ಕೈಯಲ್ಲಿ ಟೆನಿಸ್ ಬಾಲ್ ಗೂ ಕಾಸಿರಲಿಲ್ಲ, ಆದ್ರೆ ರೋಡಲ್ಲಿ ಚಿಕನ್ ಮಾರಿ ಇಂದು ಯಾರ್ಕರ್ ಕಿಂಗ್ ಆಗಿರೋ ಕ್ರಿಕೆಟರ್

ಮೊನ್ನೆ ಪುಣೆಯಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ತಂಡದ ನಡುವಿನ ಏಕದಿನ ಪಂದ್ಯ ಕೊನೆಯ ಎಸೆತದವರೆಗೂ ರೋಮಾಂಚನವನ್ನು ಕಾಯ್ದುಕೊಂಡಿತ್ತು. ಈ ಪಂದ್ಯದಲ್ಲಿ ಭಾರತವು ಏಳು ರನ್ನುಗಳಿಂದ ವಿಜಯ ಸಾಧಿಸುವದರ ಜೊತೆಗೆ ಸರಣಿಯನ್ನು ಸಹ ತನ್ನ ಹೆಸರಿಗೆ ಮಾಡಿಕೊಂಡಿತು. ಈ ಜಯದಲ್ಲಿ ಭಾರತ ತಂಡದ ಬಾಲರ್ ಗಳು ಮಹತ್ವದ ಪಾತ್ರವನ್ನು ವಹಿಸಿದರು. 49 ನೆಯ ಓವರ್ ಹಾರ್ದಿಕ್ ಪಾಂಡ್ಯ ಒಗೆದರು. ಈ ಓವರ್ ನಲ್ಲಿ ಹಾರ್ದಿಕ ಅವರು ಬರೀ ಐದು ರನ್ನುಗಳನ್ನು ನೀಡಿದರು. ಅದಾದ ನಂತರ 50 ನೇ ಓವರ್ ಯಾರಿಗೆ ನೀಡಬೇಕೆಂಬುದು ಭಾರತ ತಂಡಕ್ಕೆ ಪ್ರಶ್ನೆಯಾಗಿತ್ತು. ಆಗ ಮುಂದೆ ಬಂದರು ಭಾರತದ ಉದಯೋನ್ಮುಖ ಯಾರ್ಕರ್ ಕಿಂಗ್ ಆಟಗಾರ ಟಿ ನಟರಾಜನ್. ಇಂಗ್ಲೆಂಡ್ ತಂಡಕ್ಕೆ 14 ರನ್ ಗಳು ಬೇಕಿರುವಾಗ ಟಿ ನಟರಾಜನ್ ಅವರು ಬರೀ ಆರು ರನ್ ಗಳನ್ನು ನೀಡಿ ಭಾರತಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

ಸದ್ಯಕ್ಕೆ ಭಾರತದ ಯಾರ್ಕರ್ ಕಿಂಗ್ ಎಂದೇ ಖ್ಯಾತಿ ಪಡೆಯುತ್ತಿರುವ ಟೀ ನಟರಾಜನ್ ಅವರ ಕ್ರಿಕೆಟ್ ನಲ್ಲಿಯ ಈ ಪ್ರವಾಸ ಅಷ್ಟೊಂದು ಸರಳವಾಗಿರಲಿಲ್ಲ. ಒಂದು ಸಮಯದಲ್ಲಿ ಟೆನಿಸ್ ಬಾಲ್ ಸಹಿತ ಕೊಂಡುಕೊಳ್ಳುವ ಶಕ್ತಿ ಇರದ ನಟರಾಜನ್ ಅವರು ರಸ್ತೆಯ ಮೇಲೆ ಚಿಕನ್ ಮಾರುತ್ತಿದ್ದರು. ಇಂದು ಟೀ ನಟರಾಜನ್ ಅವರು ಭಾರತ ತಂಡದ ಟೆಸ್ಟ್, ಒನ್ ಡೇ ಮತ್ತು ಟಿ-20 ಮೂರು ಪ್ರಕಾರದ ಕ್ರಿಕೆಟ್ನಲ್ಲಿ ಆಡುತ್ತಿದ್ದಾರೆ. ಅವರು ಕ್ರಿಕೆಟರ್ ಆಗುವ ಹಿಂದಿನ ಸಂಘರ್ಷ ನೋಡಿ ಹೇಗಿತ್ತು.

2020 ರ ಐಪಿಎಲ್ ಟೂರ್ನಿ ಮುಗಿದ ನಂತರ ಭಾರತದ ಉದಯೋನ್ಮುಖ ಆಟಗಾರನ ಚರ್ಚೆ ಭಾರತದಲ್ಲಷ್ಟೇ ಅಲ್ಲ ಜಗತ್ತಿನ ತುಂಬಾ ನಡೆಯುತ್ತಿದೆ. ಇವರ ಪೂರ್ಣ ಹೆಸರು ತಂಗುರಾಸು ನಟರಾಜನ್.

