ಕೊಟ್ಟ ಮಾತು ಉಳಿಸಿಕೊಂಡ ಆನಂದ ಮಹಿಂದ್ರಾ, ಟಿ. ನಟರಾಜನ್ ಗೆ ಉಡುಗೊರೆಯಾಗಿ ಕೊಟ್ಟರು ಹೊಚ್ಚ ಹೊಸ ಮಹಿಂದ್ರಾ ಥಾರ್..!
ಆಸ್ಟ್ರೇಲಿಯಾ ಪ್ರವಾಸದಲ್ಲಿ ನಟರಾಜನ್ ಅವರು ಭರ್ಜರಿ ಪ್ರದರ್ಶನ ಮಾಡಿದ ನಂತರ ಭಾರತದ ಪ್ರಸಿದ್ಧ ಉದ್ಯಮಿ ಆನಂದ ಮಹಿಂದ್ರಾ ಕಾರನ್ನು ಗಿಫ್ಟ್ ನೀಡುವ ಬಗ್ಗೆ ಮಾತನಾಡಿದ್ದರು. ಈಗ ಆನಂದ ಮಹಿಂದ್ರ ತಾವು ನೀಡಿದ ಭಾಷೆಯನ್ನು ಪೂರ್ಣಗೊಳಿಸಿದರು. ಮತ್ತು ನಟರಾಜನ್ ಅವರಿಗೆ ಕಾರನ್ನು ಗಿಫ್ಟ್ ರೂಪದಲ್ಲಿ ಕೊಟ್ಟರು.
ಯಾರ್ಕರ್ ಕಿಂಗ್ ಎಂದು ಪ್ರಸಿದ್ಧಿ ಪಡೆಯುತ್ತಿರುವ ಭಾರತದ ಉದಯೋನ್ಮುಖ ಕ್ರಿಕೆಟ್ ಆಟಗಾರ ನಟರಾಜನ್ ಅವರು ಐಪಿಎಲ್ 2020 ರಲ್ಲಿ ತುಂಬಾ ಭರ್ಜರಿ ಪ್ರದರ್ಶನ ನೀಡಿದರು. ಇದೇ ಕಾರಣಕ್ಕೆ ಅವರನ್ನು ಆಸ್ಟ್ರೇಲಿಯಾ ಸರಣಿಗೆ ಆಯ್ಕೆ ಮಾಡಲಾಯಿತು. ಆಸ್ಟ್ರೇಲಿಯಾ ಸರಣಿಯಲ್ಲಿಯೂ ನಟರಾಜನ್ ಅವರು ತಮ್ಮ ಪ್ರದರ್ಶನವನ್ನು ಹಾಗೆಯೇ ಮುಂದುವರಿಸಿದರು.
ನಟರಾಜನ್ ಅವರ ಈ ಪ್ರದರ್ಶನದಿಂದ ಉದ್ಯಮಿ ಆನಂದ ಮಹಿಂದ್ರಾ ಅವರು ತುಂಬಾ ಪ್ರಭಾವಿತರಾದರು. ಮತ್ತು ನಟರಾಜನ್ ಅವರಿಗೆ ಒಂದು ವಾಹನವನ್ನು ಗಿಫ್ಟ್ ನೀಡುವುದಾಗಿ ಘೋಷಿಸಿದ್ದರು. ಈಗ ತಾವು ನೀಡಿದ ಮಾತಿನಂತೆ ನಡೆದ ಆನಂದ್ ಮಹಿಂದ್ರ ಅವರು ನಟರಾಜನ್ ಅವರಿಗೆ ಮಹಿಂದ್ರ ಥಾರ್ ಗಾಡಿಯನ್ನು ಗಿಫ್ಟ್ ರೂಪದಲ್ಲಿ ನೀಡಿದ್ದಾರೆ.

ನಟರಾಜನ್ ಅವರು ಆನಂದ್ ಮಹಿಂದ್ರ ಅವರು ನೀಡಿದ ಕಾರನ್ನು ಖುಷಿಯಿಂದ ಸ್ವೀಕರಿಸಿ ತಮ್ಮ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅದರ ಜೊತೆಗೆ ಆನಂದ ಮಹಿಂದ್ರಾ ಅವರಿಗೆ ರಿಟರ್ನ್ ಗಿಫ್ಟ್ ಒಂದನ್ನು ನಟರಾಜನ್ ನೀಡಿದ್ದಾರೆ. ಬ್ರಿಸ್ಬೇನ್ ಟೆಸ್ಟ್ ನಲ್ಲಿ ತಾವು ತೊಟ್ಟುಕೊಂಡು ಜರ್ಸಿಯನ್ನು ಮಹಿಂದ್ರ ಅವರಿಗೆ ನೀಡಿದ್ದಾರೆ.
ನಮ್ಮ ದೇಶಕ್ಕಾಗಿ ಆಡುವುದು ನನ್ನ ಪರಮ ಭಾಗ್ಯವಾಗಿದೆ. ನನ್ನ ಅಭಿಮಾನಿಗಳು ನೀಡಿದ ಪ್ರೇರಣೆಯಿಂದಲೇ ನನ್ನ ಪ್ರದರ್ಶನ ಚೆನ್ನಾಗಿದ್ದು ನಾನಿಂದು ಈ ಸ್ಥಾನದಲ್ಲಿದ್ದೇನೆ. ಆನಂದ ಮಹಿಂದ್ರಾ ಅವರು ನೀಡಿದ ಈ ಗಿಫ್ಟ್ ನ್ನು ಸ್ವೀಕರಿಸುತ್ತಿರುವಾಗ ನನಗೆ ತುಂಬಾ ಖುಷಿಯಾಗುತ್ತಿದೆ. ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಅವರು ನನ್ನ ಪ್ರವಾಸವನ್ನು ನೋಡಿದ್ದಾರೆ, ಮತ್ತು ನನ್ನನ್ನು ವಿಶೇಷವಾಗಿ ಹೊಗಳಿದ್ದಾರೆ ಎಂದು ನಟರಾಜನ್ ಅವರು ಟ್ವೀಟ್ ಮಾಡಿದ್ದಾರೆ.