ಗೂಬೆ ಇಜಾಡುವದನ್ನು ನೋಡಿದ್ದೀರಾ? IFS ಆಫೀಸರ್ ಹಂಚಿಕೊಂಡಿರುವ Video ನೋಡಿ ಅದ್ಭುತ ಅಂತಿದ್ದಾರೆ ನೇಟಿಜನ್ಸ್!

ನೀರಿನಲ್ಲಿ ಈಜುವುದು ಅನೇಕರಿಗೆ ನೆಚ್ಚಿನ ಹವ್ಯಾಸ ಇದರಿಂದ ದೇಹಕ್ಕೆ ವ್ಯಾಯಾಮ ಕೂಡ ಆಗುವುದು ಅದೇ ರೀತಿಯಲ್ಲಿ ಮನಸ್ಸಿಗೂ ಕೂಡ ಆಹ್ಲಾದಕರ ಎನಿಸುವುದು ಬೇಸಿಗೆ ಬಂದಾಗ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ಇದೆ ಎಂದು ತಿಳಿದರೆ ಅನೇಕ ಮಂದಿ ಹೋಗುವ ಆಲೋಚನೆಯನ್ನು ಮಾಡುವುದು ಕೂಡ ಸಹಜ ಮನುಷ್ಯ ಮಾತ್ರ ಮಾತ್ರ ಪ್ರಾಣಿ ಪಕ್ಷಿಗಳು ಕೂಡ ಈಜುವುದನ್ನು ಬಹಳ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ನಾವು ಕೆರೆ ಕಟ್ಟೆಗಳಲ್ಲಿ ಎಮ್ಮೆಗಳು ನೀರಿನಲ್ಲಿ ಈಜುವುದನ್ನು ನೋಡುತ್ತಿರುತ್ತೇವೆ. ಸೋಶಿಯಲ್ ಮೀಡಿಯಾಗಳಲ್ಲಿ ಅರಣ್ಯ ಪ್ರದೇಶಗಳಲ್ಲಿ ನೀರಿನಲ್ಲಿ ಈಜುವ ವನ್ಯಜೀವಿಗಳನ್ನು ವೀಡಿಯೋಗಳಲ್ಲಿ ಗಮನಿಸಿರುತ್ತೇವೆ. ಆದರೆ ಪಕ್ಷಿಗಳು ಈಜಾಡುವುದನ್ನು ಅಷ್ಟಾಗಿ ನೋಡಿರುವುದಿಲ್ಲ. ಬಾತುಕೋಳಿಗಳು ಮತ್ತು ಹಂಸಗಳು ಈಜುವುದು ನಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಅವನ್ನು ಬಿಟ್ಟು ಅನ್ಯ ಪಕ್ಷಿಗಳು ಈಜುವುದನ್ನು ಸಹಜವಾಗಿಯೇ ಹೆಚ್ಚಾಗಿ ನೋಡುವುದಕ್ಕೆ ಅವಕಾಶ ಇರುವುದಿಲ್ಲ.

ನಮ್ಮ ಸುತ್ತ ಮುತ್ತಲಿರುವ ಕಾಗೆ, ಗುಬ್ಬಿ, ಪಾರಿವಾಳಗಳು ಅನೇಕ ಸಂದರ್ಭಗಳಲ್ಲಿ ಮಳೆ ಬಂದು ನೀರು ನಿಂತಿರುವ ಕಡೆಗಳಲ್ಲಿ ತಮ್ಮ ಮೈ ನೆನೆಸಿಕೊಂಡು, ಮತ್ತೆ ನೀರನ್ನೆಲ್ಲಾ ಗಟ್ಟಿಯಾಗಿ ತಮ್ಮ ಮೈಕೊಡವಿಕೊಂಡು ದೇಹವನ್ನು ಒಣಗಿಸುವ ಪ್ರಯತ್ನ ಮಾಡುವುದನ್ನು ನೋಡಿದ್ದೇವೆ. ಆದರೆ ಇವು ಹಾಯಾಗಿ ನೀರಿನ ಮೇಲೆ ಈಜುವುದನ್ನು ನಾವು ನೋಡಿರುವುದಿಲ್ಲ. ಕಾಗೆ ಗುಬ್ಬಿಗಳ ಈಜನ್ನೇ ನೋಡಿರದ ನಾವು ಗೂಬೆಗಳು ಈಜುವುದನ್ನು ಊಹೆ ಕೂಡಾ ಮಾಡುವುದಿಲ್ಲ ಬಿಡಿ. ಆದರೆ ಈಗ ನಾವು ಊಹಿಸಿರದ ಇಂತಹ ಒಂದು ಗೂಬೆಯ ವೀಡಿಯೋ ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿ, ಎಲ್ಲರ ಗಮನ ಸೆಳೆಯುತ್ತಿದೆ.