ನಟರಾಜನ್ ಅವರ ಜನ್ಮ 27 ಮೇ 1991 ರಲ್ಲಿ ತಮಿಳುನಾಡಿನ ಸಾಲೆಮ್ ನ ಚಿನ್ನಮಪಟ್ಟಿ ಹೆಸರಿನ ಒಂದು ಚಿಕ್ಕ ಊರಲ್ಲಿ ಆಯಿತು. ಇವರ ಪೂರ್ಣ ಹೆಸರು ತಂಗರಾಸು ನಟರಾಜನ್. ಮನೆಯ ಪರಿಸ್ಥಿತಿ ತುಂಬಾ ಬಿಕ್ಕಟ್ಟಾಗಿತ್ತು. ತಂದೆ ನೌಕರಿ ಮಾಡುತ್ತಿದ್ದರೆ ತಾಯಿಯು ರಸ್ತೆ ಬದಿಯಲ್ಲಿ ಚಿಕನ್ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಟಿ ನಟರಾಜನ್ ಅವರ ವಯಸ್ಸು 29 ಇದೆ. ಪರಿಸ್ಥಿತಿಯ ಕಾರಣದಿಂದಾಗಿ ಅವರ ಮದುವೆಯು ಸಹ ಬೇಗ ಆಯಿತು.

ಬಡತನದ ಕಾರಣದಿಂದಾಗಿ ನಟರಾಜನ್ ಕುಟುಂಬಕ್ಕೆ ಕೆಲವೊಂದು ಸಲ ಒಂದೇ ಸಮಯದ ಊಟ ಲಭ್ಯವಾಗುತ್ತಿತ್ತು. ಎಷ್ಟೋ ಸಲ ಉಪವಾಸ ಮಲಗಬೇಕಾಗುತ್ತಿತ್ತು. ಇಂತಹ ಪರಿಸ್ಥಿತಿಯಿಂದ ಮೇಲೆ ಬಂದು ಭಾರತ ಕ್ರಿಕೆಟ್ ತಂಡದ ಸದಸ್ಯನಾಗುವುದು ಅಷ್ಟೊಂದು ಸುಲಭದ ಮಾತಲ್ಲ.

ನಟರಾಜನ್ ಯಾವಾಗ ಟೆನ್ನಿಸ್ ಬಾಲಿನಿಂದ ಆಡುತ್ತಿದ್ದರೋ ಆಗ ಅವರ ಆಕ್ಷನ್ ಮೇಲೆ ಪ್ರಶ್ನೆ ನಿರ್ಮಾಣವಾಗಿತ್ತು. ಮುಂದೆ ಕೆಲವು ದಿನಗಳವರೆಗೆ ಆಡುವುದನ್ನೇ ನಿಲ್ಲಿಸಿದರು. ಈ ಸಂದರ್ಭದಲ್ಲಿ ನಟರಾಜನ್ ಅವರು ಸೋಲೊಪ್ಪಿಕೊಳ್ಳದೆ ಮರಳಿ ಯತ್ನವ ಮಾಡಿ ಮತ್ತೊಮ್ಮೆ ಮೈದಾನದಲ್ಲಿ ಇಳಿದರು. ಮರಳಿ ಬಂದಾಗ ನಿಜಕ್ಕೂ ಎಲ್ಲರನ್ನು ಆಶ್ಚರ್ಯಚಕಿತನನ್ನಾಗಿ ಮಾಡಿದರು. ನಟರಾಜನ್ ಅವರು ಒಂದೇ ಓವರ್ ನಲ್ಲಿ 6 ಬಾಲ್ ಗಳನ್ನು ಯಾರ್ಕರ್ ಒಗೆದು ಎಲ್ಲರನ್ನು ಮಂತ್ರಮುಗ್ಧ ಮಾಡಿದರು.

