು ಮಾಡುವ ಮೂಲಕವೇ ಇವರು ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ. ಅಂತಹದೇ ಒಂದು ವಿಲಕ್ಷಣವಾದ ಕೆಲಸವನ್ನು ಮಾಡುವ ಮೂಲಕ ಲಕ್ಷ ಲಕ್ಷಗಳ ಮೊತ್ತದಲ್ಲಿ ಹಣವನ್ನು ಗಳಿಸುತ್ತಿರುವ ಒಬ್ಬ ಮಹಿಳೆಯ ಬಗ್ಗೆ ನಾವಿಂದು ಹೇಳಲು ಹೊರಟಿದ್ದೇವೆ. ಈ ಮಹಿಳೆಯ ಬಗ್ಗೆ ತಿಳಿದರೆ ನಿಮಗೂ ಕೂಡ ವಿಚಿತ್ರ ಎನಿಸುವುದು ಮಾತ್ರವೇ ಅಲ್ಲದೇ ಇಂತಹುದೊಂದು ಕೆಲಸಕ್ಕೂ ಹಣ ನೀಡುವರೇ? ಎಂದು ಕಕ್ಕಾಬಿಕ್ಕಿಯಾಗುವಿರಿ.

ಈಗ ಸುದ್ದಿಯಾಗಿರುವ ಮಹಿಳೆಯು ಯಾವ ವಿಷಯದಲ್ಲಿ ಪರಿಣಿತಿ ಪಡೆದಿದ್ದಾಳೆ ಎಂಬುದೇ ಒಂದು ವಿಲಕ್ಷಣ ಅಥವಾ ಆಶ್ಚರ್ಯದ ಸಂಗತಿಯಾಗಿದೆ. ಈ ಮಹಿಳೆ ಹೂಸು ಬಿಡುವುದರಲ್ಲಿ ಪರಿಣಿತಳಾಗಿದ್ದು, ಅದರ ಮೂಲಕವೇ ಲಕ್ಷ ಲಕ್ಷ ಹಣವನ್ನು ಗಳಿಸುತ್ತಿದ್ದಾಳೆ. ಹೀಗೆ ವಿಚಿತ್ರವಾದ ಕೆಲಸವನ್ನು ಮಾಡುವ ಮೂಲಕ ಹಣಗಳಿಸುತ್ತಿರುವ ಈ ಮಹಿಳೆಯ ಹೆಸರು ಎಮ್ಮ ಮಾರ್ಟಿನ್. ಈಕೆ 1999 ರಿಂದಲೂ ತಾನು ಹೂಸು ಬಿಡುವುದನ್ನು ರೆಕಾರ್ಡ್ ಮಾಡುತ್ತಿದ್ದಾಳೆ. ಇದನ್ನು ನೋಡಲು ಬಯಸುವ ಜನರಿಗೆ ಆಕೆ 4.99 ಡಾಲರ್ ಗಳು ಅಂದರೆ ಸುಮಾರು 366 ರೂಪಾಯಿಗಳ ಚಾರ್ಜ್ ಮಾಡುತ್ತಿದ್ದಾಳೆ.

ಈ ಮಹಿಳೆಯು ತನ್ನ ಆಹಾರದ ವಿಷಯದಲ್ಲಿ ಬಹಳಷ್ಟು ಕಾಳಜಿಯನ್ನು ವಹಿಸುತ್ತಾರೆ. ಆಕೆ ತಾನು ಬಹಳಷ್ಟು ಸಲಾಡ್ ತಿನ್ನುವುದಾಗಿ ಹೇಳುತ್ತಾಳೆ. ಇದಲ್ಲದೇ ತನ್ನ ಆಹಾರದಲ್ಲಿ ಆಕೆ ಆವಕಾಡೊ ಮತ್ತು ಮೆಕ್ಸಿಕನ್ ಆಹಾರವನ್ನು ತಾನು ಹೆಚ್ಚು ಸೇರಿಸಿಕೊಳ್ಳುವುದಾಗಿ ಹೇಳಿದ್ದಾಳೆ. ಕೋಲ್ ಸ್ಲಾವ್ ಮತ್ತು ಬೇಯಿಸಿದ ಬೀನ್ಸ್ ಅವಳ ನೆಚ್ಚಿನ ಆಹಾರವಾಗಿದೆ. ಎಮ್ಮಾ ಮೂಲತಹ ಅಮೇರಿಕದ ದಕ್ಷಿಣ ಕೆರೊಲಿನಾ ನಿವಾಸಿ ಎನ್ನಲಾಗಿದೆ. ಎಮ್ಮ ಇಬ್ಬರು ಮಕ್ಕಳಿಗೆ ತಾಯಿಯಾಗಿದ್ದಾರೆ. ಇನ್ನು ಆಕೆಯ ವಯಸ್ಸಿನ ವಿಚಾರಕ್ಕೆ ಬಂದರೆ ಪ್ರಸ್ತುತ ಆಕೆಯ ವಯಸ್ಸು 48 ವರ್ಷಗಳಾಗಿದೆ.

