ಬೈಕ್ ಮೇಲೆ ಅ ಪಾ ಯಕಾರಿ ಸ್ಟಂಟ್ ಮಾಡಲು ಹೊರಟ ಯುವಕ, ಆದರೆ ಬ್ಯಾಲೆನ್ಸ್ ತಪ್ಪಿತು ಮತ್ತು..? Video ನೋಡಿ
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬೈಕುಗಳ ಮೇಲೆ ಅಪಾಯಕಾರಿ ಸ್ಟಂಟ್ ಗಳನ್ನು ಮಾಡಲು ಮುಂದಾಗುತ್ತಾರೆ. ಅದರಲ್ಲೂ ವಿಶೇಷವಾಗಿ ಯುವಕರು ತಮ್ಮ ಸುರಕ್ಷತೆಯ ಬಗ್ಗೆ ಯಾವುದೇ ಆಲೋಚನೆಯನ್ನು ಮಾಡದೇ ಎಲ್ಲರ ಮುಂದೆ ಹೆಚ್ಚುಗಾರಿಕೆಯನ್ನು ಪ್ರದರ್ಶನ ಮಾಡಲು ಅಪಾಯಕಾರಿ ಎನಿಸುವಂತಹ ಸ್ಟಂಟ್ ಗಳನ್ನು ತಮ್ಮ ಬೈಕುಗಳಲ್ಲಿ ಮಾಡಲು ತೊಡಗುತ್ತಾರೆ. ಕೆಲವೊಮ್ಮೆ ಇಂತಹ ಸನ್ನಿವೇಶಗಳನ್ನು ನೋಡಿದಾಗ ಸಹಜವಾಗಿಯೇ ನೋಡುಗರ ಮನಸ್ಸಿನಲ್ಲಿ ಒಂದು ಭ ಯ ಹುಟ್ಟಿಕೊಳ್ಳುತ್ತದೆ. ನಿಪುಣತೆ ಪಡೆದು ವೃತ್ತಿ ಪರವಾಗಿ ಇಂತಹ ಸ್ಟಂಟ್ ಗಳನ್ನು ಮಾಡುವವರಾದರೆ ಅವರಿಗೆ ಅ ಪಾ ಯವು ಸಂಭವಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ಯಾವುದೇ ತರಬೇತಿ ಇಲ್ಲದೆ, ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳದೇ, ಕೇವಲ ಶೋಕಿಗಾಗಿ ಸಾರ್ವಜನಿಕರು ಸಂಚರಿಸುವ ರಸ್ತೆಗಳಲ್ಲಿ ಬೈಕ್ ಮೇಲೆ ಸ್ಟಂಟನ್ನು ಮಾಡಲು ತೊಡಗಿಕೊಂಡು ಅ ಪಾ ಯಕ್ಕೆ ಆಹ್ವಾನ ನೀಡುತ್ತಾರೆ.
ಅನೇಕ ಸಂದರ್ಭಗಳಲ್ಲಿ ಇಂತಹ ಸ್ಟಂಟ್ ಗಳನ್ನು ಮಾಡಲು ಹೊರಟ ವರಿಂದ ರಸ್ತೆಯಲ್ಲಿ ಸಂಚರಿಸುವ ಇತರೆ ಜನರಿಗೂ, ವಾಹನ ಸವಾರರಿಗೂ ಕೂಡ ಅ ಪಾ ಯ ತಪ್ಪಿದ್ದಲ್ಲ. ಬಹಳ ಆ ತಂ ಕದಿಂದಲೇ ರಸ್ತೆಯ ಮೇಲೆ ವಾಹನಗಳನ್ನು ಚಾಲನೆ ಮಾಡಬೇಕಾಗುತ್ತದೆ. ಸೋಶಿಯಲ್ ಮೀಡಿಯಾ ಗಳಲ್ಲಿ ಹೊಸ ವಿಡಿಯೋ ಬಂದು ವೈರಲಾಗಿದ್ದು, ಈ ವಿಡಿಯೋದಲ್ಲಿ ಕೂಡಾ ಯುವಕನೊಬ್ಬ ರಸ್ತೆಯಲ್ಲಿ ತನ್ನ ಬೈಕ್ ಮೇಲೆ ಅ ಪಾ ಯ ಕಾರಿ ಅನಿಸುವಂಥ ಸ್ಟಂಟ್ ಮಾಡಲು ಆರಂಭಿಸಿದ್ದಾನೆ. ವಿಡಿಯೋದಲ್ಲಿ ಗಮನಿಸಿದಾಗ ಸತ್ತಿರುವ ಬೈಕ್ ನ ಸೀಟಿನ ಮೇಲೆ ನಿಲ್ಲುವ ಪ್ರಯತ್ನ ಮಾಡಲು ಹೊರಟಿದ್ದಾನೆ.
