ವಿದೇಶಕ್ಕಿಂತ ಸ್ವದೇಶವೇ ಚೆನ್ನ: ವಿದೇಶದ ತನ್ನ ಉದ್ಯೋಗಕ್ಕೆ ವಿದಾಯ ಹೇಳಿ, ಗ್ರಾಮದಲ್ಲಿ ಬೆಲ್ಲ ತಯಾರಿಸಿ ಗಳಿಸುತ್ತಿದ್ದಾನೆ ಲಕ್ಷ ಲಕ್ಷ ಹಣ

ವ್ಯಕ್ತಿಗೆ ವಿದೇಶದಲ್ಲಿ ನೌಕರಿ ದೊರೆತರೆ ಆ ವ್ಯಕ್ತಿಯು ಮತ್ತೆ ಹಳ್ಳಿಗೆ ಬಂದು ನೆಲೆಸುವ ವಿಚಾರ ಎಂದಿಗೂ ಮಾಡುವುದಿಲ್ಲ. ಆದರೆ ಸರ್ದಾರ್ ಅವತಾರ್ ಸಿಂಗ್ ಹೆಸರಿನ ಯುವಕ ವಿದೇಶದಲ್ಲಿ ನೌಕರಿಯನ್ನು ಬಿಟ್ಟು ತನ್ನ ಹಳ್ಳಿಗೆ ಬಂದನು. ಇಲ್ಲಿ ಬಂದು ಬೆಲ್ಲವನ್ನು ತಯಾರಿಸುವ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದನು. ಈ ಉದ್ಯೋಗದ ಮುಖಾಂತರ ಇಂದು ಲಕ್ಷಾವಧಿ ರೂಪಾಯಿಗಳನ್ನು ಗಳಿಸುವುದರ ಜೊತೆಗೆ ಅವರು ತಯಾರಿಸಿದ ಬೆಲ್ಲವು ಇಂದು ವಿದೇಶಗಳಿಗೆ ನಿರ್ಯಾತ ವಾಗುತ್ತಿದೆ.

ಸರದಾರ ಅವತಾರ್ ಸಿಂಗ್

ಸರ್ದಾರ್ ಅವತಾರ್ ಸಿಂಗ್ ಅವರು ಪಂಜಾಬಿನ ಪಠಾನ್ಕೋಟ್ ಜಿಲ್ಲೆಯ ಗೋಸಾಯಿಪುರ ಊರಿನ ನಿವಾಸಿಯಾಗಿದ್ದಾರೆ. ಇವರು ವಿದೇಶದಲ್ಲಿ ನೌಕರಿ ಮಾಡುತ್ತಿದ್ದರು. ಆದರೆ ಈಗ ನೌಕರಿಯನ್ನು ಬಿಟ್ಟು ತಮ್ಮ ಹಳ್ಳಿಗೆ ವಾಪಸಾಗಿ ತಮ್ಮ ಹೊಲದಲ್ಲಿಯ ಕಬ್ಬಿನಿಂದ ಬೆಲ್ಲವನ್ನು ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಅವರು ತಯಾರಿಸಿದ ಬೆಲ್ಲವು ತುಂಬಾ ಚೆನ್ನಾಗಿ ಇರುವುದರಿಂದ ಬಹುಬೇಗ ಮಾರಾಟವಾಗುತ್ತಿದೆ.

ಮಲೇಶಿಯಾದಲ್ಲಿ ಮಾಡುತ್ತಿದ್ದರು ನೌಕರಿ.

