ಬೇಟೆಯಾಡಲು ಬಂದ ಬೆಕ್ಕಿಗೆ ಸತ್ತಂತೆ ನಟಿಸಿ ಚಳ್ಳೆಹಣ್ಣು ತಿನ್ನಿಸಿದ ಇಲಿ: ಏಪ್ರಿಲ್ 1 ರಂದು ಆಯ್ತು Video ವೈರಲ್

ಏಪ್ರಿಲ್ ಒಂದು ಬಂತೆಂದರೆ ಬಹಳಷ್ಟು ಜನರು ತಮ್ಮ ಸ್ನೇಹಿತರನ್ನು, ಪರಿಚಯದವರನ್ನು ಹಾಗೂ ಬಂಧುಗಳನ್ನು ಮೂ ರ್ಖರನ್ನಾಗಿ ಮಾಡಲು, ಮೊದಲೇ ಯೋಜನೆಗಳನ್ನು, ಸಾಕಷ್ಟು ಪ್ಲಾನ್ ಗಳನ್ನು ಮಾಡಿಕೊಳ್ಳುತ್ತಾರೆ. ಏಕೆಂದರೆ ಏಪ್ರಿಲ್ ಒಂದನ್ನು ವಿಶ್ವದಾದ್ಯಂತ ಮೂರ್ಖರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ. ಈ ದಿನದಂದು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೂಡಾ ಅನೇಕರು ತಮ್ಮ ಸ್ನೇಹಿತರು ಹಾಗೂ ಬಂಧುಗಳಿಂದ ಫೂಲ್ ಆಗಿ ನಗೆಪಾಟಲಿಗೆ ಗು ರಿ ಯಾಗುವುದೂ ಸಾಮಾನ್ಯವಾಗಿ ನಡೆದೇ ನಡೆಯುತ್ತದೆ. ಆದರೆ ಇಂತಹ ಘಟನೆಗಳಿಗೆ ಸಂಪೂರ್ಣವಾಗಿ ಭಿನ್ನವಾಗಿ ಇಲ್ಲೊಂದು ಪುಟ್ಟ ಹಕ್ಕಿಯು ಬೆಕ್ಕೊಂದನ್ನು ಫೂಲ್ ಮಾಡಿರುವ ವಿಡಿಯೋ ಒಂದು ಏಪ್ರಿಲ್ ಒಂದರಂದು ಸೋಶಿಯಲ್ ಮೀಡಿಯಾ ಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ನೆಟ್ಟಿಗರು ವಿಡಿಯೋವನ್ನು ನೋಡಿ ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ ಹಾಗೂ ನಕ್ಕು ಖುಷಿ ಪಡುತ್ತಿದ್ದಾರೆ.

ಬಹಳ ವೇಗವಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೋಡಿದರೆ ನಿಮ್ಮ ಹೊಟ್ಟೆ ಕೂಡ ಹುಣ್ಣಾಗುವಂತೆ ನಗುವ ಸಾಧ್ಯತೆಗಳು ಖಂಡಿತಾ ಇವೆ. ಅಲ್ಲದೇ ನೀವು ಕೂಡಾ ಮೆಚ್ಚುಗೆಯನ್ನು ನೀಡದೇ ಇರಲಾರಿರಿ. ಹೇಗೆ ಒಂದು ಪುಟ್ಟ ಹಕ್ಕಿಯು ಬೆಕ್ಕನ್ನು ಮೋಜಿನ ಆಟದ ಮೂಲಕ ಏಪ್ರಿಲ್ ಫೂಲ್ ಮಾಡಿತು ಎಂದು ಈ ವಿಡಿಯೋದಲ್ಲಿ ನಾವು ನೋಡಬಹುದಾಗಿದೆ. ಬೆಕ್ಕು ಬೇ ಟೆಯನ್ನು ಆಡಲು ಒಂದು ಹಕ್ಕಿಯನ್ನು ಹಿಡಿಯಲು ಬಂದಿದೆ. ಯಾವಾಗ ಬೆಕ್ಕು ಪುಟ್ಟ ಹಕ್ಕಿಯಾದ ಗುಬ್ಬಿಯ ಬಳಿಗೆ ಬಂದಿತೋ ಆಗ ತನ್ನನ್ನು ಹಿಡಿಯಲು ಬೆಕ್ಕು ಬರುತ್ತಿದೆ ಎಂಬುದನ್ನು ಅರ್ಥಮಾಡಿಕೊಂಡ ಪುಟ್ಟ ಹಕ್ಕಿ ತನ್ನ ಚಾಲಾಕಿತನವನ್ನು ಬೆಕ್ಕಿನ ಮುಂದೆ ಪ್ರದರ್ಶನ ಮಾಡಿದೆ.

