ಕೂದಲಿಗೆ ವ್ಯಾಸಲಿನ್ ಹಚ್ಚುವುದರಿಂದ ಆಗುವ ಲಾಭಗಳು ನಿಜಕ್ಕೂ ಆಶ್ಚರ್ಯ ಗೊಳಿಸುತ್ತದೆ.

ಚಳಿಗಾಲದಲ್ಲಿ ಒಣಗಿದ ತ್ವಚೆಯ ಸಮಸ್ಯೆಯಿಂದ ಮುಕ್ತವಾಗುವ ಸಲುವಾಗಿ ಎಲ್ಲರಿಗೂ ಎಲ್ಲಕ್ಕೂ ಮೊದಲು ವ್ಯಾಸಲಿನ್ ಬೇಕೇ ಬೇಕು. ಏಕೆಂದರೆ ಚಳಿಗಾಲದಲ್ಲಿ ತ್ವಚೆಗೆ ಸಂಬಂಧಿತ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಒಣ ತ್ವಚೆ ಹೊಂದಿರುವವರಿಗೆ ವ್ಯಾಸಲಿನ್ ಇಲ್ಲದೆ ನಡೆಯುವುದಿಲ್ಲ. ಇದೇ ವ್ಯಾಸಲಿನ್ ನಿಂದ ನಮ್ಮ ಕೂದಲಿಗೂ ತುಂಬಾ ಲಾಭ ಆಗುತ್ತದೆ. ಅದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನಾವು ನೋಡುವ.

ವಿಭಜಿತ ಕೂದಲು ಮಹಿಳೆಯರಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಕೂದಲಿನ ಬೆಳವಣಿಗೆ ಸಂಪೂರ್ಣವಾಗಿ ನಿಂತು ಹೋಗುತ್ತದೆ. ಇದರಿಂದಾಗಿ ಕೇಶ ವಿನ್ಯಾಸದಲ್ಲಿ ತುಂಬಾ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಮುಕ್ತಿಪಡೆಯಲು ಕಟಿಂಗ್ ಮಾಡುವುದು ಒಂದೇ ಮಾರ್ಗ ಉಳಿಯುತ್ತದೆ. ಕಟಿಂಗ್ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅದರ ಬೆಳವಣಿಗೆಯೊಂದಿಗೆ ಮತ್ತೆ ಅದೇ ಸಮಸ್ಯೆ ಎದುರಾಗುತ್ತದೆ. ಹಾಗಾದರೆ ಇದಕ್ಕೆ ಉಪಾಯ ಏನು ಅಂತೀರಾ? ಓದಿ ಮತ್ತು ತಿಳಿದುಕೊಳ್ಳಿ.

ಇಲ್ಲಿ ನಾವು ಕೂದಲಿಗಾಗಿ ವ್ಯಾಸಲಿನ್ ನ ಉಪಯೋಗದ ಬಗ್ಗೆ ಹೇಳುವವರಿದ್ದೇವೆ. ವ್ಯಾಸಲಿನ್ ಉಪಯೋಗಿಸುವುದರಿಂದ ಆಗುವ ಲಾಭಗಳನ್ನು ನಾವಿಲ್ಲಿ ತಿಳಿದುಕೊಳ್ಳುವ.

ನಮ್ಮ ಕೂದಲಿನ ಮೇಲೆ ವಾತಾವರಣದಲ್ಲಿಯ ಧೂಳು, ರಸಾಯನ, ಬಿಸಿಲು, ಮತ್ತು ಪ್ರದೂಷಣೆ ಇವುಗಳ ವಿಪರೀತ ಪರಿಣಾಮವಾಗುತ್ತದೆ. ಇವೆಲ್ಲವುಗಳು ಕೂದಲಿನ ಸರಿಯಾದ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುವುದರ ಜೊತೆಗೆ ಕೂದಲನ್ನು ವಿಭಜಿತ ಮಾಡುತ್ತದೆ. ಈ ವಿಭಜಿತ ಕೂದಲಿನ ಸಮಸ್ಯೆಯನ್ನು ವ್ಯಾಸಲಿನ್ ಮುಖಾಂತರ ಹೋಗಲಾಡಿಸಲು ಸಾಧ್ಯವಿದೆ. ಕೂದಲಿಗೆ ವ್ಯಾಸಲಿನ್ ಹಚ್ಚುವದರಿಂದ ಈ ಸಮಸ್ಯೆಯು ದೂರವಾಗುತ್ತದೆ.

ವ್ಯಾಸಲೀನ್ ನಿಂದ ಆಗುವ ಲಾಭಗಳು ಈ ಕೆಳಗಿನಂತಿವೆ:-

ಸ್ಕ್ರಬಿಂಗ್ ಸಲುವಾಗಿ ವ್ಯಾಸಲಿನ್:-

ವ್ಯಾಸಲಿನ್ ನಲ್ಲಿ ಸ್ವಲ್ಪ ಉಪ್ಪು ಬೆರೆಸಿ ಮುಖದ ಮೇಲೆ ಮೆತ್ತಗೆ ಸ್ಕ್ರಬ್ ಮಾಡಿ. ಇದರ ಉಪಯೋಗದಿಂದ ಮುಖದ ಮೇಲಿನ ಸತ್ತ ಜೀವಕೋಶಗಳು ಹೋಗುತ್ತವೆ. ತ್ವಚೆಯು ಕಾಂತಿಯುತವಾಗುತ್ತದೆ. ಈ ರೀತಿಯಾಗಿ ದಿನಂಪ್ರತಿ ಮಾಡುವುದರಿಂದ ಇದರ ಪರಿಪೂರ್ಣ ಲಾಭ ಸಿಗುತ್ತದೆ. ಆನಂತರ ನೋಡಿ ತ್ವಚೆ ಹೇಗೆ ಕಾಂತಿಯುತವಾಗಿ ಹೊಳೆಯುತ್ತದೆ.

