‘ಈ’ ಮೂರು ದೇಶಗಳಲ್ಲಿ ಹಾವುಗಳು ಕಂಡುಬರುವುದಿಲ್ಲ, ಏನಿದರ ಹಿಂದಿನ ಕಾರಣ?

ಮಳೆಗಾಲ ಶುರುವಾದರೆ ಸಾಕು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಹಾವುಗಳು ಕಾಣಿಸಲು ಪ್ರಾರಂಭವಾಗುತ್ತವೆ. ಪ್ರವಾಹ ಬಂದಾಗ ಅಥವಾ ನೀರು ತುಂಬಿದ ಸ್ಥಳಗಳಲ್ಲಿ ಅಂತೂ ಹಾವು ಕಚ್ಚಿದ ಕಾರಣದಿಂದಾಗಿ ಅನೇಕರು ಮರಣ ಹೊಂದುವುದನ್ನು ಸುದ್ದಿ-ಸಮಾಚಾರ ಗಳಲ್ಲಿ ಕೇಳುತ್ತೇವೆ. ನಮ್ಮ ದೇಶದಲ್ಲಿ ಹೆಚ್ಚಾಗಿ ಹಾವುಗಳು ಎಲ್ಲ ಕಡೆಗೆ ಕಂಡುಬರುತ್ತವೆ. ಆದರೆ ಜಗತ್ತಿನಲ್ಲಿ ಇಂಥ ದೇಶಗಳು ಸಹಿತ ಇವೆ, ಅಲ್ಲಿ ಒಂದೇ ಒಂದು ಹಾವು ಸಹ ಕಂಡುಬರುವುದಿಲ್ಲ. ಆ ದೇಶಗಳಲ್ಲಿ ಮುಖ್ಯವಾಗಿ ನ್ಯೂಜಿಲೆಂಡ್, ಐಸ್ಲ್ಯಾಂಡ್, ಮತ್ತು ಐರ್ಲ್ಯಾಂಡ್ ಈ ಮೂರು ದೇಶಗಳಲ್ಲಿ ಒಂದೇ ಒಂದು ಹಾವು ಕಣ್ಣಿಗೆ ಕಂಡುಬರುವುದಿಲ್ಲ.

ವಿದೇಶದ ಕೆಲವು ದೇಶಗಳಲ್ಲಿ ಹಾವುಗಳು ಯಾಕೆ ಕಂಡುಬರುವುದಿಲ್ಲ ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡುವ.

ಯುರೋಪಿನ ವಾಯವ್ಯ ಭಾಗದಲ್ಲಿರುವ ಐರ್ಲ್ಯಾಂಡ್ ಐಸ್ಲ್ಯಾಂಡ್ ಮತ್ತು ಗ್ರೀನ್ಲ್ಯಾಂಡ್ ಈ ದೇಶಗಳಲ್ಲಿ ಹಾವುಗಳೇ ಇಲ್ಲ. ಇದಕ್ಕೆ ಅನೇಕ ದಂತಕಥೆಗಳು ಪ್ರಚಲಿತದಲ್ಲಿವೆ.

ಅಲ್ಲಿಯ ಜನರ ಪ್ರಕಾರ ಮೊದಲು ಈ ದೇಶದ ಭೂಮಿಯ ಮೇಲೆ ಹಾವುಗಳಿದ್ದವು. ಈ ಹಾವುಗಳು ಇಲ್ಲಿಯ ಜನರಿಗೆ ತುಂಬಾ ಸಮಸ್ಯೆಯನ್ನು ನೀಡಿದವು. ಹೀಗಾಗಿ ಸೇಂಟ್ ಪ್ಯಾಟ್ರಿಕ್ ನು ಈ ಎಲ್ಲಾ ಹಾವುಗಳಿಗೆ ಸಮುದ್ರದ ಕಡೆಗೆ ತೆಗೆದುಕೊಂಡು ಹೋಗಿ ಸಮುದ್ರದಲ್ಲಿಯೇ ಜೀವಿಸುವ ಆದೇಶ ನೀಡಿದನು. ಇದರ ನಂತರ ಹಾವುಗಳು ಎಂದಿಗೂ ಈ ದೇಶದ ಭೂಮಿಯ ಮೇಲೆ ಮರಳಿ ಬಂದಿಲ್ಲ. ಈ ದಂತಕಥೆಯ ಪ್ರಕಾರ ಸಂತರು ಹಾವುಗಳನ್ನು ಇಲ್ಲಿಂದ ಓಡಿಸುವ ಸಲುವಾಗಿ 40 ದಿವಸಗಳ ಉಪವಾಸ ಮಾಡಿದ್ದರಂತೆ. ಇದೇ ಕಾರಣದಿಂದ ಈ ದೇಶದಲ್ಲಿ ಸೇಂಟ್ ಪ್ಯಾಟ್ರಿಕ್ ರನ್ನು ಪೂಜಿಸಲಾಗುತ್ತದೆ.

