ಸ್ಯಾಂಡಲ್ವುಡ್ ನಟಿಯ ಫಿಟ್ನೆಸ್ ವೀಡಿಯೋ: ವರ್ಕೌಟ್ ಜೊತೆಗೆ ನಟಿಯ ಮಾದಕ ಡಾನ್ಸ್, ನೋಡಿ ಅದ್ಭುತ ಎಂದ ಅಭಿಮಾನಿಗಳು

ಫಿಟ್ನೆಸ್, ವರ್ಕೌಟ್ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಕೊರೊನಾ ನಂತರವಂತೂ ಜನ ಆರೋಗ್ಯ, ಫಿಟ್ನೆಸ್, ವರ್ಕೌಟ್ ಎಂದು ಹಿಂದೆಂದಿಗಿಂತಲೂ ಹೆಚ್ಚಿನ‌ ಗಮನ ನೀಡಲಾರಂಭಿಸಿದ ಕಾರಣ ಇಂತಹ ಫಿಟ್ನೆಸ್ ಸಂಬಂಧಿತ ವೀಡಿಯೋಗಳು ಭರ್ಜರಿ ವೈರಲ್ ಆಗುತ್ತಿವೆ‌. ಅದರಲ್ಲೂ ವಿಶೇಷವಾಗಿ ಬಾಲಿವುಡ್ ನಿಂದ ಹಿಡಿದು ಸ್ಯಾಂಡಲ್ವುಡ್ ವರೆಗೆ ಎಲ್ಲಾ ಸುಪ್ರಸಿದ್ಧ ನಟ ನಟಿಯರು ತಮ್ಮ ಫಿಟ್ನೆಸ್, ವರ್ಕೌಟ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾ ಗಳ ಮೂಲಕ ಹಂಚಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿ ಫಿಟ್ನೆಸ್ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇನ್ನು ಕೆಲವು ನಟಿಯರು ತಮ್ಮ ಫಿಟ್ನೆಸ್ ಮಂತ್ರ ಎನ್ನುವಂತೆ ಪ್ರತಿದಿನವೂ ತಮ್ಮ ಆರೋಗ್ಯದ ದೃಷ್ಟಿಯಿಂದ ಹಾಗೂ ದೇಹ ಸೌಂದರ್ಯದ ದೃಷ್ಟಿಯಿಂದ ಹೇಗೆಲ್ಲಾ ತಾವು ಫಿಟ್ನೆಸ್ ಕಾಪಾಡಿಕೊಳ್ಳಲು ವರ್ಕೌಟ್ ಮಾಡುತ್ತೇವೆ ಎಂಬುದನ್ನು ವಿಡಿಯೋಗಳನ್ನು ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿ ಕೊಳ್ಳುತ್ತಾರೆ. ಅವರ ಈ ವಿಡಿಯೋಗಳು ಕೆಲವೇ ಗಂಟೆಗಳಲ್ಲಿ ವೈರಲ್ ಆಗುವುದು ಬಹಳ ಸಾಮಾನ್ಯ ಎನಿಸುವಂತಾಗಿದೆ.

ಫಿಟ್ನೆಸ್ ವಿಡಿಯೋಗಳ ವಿಚಾರಕ್ಕೆ ಬಂದಾಗ ಬಾಲಿವುಡ್ ನ ಸುಂದರಿಯರಾದ ಮಲೈಕ ಅರೋರ, ಶಿಲ್ಪಾ ಶೆಟ್ಟಿ, ಡ್ಯಾನ್ಸರ್ ನೋರಾ ಫತೇಹಿ ಹಾಗೂ ಕನ್ನಡದಲ್ಲಿ ನಟಿ ರಾಗಿಣಿ ಪ್ರಜ್ವಲ್ ಅವರ ವಿಡಿಯೋಗಳು ಆಗಾಗ ಗಮನ ಸೆಳೆಯುತ್ತಲೇ ಇರುತ್ತವೆ. ಈಗ ಅದೇ ರೀತಿಯಲ್ಲಿ ಮತ್ತೊಬ್ಬ ಸ್ಯಾಂಡಲ್ವುಡ್ ನ ಜನಪ್ರಿಯ ನಟಿಯ ವರ್ಕೌಟ್ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟಿ ಕೇವಲ ವರ್ಕೌಟ್ ಮಾಡಿಲ್ಲ, ವರ್ಕೌಟ್ ಮಾಡುತ್ತಲೆ ಒಂದು ಇಂಪಾದ ಹಾಡಿಗೆ ಹೆಜ್ಜೆಯನ್ನು ಕೂಡಾ ಹಾಕುತ್ತಾ ನೋಡುಗರ ಗಮನವನ್ನು ಸೆಳೆಯುತ್ತಿದ್ದಾರೆ. ಅವರ ಅಭಿಮಾನಿಗಳಿಗಂತೂ ಇದು ಭರ್ಜರಿ ಖುಷಿ ನೀಡಿದೆ. ಹಾಗಾದರೆ ಯಾರು ಸ್ಯಾಂಡಲ್ ವುಡ್ ನಟಿ? ಎನ್ನುವ ಕುತೂಹಲ ನಿಮಗೆ ಮೂಡಿದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸ್ಯಾಂಡಲ್ ವುಡ್ ನಲ್ಲಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಕಿರುಗೂರಿನ ಗಯ್ಯಾಳಿಗಳು ಹೀಗೆ ಹಲವು ಸಿನಿಮಾಗಳಲ್ಲಿ ಭಿನ್ನ ವಿಭಿನ್ನವಾದ ಪಾತ್ರಗಳಿಗೆ ಜೀವ ತುಂಬುವ ಮೂಲಕ ತನ್ನದೇ ಆದಂತಹ ವಿಶೇಷವಾದ ಛಾಪನ್ನು ಮೂಡಿಸಿರುವ ನಟಿ ಶ್ವೇತಾ ಶ್ರೀವಾತ್ಸವ. ಶ್ವೇತಾ ಅವರು ಖಾಸಗಿ ಜೀವನಕ್ಕೆ ಅಥವಾ ಕುಟುಂಬದ ಕಡೆಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಚಿತ್ರರಂಗದಿಂದ ಕಳೆದ ಕೆಲವು ವರ್ಷಗಳಿಂದಲೂ ಅಂತರವನ್ನು ಕಾಯ್ದು ಕೊಂಡಿದ್ದಾರೆ. ಅವರ ಮಗಳು ಈಗ ಸ್ವಲ್ಪ ದೊಡ್ಡವಳಾಗಿದ್ದು ಶೀಘ್ರದಲ್ಲೇ ಶ್ವೇತಾ ಶ್ರೀವಾತ್ಸವ ಅವರು ಚಿತ್ರರಂಗಕ್ಕೆ ರೀ ಎಂಟ್ರಿ ನೀಡಲಿದ್ದಾರೆ ಎನ್ನುವ ಸುದ್ದಿಗಳು ಕೂಡ ಈಗಾಗಲೇ ಹರಿದಾಡಿವೆ.