ಅವರ ಗುರು A ಜಯಪ್ರಕಾಶರ ದೃಷ್ಟಿ ನಟರಾಜನ್ ಅವರ ಮೇಲೆ ಬಿದ್ದ ನಂತರ ಇವರ ಜೀವನವೇ ಬದಲಾಯಿತು. ಅವರು ನಟರಾಜನ್ ಗೆ ಚೆನ್ನೈಗೆ ಕಳುಹಿಸಿದರು. ಇವರ ಎಲ್ಲ ಸಮಸ್ಯೆ ಜಯಪ್ರಕಾಶ್ ಅವರು ದೂರ ಮಾಡುತ್ತಾ ಹೋದರು. ನಟರಾಜನ್ ಅವರಿಗೆ ಮೊದಲ ಬಾರಿ 2011 ರಲ್ಲಿ ಅವಕಾಶ ದೊರೆಯಿತು. ಆಗ ಇವರ ಪ್ರದರ್ಶನ ಚೆನ್ನಾಗಿ ಆಯಿತು. ಇದೇ ಕಾರಣದಿಂದ ರಣಜಿಯಲ್ಲಿ ಸ್ಥಾನವನ್ನು ಪಡೆದರು. ಮುಂದೆ 5 ಜನೆವರಿ 2015 ರಲ್ಲಿ ತಮಿಳುನಾಡಿನ ಕಡೆಯಿಂದ ಮೊದಲ ರಣಜಿ ಪಂದ್ಯವನ್ನು ಆಡಿದರು. ಮುಂದೆ 2017 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮೂರು ಕೋಟಿ ರೂಪಾಯಿಗಳಿಗೆ ಇವರನ್ನು ಖರೀದಿಸಿತು. ಆದರೆ ಆರು ಪಂದ್ಯಗಳಲ್ಲಿ ಬರಿ ಎರಡು ವಿಕೆಟ್ ಗಳನ್ನು ಪಡೆದರು. ಜೊತೆಗೆ ಗಾಯದ ಸಮಸ್ಯೆಯಿಂದಾಗಿ ಪಂದ್ಯಗಳು ಸಹ ಆಡಲಿಲ್ಲ.

ತಮ್ಮ ಕಳಪೆ ಸಾಧನೆಯಿಂದಾಗಿ ಮೂರು ಕೋಟಿ ರೂಪಾಯಿಗಳ ಬೆಲೆ ಮುಂದೆ ಐಪಿಎಲ್ ನಲ್ಲಿ 40 ಲಕ್ಷಕ್ಕೆ ಬಂದಿತು. ಈ ಬೆಲೆಯಲ್ಲಿ ನಟರಾಜನ್ ಅವರಿಗೆ ಸನ್ರೈಸರ್ಸ್ ಹೈದರಾಬಾದ್ ತಂಡವು ಖರೀದಿಸಿತು. ಆಗ ಮಾತ್ರ ಅವರ ಜೀವನ ಸಂಪೂರ್ಣವಾಗಿ ಬದಲಾಯಿತು. ಇಂದು ಐಪಿಎಲ್ ನಲ್ಲಿ ನಟರಾಜನ್ ಅವರು ವಿಶೇಷ ಗುರುತನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಈಗ ತಮಗಾಗಿ ಒಂದು ಸುಂದರ ಮನೆಯನ್ನು ಕಟ್ಟಿಕೊಂಡಿದ್ದಾರೆ. ಜೊತೆಗೆ ಊರಲ್ಲಿಯ ಮಕ್ಕಳಿಗಾಗಿ ಒಂದು ಕ್ರಿಕೆಟ್ ಅಕಾಡೆಮಿ ಪ್ರಾರಂಭಿಸಿದ್ದಾರೆ.

ಟೀ ನಟರಾಜನ್ ಅವರು 2020 ರ ಐಪಿಎಲ್ ನಲ್ಲಿ ಎಬಿ ಡಿವಿಲಿಯರ್ಸ್ ಅವರಂತಹ ದಿಗ್ಗಜ ಬ್ಯಾಟ್ಸ್ ಮನ್ ರನ್ನು ಬೋಲ್ಡ್ ಮಾಡಿದ್ದಾರೆ. ಈ ಸೀಸನ್ ನಲ್ಲಿ ಅವರು ಒಟ್ಟು 60 ಯಾರ್ಕರಗಳನ್ನು ಎಸೆದಿದ್ದಾರೆ. ಐಪಿಎಲ್ ನಂತರ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡದಲ್ಲಿ ಶಾಮೀಲು ಮಾಡಿದರು. ಆಸ್ಟ್ರೇಲಿಯಾ ವಿರುದ್ಧದ ಸರಣಿ ವಿಜಯದಲ್ಲಿ ನಟರಾಜನ್ ಅವರು ಮಹತ್ವದ ಪಾತ್ರ ವಹಿಸಿದರು. ನಟರಾಜನ್ ಅವರಿಗೆ ವರುಣ್ ಚಕ್ರವರ್ತಿ ಗಾಯಕ್ಕೆ ಈಡಾದ ಕಾರಣದಿಂದಾಗಿ ತಂಡದಲ್ಲಿ ಅವಕಾಶ ದೊರಕಿತು. ದೊರೆತ ಅವಕಾಶವನ್ನು ನಟರಾಜನ್ ಅವರು ಸದುಪಯೋಗಪಡಿಸಿಕೊಂಡರು. ಕ್ರಿಕೆಟಿನ ಎಲ್ಲ ಪ್ರಕಾರಗಳಲ್ಲಿ ಒಂದೇ ಸಮಯಕ್ಕೆ ನಟರಾಜನ್ ಎಂಟ್ರಿ ಮಾಡಿದರು.