ಮೈಮರೆತು ಕುಣಿಯುತ್ತಿದ್ದ ತಾತ, ಅಜ್ಜಿಯ ಕೈಯಲ್ಲಿ ಬೆತ್ತ ನೋಡಿ ಪರಾರಿಯಾದ! Video ನೋಡಿ ಬಿದ್ದು ಬಿದ್ದು ನಕ್ಕ ಜನ

ಮನುಷ್ಯ ಕುಣಿಯಲು ಆರಂಭಿಸಿದರೆ ಅನೇಕ ಸಂದರ್ಭಗಳಲ್ಲಿ ಮೈಮರೆತು ಕುಣಿಯಲು ತೊಡಗುತ್ತಾನೆ. ತನ್ನ ಸುತ್ತಮುತ್ತಲು ಯಾರಿದ್ದಾರೆ, ತನ್ನನ್ನು ಯಾರಾದರೂ ನೋಡುತ್ತಿದ್ದಾರೆಯೇ ಅಥವಾ ತಾನು ಕುಣಿಯುವುದನ್ನು ನೋಡಿ ಜನ ಏನಾದರೂ ಅಂದುಕೊಳ್ಳುವರೇ? ಇಂತಹ ಯಾವುದೇ ಆಲೋಚನೆಗಳನ್ನು ಮಾಡದೆ ಮನ ಬಂದಂತೆ ಕುಣಿದು ಕುಪ್ಪಳಿಸಿ ಆನಂದ ಪಡುವವರನ್ನು ನಾವು ಎಷ್ಟೋ ಸಂದರ್ಭಗಳಲ್ಲಿ ನೋಡಿದ್ದೇವೆ. ವಿಶೇಷವಾಗಿ ಜಾತ್ರೆಗಳು, ಮೆರವಣಿಗೆಗಳು, ಆರ್ಕೆಸ್ಟ್ರಾಗಳು ಹಾಗೂ ಡೋಲು ತಮಟೆಗಳನ್ನು ಹೊಡೆಯುವ ಕಡೆಗಳಲ್ಲಿ ಕೆಲವರು ಮೈಮರೆತು ಕುಣಿಯುವುದು ಸಹಜವಾಗಿ ಕಾಣುವ ದೃಶ್ಯ ವಾಗಿರುತ್ತದೆ. ಕೆಲವರಿಗೆ ತಮಟೆಯ ಸದ್ದು ಕೇಳಿದ ಕೂಡಲೇ ಮೈಯಲ್ಲಿ ಮಿಂಚಿನ ಸಂಚಾರ ಆದಂತಹ ಅನುಭವವಾಗಿ, ತಾವು ಇರುವ ಕಡೆಯಲ್ಲೇ ಹೆಜ್ಜೆ ಹಾಕುವುದು ಕೂಡ ನಾವು ನೋಡಿದ್ದೇವೆ‌

ಹೀಗೆ ಕುಣಿಯುವುದಕ್ಕೆ ಯಾವುದೇ ಅಭ್ಯಾಸದ ಅವಶ್ಯಕತೆ ಇರುವುದಿಲ್ಲ. ಮನಸ್ಸಿಗೆ ಸಿಗುವ ಖುಷಿ, ಸುತ್ತಮುತ್ತ ಇರುವವರು ಚಪ್ಪಾಳೆ ಹೊಡೆದು ನೀಡುವ ಪ್ರೋತ್ಸಾಹ ಇವುಗಳೇ ಕುಣಿಯುವವರಿಗೆ ಇನ್ನಷ್ಟು ಜೋಶ್ ತುಂಬುತ್ತದೆ, ಮತ್ತಷ್ಟು ಜೋರಾಗಿ ಕುಣಿಯಲು ಪ್ರೇರಣೆಯಾಗುತ್ತದೆ. ಇನ್ನು ಮದ್ಯ ಸೇವಿಸಿದ ವ್ಯಕ್ತಿಯೇನಾದರೂ ಡಾನ್ಸ್ ಮಾಡಿದ್ದಾನೆಂದರೆ ಆಗಲಂತೂ ಅವನು ಸ್ಥಿಮಿತ ಕಳೆದುಕೊಂಡು ಪ್ರಜ್ಞೆ ತಪ್ಪುವ ವರೆಗೂ ಕುಣಿದರೂ ಆಶ್ಚರ್ಯವನಿಲ್ಲ. ಈಗ ಸೋಶಿಯಲ್ ಮೀಡಿಯಾದಲ್ಲಿ ಇಂತಹೊಂದು ವಿಚಾರಕ್ಕೆ ಸಂಬಂಧಿಸಿದ ಅಂದರೆ ಮೈಮರೆತು ಕುಣಿಯುತ್ತಿದ್ದ ವ್ಯಕ್ತಿಯೊಬ್ಬರ ವಿಡಿಯೋ ಭರ್ಜರಿ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹಿರಿಯ ವಯಸ್ಸಿನ ವ್ಯಕ್ತಿ ಅಂದರೆ ಒಬ್ಬ ತಾತ ಬಹಳ ಜೋಶ್ ಆಗಿ ಡ್ಯಾನ್ಸ್ ಅನ್ನು ಮಾಡುತ್ತಿದ್ದಾರೆ. ತಾತನ ಡ್ಯಾನ್ಸ್ ನೋಡಿದ ಜನರು ವಯಸ್ಸು ಎನ್ನುವುದು ಒಂದು ಸಂಖ್ಯೆ ಮಾತ್ರವೇ ಆದರೆ ಆ ವ್ಯಕ್ತಿಯ ಮನಸ್ಸು ಇನ್ನೂ ಯುವಕನಂತೆ ಎಂದು ಹೊಗಳಿದ್ದಾರೆ. ತಾತನು ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿದ್ರೆ ಅಲ್ಲೇ ಸುತ್ತಮುತ್ತ ನೆರೆದಿದ್ದವರಿಗೆ ಅದು ಸಖತ್ ಮನರಂಜನೆಯನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ವಿಷಯ ಇಲ್ಲಿಗೆ ಮುಗಿಯುವುದಿಲ್ಲ ಅದೇ ವಿಡಿಯೋದ ಇನ್ನೊಂದು ಭಾಗ ಇನ್ನೂ ರೋಚಕವಾಗಿದೆ.

