Video: ಬಸ್ ಚಾಲಕನ ಎಚ್ಚರಿಕೆಯಿಂದಾಗಿ ಉಳಿಯಿತು 2 ವರ್ಷದ ಮಗುವಿನ ಪ್ರಾಣ: ಪೋಷಕರ ಬೇಜವಾಬ್ದಾರಿತನವನ್ನು ಖಂಡಿಸಿದ ನೆಟ್ಟಿಗರು
ಇತ್ತೀಚಿನ ದಿನಗಳಲ್ಲಿ ಮಕ್ಕಳ ಸುರಕ್ಷತೆಗೆ ನಾವು ಹೆಚ್ಚಿನ ಗಮನವನ್ನು ಹರಿಸಬೇಕಿದೆ. ಅದರಲ್ಲೂ ವಿಶೇಷವಾಗಿ ಚಿಕ್ಕ ಮಕ್ಕಳ ಕಡೆ ಎಷ್ಟು ಗಮನ ಹರಿಸಿದರೂ ಕೂಡಾ ಸಾಲದು ಎನ್ನುವಂತಿದೆ ಇಂದಿನ ಪರಿಸ್ಥಿತಿಗಳು. ಮನೆಯ ಸುತ್ತ ಮುತ್ತ ಮಕ್ಕಳು ಆಡುವಾಗಲೇ ನಾವು ಒಂದಲ್ಲಾ, ಎರಡಲ್ಲಾ ಹತ್ತು ಬಾರಿ ಗಮನಿಸಿದರೂ ಕೂಡಾ ಸಾಲದು, ನಮ್ಮ ಒಂದು ಕಣ್ಣು ಮಕ್ಕಳ ಮೇಲೆ ಇದ್ದರೆ ಒಳ್ಳೆಯದು. ಮಕ್ಕಳನ್ನು ಹೊರಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ, ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಇರುವವರು ಇಂದಿನ ಅತ್ಯಧಿಕ ಟ್ರಾಫಿಕ್, ರಸ್ತೆ ನಿಯಮ ಪಾಲಿಸದ ಅದೆಷ್ಟೋ ಅನಾಗರಿಕ ವರ್ತನೆಯ ಕಿ ಡಿ ಗೇಡಿಗಳು ಇಂತಹವರ ಕಡೆ ಗಮನ ಹರಿಸಬೇಕಿದೆ. ಪುಟ್ಟ ಮಕ್ಕಳನ್ನು ಕೈ ಹಿಡಿದುಕೊಂಡು ಓಡಾಡಬೇಕಾಗುತ್ತದೆ. ಆದರೂ ಇಷ್ಟೆಲ್ಲಾ ಎಚ್ಚರ ವಹಿಸಿದರೂ ಮಕ್ಕಳ ಕುರಿತಾಗ ಬೇಸರದ ಸುದ್ದಿಗಳು ಬಂದಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು ಎನಿಸುತ್ತದೆ.
ಪುಟ್ಟ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋದಂತಹ ಸಂದರ್ಭಗಳಲ್ಲಿ ಒಬ್ಬರಲ್ಲಾ ಒಬ್ಬರು ಮಕ್ಕಳ ಮೇಲೆ ಒಂದು ಕಣ್ಣನ್ನು ಇಟ್ಟಿರಲೇಬೇಕು. ಇನ್ನು ಈಗಿನ ಮಕ್ಕಳು ಕೂಡ ಬಹಳ ಆಕ್ಟಿವ್ ಆಗಿರುತ್ತಾರೆ. ಒಂದು ಕ್ಷಣ ನಮ್ಮ ದೃಷ್ಟಿ ಅತ್ತ ಇತ್ತ ಹೊರಳಿದರೂ ಕೂಡಾ ಮಕ್ಕಳು ಆಕರ್ಷಕವಾಗಿ ಏನಾದರೂ ಕಂಡರೆ ಅತ್ತ ಓಡಿ ಹೋಗುತ್ತಾರೆ. ಅದೇ ರಸ್ತೆಗಳಲ್ಲಿ ಆದರೆ ಮಕ್ಕಳು ಈ ರೀತಿ ಓಡಿದಾಗ ಅಪಾಯ ನಿಜಕ್ಕೂ ಕಟ್ಟಿಟ್ಟಬುತ್ತಿ ಎಂದೇ ನಾವು ಹೇಳಬಹುದು. ಸೋಶಿಯಲ್ ಮೀಡಿಯಾ ಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಮಗುವೊಂದು ಹೇಗೆ ಕ್ಷಣ ಮಾತ್ರದಲ್ಲಿ ಪೋಷಕರ ನಿರ್ಲಕ್ಷ್ಯದಿಂದ ರಸ್ತೆಗೆ ಇಳಿದುಬಿಟ್ಟಿತು ಎನ್ನುವ ದೃಶ್ಯ ಅಂಗಡಿಯೊಂದರ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
ಕೇರಳದಲ್ಲಿ ನಡೆದಿದೆ ಎನ್ನಲಾಗಿರುವ ಈ ದೃಶ್ಯದಲ್ಲಿ ನಾವು ಗಮನಿಸಿದಾಗ ದಂಪತಿ ರಸ್ತೆಯ ಪಕ್ಕದಲ್ಲಿರುವ ಅಂಗಡಿಯ ಮುಂದೆ ತಮ್ಮ ವಾಹನವನ್ನು ನಿಲ್ಲಿಸಿ, ಏನೇನೋ ಖರೀದಿ ಮಾಡಲು ಹೋಗಿದ್ದಾರೆ. ಆಗ ಒಬ್ಬ ಬಾಲಕ ಹಾಗೂ ಒಂದು ಪುಟ್ಟ ಮಗು ಅಂಗಡಿಯ ಕಡೆಯಿಂದ ಕಾರಿನ ಕಡೆಗೆ ಓಡಿ ಬಂದಿದ್ದಾರೆ. ಬಾಲಕ ಕಾರಿನ ಬಳಿ ಬಂದು ಅನಂತರ ಮತ್ತೆ ಹಿಂದಕ್ಕೆ ಬಂದಿದ್ದಾನೆ. ಆದರೆ ಅವನ ಹಿಂದೆ ಓಡಿದ ಪುಟ್ಟ ಮಗು ರಸ್ತೆಗೆ ಇಳಿದು ಬಿಟ್ಟಿದೆ. ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಓಡುತ್ತಾ ಮಗು ರಸ್ತೆಯಲ್ಲಿ ಬಿದ್ದಿದೆ. ಅದೇ ವೇಳೆಗೆ ರಸ್ತೆ ಮಾರ್ಗವಾಗಿ ಬರುತ್ತಿದ್ದ ಕೇರಳ ಸಾರಿಗೆ ಸಂಸ್ಥೆಯ ಬಸ್ ಚಾಲಕ ಸರಿಯಾದ ಸಮಯದಲ್ಲಿ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿದ್ದಾರೆ.
