Video: ಮೊದಲ ಬಾರಿ ತಾಯಿ ಜೊತೆ ಹೊರಗೆ ಬಂದ ಮರಿ ಘೇಂಡಾಮೃಗ: ಉತ್ಸಾಹ ನೋಡಿ ಮನಸೋತ ನೆಟ್ಟಿಗರು!

ಪುಟ್ಟ ಮಕ್ಕಳು ನಡೆಯುವುದನ್ನು ಕಲಿತಾಗ ಅದಕ್ಕೆ ಏನೋ ಒಂದು ರೀತಿಯ ಸಂತೋಷ ಯಾವುದೋ ದೊಡ್ಡ ಸಾಧನೆಯನ್ನು ಮಾಡಿದ ಖುಷಿ ಆದರೆ ಮುಖದಲ್ಲಿ ಎದ್ದು ಕಾಣುತ್ತಿರುತ್ತದೆ ನಡೆದಾಡಲು ಪ್ರಾರಂಭಿಸಿದ ಕೂಡಲೆ ಮಕ್ಕಳು ಮನೆಯ ಮೂಲೆ ಮೂಲೆಗಳಲ್ಲಿ ಕೂಡ ಹೆಜ್ಜೆ ಇಟ್ಟು ಓಡಾಡುತ್ತಾರೆ ಮನೆಮಂದಿಗೆಲ್ಲ ಪುಟ್ಟ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆ ಇನ್ನೂ ಹಿಟ್ಟು ಓಡಾಡುತ್ತಿದ್ದಾರೆ ಅದನ್ನು ನೋಡುವುದೇ ಖುಷಿ. ಇತ್ತೀಚಿನ ವರ್ಷಗಳಲ್ಲಾದರೆ ಮಕ್ಕಳು ನಡೆದಾಡಲು ಪ್ರಾರಂಭಿಸಿದ ಕೂಡಲೇ ಆ ಮಧುರವಾದ ಕ್ಷಣಗಳನ್ನು ಫೋಟೋಗಳು ಹಾಗೂ ವಿಡಿಯೋಗಳಲ್ಲಿ ಸೆರೆಹಿಡಿದು ಅದನ್ನು ಸುಂದರ ಸ್ಮರಣೆ ಯನ್ನಾಗಿ ಮಾಡುತ್ತಾರೆ. ಓಡಾಡಲು ಕಲಿತ ಮಕ್ಕಳನ್ನು ಮೊದಲ ಸಲ ಮನೆಯಿಂದ ಹೊರಗೆ ಕರೆದುಕೊಂಡು ಹೋದಾಗ ಹೊಸ ಜಗತ್ತನ್ನು ನೋಡಿ ಮಕ್ಕಳು ಇನ್ನಷ್ಟು ಖುಷಿಪಡುತ್ತಾರೆ. ಪಾರ್ಕ್ ಅಥವಾ ಇನ್ಯಾವುದೇ ಸುಂದರ ಸ್ಥಳಕ್ಕೆ ಕರೆದುಕೊಂಡು ಹೋದಾಗ ಮಕ್ಕಳು ಖುಷಿಯಿಂದ ಹೆಜ್ಜೆ ಇಟ್ಟು ಓಡುವುದನ್ನೂ ನಾವು ಗಮನಿಸಿರುತ್ತೇವೆ.

ಇದೆಲ್ಲಾ ಪುಟಾಣಿ ಮಕ್ಕಳ ವಿಷಯವಾದರೆ ಇಂತಹ ಸಂಭ್ರಮದ ಅನುಭವಗಳಿಂದ ಪ್ರಾಣಿಗಳೂ ಹೊರತಾಗಿಲ್ಲ. ಪ್ರಾಣಿಗಳ ಮರಿಗಳು ಸಹಾ ಮೊದಲ ಬಾರಿಗೆ ಹೆಜ್ಜೆಯಿಡುತ್ತಾ ಹೊರಗಡೆ ಬಂದಾಗ ಬಹಳಷ್ಟು ಖುಷಿಯಿಂದ ಸಂಭ್ರಮಿಸುತ್ತದೆ. ಹೀಗೆ ಮೊದಲ ಬಾರಿಗೆ ತಾಯಿಯ ಜೊತೆಗೆ ಹೊರಗೆ ಓಡಾಡಲು ಬಂದಂತಹ ಘೇಂಡಾಮೃಗದ ಮರಿಯೊಂದರ ಬಹಳ ಸುಂದರವಾದ ವಿಡಿಯೋ ಸೋಶಿಯಲ್ ಮೀಡಿಯಾ ಗಳಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಪ್ರಾಣಿ-ಪಕ್ಷಿಗಳ ಅದ್ಭುತ ವಿಡಿಯೋಗಳನ್ನು ಶೇರ್ ಮಾಡುವ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಶೇರ್ ಮಾಡಿರುವ ಈ ವಿಡಿಯೋವನ್ನು ಈಗಾಗಲೇ 62 ಸಾವಿರಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆಂದರೆ ಅದು ಎಷ್ಟು ಸುಂದರವಾಗಿದೆ ಎಂದು ನೀವೇ ಊಹಿಸಬಹುದು. ಹಾಗಾದರೆ ಆ ವಿಡಿಯೋ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ.