ಹೌದು ಹಗಲಿನಲ್ಲಿ ಜನರ ಕಣ್ಣಿಗೆ ಅಷ್ಟಾಗಿ ಕಾಣಿಸದ, ರಾತ್ರಿಯಲ್ಲಿ ಸಾಕಷ್ಟು ಸಕ್ರಿಯವಾಗಿರುವ ಗೂಬೆಯೊಂದು ನೀರಿನಲ್ಲಿ ಈಜುವ ಅಪರೂಪದ ವೀಡಿಯೋ ಇದಾಗಿದೆ. ವಿಡಿಯೋದಲ್ಲಿ ಗಮನಿಸಿದಾಗ ಒಂದು ಮನೆಯ ಸ್ನಾನದ ಕೋಣೆಯಲ್ಲಿ ಫೇಸ್ ಫಾಷ್, ಮೌತ್ ವಾಷ್ ಗಾಗಿ ಬಳಸುವಂತಹ ವಾಷ್ ಬೇಸಿನ್ ನಲ್ಲಿ ನೀರನ್ನು ತುಂಬಿ ಸಲಾಗಿದ್ದು, ಈ ನೀರಿನಲ್ಲಿ ಈಜುತ್ತಿದೆ ಗೂಬೆ. ನೀರಿನ ಮೇಲೆ ಬಹಳ ಖುಷಿಯಿಂದ ತೇಲುತ್ತಾ ಇರುವ ಗೂಬೆಯನ್ನು ನೋಡಿದಾಗ ವಾವ್ ಎಷ್ಟು ಕೌಶಲ್ಯ ಭರಿತವಾಗಿ ಗೂಬೆ ಈಜಿನ ಮೋಜನ್ನು ಎಂಜಾಯ್ ಮಾಡುತ್ತಿದೆ ಎಂಬುದನ್ನು ಗಮನಿಸಬಹುದಾಗಿದೆ.

ಎಂದಿನಂತೆ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಶೇರ್ ಮಾಡಿಕೊಂಡಿರುವ ಈ ಸುಂದರವಾದ ವೀಡಿಯೋದ ಶೀರ್ಷಿಕೆಯಲ್ಲಿ ಅವರು ಗೂಬೆಯು ಈಜುವುದನ್ನು ನೋಡಿಲ್ಲವಾದರೆ ಇಲ್ಲಿ ನೋಡಿ ಎಂದು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಬಹಳ ಮುಗ್ಧವಾದ ಮುಖದಿಂದ ನೀರಿನ ಮೇಲೆ ಮೋಜಿನ ಆಟ ಆಡುತ್ತಿರುವ ಗೂಬೆಯ ಈ ವೀಡಿಯೋ ವನ್ನು 26 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಸುಮಾರು 2.900 ಮಂದಿ ವೀಡಿಯೋವನ್ನು ಲೈಕ್ ಮಾಡಿದ್ದರೆ, ನೂರಾರು ಜನರು ಈ ಅಪರೂಪದ ದೃಶ್ಯದ ವೀಡಿಯೋವನ್ನು ರೀಟ್ವೀಟ್ ಮೂಲಕ ಶೇರ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ. ಅನೇಕರು ವೀಡಿಯೋ ಕುರಿತು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ವಿಡಿಯೋ ನೋಡಿ

ಪ್ರತಿಕ್ರಿಯೆ ನೀಡಿರುವವರಲ್ಲಿ ಬಹಳಷ್ಟು ಜನರು ಅಪರೂಪದ ವೀಡಿಯೋ ಇದು. ನಾವು ನೋಡಿರಲಿಲ್ಲ ಧನ್ಯವಾದಗಳು ಎಂದಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ಗೂಬೆ ಬಹಳ ಖುಷಿಯಿಂದ ಈಜನ್ನು ಆನಂದಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.‌ ಇನ್ನೊಬ್ಬರು ಭೂಮಿಯ ಮೇಲಿನ ಸುಂದರವಾದ ಸೃಷ್ಟಿ ಗೂಬೆ ಗಳು ಎಂದು ಬರೆದುಕೊಂಡು ಖುಷಿ ಪಟ್ಟಿದ್ದಾರೆ. ಮತ್ತೊಬ್ಬರು ಇದೊಂದು ಅದ್ಭುತವಾದ ಅನುಭವ ಎಂದು ಕಾಮೆಂಟಿಸಿದ್ದಾರೆ. ಅಮೇಜಿಂಗ್, ವಂಡರ್ ಫುಲ್, ಹೀಗೆ ಅನೇಕ ಜನರು ವೀಡಿಯೋ ಕುರಿತಾದ ತಮ್ಮ ಮೆಚ್ಚುಗೆಯನ್ನು ಕಾಮೆಂಟ್ ಮಾಡಿದ್ದಾರೆ.‌