ಅವತಾರ್ ಸಿಂಗ್ ಅವರು ಸುಮಾರು ಎಂಟು ವರ್ಷ ಮಲೇಶಿಯಾದ ನಿವಾಸಿಯಾಗಿದ್ದರು. ಮಲೇಶಿಯಾದಲ್ಲಿ ಇದ್ದು ತಮ್ಮ ನೌಕರಿ ಮಾಡುತ್ತಿದ್ದರು. ಅನೇಕ ವರ್ಷಗಳ ನಂತರ ಅಲ್ಲಿಯ ಜೀವನ ಶೈಲಿಗೆ ಬೇಸತ್ತು ತಾವು ಹುಟ್ಟಿದ ಊರಿಗೆ ವಾಪಸಾದರು. ಮತ್ತು ತಮ್ಮ ಊರಲ್ಲಿಯೇ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದರು. ತಮ್ಮ ತೋಟದಲ್ಲಿ ಕಬ್ಬನ್ನು ಬೆಳೆದು ಅದರಿಂದಲೇ ಬೆಲ್ಲವನ್ನು ತಯಾರಿಸಲು ಶುರುಮಾಡಿದರು. ಅವರು ಈ ವ್ಯಾಪಾರದಲ್ಲಿ ತುಂಬಾ ಯಶಸ್ವಿಯಾದರು.

4 ಲಕ್ಷ ರೂಪಾಯಿಗಳ ಗಳಿಕೆ.

ಅವರು ವಾಸಿಸುವ ಊರಿನಲ್ಲಿ ಕಬ್ಬಿನ ಬೆಳೆಯು ಚೆನ್ನಾಗಿ ಬರುತ್ತದೆ. ಹೀಗಾಗಿ ತಮ್ಮ ಅದೃಷ್ಟವನ್ನು ಅದರಲ್ಲಿಯೇ ಓರೆಗೆ ಹಚ್ಚಬೇಕು ಎಂದು ನಿಶ್ಚಯಿಸಿದರು. ಅವರ ಮಾಡುವ ಪ್ರಯತ್ನದಲ್ಲಿ ಅವರಿಗೆ ಯಶಸ್ಸು ಸಿಗುತ್ತ ಹೋಯಿತು. ತಮ್ಮ ತೋಟದಲ್ಲಿ ದಿನಂಪ್ರತಿ ಎರಡು ಕ್ವಿಂಟಲ್ ಬೆಲ್ಲದ ನಿರ್ಮಾಣವನ್ನು ಮಾಡುತ್ತಾರೆ. ಅದನ್ನು ತಯಾರಿಸಿದ ಕ್ಷಣದಲ್ಲಿಯೇ ಬೆಲ್ಲವು ಮಾರಾಟವಾಗಿ ಬಿಡುತ್ತದೆ. ಹೀಗೆ ಪ್ರತಿ ಸೀಸನ್ನಲ್ಲಿ 4 ಲಕ್ಷ ರೂಪಾಯಿಗಳು ಸರಳವಾಗಿ ಗಳಿಸುತ್ತಾರೆ.

ಬೆಲ್ಲವನು ನಿರ್ಮಿಸುವ ಟ್ರೈನಿಂಗ್ ತೆಗೆದುಕೊಂಡಿದ್ದಾರೆ.

ಅವರು ಕೃಷಿ ಕ್ಷೇತ್ರದಿಂದ ಆಯೋಜಿಸಲಾದ ಬೆಲ್ಲದ ನಿರ್ಮಾಣದ ಬಗ್ಗೆ ವಿಶೇಷ ಟ್ರೈನಿಂಗ್ ಪ್ರಾಪ್ತ ಮಾಡಿಕೊಂಡಿದ್ದಾರೆ. ಮಾರ್ಬಲ್ನಿಂದ ತಯಾರಾದ ಚಕ್ರದ ಮೇಲೆ ಬೆಲ್ಲವನ್ನು ತಯಾರಿಸುತ್ತಾರೆ. ಕಾರಣ ಅದು ತಂಪಾಗಿರುವುದು. ಅವರ ತಯಾರಿಸಿದ ಬೆಲ್ಲವು ಬೇಗ ತಂಪಾಗು ತ್ತಿರಲಿಲ್ಲ. ಹೀಗಾಗಿ ಈ ಐಡಿಯಾವನ್ನು ಕಂಡುಹಿಡಿದರು.

ಕಬ್ಬಿನ ತೋಟವನ್ನು ಮಾಡಿ ಅದರಲ್ಲಿ ಯಶಸ್ಸು ಮತ್ತು ಪ್ರಗತಿ ಯನ್ನು ಸಾಧಿಸಿದ ಸರದಾರ್ ಅವತಾರ್ ಸಿಂಗ್ ಅವರು ನಿಜಕ್ಕೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.