ವಿಡಿಯೋದಲ್ಲಿ ಗಮನಿಸಿದಾಗ ನೆಲದ ಮೇಲೆ ಗುಬ್ಬಿಯೊಂದು ಇರುವುದನ್ನು ನೋಡಿ ಬೆಕ್ಕೊಂದು ಅದನ್ನು ಹಿಡಿಯಲು ಬಂದಿದೆ. ಬೆಕ್ಕು ಹತ್ತಿರಕ್ಕೆ ಬಂದ ಕೂಡಲೇ ಗುಬ್ಬಿಯು ಸತ್ತಂತೆ ನಟಿಸಿದೆ. ಗುಬ್ಬಚ್ಚಿ ನಿಜವಾಗಿಯೂ ಸತ್ತು ಹೋಗಿದೆ ಎಂದು ಭಾವಿಸಿದ ಬೆಕ್ಕು, ಆದರೂ ಒಮ್ಮೆ ಪರೀಕ್ಷಿಸಿ ನೋಡೋಣ ಎಂದು ಮಲಗಿಕೊಂಡು ತನ್ನ ಕಾಲುಗಳಿಂದ ಸತ್ತಂತೆ ನಟಿಸುವ ಗುಬ್ಬಚ್ಚಿಯ ದೇಹವನ್ನು ಅಲ್ಲಾಡಿಸಿ ಗುಬ್ಬಿ ಸತ್ತಿದೆಯೋ ಇಲ್ಲವೋ ಎಂದು ಪರೀಕ್ಷಿಸಿದೆ. ಬೆಕ್ಕು ಕಾಲಿನಿಂದ ಗುಬ್ಬಿಯ ದೇಹವನ್ನು ನೂಕಿದಾಗ ಅದು ಪಕ್ಕಕ್ಕೆ ಹೊರಳಿದೆ. ಅಲ್ಲಿಗೆ ಬಹುಶಃ ಬೆಕ್ಕಿಗೆ ಗುಬ್ಬಿ ಸತ್ತಿರುವುದು ಖಚಿತವಾಗಿದ್ದು, ಅದರ ದೃಷ್ಟಿ ಪಕ್ಕಕ್ಕೆ ಸರಿದಿದೆ. ಯಾವಾಗ ಬೆಕ್ಕಿನ ದೃಷ್ಟಿಯು ಸ್ವಲ್ಪ ಪಕ್ಕಕ್ಕೆ ಸರಿಯಿತೋ, ಚಾಲಾಕಿ ಗುಬ್ಬಿಯು ಅದೇ ಸರಿಯಾದ ಸಮಯವೆಂದು ಪುರ್ರನೆ ಹಾರಿಕೊಂಡು ಬೆಕ್ಕಿನಿಂದ ತಪ್ಪಿಸಿಕೊಂಡು ಹೋಗಿದೆ.

ಹಾರಿ ಹೋಗುವ ಗುಬ್ಬಿಯನ್ನು ಹಿಡಿಯಲು ಬೆಕ್ಕು ಪ್ರಯತ್ನಪಟ್ಟಿದೆಯಾದರೂ ಅದು ಸಾಧ್ಯವಾಗಿಲ್ಲ. ಬೆಕ್ಕು ಖಂಡಿತವಾಗಿಯೂ ಗುಬ್ಬಿಯ ಆಟಕ್ಕೆ ಶಾ ಕ್ ಆಗಿರುತ್ತದೆ. ಈ ಸುಂದರವಾದ ಹಾಗೂ ಹಾಸ್ಯಮಯ ಎನಿಸುವ ಹಿತವಾದ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿದ ಅವರು ಶೀರ್ಷಿಕೆಯಲ್ಲಿ ಏಪ್ರಿಲ್ ಫೂಲ್ ಎಂದು ಬರೆದುಕೊಂಡಿದ್ದಾರೆ. ಏಪ್ರಿಲ್ ಒಂದರ ವಿಶೇಷ ದಿನದಂದು ಇವರು ಶೇರ್ ಮಾಡಿದ ವಿಡಿಯೋವನ್ನು ಈಗಾಗಲೇ 17 ಸಾವಿರಕ್ಕಿಂತ ಹೆಚ್ಚಿನ ಜನರು ವೀಕ್ಷಣೆ ಮಾಡಿದ್ದರೆ, ಎರಡು ಸಾವಿರಕ್ಕಿಂತ ಅಧಿಕ ಮಂದಿ ಇಷ್ಟಪಟ್ಟಿದ್ದಾರೆ.

ವಿಡಿಯೋ ನೋಡಿ

ಬಹಳಷ್ಟು ಜನರು ವಿಡಿಯೋವನ್ನು ನೋಡಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ ಟ್ವಿಟರ್ ಬಳಕೆದಾರರೊಬ್ಬರು, “ಬೆಕ್ಕು ಮಂಗನಾದ ಕಥೆ” ಎಂದು ಈ ವಿಡಿಯೋಗೆ ಟೈಟಲ್ ನೀಡಿದ್ದಾರೆ. ಮತ್ತೊಬ್ಬರು ಪ್ರಾಣ ಉಳಿಸಿಕೊಂಡ ಗುಬ್ಬಚ್ಚಿಗೆ ಕಂಗ್ರಾಜುಲೇಷನ್ಸ್ ಎಂದಿದ್ದಾರೆ. ಇದೊಂದು ಸ್ಮಾರ್ಟ್ ಗುಬ್ಬಚ್ಚಿ ಒಂದು ಒಬ್ಬರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಮತ್ತೊಬ್ಬ ಮಹಿಳೆ ಏಪ್ರಿಲ್ ಒಂದರಂದು ಅನ್ಯ ರನ್ನು ಮೂರ್ಖರನ್ನಾಗಿ ಮಾಡುವ ಅತ್ಯುತ್ತಮ ವಿಡಿಯೋ. ಮನುಷ್ಯರೇ ಮಾತ್ರವೇ ನಟಿಸುತ್ತಾರೆ ಎನ್ನುವ ನನ್ನ ಆಲೋಚನೆಯನ್ನು ಈ ವಿಡಿಯೋ ಬದಲಿಸಿತು ಎಂದು ಬರೆದುಕೊಂಡಿದ್ದಾರೆ.