ತುಟಿಗಳ ಸ್ಕ್ರಬ್ ಗಾಗಿ ವ್ಯಾಸಲಿನ್:-

ಚಳಿಗಾಲದಲ್ಲಿ ತುಟಿಗಳು ಒಡೆಯುವುದು ಸಾಮಾನ್ಯ. ಈ ಸಮಸ್ಯೆಯನ್ನು ಹೆಚ್ಚು ಕಡಿಮೆ ಎಲ್ಲರೂ ಫೇಸ್ ಮಾಡುತ್ತಾರೆ. ತುಟಿಗಳ ಸ್ಕ್ರಬ್ ಗಾಗಿ ಸಕ್ಕರೆ ಮತ್ತು ವ್ಯಾಸಲಿನ್ ಉಪಯೋಗಿಸಿ. ಈ ಪ್ರಕ್ರಿಯೆಯನ್ನು ದಿನಂಪ್ರತಿ ಮಾಡಿ. ಇದರಿಂದ ತುಟಿಗಳು ಸಾಫ್ಟ್ ಆಗುವುದರ ಜೊತೆಗೆ ಒಡೆಯುವ ಸಮಸ್ಯೆಯಿಂದ ಮುಕ್ತವಾಗುವಿರಿ. ಇದನ್ನು ರಾತ್ರಿಪೂರ್ತಿ ಇಟ್ಟು ಮುಂಜಾನೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ವಿಭಜಿಸಿದ ಕೂದಲಿನಿಂದ ಮುಕ್ತರಾಗಿ:-

ಹೆಚ್ಚುಕಡಿಮೆ ಎಲ್ಲಾ ಹುಡುಗಿಯರು ವಿಭಜನೆಯ ಕೂದಲಿನ ಸಮಸ್ಯೆಗೆ ಒಳಗಾಗಿದ್ದಾರೆ. ಅವುಗಳ ಮೇಲೆ ಏನಾದರೂ ಉಪಾಯ ಅಥವಾ ರಾಸಾಯನಿಕ ಪ್ರಕ್ರಿಯೆ ಅಥವಾ ಬೇರೆ ಯಾವುದಾದರೂ ಟ್ರಿಕ್ಸ್ ಮಾಡಲು ಹೋಗಿ ಸಮಸ್ಯೆ ಮತ್ತಷ್ಟು ಹೆಚ್ಚೇ ಆಗುವುದು. ಇದರಿಂದ ಮುಕ್ತರಾಗಲು ವ್ಯಾಸಲಿನ್ ನನ್ನು ಕೂದಲುಗಳಿಗೆ ಹಚ್ಚಿ 10 ರಿಂದ 15 ನಿಮಿಷಗಳವರೆಗೆ ಬಿಡಿ. ಆನಂತರ ಕೂದಲನ್ನು ತೊಳೆದುಕೊಳ್ಳಿ. ಈ ಪ್ರಕ್ರಿಯೆಯನ್ನು ವಾರದಲ್ಲಿ 2 ಅಥವಾ 3 ಬಾರಿ ಮಾಡಿ.

ಮೇಕಪ್ ರಿಮೂವ್ ಮಾಡಲು ವ್ಯಾಸಲಿನ್ ಉಪಯೋಗ:

ಮುಖಕ್ಕೆ ಮಾಡಿಕೊಂಡ ಮೇಕಪ್ ನ್ನು ತೆಗೆದು ಹಾಕಲು ಇದರ ಚೆನ್ನಾಗಿ ಉಪಯೋಗ ಆಗುತ್ತದೆ. ಇದನ್ನು ಮುಖಕ್ಕೆ ಹಚ್ಚಿಕೊಂಡು ನಂತರ ಕಾಟನ್ ಸಹಾಯದಿಂದ ನಿಧಾನವಾಗಿ ಮೇಕಪ್ ತೆಗೆದು ಹಾಕಬಹುದು. ಮೇಕಪ್ ತೆಗೆದಾದ ಮೇಲೆ ಮುಖವನ್ನು ಚೆನ್ನಾಗಿ ತಣ್ಣೀರಿನಿಂದ ತೊಳೆಯಿರಿ. ಮುಖದ ಮೇಲಿನ ಮೇಕಪ್ ಎಲ್ಲವೂ ಚೆನ್ನಾಗಿ ತೊಳೆದು ಹೋಗುವದು. ಜೊತೆಗೆ ಯಾವುದೇ ಪ್ರಕಾರದ ಸಂಸರ್ಗವಾಗುವದಿಲ್ಲ.