ವೈಜ್ಞಾನಿಕರು ಮಾತ್ರ ಈ ರೀತಿಯ ವಿಚಾರಗಳನ್ನು ನಂಬುವುದಿಲ್ಲ. ನ್ಯಾಷನಲ್ ಜಿಯೋಗ್ರಾಫಿ ನೀಡಿದ ಒಂದು ರಿಪೋರ್ಟ್ ಪ್ರಕಾರ ನ್ಯಾಷನಲ್ ಮ್ಯೂಸಿಯಮ್ ಆಫ್ ಐರ್ಲ್ಯಾಂಡ್ ನ ಸಂಶೋಧಕರಾದ ನಾಯಜಲ್ ಮೋಗಾನನ್ ಅವರು ಐರ್ಲೆಂಡಿನಲ್ಲಿ ಮೊದಲು ಹಾವುಗಳಿದ್ದವು ಎನ್ನುತ್ತಾರೆ. ಆದರೆ ಇದಕ್ಕೆ ಯಾವುದೇ ರೀತಿಯ ಐತಿಹಾಸಿಕ ಪುರಾವೆಗಳು ಸಿಕ್ಕಿಲ್ಲ. ಜಗತ್ತಿನ ತುಂಬೆಲ್ಲ ಹಾವುಗಳು ಇರುವಾಗ ಸರಿ ಇಲ್ಲಿ ಅಷ್ಟೇ ಹಾವುಗಳು ಇಲ್ಲದಿರುವುದಕ್ಕೆ ಕೆಲವು ವಿಶೇಷ ಕಾರಣಗಳು ಇವೆ.

ಐರ್ಲೆಂಡಿನ ವಿಭಾಗವು ಮೊದಲಿನಿಂದಲೂ ಹಿಮಾಚ್ಛಾದಿತ ಪ್ರದೇಶವಾಗಿದೆ. ಇಲ್ಲಿಯ ಹಿಮವು ಕರಗಿದರು ಸಹ ಇಲ್ಲಿಯ ತಾಪಮಾನದಲ್ಲಿ ಹೆಚ್ಚು ಬದಲಾವಣೆ ಕಂಡು ಬರುವುದಿಲ್ಲ. ಹೀಗಾಗಿ ಇಷ್ಟೊಂದು ಕಡಿಮೆ ತಾಪಮಾನದಲ್ಲಿ ಯಾವುದೇ ರೀತಿಯ ಸರಿಸೃಪ ಜೀವಂತವಾಗಿರಲು ಸಾಧ್ಯವಿಲ್ಲ. ಇದೇ ಕಾರಣದಿಂದಾಗಿ ಐರ್ಲೆಂಡಿನ ಭೂಮಿಯ ಮೇಲೆ ಹಾವುಗಳು ಕಂಡುಬರುವುದಿಲ್ಲ.

ಹತ್ತು ಸಾವಿರ ವರ್ಷಗಳ ಹಿಂದಿನಿಂದಲೂ ಐರ್ಲೆಂಡ್ನಲ್ಲಿ ಬರೀ ಒಂದೇ ಸರಿಸೃಪವು ಕಂಡು ಬರುತ್ತದೆ ಅದು ಯಾವುದೆಂದರೆ ಹಲ್ಲಿ.

ಇಲ್ಲಿಯ ಜನರ ವಿಶೇಷವೇನೆಂದರೆ, ಈ ಭೂಮಿಯ ಮೇಲೆ ಹಾವುಗಳು ಇಲ್ಲದಿದ್ದರೂ ಇಲ್ಲಿಯ ಜನರಿಗೆ ಹಾವು ಸಾಕುವ ಹವ್ಯಾಸವಿದೆ. ಎಷ್ಟೋ ಜನರು ತಮ್ಮ ಮನೆಯಲ್ಲಿ ವಿಶಾಲ ಕಾಯದ ಹೆಬ್ಬಾವನ್ನು ಸಾಕಿದ್ದಾರೆ.

ಐರ್ಲೆಂಡಿನ ಹಾಗೆ ನ್ಯೂಜಿಲ್ಯಾಂಡ್ ನಲ್ಲಿಯೂ ಹಾವುಗಳು ಕಂಡುಬರುವುದಿಲ್ಲ. ದ್ವೀಪಗಳ ಸಮೂಹವಿದ್ದ ಈ ದೇಶದಲ್ಲಿ ಅನೇಕ ಪ್ರಾಣಿಗಳು ಕಂಡುಬರುತ್ತವೆ. ಆದರೆ ಆಶ್ಚರ್ಯದ ವಿಷಯವೆಂದರೆ ಇಲ್ಲಿಯೂ ಹಾವುಗಳು ಕಂಡುಬರುವುದಿಲ್ಲ. ಇಲ್ಲಿ ಹಲ್ಲಿಯ ಬರಿ ಒಂದು ಪ್ರಜಾತಿ ಕಂಡುಬರುತ್ತದೆ.