ಹೀಗೆ ಬೈಕ್ ಮೇಲೆ ಸ್ಟಂಟ್ ಮಾಡಲು ಹೊರಟ ಯುವಕ ಅನಿರೀಕ್ಷಿತವಾಗಿ ತನ್ನ ಬೈಕ್ ನ ಬ್ಯಾಲೆನ್ಸ್ ಕಳೆದು ಕೊಂಡಿದ್ದಾನೆ. ಕೂಡಲೇ ಬೈಕ್ ಮೇಲಿಂದ ಗಾಳಿಯಲ್ಲಿ ಹಾರುತ್ತಾ, ರಸ್ತೆಯ ಮೇಲೆ ಬಿದ್ದು ಬಿಡುತ್ತಾನೆ. ಆತನ ತಲೆ ಕೂಡಾ ನೆಲಕ್ಕೆ ಬಡಿಯುತ್ತದೆ. ಆದರೆ ಅದೃಷ್ಟವಶಾತ್ ಆತನ ಪ್ರಾಣಕ್ಕೆ ಅ ಪಾ ಯ ವಾಗಿಲ್ಲ. ಆದರೆ ಪ್ರತಿ ಬಾರಿಯೂ ಹೀಗೆ ಅ ಪಾ ಯದಿಂದ ಪಾರಾಗುತ್ತೇವೆ ಎಂದು ಕೊಳ್ಳುವುದಾದರೆ ಅದು ಮೂರ್ಖತನವೇ ಸರಿ. ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆದ ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅವರು ಶೇರ್ ಮಾಡಿಕೊಂಡ ವಿಡಿಯೋದ ಶೀರ್ಷಿಕೆಯಲ್ಲಿ, ನೀವು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಇಂತಹ ಅ ಪಾ ಯವನ್ನು ಎದುರಿಸುವುದನ್ನು ನೋಡಲು ಬಯಸುವಿರಾ? ಎಂದು ಬರೆದುಕೊಂಡು ಎಲ್ಲರನ್ನೂ ಪ್ರಶ್ನೆ ಮಾಡಿದ್ದಾರೆ. ನಂತರ ಈ ರೀತಿ ನೋಡಲು ಇಷ್ಟಪಡುವುದಿಲ್ಲ ಎನ್ನವುದಾದರೆ ಇಂತಹ ಪ್ರಯತ್ನಕ್ಕೆ ಕೈ ಹಾಕುವವರನ್ನು ಅದರಿಂದ ತಡೆಯಿರಿ. ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ನಿಮ್ಮ ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡಿ ಎಂದು ಸಲಹೆಯನ್ನು ನೀಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ.
ವಿಡಿಯೋ ನೋಡಿ
क्या आप अपने बच्चों/मित्रों के साथ ऐसा हादसा होते देख सकते हैं?
— Dipanshu Kabra (@ipskabra) March 25, 2021
अगर नहीं? तो उन्हें ऐसी मूर्खता करने से रोकें. सुरक्षा को प्राथमिकता देना एवं यातायात नियमों का पालन करना सिखाएं.
Note – Please never let your kids/friends upload & promote such stupidity on SM. pic.twitter.com/gNFpF5AOtI
ಸುಮಾರು ಐನೂರಕ್ಕಿಂತ ಅಧಿಕ ಜನರು ವಿಡಿಯೋವನ್ನು ರಿಟ್ವೀಟ್ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಅನೇಕರು ಪ್ರತಿಕ್ರಿಯೆ ನೀಡುತ್ತಾ ಇಂತಹ ಸ್ಟಂಟ್ ಗಳನ್ನು ಮಾಡುವವರ ಮೇಲೆ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇಂತಹವರಿಗೆಲ್ಲಾ ಯಾವಾಗ ಬುದ್ಧಿ ಬರುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ಸ್ಟಂಟ್ ಗಳನ್ನು ಮಾಡುವುದರಿಂದ ಉತ್ತಮ ರೈಡರ್ ಎನಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಅಪಾಯವನ್ನು ಎದುರು ಹಾಕಿಕೊಳ್ಳುವ ಇವರಿಗೆ ತಮ್ಮ ತಂದೆ, ತಾಯಿ ಕುಟುಂಬ ಎನ್ನುವ ಪರಿಜ್ಞಾನ ಇರುವುದಿಲ್ಲ ಎಂದು ಟೀ ಕೆ ಮಾಡಿದ್ದಾರೆ.