ವಿಡಿಯೋದಲ್ಲಿ ನಾವು ಗಮನಿಸಿದಾಗ ಅರಣ್ಯದ ಕಾಲುದಾರಿಯಲ್ಲಿ ಹಿಂದೆ ತಾಯಿ ಘೇಂಡಾ ಮೃಗ ಬರುತ್ತಿದ್ದರೆ, ಮೊದಲ ಬಾರಿಗೆ ಹೊರಗಡೆ ತಾಯಿಯೊಂದಿಗೆ ಬಂದಿರುವ ಮಾರಿ ಗೆಂಡಾಮೃಗ ಬಹಳ ಖುಷಿಯಿಂದ ಜಿಗಿಯುತ್ತಾ ರಸ್ತೆಯುದ್ದಕ್ಕೂ ಓಡಿ ಬರುತ್ತದೆ ಆ ಕ್ಷಣದಲ್ಲಿ ಆ ಮರಿ ಘೆಂಡಾಮೃಗ ದ ಸಂಭ್ರಮ ಎಷ್ಟಿದೆ ಎಂಬುದನ್ನು ವಿಡಿಯೋ ನೋಡಿದವರು ಗಮನಿಸಬಹುದಾಗಿದೆ. ಹಾಗೆ ಓಡಿ ಬರುತ್ತಿರುವ ಘೇಂಡಾಮೃಗದ ಮರಿ ಎದುರುಗಡೆ ಕ್ಯಾಮೆರಾದಲ್ಲಿ ತನ್ನನ್ನು ಸೆರೆಹಿಡಿಯುತ್ತಿರುವ ವ್ಯಕ್ತಿಯನ್ನು ನೋಡಿ ಮತ್ತೆ ತನ್ನ ತಾಯಿಯ ಕಡೆಗೆ ಓಡಿ ಹೋಗುತ್ತದೆ ಆದರೆ ಘೇಂಡಾಮೃಗದ ಮರಿಯ ಸಂಭ್ರಮವನ್ನು ನೋಡಿದ ನಮಗೂ ಖುಷಿ ಎನಿಸುತ್ತದೆ.

ವೀಡಿಯೋ ಶೇರ್ ಮಾಡಿಕೊಂಡ ಸುಶಾಂತ್ ನಂದ ಅವರು ಶೀರ್ಷಿಕೆಯಲ್ಲಿ ಮೊದಲ ಬಾರಿಗೆ ಔಟಿಂಗ್ ಬಂದ ಮಗು, ಬಹಳ ಉತ್ಸುಕವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋ ನೋಡಿ ಆರು ಸಾವಿರಕ್ಕಿಂತ ಅಧಿಕ ಜನರು ಲೈಕ್ ಮಾಡಿದ್ದಾರೆ, ಆರುನೂರಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿ ಖುಷಿ ಪಟ್ಟಿದ್ದಾರೆ. ಒಬ್ಬ ಮಹಿಳೆ ಪ್ರತಿಕ್ರಿಯೆ ನೀಡುತ್ತಾ ಆದರೆ ಅಪರಿಚಿನ ಕ್ಯಾಮರಾ ನೋಡಿ ಅಮ್ಮನ ಹತ್ತಿರಕ್ಕೆ ಓಡಿತು ಮರಿ, ಅಲ್ಲಿಗೆ ಅದರ ಔಟಿಂಗ್ ಓವರ್ ಎಂದಿದ್ದಾರೆ. ಮತ್ತೊಬ್ಬರು ಅದ್ಭುತವಾಗಿದೆ ಆದರೆ ಆ ಮನುಷ್ಯನನ್ನು ನೋಡಿ ಓಡಿತು ಎಂದಿದ್ದಾರೆ. ಮರಿ ಬಹಳ ಖುಷಿಯಿಂದ ಕುಣಿದಿದೆ ಎಂದಿದ್ದಾರೆ ಇನ್ನೊಬ್ಬರು.

ವಿಡಿಯೋ ನೋಡಿ

ಘೇಂಡಾಮೃಗದ ಮರಿಯು ಬಹಳ ಖುಷಿಯಿಂದ ಬಂದಿತು ಆದರೆ ಅದು ಮನುಷ್ಯ ಎನ್ನುವ ವಿಚಿತ್ರ ಪ್ರಾಣಿಯನ್ನು ನೋಡಿ ವಾಪಸ್ಸು ಓಡಿತು ಮುಂದೆ ಅದರ ಮೂಡ್ ಗೊತ್ತಿದ್ದೇ ಇಡೀ ದಿನ ಹಾಳಾಯಿತು ಎಂದಿದ್ದಾರೆ‌. ಮತ್ತೊಬ್ಬರು ಹಾಸ್ಯ ಚಟಾಕಿ ಹಾರಿಸುತ್ತಾ ಹೊರಗೆ ಬಂದ ಮಗು ಮೊಹಲ್ಲಾದ ಚಾಚಾಜಿ ಅವರನ್ನು ನೋಡಿ ಮಗು ಮನೆಗೆ ಓಡಿತು ಎಂದಿದ್ದಾರೆ. ಜನ ಘೇಂಡಾಮೃಗದ ಮರಿಯನ್ನು ನೋಡಿ ಖುಷಿ ಪಟ್ಟಿದ್ದಾರೆ. ಆದರೆ ಬಹಳಷ್ಟು ಮಂದಿ ಕ್ಯಾಮೆರಾ ಹಿಡಿದು ಹೋದ ವ್ಯಕ್ತಿಯನ್ನು ಭರ್ಜರಿಯಾಗಿ ಟೀಕೆ ಮಾಡುತ್ತಾ ಸಾಗಿದ್ದಾರೆ.