ವೀಡಿಯೋ ಮುಂದುವರೆದಂತೆ ಕಂಡಂತಹ ದೃಶ್ಯವನ್ನು ನೋಡಿ ಅನೇಕ ಜನ ಗಂಡಸರು ಭ ಯ ಪಡುವಂತಾಗಿದೆ.. ವಯಸ್ಸಾದರೂ ಕೂಡಾ ಗಂಡಸರ ಮೇಲೆ ಭ ಯ ದ ಛಾಯೆ ಮಾಸಿಲ್ಲ ಎನ್ನುವಂತೆ ಕಂಡು ಬಂದಿದೆ. ಹಾಗಿದ್ದರೆ ಆ ಭ ಯ ಯಾವುದು ಬನ್ನಿ ತಿಳಿಯೋಣ. ಈ ವಿಡಿಯೋವನ್ನು ಅವನಿಷ್ ಶರಣ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಮಾರ್ಚ್ 15 ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದ ಶೀರ್ಷಿಕೆಯಲ್ಲಿ ಅವರು, “ವೃದ್ಧಾಪ್ಯದವರೆಗೂ ಅ ಪಾ ಯ ಹಾಗೆ ಇರುತ್ತದೆ” ಎಂದು ಬರೆದುಕೊಂಡಿದ್ದಾರೆ.
22 ಸೆಕೆಂಡುಗಳ ಈ ಸಣ್ಣ ವಿಡಿಯೋ ಕ್ಲಿಪ್ ಅನ್ನು ಗಮನಿಸಿದಾಗ ಜನರೆಲ್ಲರೂ ಕೂಡ ಬಹಳ ಉತ್ಸಾಹದಿಂದ ಬಹಳ ಸಂತೋಷದಿಂದ ಕುಣಿಯುತ್ತಿರುವುದನ್ನು ಗಮನಿಸಬಹುದು.

ಅವರ ಮಧ್ಯದಲ್ಲಿ ಧೋತಿ ಮತ್ತು ಕುರ್ತಾ ಧರಿಸಿದ ತಾತ ಒಬ್ಬರು ಆ ಜನರೊಂದಿಗೆ ಬಹಳ ಉತ್ಸಾಹದಿಂದ ಮೈಮರೆತು ಕುಣಿಯುತ್ತಿದ್ದಾರೆ. ಆ ವಯಸ್ಸಿನಲ್ಲೂ ಮೈಮರೆತು, ಉತ್ಸಾಹದಿಂದ ಕುಣಿಯುತ್ತಿರುವ ಅವರ ಜೋಶ್ ಕಂಡು ಅಲ್ಲಿರುವವರು ಕೂಡ ಅದಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಉತ್ಸಾಹದಿಂದ ಕುಣಿಯುತ್ತಿದ್ದ ಆ ವಾತಾವರಣದಲ್ಲಿ ಒಂದು ಬದಲಾವಣೆಯಾಗುತ್ತದೆ. ಏಕೆಂದರೆ ಕುಣಿಯುತ್ತಿದ್ದ ತಾತನ ಹೆಂಡತಿ ಅಜ್ಜಿ ತನ್ನ ಒಂದು ಕೈಯಲ್ಲಿ ಕೋಲನ್ನು ಹಿಡಿದು ಅಲ್ಲಿಗೆ ಬರುತ್ತಾಳೆ.

ವಿಡಿಯೋ ನೋಡಿ

ಅಜ್ಜಿಯು ಕೋಲನ್ನು ಹಿಡಿದು ಬರುತ್ತಿರುವುದನ್ನು ನೋಡಿದ ತಾತ ಕೂಡಲೇ ಭ ಯದಿಂದ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 20 ಸಾವಿರಕ್ಕಿಂತ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದರೆ, 3000ಕ್ಕೂ ಅಧಿಕ ಜನರು ಲೈಕ್ ಗಳನ್ನು ನೀಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ಹೆಂಡತಿಗೆ ಭ ಯ ಪಡದ ಒಬ್ಬ ಗಂಡನಾದರೂ ಇದ್ದರೆ ತೋರಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಅಪಾಯವು ಜೀವನಪೂರ್ತಿ ಇರುತ್ತದೆ ಜೀವನದ ನಂತರವೂ ಕೂಡಾ ಕಾಡುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇನ್ನೊಬ್ಬರು ಎಚ್ಚರಿಕೆ ಕಳೆಯಿತು ಹೆಂಡತಿ ಆಗಮಿಸಿದಳು ಎಂದು ಕಾಮೆಂಟ್ ಮಾಡಿದ್ದಾರೆ.