ಎಮ್ಮ ತಮ್ಮ ಹೂಸಿನ ರೆಕಾರ್ಡಿಂಗ್ ಅನ್ನು ತಮ್ಮ ಕುಟುಂಬದ ಸದಸ್ಯರು ಯಾರೂ ಹತ್ತಿರ ಇಲ್ಲದೆ ಇರುವ ವೇಳೆಯಲ್ಲಿ, ಅಥವಾ ಅವರು ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಮಾಡುವುದಾಗಿ ಹೇಳುತ್ತಾರೆ. ಮನೆಯಲ್ಲಿ ತನ್ನ ಗಂಡನಿಗೆ ಮಾತ್ರವಲ್ಲದೆ ಕುಟುಂಬದ ಇತರೆ ಸದಸ್ಯರಿಗೂ ಕೂಡ ಈ ವಿಷಯ ತಿಳಿದಿದೆ ಎನ್ನುವ ಆಕೆ, ತಾನು ಇದರಿಂದ ಹಣವನ್ನು ಗಳಿಸುತ್ತಿರುವ ವಿಚಾರ ಅವರಿಗೆ ಹಿಡಿಸದೆ ಹೋಗಬಹುದು ಎನ್ನುವ ಕಾರಣದಿಂದಲೇ ಅವರು ಇಲ್ಲದೆ ಇರುವ ವೇಳೆಯಲ್ಲಿ ರೆಕಾರ್ಡಿಂಗ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಆಕೆ ತನ್ನ ಈ ವಿಲಕ್ಷಣವಾದ ಕೆಲಸದಿಂದ ಗಳಿಸುವ ಹಣ ಕೂಡ ಕಡಿಮೆಯೇನಿಲ್ಲ.

ಎಮ್ಮ ತಾನು ಹೂಸುವ ವಿಡಿಯೋಗಳನ್ನು ಮಾರಾಟ ಮಾಡುತ್ತಾರೆ. ಇದರಿಂದಲೇ ಆಕೆ 4200 ಡಾಲರ್ ಗಳನ್ನು ಅಂದರೆ ಸುಮಾರು 3 ಲಕ್ಷ ರೂಪಾಯಿಗಳವರೆಗೂ ಆದಾಯವನ್ನೂ ಗಳಿಸುತ್ತಿದ್ದಾರೆ. ತನ್ನ ಕಸ್ಟಮ್ ವೀಡಿಯೋಗಳಿಗಾಗಿ ಆಕೆ ನಿಮಿಷ ಒಂದಕ್ಕೆ 7 ಡಾಲರ್ ಗಳ ಶುಲ್ಕವನ್ನು ವಿಧಿಸುತ್ತಾಳೆ. ಕೊರೊನ ವೇಳೆಯಲ್ಲಿ ಆಕೆ ತನ್ನ ಲೈವ್ ವಿಡಿಯೋಗಳನ್ನು ಕೂಡಾ ಮಾಡಿದ್ದಳು. ಬಹುಶಃ ಜನರು ಅ ಸ ಹ್ಯ ಪಡುವ ಹೂಸಿನಿಂದಲೇ ಲಕ್ಷ ಲಕ್ಷ ಗಳಿಸುವ ವ್ಯಕ್ತಿಯನ್ನು ನೀವು ಕೂಡ ಇದುವರೆಗೂ ನೋಡಿರುವುದು ಸಾಧ್ಯವಿಲ್ಲ ಅಲ್ಲವೇ???