ಶ್ವೇತಾ ಶ್ರೀವಾತ್ಸವ್ ಅವರು ಸಿನಿಮಾಗಳಿಂದ ದೂರ ಇದ್ದರೂ, ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ತಮ್ಮ ಹಾಗೂ ತಮ್ಮ ಮಗಳ ಸುಂದರವಾದ ಫೋಟೋವನ್ನು ಹಾಗೂ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ. ಇದಲ್ಲದೇ ಕೆಲವು ವಿಶೇಷ ಸಂದರ್ಭಗಳಲ್ಲಿ ವಿಶೇಷ ಸಂದೇಶಗಳನ್ನು ನೀಡುವಂತಹ ಪೋಸ್ಟ್ ಗಳನ್ನು ಶ್ವೇತಾ ಅವರು ಶೇರ್ ಮಾಡಿಕೊಂಡು ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿರುತ್ತಾರೆ. ಇದೀಗ ಸೋಶಿಯಲ್ ಮೀಡಿಯಾ ಗಳಲ್ಲಿ ಶ್ವೇತಾ ಶ್ರೀವಾತ್ಸವ ಅವರ ವರ್ಕೌಟ್ ವಿಡಿಯೋ ಸಾಕಷ್ಟು ವೈರಲಾಗುತ್ತಾ ಸಾಗಿದೆ.

ಶ್ವೇತಾ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಮಾರ್ನಿಂಗ್ ವರ್ಕೌಟ್ ಮಾಡ್ತಾ ಲೈಫ್ ಇನ್ ಮೋನೋ ಎನ್ನುವ ಇಂಗ್ಲಿಷ್ ಹಾಡಿಗೆ ತಕ್ಕಂತೆ ದೇಹವನ್ನು ಬಳುಕಿಸುತ್ತಾ ಯೋಗದ ಭಂಗಿಗಳನ್ನು ಮಾಡುತ್ತಿದ್ದಾರೆ. ಅವರು ಶೇರ್ ಮಾಡಿಕೊಂಡಿರುವ ಈ ವಿಡಿಯೋದ ಶೀರ್ಷಿಕೆಯಲ್ಲಿ, ವೇಕಪ್, ವರ್ಕೌಟ್, ಲುಕ್ ಹಾಟ್ , ಕಿಕ್ ಆ್ಯ ಸ್ ಎಂದು ಬರೆದುಕೊಂಡಿದ್ದಾರೆ. ಶ್ವೇತಾ ಅವರ ಶೇರ್ ಮಾಡಿಕೊಂಡಿರುವ ಡ್ಯಾನ್ಸ್ ಸಹಿತ ವರ್ಕೌಟ್ ವಿಡಿಯೋವನ್ನು ಈಗಾಗಲೇ 18 ಸಾವಿರಕ್ಕಿಂತ ಹೆಚ್ಚು ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಮುನ್ನೂರ ಕ್ಕಿಂತ ಅಧಿಕ ಜನರು ಕಮೆಂಟ್ ಗಳ ಮೂಲಕ ಪ್ರತಿಕ್ರಿಯೆ ನೀಡುತ್ತಾ ಬಹಳ ಅದ್ಭುತವಾಗಿದೆ ಎಂದಿದ್ದಾರೆ. ಕೆಲವರು ಫಿಟ್ನೆಸ್ ಟಿಪ್ಸ್ ಗಳನ್ನು ಕೂಡ ಕಾಮೆಂಟ್ ಗಳ ಮೂಲಕ ಕೇಳುತ್ತಿದ್ದಾರೆ.