ಅದೃಷ್ಟವಶಾತ್ ರಸ್ತೆಯ ಇನ್ನೊಂದು ಬದಿಯಿಂದ ಯಾವುದೇ ವಾಹನದ ಬಂದಿಲ್ಲ. ಇನ್ನು ಮಗು ರಸ್ತೆಗೆ ಇಳಿದಿರುವುದನ್ನು ತಿಳಿದ ಕೂಡಲೇ ಒಂದಷ್ಟು ಜನ ರಸ್ತೆಗೆ ಓಡಿ ಬಂದಿದ್ದಾರೆ, ಮಗುವನ್ನು ಎತ್ತಿಕೊಂಡು ಮತ್ತೆ ಅಂಗಡಿಯ ಕಡೆಗೆ ಬಂದಿದ್ದಾರೆ. ಈ ದೃಶ್ಯಾವಳಿಯನ್ನು ಗಮನಿಸಿದಾಗ ನಿಜಕ್ಕೂ ಮಗುವಿನ ಅದೃಷ್ಟ ಚೆನ್ನಾಗಿತ್ತೆನ್ನಬಹುದು. ಅದೇ ವೇಳೆ ಬಸ್ ನ ಚಾಲಕ ಕೂಡ ಸೂಕ್ತ ಸಮಯದಲ್ಲಿ ತೆಗೆದುಕೊಂಡ ಕ್ರಮದಿಂದಾಗಿ ಮಗು ಪವಾಡಸದೃಶ ಎನ್ನುವಂತೆ ಅ ಪಾ ಯದಿಂದ ಪಾರಾಗಿದೆ. ಈ ವಿಡಿಯೋವನ್ನು ನೋಡಿದಾಗ ರಸ್ತೆಗೆ ಬಂದಾಗ ಪುಟ್ಟ ಮಕ್ಕಳ ಬಗ್ಗೆ ಇನ್ನಷ್ಟು ಎಚ್ಚರವಾಗಿರಬೇಕು ಎನ್ನುವ ಜಾಗರೂಕತೆಯನ್ನು ಮೂಡಿಸುವಂತಿದೆ.
ವಿಡಿಯೋ ನೋಡಿ.
ವಿಡಿಯೋವನ್ನು ಈಗಾಗಲೇ 14 ಲಕ್ಷ ಜನ ವೀಕ್ಷಣೆಯನ್ನು ಮಾಡಿದ್ದು, ಸಾವಿರಾರು ಜನ ಲೈಕ್ ಗಳನ್ನು ನೀಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಕಾಮೆಂಟ್ ಗಳನ್ನು ಮಾಡುವ ಮೂಲಕ ಅನೇಕ ಮಂದಿ ತಮ್ಮ ಪ್ರತಿಕ್ರಿಯೆಗಳನ್ನು ಕೂಡಾ ನೀಡಿದ್ದಾರೆ. ಕಾಮೆಂಟ್ ಮಾಡಿರುವರಲ್ಲಿ ಒಬ್ಬರು ದೇವರ ದಯೆ, ಬಸ್ ಹೆಚ್ಚು ವೇಗವಾಗಿ ಬರುತ್ತಿರಲಿಲ್ಲ. ಬಸ್ನ ಚಾಲಕ ಉತ್ತಮ ಚಾಲಕ ಎನಿಸಿಕೊಂಡಿದ್ದಾರೆ, ಆದರೆ ಪೋಷಕರು ಮಾತ್ರ ಕ್ಷಮೆಗೆ ಅರ್ಹರಲ್ಲ ಎಂದಿದ್ದಾರೆ. ಮತ್ತೊಬ್ಬರು ಬಾಲಕನ ಕೈಗೆ ಮಗುವಿನ ಜವಾಬ್ದಾರಿ ಕೊಟ್ಟ ಪೋಷಕರಿಗೆ ಎರಡು ಬಾರಿಸಬೇಕು ಎಂದು ಅ ಸಮಾಧಾನ ಹೊರಹಾಕಿದ್ದಾರೆ. ಮಗುವನ್ನು ಓಡಿಸಿಕೊಂಡು ಹೋದವನಿಗೆ ಎರಡು ಬಾರಿಸಿ ಎಂದಿದ್ದಾರೆ ಮತ್ತೊಬ್ಬರು. ಆದರೆ ಅನೇಕ ಮಂದಿ ಇದು ಅಕ್ಷರಶಃ ಪೋಷಕರ ಬೇಜವಾಬ್ದಾರಿತನ ಎಂದು ಕಾಮೆಂಟ್ ಮಾಡಿದ್ದಾರೆ.