ನ್ಯೂಜಿಲೆಂಡಿನ ಸುತ್ತಮುತ್ತಲ ಸಮುದ್ರ ಭಾಗದಲ್ಲಿ ಹಳದಿ ಬಣ್ಣದ ಕ್ರೆಟ್ ಜಾತಿಯ ಹಾವು ಕಂಡು ಬರುತ್ತದೆ. ಈ ಹಾವು ನೀರನ್ನು ಬಿಟ್ಟು ನೆಲದ ಮೇಲೆ ತುಂಬಾ ವಿರಳವಾಗಿ ಕಂಡುಬರುತ್ತದೆ. ಅಪ್ಪಿತಪ್ಪಿ ಒಂದು ವೇಳೆ ಈ ಹಾವು ಭೂಮಿಯ ಮೇಲೆ ಕಂಡು ಬಂದರೆ ಅದಕ್ಕೆ ಮತ್ತೆ ಸಮುದ್ರದಲ್ಲಿ ಬಿಡಲಾಗುತ್ತದೆ. ನ್ಯೂಜಿಲೆಂಡ್ ಸರ್ಕಾರವು ಹಾವುಗಳಿಗೆ ಸಂಬಂಧಿಸಿದಂತೆ ತುಂಬಾ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಸಮುದ್ರದಿಂದ ಅಪ್ಪಿತಪ್ಪಿ ಭೂಮಿಯ ಮೇಲೆ ಬಂದರೆ ಆ ಹಾವು ಭೂಮಿಯ ಮೇಲೆಯೇ ವಾಸ್ತವ್ಯ ಮಾಡದಂತೆ ನೋಡಿಕೊಳ್ಳಲಾಗುತ್ತದೆ.

ನ್ಯೂಜಿಲೆಂಡಿನ ಭೂಮಿಯ ಮೇಲೆ ಸಾವಿರ ವರ್ಷಗಳ ಹಿಂದೆ ಮನುಷ್ಯನು ಕಾಲಿಟ್ಟನು. ಆನಂತರ ಇಲ್ಲಿಯ ಸಾಕಷ್ಟು ಪ್ರಾಣಿ ಮತ್ತು ಪಕ್ಷಿ ಮತ್ತು ವನಸ್ಪತಿಗಳ ಪ್ರಜಾತಿಗಳು ನಷ್ಟವಾಗಿ ಹೋದವು. ಒಂದು ವೇಳೆ ಇಲ್ಲಿ ಹಾವುಗಳು ವಾಸ್ತವ್ಯ ಮಾಡಿದರೆ ಉಳಿದ ಪ್ರಾಣಿಗಳು ಸಹಿತ ನಷ್ಟವಾಗುವ ಭೀತಿ ಇತ್ತು. ಆದ್ದರಿಂದಲೇ ಹಾವಿನ ವಿರೋಧ ಇಲ್ಲಿಯ ಕಾಯ್ದೆಗಳು ತುಂಬಾ ಕಠಿಣವಾಗಿದೆ.

ಗ್ರೀನ್ಲ್ಯಾಂಡ್ ಮತ್ತು ಅಂಟಾರ್ಟಿಕಾದಲ್ಲಿಯೂ ಹಾವುಗಳು ಕಂಡುಬರುವುದಿಲ್ಲ. ಇದರ ಮುಖ್ಯ ಕಾರಣ ಇಲ್ಲಿಯ ಹಿಮಚ್ಚಾದಿತ ಪ್ರದೇಶ. ಹಾವು ಯಾವ ಸರಿಸೃಪ ಪ್ರಜಾತಿಯದಿದೆ ಅಂಥವುಗಳಿಗೆ ಕೋಲ್ಡ್ ಬ್ಲಡೆಡ್ ಪ್ರಾಣಿಗಳೆಂದು ಗುರುತಿಸಲಾಗುತ್ತದೆ. ಈ ಪ್ರಾಣಿಗಳು ವಾತಾವರಣದಲ್ಲಿಯ ಉಷ್ಣತೆಯ ಮೇಲೆ ಅವಲಂಬಿತವಾಗಿರುತ್ತವೆ. ಇವುಗಳ ದೇಹದಲ್ಲಿ ಮನುಷ್ಯರ ಹಾಗೆ ಉಷ್ಣತೆ ನಿರ್ಮಾಣವಾಗುವುದಿಲ್ಲ. ಇದೇ ಕಾರಣದಿಂದ ಅತಿ ಶೀತ ಮತ್ತು ಹಿಮಾಚ್ಛಾದಿತ ಪ್ರದೇಶದಲ್ಲಿ ಇಂಥ ಸರಿಸೃಪಗಳು ಬದುಕಿ ಉಳಿಯುವುದಿಲ್ಲ. ಆದ್ದರಿಂದ ಈ ದೇಶಗಳಲ್ಲಿ ಹಾವುಗಳು ಕಂಡುಬರುವುದಿಲ್ಲ.