ಒಂದು ರೂ. ಗೊಂದು ಇಡ್ಲಿ ಮಾರುವ ‘ಇಡ್ಲಿ ಅಮ್ಮಾ’ ಳಿಗೆ ಪಕ್ಕಾ ಮನೆ ಕಟ್ಟಿ ಕೊಡಲು ಮುಂದಾದ ಆನಂದ್ ಮಹಿಂದ್ರಾ!

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸಲ ಈ ಅಮ್ಮನ ಇಡ್ಲಿ ನೀಡುವ ಫೋಟೋ ಅಥವಾ ವಿಡಿಯೋ ವೈರಲ್ ಆಗುತ್ತಿರುತ್ತದೆ. ಜನರ ಹೊಟ್ಟೆ ತುಂಬಲೆಂದು ಈ ಅಮ್ಮಳು ರೂಪಾಯಿಗೊಂದು ಇಡ್ಲಿಯನ್ನು ನೀಡುತ್ತಾಳೆ. ಈ ಅಮ್ಮಳ ನಿಸ್ವಾರ್ಥ ಸೇವೆಯನ್ನು ಭಾರತದ ದೊಡ್ಡ ಉದ್ಯಮಿ ಆನಂದ ಮಹಿಂದ್ರಾ ಅವರು ಗಮನಿಸಿದ್ದಾರೆ. ಆನಂದ ಮಹಿಂದ್ರಾ ಅವರು ಈ ಅಮ್ಮಳಿಗೆ ಒಂದು ಸುಂದರವಾದ ಮನೆಯನ್ನು ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಸ್ವತಃ ಆನಂದ ಮಹಿಂದ್ರಾ ಅವರೇ ಟ್ವಿಟರ್ ಮುಖಾಂತರ ಮಾಹಿತಿಯನ್ನು ನೀಡಿದ್ದಾರೆ.

ಈ ಅಮ್ಮಳ ಬಗ್ಗೆ ಆನಂದ್ ಮಹಿಂದ್ರ ಅವರಿಗೆ ಮೊದಲು 2019 ರಲ್ಲಿ ಗೊತ್ತಾಯಿತು. ಆನಂತರ ಆನಂದ ಮಹಿಂದ್ರಾ ಅವರು ಅಮ್ಮಳ ಈ ಉದ್ಯೋಗದಲ್ಲಿ ಸ್ವಲ್ಪ ಹೂಡಿಕೆಯನ್ನು ಮಾಡುವ ಮೂಲಕ ಸಹಾಯ ಮಾಡುವ ವಿಚಾರ ವ್ಯಕ್ತ ಮಾಡಿದ್ದರು. ಆನಂತರ ಅಂದಿನಿಂದ ಮಹಿಂದ್ರ ಅವರು ಅಮ್ಮಳಿಗೆ ಸಹಾಯ ಮಾಡುತ್ತ ಬಂದಿದ್ದಾರೆ.

ರೂಪಾಯಿಗೊಂದು ಇಡ್ಲಿ ಮಾರುವ ಈ ಅಮ್ಮಳ ವಯಸ್ಸು ಈಗ 85 ಇದ್ದು ಇವರ ಹೆಸರು ಕಮಲಾತಲ್ ಇದೆ. ಸದ್ಯದಲ್ಲೇ ಆನಂದ ಮಹಿಂದ್ರಾ ಅವರು ಇಡ್ಲಿ ಮಾರುವ ಈ ಅಜ್ಜಿಗೆ ಒಂದು ಮನೆಯನ್ನು ನೀಡಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ಆನಂದ ಮಹಿಂದ್ರ ಅವರೇ ನೀಡಿದ್ದರಿಂದ ಈ ಇಡ್ಲಿ ಅಜ್ಜಿ ಮತ್ತೆ ಚರ್ಚೆಯಲ್ಲಿ ಬಂದಿದ್ದಾರೆ.

ಏತನ್ಮದ್ಯೆ ಆನಂದ ಮಹಿಂದ್ರಾ ಅವರು 2019 ರಲ್ಲಿ ಈ ಇಡ್ಲಿ ಅಜ್ಜಿಗೆ ಸಹಾಯ ಮಾಡುವುದಾಗಿ ಘೋಷಿಸಿದ ನಂತರ, ಭಾರತ ಗ್ಯಾಸ್ ನವರು ತಾವೇ ಸ್ವತಃ ಬಂದು ಈ ಅಮ್ಮಳಿಗೆ ಗ್ಯಾಸ್ ಕನೆಕ್ಷನ್ ನೀಡಿದ್ದರು.